ಬಿಗ್ ಬಾಸ್ ಮನೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿದು ಅನ್ಫಿಟ್ ಅಂತ ಕಣ್ಣೀರಿಟ್ಟ ಧನರಾಜ್!

By Roopa Hegde  |  First Published Oct 15, 2024, 10:26 AM IST

ಬಿಗ್ ಬಾಸ್ ಮನೆಯಲ್ಲಿ ಈಗ ನೇರ ನಾಮಿನೇಷನ್ ಸಮಯ. ಕ್ಯಾಪ್ಟನ್ ಶಿಶಿರ್ ಒಬ್ಬರಾದ್ಮೇಲೆ ಒಬ್ಬರನ್ನು ನಾಮಿನೇಟ್ ಮಾಡ್ತಿದ್ದಾರೆ. ಇಂದು ಧನರಾಜ್ ಸರದಿ. ಶಿಶಿರ್ ಧನರಾಜ್ ಹೆಸರು ಹೇಳಿದ್ದು, ಹಾಸ್ಯ ನಟನ ಕಣ್ಣಲ್ಲಿ ನೀರು ತುಂಬಿದೆ. 
 


ಸೂಪರ್ ಸಂಡೆ ವಿತ್ ಬಾದ್​ಷಾ ಸುದೀಪ್ (Super Sunday with Badshah Sudeep) ನಂತ್ರ ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬಿಗ್ ಬಾಸೇ ವಿಶ್ರಾಂತಿ ತೆಗೆದುಕೊಳ್ತಿದ್ದು, ಫೋನ್ ಕಾಲ್ ಬರ್ತಿದ್ದಂತೆ ಸ್ಪರ್ಧಿಗಳ ಎದೆಬಡಿತ ಹೆಚ್ಚಾಗ್ತಿದೆ. ಕ್ಯಾಪ್ಟನ್ ಶಿಶಿರ್ (Captain Shishir), ಅನುಷಾ ರೈ ಅವರನ್ನು ನೇರ ನಾಮಿನೇಟ್ ಮಾಡಿ, ಹಾಗಲಕಾಯಿ ಜ್ಯೂಸ್ ಕುಡಿಸಿದ್ದಾರೆ. ಈಗ ಧನಂಜಯ್ ಸರದಿ. ಇಂದಿನ ಸಂಚಿಕೆಯಲ್ಲಿ ಧನರಾಜ್, ನೇರವಾಗಿ ನಾಮಿನೇಟ್ ಆಗಲಿದ್ದಾರೆ.

ಇಂದು, ಶಿಶಿರ್, ಧನರಾಜ್ ಅವರನ್ನು ನೇರವಾಗಿ ನಾಮಿನೇಟ್ ಮಾಡ್ತಾರೆ. ನೀವು ಗೆಸ್ಟಾ ಅಥವಾ ಸ್ಪರ್ಧಿಯಾ ಅನ್ನೋದು ತಿಳಿತಾ ಇಲ್ಲ. ಮನೆಯಲ್ಲಿ ಇದ್ದೂ ಇಲ್ಲದಂತೆ ಇದ್ದೀರಿ. ಎಲ್ಲೋ ಕಳೆದುಹೋಗಿದ್ದೀರಿ ಎನ್ನುವ ಶಿಶಿರ್, ಧನರಾಜ್ ಗೆ ಹಾಗಲಕಾಯಿ ಜ್ಯೂಸ್ ಕುಡಿಸ್ತಾರೆ. ಮಚ್ಚಾ, ಮಚ್ಚಾ ಬಚ್ಚಲ ಮನೆ ಸ್ವಚ್ಛ ಎನ್ನುತ್ತ ಕಹಿ ಜ್ಯೂಸ್ ಕುಡಿದು ಮುಗಿಸುವ ಧನರಾಜ್, ಕಣ್ಣೀರು ಹಾಕ್ತಿದ್ದಾರೆ. ಎಲ್ಲಿ ಮಾತನಾಡ್ಬೇಕು, ಎಲ್ಲಿ ಮಾತನಾಡ್ಬಾರದು ಎನ್ನುವ ಕನ್ಫ್ಯೂಸ್ ನಲ್ಲಿ ಧನರಾಜ್ ಇದ್ದು, ಬಿಗ್ ಬಾಸ್ ಗೆ ನಾನು ಅನ್ ಫಿಟ್ ಎನ್ನುವ ಅನುಮಾನ ಬರ್ತಿದೆ ಎನ್ನುತ್ತಲೇ ಭಾವುಕರಾಗ್ತಾರೆ.  ಧನರಾಜ್ ಅವರನ್ನು ಸ್ಪರ್ಧಿಗಳು ಸಮಾಧಾನಪಡಿಸಲು ಪ್ರಯತ್ನಿಸ್ತಾರೆ.

Tap to resize

Latest Videos

undefined

ಧರ್ಮ‌ ಬೈಕ್ ಹಿಂದೆ ಅನುಷಾ, ಬಿಗ್ ಬಾಸ್ ಲವ್ ಕಪಲ್ ವಿಡಿಯೋ ವೈರಲ್

ಬಿಗ್ ಬಾಸ್ ಇಂದಿನ ಪ್ರೋಮೋವನ್ನು ಕಲರ್ಸ್ ಕನ್ನಡ ತನ್ನ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಸಾಲು ಸಾಲು ಕಮೆಂಟ್ ಬಂದಿದೆ. ಅನೇಕರಿಗೆ ಶಿಶಿರ್, ನೀಡ್ತಿರುವ ಕಾರಣ ಇಷ್ಟವಾಗ್ತಿಲ್ಲ. ಅನುಷಾ ರೈ, ಶಿಶಿರ್ ಸರಿಯಾದ ಕಾರಣ ನೀಡಿಲ್ಲ ಎಂದೇ ನಿನ್ನೆ ಗಲಾಟೆ ಮಾಡಿದ್ರು. ಅದು ದೊಡ್ಡ ರಣಾಂಗಣ ಸೃಷ್ಟಿಮಾಡಿತ್ತು. ಅನುಷಾ ಫ್ಯಾನ್ಸ್ ಕೂಡ ಶಿಶಿರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅನುಷಾ ನಾಮಿನೇಟ್ ಮಾಡಲು ಶಿಶಿರ್ ಸರಿಯಾದ ಕಾರಣ ನೀಡಿಲ್ಲ. ಇದನ್ನು ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚಿಸಬೇಕು ಎನ್ನುತ್ತಿದ್ದಾರೆ ವೀಕ್ಷಕರು. ಈಗ, ಧನರಾಜ್ ನಾಮಿನೇಷನ್ ವಿಷ್ಯದಲ್ಲೂ ಶಿಶಿರ್ ಸರಿಯಾದ ಕಾರಣ ಹೇಳ್ತಿಲ್ಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

ಶಿಶಿರ್, ಒಬ್ಬರಾದ್ಮೇಲೆ ಒಬ್ಬರಂತೆ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ ಮಾಡ್ತಿದ್ದು, ಶಿಶಿರ್ ನಾಮಿನೇಷನ್ ಬಿಗ್ ಬಾಸ್ ಪ್ರೇಮಿಗಳಿಗೆ ಇಷ್ಟವಾದಂತೆ ಕಾಣ್ತಿಲ್ಲ. ಕ್ಯಾಪ್ಟನ್ ಆದ್ಮೇಲೆ ಶಿಶಿರ್ ಬದಲಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಶಿಶಿರ್, ಮಾನಸಾ ಸೇರಿದಂತೆ ಮನೆಯಲ್ಲಿ ಕಾಣಿಸಿಕೊಳ್ಳದ ಸ್ಪರ್ಧಿಗಳನ್ನು ನಾಮಿನೇಟ್ ಮಾಡ್ಬಹುದಿತ್ತು. ಆದ್ರೆ ಅನುಷಾ, ಧನರಾಜ್ ಅವರ ಕಣ್ಣಿಗೆ ಹೇಗೆ ದುರ್ಬಲರಾಗಿ ಕಂಡ್ರು ಎಂಬ ಪ್ರಶ್ನೆಯನ್ನು ಫ್ಯಾನ್ಸ್ ಇಟ್ಟಿದ್ದಾರೆ.

ನೀವು ಹಾಕಿರುವ ಶ್ರಮಕ್ಕೆ ಬೇರೆ ಯಾರಿಂದಲೂ ಮ್ಯಾಚ್ ಮಾಡಲಾಗದು; ಬಿಗ್ ಬಾಸ್ ಬಿಟ್ಟಿದ್ದಕ್ಕೆ ಸುದೀಪ್ ಪುತ್ರಿ ಬೇಸರದ ಪೋಸ್ಟ್!

ಮಾನಸಾಗೆ ತುಕಾಲಿ ಫೋನ್ ಮಾಡಿ ಒಂದಿಷ್ಟು ಸಲಹೆ ನೀಡಿದ ನಂತ್ರ ಬಿಗ್ ಬಾಸ್ ಮನೆ ಗಲಾಟೆ ಗೂಡಾಗಿದೆ. ಐಶ್ವರ್ಯ, ಅನುಷಾ ಕಿತ್ತಾಡಿಕೊಂಡಿದ್ದಾರೆ. ಇತ್ತ ಅನುಷಾ ಜೊತೆ ಮಾನಸಾ ಕೂಡ ಜಗಳಕ್ಕಿಳಿದಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆಂದು ಅನುಷಾ, ಧರ್ಮ ಮುಂದೆ ಕಣ್ಣೀರು ಹಾಕಿದ್ರೆ, ಅತ್ತ ಐಶ್ವರ್ಯ ಕೂಡ, ಧರ್ಮ ಬಳಿ ಬಂದು ಕಂಪ್ಲೇಂಟ್ ಮಾಡಿದ್ದಾರೆ. ಇವರ ಆಟವನ್ನು ಉಳಿದ ಸ್ಪರ್ಧಿಗಳು ಕಣ್ಣು ಮಿಟುಕಿಸದೆ ನೋಡ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಹೆಣ್ಮಕ್ಕಳ ಜಗಳದಲ್ಲಿ ರಂಗೇರುವ ಸಾಧ್ಯತೆ ಇದೆ. 

ವಾರದ ಮಧ್ಯೆಯೇ ಒಬ್ಬರು ಮನೆಯಿಂದ ಹೊರಗೆ ಹೋಗುವ ಸಾಧ್ಯತೆ ಇದ್ದು, ಶಿಶಿರ್ ತಲೆ ಮೇಲೆ ನೇರ ನಾಮಿನೇಷನ್ ಹೊಣೆಯಿದೆ. ಶಿಶಿರ್ ಮತ್ತ್ಯಾರನ್ನೆಲ್ಲ ನಾಮಿನೇಟ್ ಮಾಡ್ತಾರೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡ್ಬೇಕಿದೆ. ಈ ಮಧ್ಯೆ ಭವ್ಯ ಮತ್ತು ತ್ರಿವಿಕ್ರಮ್ ಲವ್ ಸ್ಟೋರಿ ಸದ್ದು ಮಾಡಿದ್ದು, ವೀಕ್ಷಕರು ಅವರ ಮೇಲೂ ಒಂದು ಕಣ್ಣಿಟ್ಟಿದ್ದಾರೆ.  

click me!