ಸೀತಾ ರಾಮ ಧಾರಾವಾಹಿಯಲ್ಲಿ ಶ್ರೀರಾಮ ತನ್ನ ಪ್ರೀತಿಗೆ ಸಪೋರ್ಟ್ ಮಾಡೋ ಗೆಳೆಯಾ ಅಂತ ಕರೆದುಕೊಂಡು ಬಂದರೆ ಆತನ ಲವರ್ ಸೀತಾಳ ಫ್ರೆಂಡ್ ಪ್ರಿಯಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ.
ಬೆಂಗಳೂರು (ಜ.15): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಫೆರೆಂಟ್ ಲವ್ ಸ್ಟೋರಿ ಹೊಂದಿರುವ ಸೀತಾರಾಮ ಸೀರಿಯಲ್‌ನಲ್ಲಿ ಈಗ ಪ್ರಮುಖ ಪಾತ್ರಧಾರಿಗಳಾದ ಸೀತಾ-ರಾಮರ ಪ್ರೀತಿ ಕ್ಲಿಕ್ ಆಗುವುದಕ್ಕೂ ಮುನ್ನವೇ, ರಾಮನ ಸ್ನೇಹಿತ ಅಶೋಕ್ ಹಾಗೂ ಸೀತಾಳ ಸ್ನೇಹಿತೆ ಪ್ರಿಯಾಗೂ ಲವ್ ಶುರುವಾಗುತ್ತಿದೆ. ಇನ್ನು ಸೀತಾ-ರಾಮನಿಗಿಂತ ಮುಂಚಿತವಾಗಿ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.
ಸೀತಾ ರಾಮ ಸೀರಿಯಲ್‌ನಲ್ಲಿ ರಾಮ ಎಷ್ಟೇ ಒಳ್ಳೆಯ ವ್ಯಕ್ತಿತ್ವ ಪ್ರದರ್ಶನ ಮಾಡಿದರೂ ಅದನ್ನು ತಪ್ಪಾಗಿ ಭಾವಿಸುವ ಸೀತಾ ಆತನ ಪ್ರೇಮದ ಬಲೆಗೆ ಬೀಳುತ್ತಿಲ್ಲ. ಪ್ರತಿ ದಿನ ಧಾರಾವಾಹಿಯನ್ನು ಬಬಲ್‌ಗಮ್ ತರಹ ಎಳೆಯುತ್ತಾ ಪ್ರೇಮಿಗಳನ್ನು ದೂರ ಮಾಡಲಾಗುತ್ತಿದೆ. ಅವರನ್ನು ಹೆಚ್ಚು ಕಾಯಿಸದೇ ಒಂದು ಮಾಡಿ ಎಂದು ಅಭಿಮಾನಿಗಳು ಕೂಡ ಧಾರಾವಾಹಿ ನಿರ್ದೇಶಕರಿಗೆ ಮನವಿ ಮಾಡಿದ್ದರು. ಆದರೆ, ನಿರ್ದೇಶಕರು ಸೀತಾ-ರಾಮ ಪಾತ್ರದ ಕಥೆಯನ್ನು ಬದಲಿಸದೇ, ಸ್ವಲ್ಪ ಟ್ವಿಸ್ಟ್ ಕೊಟ್ಟಿದ್ದಾರೆ. ಸೀತಾ ರಾಮರ ಪ್ರೀತಿಗೆ ಸಪೋರ್ಟ್ ಮಾಡುತ್ತಿದ್ದ ಪಾತ್ರಧಾರಿಗಳಾದ ಅಶೋಕ್- ಪ್ರಿಯಾ ಪ್ರೀತಿಯನ್ನು ಒಂದು ಗೂಡಿಸಲು ಮುಂದಾಗಿದ್ದಾರೆ.
ಮೇಕಪ್ ಕಿಟ್ ಹೋಗಿದ್ದಕ್ಕೆ ಕಣ್ಣೀರಾದ್ರು ತನಿಷಾ; ಸಂಗೀತಾ ಮಾಡಿದ್ರು ಸಮಾಧಾನ, ನಮ್ರತಾ ನಗು!
ಒನ್ ಸೈಡ್ ಲೈವ್‌ನಿಂದ ಟೂ ಸೈಡ್ ಪ್ರೀತಿ ಆರಂಭ: ದೇಸಾಯಿ ಕಂಪನಿಯಲ್ಲಿ ಶ್ರೀರಾಮ ದೇಸಾಯಿ ಬದಲು ಆತನ ಸ್ನೇಹಿತ ಅಶೋಕ್ ಬಾಸ್ ಎಂದು ಹೇಳಿಕೊಂಡು ಆಪೀಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ಮಧ್ಯಮ ವರ್ಗದ ಜೀವನದಿಂದ ಬೇಸತ್ತಿದ್ದ ಇದೇ ಕಚೇರಿಯ ಪ್ರಿಯಾ ಹೇಗಾದರೂ ಮಾಡಿ ಬಾಸ್ ಅನ್ನು ಬುಟ್ಟಿಗೆ ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಳು. ಒಳಗೊಳಗೆ ತಮ್ಮ ಬಾಸ್‌ನನ್ನು ಒನ್‌ಸೈಡ್ ಲವ್ ಮಾಡಲು ಆರಂಭಿಸಿದ್ದಳು.
ಆದರೆ, ಅಶೋಕ್ ಕಂಪನಿಯ ಬಾಸ್ ಅಲ್ಲವೆಂದು ತಿಳಿದ ನಂತರ ತೀವ್ರ ಬೇಸರಕ್ಕೆ ಒಳಗಾಗಿದ್ದಳು. ಆದರೆ, ಅಶೋಕ್ ರಾಮನ ಸ್ನೇಹಿತ ಎಂದು ತಿಳಿದು ನನಗೆ ಶ್ರೀಮಂತಳಾಗಿ ಜೀವನ ಮಾಡುವ ಯೋಗವಿಲ್ಲವೆಂದುಕೊಂಡು ಕೊರಗುತ್ತಿದ್ದಳು. ಇನ್ನು ಅಶೋಕ್ ತನಗೆ ಮೋಸ ಮಾಡಿದನೆಂಬ ಸಿಟ್ಟಿಗೆ ಸಿಕ್ಕಾಪಟ್ಟೆ ಪಾನಿಪುರಿ ತಿಂದು ಹೊಟ್ಟೆ ಕೆಡಿಸಿಕೊಂಡಿದ್ದಳು. ಪ್ರಿಯಾಗೆ ಚೂರು ಹೊಟ್ಟೆ ನೋವು ಎಂದಿದ್ದೇ ತಡ, ಆಕೆಯ ಬಗ್ಗೆ ಅಶೋಕ ಅತಿಯಾದ ಕಾಳಜಿ ತೋರಿಸಿದ್ದಾನೆ. ಆ ಕಾಳಜಿ ಕಂಡು ನೀವು ನಮ್ಮಮ್ಮನ ರೀತಿನೇ ಎಂದಿದ್ದಾಳೆ. ಹೀಗೆ ಇಬ್ಬರ ನಡುವೆ ಈ ಮೊದಲಿನಗಿಂತ ಅಸಹಜ ಮಾತುಗಳು ಹೆಚ್ಚಾಗಿವೆ.
ಪ್ರಿಯಾಳ ಪರಿಸ್ಥಿತಿಯನ್ನು ನೋಡಲಾಗದೇ ಅಶೋಕ ಊಟದ ಬಗ್ಗೆ ವಿಚಾರಿಸಿದಾಗ ಹೊಟ್ಟೆ ಸರಿಯಿಲ್ಲದ ಕಾರಣ ಊಟ ಮಾಡೊಲ್ಲವೆಂದು ಹೇಳುತ್ತಾಳೆ. ಆಗ, ನಿಮ್ಮ ಹೊಟ್ಟೆ ನೋವಿಗೆ ನನ್ನ ಬಳಿ ಪರಿಹಾರವಿದೆ ಎಂದು ತಾನೇ ಸ್ವತಃ ಮನೆಗೆ ಹೋಗಿ ಪ್ರಿಯಾಗಾಗಿ ಮೆಣಸಿನಕಾಳು ರಸಂ ಮಾಡಿಕೊಟ್ಟಿದ್ದಾನೆ. ಇದರಿಂದ ಪ್ರಿಯಾಳ ಮನಸ್ಸು ಕೂಡ ಕರಗಿದೆ. ಮಾತಿನ ನಡುವೆ ಪ್ರಿಯಾ, ಪದೇ ಪದೆ ಸರ್ ಪದ ಬಳಸುತ್ತಿರುವುದಕ್ಕೆ, ನಾನೇನು ನಿಮ್ಮ ಬಾಸ್ ಅಲ್ಲ ಅಶೋಕ್ ಅಂತ ಕರೀರಿ ಸಾಕು ಎಂದಿದ್ದಾನೆ. ಆದರೆ, ನನಗೆ ಸರ್ ಎಂದು ಕರೆಯುವುದರಲ್ಲಿಯೇ ಕಂಫರ್ಟ್ ಇದೆ ಎಂದು ಹೇಳಿದ್ದಾಳೆ.
ಎದ್ದು ಬಂದ ಮಹೇಶ್? ಶಾರ್ವರಿಯ ಗುಟ್ಟು ರಟ್ಟಾಗುತ್ತಾ? ಮಹಾ ತಿರುವಿನ ಮೆಗಾ ಸಂಚಿಕೆ!
ಅಶೋಕ-ಪ್ರಿಯಾ ಲವ್ ಸ್ಟೋರಿಗೆ ಫ್ಯಾನ್ಸ್ ಫಿದಾ: ಪ್ರಿಯಾ ಅಶೋಕ್ ಪ್ರೀತಿಯನ್ನು ನೋಡಿದ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ಒಂದು ಧಾರಾವಾಹಿಯಲ್ಲಿ ಎರಡೆರಡು ಲವ್ ಸ್ಟೋರಿಗಳಿವೆ. ಸೀತಾ ರಾಮ ಇವರಿಗಿಂತ ಅಶೋಕ- ಪ್ರಿಯ ಇವರ ಸನ್ನಿವೇಶಗಳೇ ಮನಸಿಗೆ ಮುದ ನೀಡುತ್ತವೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ಸೀತಾ ರಾಮಗಿಂತ ಇವರಿಬ್ಬರ ಜೋಡಿನೇ ಚೆನ್ನಾಗಿದೆ ಎಂದಿದ್ದಾರೆ. ಅಶೋಕ & ಪ್ರಿಯಾ ಆಕ್ಟಿಂಗ್ ತುಂಬಾ ಚೆನ್ನಾಗಿದೆ. ಸೀತಾ ರಾಮ, ಜೋಡಿ ಆಗುವ ಮೊದಲು ಇವರು ಜೋಡಿ ಅಗುವುದು ಒಳ್ಳೇದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.