ಎದ್ದು ಬಂದ ಮಹೇಶ್​? ಶಾರ್ವರಿಯ ಗುಟ್ಟು ರಟ್ಟಾಗುತ್ತಾ? ಮಹಾ ತಿರುವಿನ ಮೆಗಾ ಸಂಚಿಕೆ!

By Suvarna News  |  First Published Jan 15, 2024, 4:19 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಭಾರಿ ಟ್ವಿಸ್ಟ್​ ಆಗಿದ್ದು, ಒಂದು ಗಂಟೆಯ ಮಹಾ ಸಂಚಿಕೆ ಪ್ರಸಾರವಾಗಲಿದೆ. ಈ ಹೊಸ ತಿರುವಿನಲ್ಲಿ ಏನಿದೆ?
 


ಶಾರ್ವರಿಯ ಗುಟ್ಟು ಬಯಲಾಗುವ ಸಮಯ ಬಂದಿದೆ. ಆಕೆಯ ಪತಿ ಮಹೇಶ್​ಗೆ ಎಲ್ಲ ನೆನಪು ಮರುಕಳಿಸುತ್ತಿದೆ. ಎಲ್ಲಿ ಪತಿಗೆ ಎಲ್ಲಾ ನೆನಪು ಬಂದು ಆತ ಎಲ್ಲವನ್ನೂ ಹೇಳಿಬಿಟ್ಟರೆ ಎನ್ನುವ ಭಯದಲ್ಲಿ ಶಾರ್ವರಿ ಮತ್ತೆ ಪತಿಯ ಜೀವಕ್ಕೆ ಅಪಾಯ ತಂದೊಡ್ಡಲು ನೋಡುತ್ತಿದ್ದಾಳೆ. ಮಾಧವನ ಮೊದಲ ಪತ್ನಿಯನ್ನು ತಾನೇ ಕೊಲೆ ಮಾಡಿರುವ ರಹಸ್ಯ ಗೊತ್ತಾಗಿಬಿಟ್ಟರೆ ಎನ್ನುವ ಭಯದಲ್ಲಿ ಮಹೇಶನನ್ನು ವ್ಹೀಲ್​ಚೇರ್​ನಲ್ಲಿಯೇ ನೂಕಿ ಬಿಡುತ್ತಾಳೆ. ಮಹೇಶ್​ ವ್ಹೀಲ್​ಚೇರ್​ ಮಾಧವ್​ ಓಡಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಆಗುತ್ತದೆ. ಹಿಂದೆ ಕೂಡ ಇದೇ ರೀತಿಯ ಡಿಕ್ಕಿ ಆಗಿದ್ದರಿಂದಲೇ ಮಾಧವ್​ ತನ್ನ ಪತ್ನಿಯನ್ನು ಕಳೆದುಕೊಂಡಿರುತ್ತಾನೆ. ಅಂದಿನಿಂದಲೂ ಕಾರು ಓಡಿಸಿರುವುದಿಲ್ಲ. ಪತ್ನಿಯ ಸಾವಿಗೆ ತಾನೇ ಕಾರಣ ಎಂದುಕೊಂಡಿದ್ದಾನೆ ಆತ. ಆದರೆ ಸತ್ಯ ಗೊತ್ತಿರುವುದು ಶಾರ್ವರಿ ಮತ್ತು ಮಹೇಶ್​ಗೆ ಮಾತ್ರ. ಮಹೇಶ್​ಗೆ ಎಲ್ಲವೂ ಈಗ ನೆನಪಾಗುವ ಸಮಯ. ಕಾರಿಗೆ ಡಿಕ್ಕಿ ಹೊಡೆದು ಆತ ಮತ್ತೆ ನೆನಪು ಕಳೆದುಕೊಳ್ಳುತ್ತಾನಾ ಎಂದು ವೀಕ್ಷಕರು ನೋವುಂಡಿದ್ದಿದೆ. ಆದಷ್ಟು ಬೇಗ ಮಹೇಶ್​ಗೆ ನೆನಪು ಬಂದು ಪತ್ನಿ ಮಾಡಿದ ಕುತಂತ್ರವನ್ನು ಬಾಯಿ ಬಿಡುತ್ತಾನೆ ಎನ್ನುವಷ್ಟರಲ್ಲಿಯೇ ಮತ್ತೆ ಅಪಘಾತವಾದಂತೆ ತೋರಿಸಲಾಗಿತ್ತು.

ಅಂದಹಾಗೆ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್​ ಕಥೆ ಎಂದು ಸೀರಿಯಲ್​ ಪ್ರಿಯರಿಗೆ ಗೊತ್ತೇ ಆಗಿರುತ್ತದೆ. ಆದರೆ ಇದೀಗ ಭಾರಿ ಟ್ವಿಸ್ಟ್​ ಜೊತೆ ಒಂದು ಗಂಟೆಯ ಮಹಾಸಂಚಿಕೆಯನ್ನು ತೋರಿಸಲಾಗುತ್ತಿದೆ. ಇದರಲ್ಲಿ ಮಹೇಶ್​ ಸಂಪೂರ್ಣ ಗುಣಮುಖನಾಗಿ ಹೊರಗೆ ನಡೆದುಕೊಂಡು ಬಂದಹಾಗೆ ತೋರಿಸಲಾಗಿದೆ. ಇದನ್ನು ನೋಡಿ ಶಾರ್ವರಿ ಶಾಕ್​ ಆಗಿದ್ದಾಳೆ. ಉಳಿದವರು ಖುಷಿಯಿಂದ ಕುಣಿದಾಡುತ್ತಿದ್ದಾರೆ. ಆದರೆ ಇದು ಸತ್ಯವೋ ಅಥವಾ ಶಾರ್ವರಿಯ ಕನಸೋ ಎನ್ನುವುದು ಸ್ಪಷ್ಟವಾಗಬೇಕಿದೆಯಷ್ಟೇ.

Tap to resize

Latest Videos

ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ​! ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ ಲವ್​ ಜಾಸ್ತಿಯಾಗೋದ್ಯಾಕೆ?

ಇನ್ನು ಈ ಸೀರಿಯಲ್​ ಕುರಿತು ಹೇಳುವುದಾದರೆ, ಮಾಧವ ಮತ್ತು ತುಳಸಿ ಎಂದಾಕ್ಷಣ ಧಾರಾವಾಹಿ ಪ್ರಿಯರಿಗೆ ಕಣ್ಣ ಮುಂದೆ ಬರುವುದು  ಶ್ರೀರಸ್ತು- ಶುಭಮಸ್ತು ಧಾರಾವಾಹಿ.  ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. 

ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. ಆದರೂ ಎಲ್ಲವನ್ನೂ ನುಂಗಿ ಮನೆ ಮನೆಯಿಂದ ಸದಾ ತಾತ್ಸಾರಕ್ಕೆ ಒಳಗಾಗುತ್ತಿರುವ ತುಳಸಿ ಮತ್ತು ಹೆತ್ತ ಮಕ್ಕಳೇ ದ್ವೇಷದಿಂದ ಕಾಣುವ ಅಪ್ಪ ಮಾಧವ್​ ಜೋಡಿ ಮಾತ್ರ ಸೂಪರ್​ ಡೂಪರ್​ ಆಗಿದೆ. ತುಳಸಿ ಮತ್ತು ಮಾಧವ್​ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮದುವೆಯಾದರೂ ಸ್ನೇಹವನ್ನು ಪಾಲಿಸುವ ಜೋಡಿ ಇವರದ್ದು. ಅತ್ತ ತುಳಸಿಯನ್ನು ಕಂಡರೆ ಗಂಡನ ಮನೆಯಲ್ಲಿ ಹೆಚ್ಚಿನವರಿಗೆ ಆಗಿ ಬರುವುದಿಲ್ಲವಾದರೆ, ಖುದ್ದು ಮಾಧವ ಅವರನ್ನು ಕಂಡರೂ ಎಲ್ಲರಿಗೂ ಅಷ್ಟಕಷ್ಟೇ. ಇದೀಗ ಈ ಗಂಡ-ಹೆಂಡತಿಯೇ ಪರಸ್ಪರ ಆಸೆಯಾಗಿದ್ದಾರೆ. ಇದೀಗ ಮಾಧವ್​ ಮತ್ತು ತುಳಸಿ ಇಬ್ಬರನ್ನೂ ಮನೆಯವರು ಅಪ್ಪಿಕೊಳ್ಳುವ ಸಮಯ ಬಂದಿದೆ. ಆದರೆ ಏನಾಗುತ್ತದೆ ಎನ್ನುವುದೇ ಈಗಿರುವ ಕುತೂಹಲ. 

ಬಿಗ್​ಬಾಸ್​ ಕಿರೀಟ ಪಡೆದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ! ಈ ಗೆಲುವು ಬಂದದ್ದು ಹೇಗೆ?
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!