ಬಿಗ್‌ಬಾಸ್‌ ಕನ್ನಡದ ಮನೆಯಲ್ಲಿ ನಿಗೂಢವಾಗಿ ಒಡೆದು ಹೋಗುತ್ತಿದೆ ಊಟದ ತಟ್ಟೆ, ಸ್ಪರ್ಧಿಗಳಿಗೆ ದೆವ್ವ ಕಾಟದ ಭಯ!

By Gowthami K  |  First Published Oct 10, 2024, 12:54 AM IST

ಬಿಗ್‌ಬಾಸ್‌ ಕನ್ನಡ 11 ರಲ್ಲಿ ದೆವ್ವದ ಭಯ ಆವರಿಸಿದ್ದು, ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಊಟದ ತಟ್ಟೆಗಳು ತನ್ನಷ್ಟಕ್ಕೆ ಒಡೆಯುತ್ತಿದ್ದು, ಮನೆಯಲ್ಲಿ ದೆವ್ವವಿದೆ ಎಂದು ಸ್ಪರ್ಧಿಗಳು ಮಾತನಾಡಿಕೊಂಡರು. ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ಗಾಯಗೊಂಡ ಘಟನೆ ಕುತೂಹಲ ಮೂಡಿಸಿದೆ.


ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮನೆಯಲ್ಲಿ  ಸ್ಪರ್ಧಿಗಳಿಗೆ ದೆವ್ವದ ಕಾಟವಿದೆ ಎಂಬ ಭಯ  ಆರಂಭವಾಗಿದೆ. ಕಾರಣ ಮನೆಯಲ್ಲಿ ತನ್ನಷ್ಟಕ್ಕೆ ಎರಡು ಊಟದ ತಟ್ಟೆಗಳು ಒಡೆದು ಹೋಗಿದೆ. ಮಧ್ಯಾಹ್ನ ಎಲ್ಲರೂ ಮಾತನಾಡುತ್ತಾ ಬೆಡ್‌ ರೂಂ ನಲ್ಲಿ ಕುಳಿತಿರುವಾಗ ಅಡುಗೆ ಮನೆಯಲ್ಲಿ ತನ್ನಷ್ಟಕ್ಕೆ  ತಟ್ಟೆ ಬಿದ್ದು ಒಡೆಯಿತು.  ಹೀಗಾಗಿ ಎಲ್ಲರೂ ಹೇಗೆ ಒಡೆದು ಹೋಗುತ್ತಿದೆ ಎಂದು ತಲೆ ಕೆಡಿಸಿಕೊಂಡರು.  ಭವ್ಯಾ ಗೌಡ ಮತ್ತು ಐಶ್ವರ್ಯಾ ದೆವ್ವ ಗಿವ್ವ ಇದೆಯಾ? ಭಯವಾಗುತ್ತಿದೆ ಅಂತ ಮಾತನಾಡಿಕೊಂಡರು. 

ಐಶ್ವರ್ಯಾ ಅವರು ನನಗೆ ದೆವ್ವ ಇದೆ ಅಂತ ಅನ್ನಿಸುತ್ತಿದೆ ನಾನು ಈಗ ಹಾಗೇ ನೆನೆಸಿಕೊಂಡೆ ಎಂದರು. ಈ ವೇಳೆ ಮಂಜು, ಗೌತಮಿ ಅಲ್ಲೇ  ಇದ್ದು ಏನೂ ಇಲ್ಲ ನೆಗೆಟಿವ್‌ ಹೋಗಿದೆ. ದೆವ್ವ ಗಿವ್ವ ಏನೂ ಇಲ್ಲ ಎಂದರು. ಕುಕ್ಕರ್ ವಿಶಲ್ ಬಂದು ಹೋಗಬೇಕಾದ್ರು ಹಾಗೇ ಆಗಿದೆ. ಕೋಟ್ಯಂತರ ಜನ ಶೋ ನೋಡುತ್ತಾರೆ. ದೃಷ್ಟಿಯಾಗಿದೆ  ಎಂದು ಮಂಉ ಹೇಳಿದರು.

Tap to resize

Latest Videos

undefined

ಸ್ವರ್ಗದಲ್ಲಿರುವ ಕ್ಯಾಪ್ಟನ್ ಹಂಸಾ ಉಸ್ತುವಾರಿಯಾಗಿ ಟಾಸ್ಕ್ ವಿಚಾರದಲ್ಲಿ ನರಕವಾಸಿಗಳಿಗೆ ಮೋಸ ಮಾಡಿದ್ರಾ!?

ಇನ್ನೊಂದು ಕಡೆ ಧರ್ಮ ಕೀರ್ತಿರಾಜ್ ಅವರು ಪೊಟೇಟೋ ಪೀಲ್‌ ಮಾಡುವಾಗ ಕೈಗೆ ಗಾಯ ಮಾಡಿಕೊಂಡರು. ಇದಕ್ಕೆ ಐಶ್ವರ್ಯಾ ಸಿಂಧೋಗಿ ಶಾಕ್ ಆದರು. ಹೀಗಾಗಿ ಧರ್ಮ ಅವರು ಮಾಡುತ್ತಿದ್ದ ಕೆಲಸವನ್ನು ಐಶ್ವರ್ಯಾ ಅವರು ಮಾಡಲು ಮುಂದಾಗಿ ಐಶ್ವರ್ಯಾ ಕೂಡ ಕೈಗೆ ಗಾಯ ಮಾಡಿಕೊಂಡರು. ಇದಕ್ಕೆ ಮನೆಯವರೆಲ್ಲ ಸೇರಿ ಅವನು ಕೈ ಕುಯ್ಯಕೊಂಡಿದ್ದಕ್ಕೆ ಇವಳು ಕುಯ್ಯಕೊಂಡಳು ಇಬ್ಬರಿಗೂ ಒಳ್ಳೆ ಅಂಡರ್‌ ಸ್ಟಾಂಡಿಂಗ್ ಇದೆ ಎಂದು ಎಲ್ಲರೂ ಕಾಲೆಳೆದರು.

ಇನ್ನು ಎಂದಿನಂತೆ ಜಗದೀಶ್ ಮೂರು ಬಾರಿ ನಿದ್ದೆ ಮಾಡಿ ಕೋಳಿ ಕೂಗುವುದು ಹಾಕಿಸಿಕೊಂಡು ಬಿಗ್‌ಬಾಸ್‌ ರೂಲ್ಸ್ ಮುರಿದರು. ಇದರಿಂದ ಮನೆಯ ಕ್ಯಾಪ್ಟನ್‌ ಹಂಸಾ ಅವರು ಸಿಟ್ಟಾದರು. ಇಡೀ ದಿನ ಟೀ ಕೊಟ್ಟಿಲ್ಲ ಅದಕ್ಕೆ  ರೂಲ್ಸ್ ಬ್ರೆಕ್ ಮಾಡುತ್ತಿದ್ದೇನೆಂದು ಒಂದೇ ವಿಷಯವನ್ನು ಹುಡುಕಿಕೊಂಡು ಇಡೀ ದಿನ ಹಂಸಾ ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ಟೀ ವಿಷಯ ತೆಗೆದು ಕಿತ್ತಾಡಿಕೊಂಡೇ ಇದ್ದರು.

ಬೆಂಗಳೂರು ಫ್ರಿಡ್ಜ್ ಮರ್ಡರ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್, ಪ್ರಿಯಕರ ಬರೆದಿಟ್ಟ ಡೆತ್‌ನೋಟ್‌ ಪತ್ತೆ!

ಇನ್ನು ರಾತ್ರಿ ಮಲಗುವ ಮುನ್ನ ಕ್ಯಾಮರಾದ ಮುಂದೆ ಜಗದೀಶ್ ನಾನು  ಲಾಸ್ಟ್ ವೀಕ್‌ ಹೋಗಬೇಕೆಂದುಕೊಂಡಿದ್ದೆ. ಈಗ ಇಡೀ ಮನೆಯಲ್ಲಿ ಪ್ರತೀ ಸೆಂಕೆಂಡ್‌ ಇಲ್ಲಿ ಎಂಜಾಯ್ ಮಾಡುತ್ತಿರುವುದು ನಾನೇ, ತುಂಬಾ ಖಷಿಯಾಗಿದ್ದೇನೆ ಎಂದು ಹೇಳುತ್ತಿದ್ದರು. ಅವಕಾಶಕ್ಕೆ ಧನ್ಯವಾದ ಎಂದು ಮಾತನಾಡುತ್ತಿದ್ದರು ಅಡುಗೆ ಮನೆಯಲ್ಲಿದ್ದ ತ್ರಿವಿಕ್ರಮ್ ಮತ್ತು ರಂಜಿತ್ ಅವರು ಜಗದೀಶ್ ರೂಲ್ಸ್ ಬ್ರೇಕ್ ಬಗ್ಗೆ ಹಾಡಿನ ರೂಪದಲ್ಲಿ ಮಾತನಾಡುತ್ತಿದ್ದರು, ಈ ವೇಳೆ ಕ್ಯಾಮಾರ ಮುಂದೆ ಜಗದೀಶ್ ಮಾತನಾಡುವುದನ್ನು ಗಮನಿಸಿದ ರಂಜಿತ್ , ಹೊರಗಡೆ ಇರಬೇಕಾದ್ರೆ ಮೊಬೈಲ್ ಯೂಸ್‌ ಮಾಡಿ, ಕ್ಯಾಮಾರಾಗೆ ಎಷ್ಟು ಟಾರ್ಚರ್ ಕೊಡ್ತಾರೆ ಎಂದು ನಗಾಡಿಕೊಂಡರು. 

click me!