ತಮ್ಮ ಜೀವನದ ಮುಖ್ಯವಾದ ಇಬ್ಬರು ಸೂಪರ್ ಸ್ಟಾರ್‌ಗಳ ಹೆಸರು ರಿವೀಲ್ ಮಾಡಿದ ಗಾಯಕಿ ಶಶಿಕಲಾ ಸುನೀಲ್....
ಕನ್ನಡ ಚಿತ್ರರಂಗ ಖ್ಯಾತ ಗಾಯಕಿ ಹಾಗೂ ಕಿರುತೆರೆಯ ನಟಿ ಶಶಿಕಲಾ ಸುನೀಲ್ ಸ್ಟಾರ್ ಸುವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮ್ಮ ಜೀವನದ ಸೂಪರ್ ಸ್ಟಾರ್ ಯಾರು ಎಂದು ನಿರೂಪಕಿ ಶಾಲಿನಿ ಸತ್ಯನಾರಾಯಣ್ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಸೀತಾ ರಾಮಾ ಸೀರಿಯಲ್‌ನಲ್ಲಿ ಡಾಕ್ಟರ್ ಅನಂತ ಲಕ್ಷ್ಮಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ
ಅಮ್ಮ ಮೊದಲ ಸ್ಟಾರ್:
undefined
'ನನ್ನ ಜೀವನದ ಸೂಪರ್ ಸ್ಟಾರ್ ಇಬ್ಬರಿದ್ದಾರೆ ಅದರಲ್ಲಿ ಮೊದಲು ನನ್ನ ತಾಯಿ. ನನ್ನ ತಾಯಿ ನನ್ನ ಸರ್ವಸ್ವ ಏಕಂದರೆ ಬೇರೆ ತಾಯಂದಿರ ರೀತಿ ನನ್ನ ತಾಯಿ ವಿದ್ಯಾವಂತೆ ಅಲ್ಲ ಆದರೆ ತನಗೆ ಇರುವ ಇಬ್ಬರು ಹೆಣ್ಣು ಮಕ್ಕಳು ಗಾಯಕಿಯರು ಆಗಬೇಕು ಅನ್ನೋದು ಅವರ ದೊಡ್ಡ ಆಸೆ. ನಾವು ಚೆನ್ನಪಟ್ಟಣ್ಣದವರು, ಅಲ್ಲಿಂದ ಬೆಂಗಳೂರು ಮತ್ತು ರಾಮನಗರಕ್ಕೆ ಪ್ರಯಾಣ ಮಾಡಿಸಿ ಪ್ರತಿ ದಿನ ಸಂಗೀತ ಪಾಠಕ್ಕೆ ಕಳುಹಿಸುತ್ತಿದ್ದರು. ನನ್ನ ತಾಯಿ ಹಸು ಮೇಯಿಸುವುದು ಮತ್ತು ಎಲೆ ಕಟ್ಟುವುದು ಮಾಡಿ ನಮ್ಮನ್ನು ಸಾಕಿದರು. ನನ್ನ ತಾಯಿ ಮಾಡಿದ ಕೆಲಸದಲ್ಲಿ 1% ಕೆಲಸನೂ ನನ್ನ ಕೈಯಲ್ಲಿ ಮಾಡಲು ಆಗುವುದಿಲ್ಲ. ಸಂಗೀತ ಕಲಿತ ಮೇಲೆ ಪ್ಲೇಬ್ಯಾಕ್ ಸಿಂಗರ್ ಆಗಬಹುದು ಅನ್ನೋದು ಕಲ್ಪನೆ ಕೂಡ ನಮಗೆ ಇರಲಿಲ್ಲ ನಾವು ಏನೇ ಮಾಡಿದ್ದರೂ ಬೆನ್ನೆಲುಬಾಗಿ ನಿಂತಿರುವುದು ನಮ್ಮ ತಾಯಿ. ಬೇಗ ಮದುವೆ ಮಾಡಬೇಕು ಅನ್ನೋದು ತಾಯಿ ಆಸೆ ಆಗಿತ್ತು, ಒಳ್ಳೆ ಹುಡುಗ ಸಿಕ್ಕಿದ್ದಾನೆ ಹಾಗೂ ನಿನಗೆ ಚೆನ್ನಾಗಿ ಸಪೋರ್ಟ್ ಮಾಡುತ್ತಾ ಅಂತ ಎರಡನೇ ವರ್ಷ ಪದವಿಯಲ್ಲಿ ಮದುವೆ ಆಯ್ತು' ಎಂದು ಶಶಿಕಲಾ ಮಾತನಾಡಿದ್ದಾರೆ.
ಪತಿ ಎರಡನೇ ಸ್ಟಾರ್:
ನನ್ನ ಗಂಡ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮದುವೆ ಆದ ಮೇಲೆ ಎಷ್ಟೋ ಜನ ಫ್ಯಾಮಿಲಿಗೋಸ್ಕರ ಎಷ್ಟೋ ತ್ಯಾಗಗಳನ್ನು ಮಾಡುತ್ತಾರೆ ಆದರೆ ನನ್ನ ತಾಯಿ ಮತ್ತು ಯಜಮಾನರ ಸಹಾಯದಿಂದ ಬೆಳೆಯುತ್ತಿರುವುದು. ನನ್ನ ಮಗನಿಗೆ ತುಂಬಾ ಹೆಮ್ಮೆ ಇದೆ. ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಸರ್ ಜೊತೆ ನನ್ನ ತಾಯಿ ಹಾಡುತ್ತಾರೆ ಅನ್ನೋ ಖುಷಿ ನನ್ನ ಮಗನಲ್ಲಿ ಇದೆ. ಮುಂದೆ ಅವನು ಸೂಪರ್ ಸ್ಟಾರ್ ಅಗಲಿದ್ದಾನೆ. ನನ್ನ ತಾಯಿ ಮತ್ತು ಯಜಮಾನರು ನನ್ನ ಜೀವನದ ಬೆಸ್ಟ್ ಸೂಪರ್ ಸ್ಟಾರ್‌ಗಳು, ಇವರೇ ನನ್ನ ಸ್ಟ್ರಾಂಗ್ ಸಪೋರ್ಟ್ ಎಂದು ಶಶಿಕಲಾ ಹೇಳಿದ್ದಾರೆ.