ಸೀತಾ ರಾಮಂಗೆ ಮುತ್ತು ಕೊಡೋಕೆ ಬಂದ್ಲು, ಅಷ್ಟರಲ್ಲಿ ಹಿಂಗಾಗ್ಬಿಡೋದಾ!

Published : Oct 10, 2024, 11:36 AM ISTUpdated : Oct 10, 2024, 12:54 PM IST
 ಸೀತಾ ರಾಮಂಗೆ ಮುತ್ತು ಕೊಡೋಕೆ ಬಂದ್ಲು, ಅಷ್ಟರಲ್ಲಿ ಹಿಂಗಾಗ್ಬಿಡೋದಾ!

ಸಾರಾಂಶ

ಸೀತಾರಾಮ ಸೀರಿಯಲ್‌ನಲ್ಲಿ ಸಿಹಿಯ ಜನ್ಮರಹಸ್ಯ ಬಯಲಾದ ಬಳಿಕ, ಸೀತಾ ಮಧ್ಯರಾತ್ರಿಯಲ್ಲಿ ಸಿಹಿಯನ್ನು ಮನೆಗೆ ಕರೆತರುತ್ತಾಳೆ. ಬೆಳಗ್ಗೆ ಎದ್ದ ಸಿಹಿಗೆ ರಾತ್ರಿ ನಡೆದ ಘಟನೆ ನೆನಪಿಲ್ಲದ ಕಾರಣ ಸೀತಾಳನ್ನು ಪ್ರಶ್ನಿಸುತ್ತಾಳೆ. ಸೀತಾ ಮತ್ತು ಸಿಹಿಯ ಮುದ್ದಾಟ ನೋಡಿ ರಾಮ್‌ಗೆ ಹೊಟ್ಟೆಕಿಚ್ಚು ಆಗುತ್ತದೆ.

'ಸೀತಾರಾಮ’ ಸದ್ಯ ಕಿರುತೆರೆಯಲ್ಲಿ ಫೇಮಸ್ ಆಗ್ತಿರೋ ಸೀರಿಯಲ್. ಆದರೆ ಅದದೇ ಕಥೆಯನ್ನು ಹಿಡಿದು ಅಗತ್ಯಕ್ಕಿಂತ ಹೆಚ್ಚು ಎಳೆದಾಡಿದ್ದಕ್ಕೋ ಏನೋ, ಟಿಆರ್‌ಪಿಯಲ್ಲಿ ಟಾಪ್ ೨ನಲ್ಲಿದ್ದ ಈ ಸೀರಿಯಲ್ ಇದೀಗ ಟಿಆರ್‌ಪಿಯಲ್ಲಿ ಹಿಂದೆ ಬಿದ್ದಿದೆ. ಟಾಪ್‌ ೫ನಲ್ಲೂ ಇಲ್ಲ. ಹಾಗಾದರೆ ಈ ಸೀರಿಯಲ್ ಕಥೆ ಸೀರಿಯಲ್ ವೀಕ್ಷಕರಿಗೆ ಬೋರ್ ಆಗ್ತಿದೆಯಾ ಅನ್ನೋ ಮಾತು ಹೇಳಿ ಬರ್ತಿದೆ. ಆದರೆ ಇದಕ್ಕೆ ಉತ್ತರ 'ಬಿಗ್‌ಬಾಸ್'. ಕಿಚ್ಚ ಸುದೀಪ್ ಸಾರಥ್ಯದ ಈ ಪಾಪ್ಯುಲರ್ ಶೋ ಬಂದಕೂಡಲೇ ಬೇರೆ ಚಾನೆಲ್‌ಗಳ ಫೇಮಸ್ ಸೀರಿಯಲ್‌ಗಳ ಟಿಆರ್‌ಪಿ ಧರೆಗುರುಳುವುದು ಕಾಮನ್. ಅದನ್ನು ಮೀರಿ ಸೀರಿಯಲ್ ಟೀಮ್ ಏನೇನೋ ವರ್ಕೌಟ್ ಮಾಡಲು ಹೋದಲೂ ಅದು ಸರಿ ಹೋಗುವುದಿಲ್ಲ. ಏಕೆಂದರೆ ಬಿಗ್‌ಬಾಸ್ ಬಗ್ಗೆ ಒಂದು ಕ್ರೇಜ್ ಜನರಲ್ಲಿ ಇದ್ದೇ ಇದೆ. ಇರಲಿ, ಸೀತಾರಾಮದಲ್ಲಿ ಸೀತಾ, ರಾಮ ಹಾಗೂ ಸಿಹಿಯ ಒಂದು ಕ್ಯೂಟ್ ಸೀನ್ ವೀಕ್ಷಕರ ಮನಗೆದ್ದಿದೆ. ಹೈ ಟೆನ್ಶನ್ ಎಪಿಸೋಡ್‌ಗಳ ಮಧ್ಯೆ ಇದೊಂದು ಸೀನ್ ಒಂಥರಾ ಬಿರು ಬೇಸಗೆಯಲ್ಲಿ ತಂಗಾಳಿ ಬಂದ ಹಾಗೆ ಬಂದು ಬಿಟ್ಟಿದೆ. ಹೀಗಾಗಿ ವೀಕ್ಷಕರು ಇದನ್ನು ಇಷ್ಟಪಟ್ಟಿದ್ದಾರೆ. ಸೀತಾ, ರಾಮ ಮತ್ತು ಸಿಹಿ ಈ ಮೂವರೂ ಜೀವನಪರ್ಯಂತ ಹೀಗೇ ಇರಲಿ ಅಂತ ಹಾರೈಸಿದ್ದಾರೆ.

ಇನ್ನೊಂದು ಕಡೆ ಕಳೆದೊಂದು ತಿಂಗಳ ಹಿಂದೆಯೇ ಈ ಸೀರಿಯಲ್‌ನಲ್ಲಿ ಸಿಹಿಯ ಜನ್ಮರಹಸ್ಯ ಬಯಲಾಗಿದೆ. ಡಾ ಮೇಘಶ್ಯಾಮ್ ಹಾಗೂ ಶಾಲಿನಿಯ ಮಗಳು ಸಿಹಿ, ಸಿಹಿಗೆ ಸೀತಾಳೆ ಬಾಡಿಗೆ ತಾಯಿ ಎನ್ನೋದು ರಿವೀಲ್ ಆಗಿ ಬಹಳ ದಿನ ಆಗಿದೆ. ಈ ಹಿಂದೆ ಡಾ ಅನಂತಲಕ್ಷ್ಮೀಗೆ ಮಾತ್ರ ಗೊತ್ತಿದ್ದ ಈ ವಿಚಾರ ಇದೀಗ ರುದ್ರನಿಗೆ ತಿಳಿದಿದೆ.

ತುಳಸಿ ಮಗು ಹೆತ್ತು, ಪೂರ್ಣಿಗೆ ಕೊಟ್ಟು ಸಾಯ್ತಾಳಾ? ಶ್ರೀರಸ್ತು ಶುಭಮಸ್ತು ಕೊನೆಯಾಗೋದು ಹೀಗೆ!

ಈ ಹಿಂದೆ ತಾನು ಸಿಹಿಗೆ ಬಾಡಿಗೆ ತಾಯಿಯೇ ಹೊರತು, ನಿಜವಾದ ತಾಯಿ ಅಲ್ಲ ಎನ್ನೋದು ಸೀತಾಗೆ ಗೊತ್ತಿದ್ದರೂ, ಸಿಹಿಯ ಅಪ್ಪ-ಅಮ್ಮ ಯಾರು ಅನ್ನೋದು ತಿಳಿದಿರಲಿಲ್ಲ. ಈಗ ಅದು ಅವಳಿಗೆ ಗೊತ್ತಾಗಿದೆ. ಅದೊಂದು ದಿನ ಸಿಹಿಯನ್ನು ಮೇಘಶ್ಯಾಮ್ ಮನೆಯಲ್ಲಿ ಬಿಟ್ಟು ಸೀತಾ ಮತ್ತು ರಾಮ್ ಯಾವುದೋ ಕೆಲಸದ ಮೇಲೆ ಹೋಗಿದ್ದಾರೆ. ವಾಪಾಸ್ ಬರುವಾಗ ಕತ್ತಲಾಗಿದೆ. ರಾಮ್ ಸಿಹಿ ಅಲ್ಲೇ ಮಲಗಿರಲಿ ಅಂದರೆ ಸೀತಾ ಬೇಡ ಅಂದಿದ್ದಾಳೆ. ಆದರೂ ರಾಮ್ ಬಲವಂತ ಮಾಡಿದಾಗ ಸುಮ್ಮನಿದ್ದು, ಆಮೇಲೆ ತಾನೇ ಹೋಗಿ ಕರೆದುಕೊಂಡು ಬಂದಿದ್ದಾಳೆ. ಹೊರಗೆ ನಿಂತು ಮೇಘಶ್ಯಾಮ್ ಮತ್ತು ಶಾಲಿನಿಯ ಮಾತು ಕೇಳಿಸಿಕೊಂಡಾಗ ಅವರೇ ತನ್ನ ಮಗಳ ತಂದೆ ತಾಯಿ ಅನ್ನೋದು ಗೊತ್ತಾಗಿದೆ.

ಈ ನಡುವೆಯೇ ಅವಳು ತನ್ನ ಮಗಳನ್ನು ಅಲ್ಲಿಂದ ಕರೆತಂದಿದ್ದಾಳೆ.

ಸಿಹಿಗೆ ಈ ವಿಷಯ ಗೊತ್ತಾಗಿದ್ದು ಅವಳು ಬೆಳಗ್ಗೆ ಎದ್ದಾಗಲೇ. ಆದರೆ ಮಗಳಿಲ್ಲದೇ ಸೀತಾಗೆ ನಿದ್ದೆ ಬಂದಿಲ್ಲ. ರಾಮ್‌ಗೂ ನಿದ್ದೆ ಹತ್ತಿರ ಸುಳಿದಿಲ್ಲ. ಅವಳು ಬಂದಮೇಲೆ ಎಲ್ಲ ನೆಮ್ಮದಿಯ ನಿದ್ದೆ ಮಾಡಿದ್ದಾರೆ. ಬೆಳಗ್ಗೆ ಎದ್ದಾಗ ಸಿಹಿಗೆ ತಾನೆಲ್ಲಿದ್ದೇನೆ ಅನ್ನೋದು ಗೊತ್ತಾಗಿಲ್ಲ. ಅಮ್ಮನ ಹತ್ರ ಕೇಳಿದ್ದಾಳೆ. ಆಗ ಅಮ್ಮ ಸೀತಾ ಅವಳನ್ನು ಮಧ್ಯರಾತ್ರಿ ಕರೆದುಕೊಂಡು ಬಂದ ವಿಷಯ ಹೇಳಿದ್ದಾಳೆ. ಈ ನಡುವೆ ಮಗಳ ಮುದ್ದು ಮಾತು ಕೇಳಿ ಮುದ್ದುಕ್ಕಿ ಬಂದು ಸೀತಾ ಮಗಳಿಗೆ ಮುತ್ತು ನೀಡಿದ್ದಾಳೆ. ರಾಮ್‌ಗೆ ಇದನ್ನು ನೋಡಿ ಹೊಟ್ಟೆಕಿಚ್ಚಾಗಿದೆ.

ನಟಿ ಹರಿಪ್ರಿಯಾ ಪ್ರೆಗ್ನೆಂಟ್: ಬೇಬಿ ಬಂಪ್ ನೋಡಿ ಖಚಿತಪಡಿಸಿದ ಅಭಿಮಾನಿಗಳು!

'ನಂಗೆ ಸಿಹಿ ಮುತ್ತು ಎಷ್ಟು ಸ್ವೀಟಾಗಿದೆ' ಅಂತ ಗೊತ್ತು. ಆದರೆ ಸೀತಮ್ಮನ ಮುತ್ತಿನ ಟೇಸ್ಟ್ ಗೊತ್ತಿಲ್ಲ ಅಂದಾಗ ಸೀತಾ, 'ಹೌದಾ, ಸಿಹಿ ಕಣ್ಮುಚ್ಕೋ' ಅಂದಿದ್ದಾಳೆ. ಸಿಹಿ ಕಣ್ಮುಚ್ಚಿದ್ದಾಳೆ. ಸೀತಾ ಇನ್ನೇನು ರಾಮನಿಗೆ ಮುತ್ತು ಕೊಡ್ಬೇಕು ಅನ್ನುವಷ್ಟರಲ್ಲಿ ಕಣ್ಣುತೆರೆದಿದ್ದಾಳೆ. ರಾಮನಿಗೆ ನಿರಾಸೆಯಾದರೂ ಮಗಳ ತುಂಟಾಟ ಕಂಡು ಅವಳನ್ನು ಅವನು ಮುದ್ದು ಮಾಡ್ತಾನೆ. 

ಇದು ಸಾಕಷ್ಟು ಮಂದಿಗೆ ಕನೆಕ್ಟ್‌ ಆಗೋ ಹಾಗೆ ಇದೆ ಅನ್ನೋ ಮಾತು ಕೇಳಿ ಬರ್ತಿದೆ. ಅನೇಕ ಮನೆಗಳಲ್ಲಿ ನಡೆಯೋ ಕ್ಯೂಟ್ ಕಥೆಯೂ ಆಗಿರೋ ಕಾರಣ ವೀಕ್ಷಕರು ಇದನ್ನು ಮೆಚ್ಚಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?