ಸಂಜಾನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದ್ವೆ: ನಟಿ ಹೇಳಿದ್ದಾಯ್ತು, ಶೆಟ್ರು ಹೇಳ್ತಿರುವುದೇನು?

By Roopa Hegde  |  First Published Oct 9, 2024, 12:53 PM IST

ಚಂದನವನದಲ್ಲಿ ಇನ್ನೊಂದು ಮದುವೆ ಗುಲ್ಲೇಳ್ತಿದೆ. ಚಂದನ್ ಎರಡನೇ ಮದುವೆ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹಬ್ಬಿದೆ. ಕೆಲಸದಲ್ಲಿ ಬ್ಯೂಸಿ ಇರುವ ಚಂದನ್ ಮಾತ್ರ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ಕಮೆಂಟ್ ಮಾಡಿ ತಣ್ಣಗಿದ್ದಾರೆ. 
 


ರೀಲ್ಸ್ ರಾಣಿ ನಿವೇದಿತಾ ಗೌಡ (reels queen Nivedita Gowda)ಗೆ ವಿಚ್ಛೇದನ ನೀಡಿದ್ಮೇಲೆ ರ್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಹೆಸರು ನಟಿ ಸಂಜನಾ ಆನಂದ್ (Actress Sanjana Anand) ಜೊತೆ ಥಳುಕು ಹಾಕಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಆನಂದ್  ಹಾಗೂ ಚಂದನ್ ಶೆಟ್ಟಿ ಮದುವೆಯದ್ದೇ ಸುದ್ದಿ. ಚಂದನ್ ಎರಡನೇ ಮದುವೆಯಾಗಲು ಸಿದ್ಧವಾಗಿದ್ದಾರೆ. ವಧು ಸಂಜನಾ ಆನಂದ್ ಎಂಬ ಸುದ್ದಿ ವೇಗವಾಗಿ ಹಬ್ಬಿದೆ. ಈಗಾಗಲೇ ಅದಕ್ಕೆ ಸಂಜನಾ ಆನಂದ್ ಉತ್ತರ ನೀಡಿದ್ದಾರೆ. ಈಗ ನಟ ಚಂದನ್ ಶೆಟ್ಟಿ ಸರದಿ. ಚಂದನ್ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಫೋಟೋಕ್ಕೆ ಕಮೆಂಟ್ ಮಾಡುವ ಮೂಲಕ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಟ್ರೆಂಡಿಂಗ್ ಹೆಸರಿನ ಇನ್ಸ್ಟಾ ಖಾತೆಯಲ್ಲಿ ನಟಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಅವರ ಎರಡನೇ ಮದುವೆ. ಬಲ್ಲ ಮೂಲಗಳ ಪ್ರಕಾರ ಶೀಘ್ರವೇ ಮದುವೆ ನಡೆಯಲಿದೆ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಫೇಕ್ ನ್ಯೂಸ್. ದಯವಿಟ್ಟು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಕಮೆಂಟ್ ಹಾಕಿದ್ದಾರೆ. ಚಂದನ್ ಶೆಟ್ಟಿ ಕಮೆಂಟ್ ಗೆ ಅನೇಕರು ರಿಯಾಕ್ಷನ್ ಕೂಡ ನೀಡಿದ್ದಾರೆ. ಮತ್ತೆ ಅದೇ ತಪ್ಪು ಮಾಡ್ಬೇಡಿ ಎಂದು ಅನೇಕರು ಚಂದನ್ ಗೆ ಸಲಹೆ ನೀಡಿದ್ದಾರೆ. ಸಾಂಪ್ರದಾಯಿಕ ಹುಡುಗಿ ನೋಡಿ ಮದುವೆ ಆಗುವಂತೆಯೂ ಹೇಳಿದ್ದಾರೆ.

Tap to resize

Latest Videos

undefined

ಲಿಪ್‌ಸ್ಟಿಕ್ ಹಚ್ಚಿ ಮಲಗುವುದ್ಯಾಕೆ ನಾಗಿಣಿ ನಮ್ರತಾ? ಇದೇನು ರೋಗನಾ?

ಇನ್ಸ್ಟಾದಲ್ಲಿ ಸಂಜನಾ ಆನಂದ್ ಕೂಡ ಸ್ಪಷ್ಟನೆ ನೀಡಿದ್ದರು. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ. ಇದು ಕೇವಲ ವದಂತಿ ಎಂದಿದ್ದರು. ಸಂಜನಾ ಆನಂದ್ ಹಾಗೂ ಚಂದನ್ ಶೆಟ್ಟಿಯನ್ನು ಜೋಡಿ ಮಾಡಲು ಕಾರಣ, ಯುಟ್ಯೂಬ್ ನಲ್ಲಿ ಪೋಸ್ಟ್ ಆಗಿರುವ ಒಂದು ವಿಡಿಯೋ. ಚಂದನ್ ಹಾಗೂ ಸಂಜನಾ, ಸೂತ್ರಧಾರಿ ಹೆಸರಿನ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಯುಟ್ಯೂಬ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್, ರೀಲ್ ನಲ್ಲಿ  ಜೋಡಿ ಪರ್ಫೆಕ್ಟ್ ಆಗಿದ್ದು, ರಿಯಲ್ ನಲ್ಲೂ ದಿ ಬೆಸ್ಟ್ ಆಗ್ಬಹುದು ಎಂಬ ಕನಸು ಕಾಣ್ತಿದ್ದಾರೆ. ಇದೇ ಕಾರಣಕ್ಕೆ ಅವರ ಮದುವೆ ಸುದ್ದಿ ಇಷ್ಟೊಂದು ಸದ್ದು ಮಾಡ್ತಿದೆ.  

ನಿವೇದಿತಾ ಗೌಡ ಜೊತೆ ಡಿವೋರ್ಸ್ ಪಡೆದ ನಂತ್ರ ಚಂದನ್ ಶೆಟ್ಟಿ,  ಬ್ಯಾಚುಲರ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ನಟನೆ, ಹಾಡು ಸೇರಿದಂತೆ ವೃತ್ತಿ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ನಿವೇದಿತಾ ಗೌಡ ಜೊತೆ ಕೂಡ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದು, ಚಂದನ್, ರೀಲ್ಸ್ ಮೂಲಕವೂ ಜನರ ಮನಸ್ಸು ಕದಿಯುತ್ತಿದ್ದಾರೆ. ಚಂದನ್, ನಿವೇದಿತಾಗೆ ವಿಚ್ಛೇದನ ನೀಡಿ ಕೆಲವೇ ತಿಂಗಳಾಗಿದೆ. ಆಗ್ಲೇ ಇನ್ನೊಂದು ಮದುವೆ ಸುದ್ದಿ ಹಬ್ಬಿದ್ದು, ಕೆಲ ಫ್ಯಾನ್ಸ್ ಇದ್ರಿಂದ ಖುಷಿಯಾಗಿದ್ದಾರೆ. ವದಂತಿ ಸತ್ಯವಾಗ್ಲಿ ಎಂಬ ಮಾತುಗಳು ಕೇಳಿ ಬರ್ತಿವೆ. 

ಸ್ವಾರ್ಥಕ್ಕೆ ಐಶ್ ವರಿಸಿದ ಅಭಿಷೇಕ್, ಇದೇ ದಾಂಪತ್ಯಕ್ಕೆ ಮುಳುವಾಯಿತಾ?

ಇನ್ನು ನಟಿ ಸಂಜನಾ ಆನಂದ್ ವಿಷ್ಯಕ್ಕೆ ಬರೋದಾದ್ರೆ ಸ್ಯಾಂಡಲ್ವುಡ್ ಕ್ರಶ್ ಎಂದೇ ಗುರುತಿಸಿಕೊಂಡಿರುವ ನ್ಯಾಚುರಲ್ ಬ್ಯೂಟಿ ಸಂಜನಾ, 2019ರಲ್ಲಿ ಬಿಡುಗಡೆಯಾದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ವೃತ್ತಿ ಜೀವನ ಶುರು ಮಾಡಿದ್ದಾರೆ. ಗಂಡು ಬಿಲ್ಲು, ಕುಷ್ಕಾ, ಹನಿಮೂನ್, ಸಲಗ, ಕ್ಷತ್ರಿಯ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಸಂಜನಾ. ಸದ್ಯ ದಿನಕರ್ ತೂಗುದೀಪ (Dinkar Thoogudeep) ಆಕ್ಷನ್ ಹೇಳಿರುವ ಚಿತ್ರ ರಾಯಲ್ ನಲ್ಲಿ ಸಂಜನಾ ನಟಿಸಿದ್ದಾರೆ. ವಿರಾಟ್ ಜೊತೆ ಸಂಜನಾ ಕಾಣಿಸಿಕೊಂಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. 

click me!