100 ಸಂಚಿಕೆ ದಾಟಿದ 'ಸತ್ಯ' ಧಾರಾವಾಹಿ'; ವಿಶೇಷ ಪಾತ್ರಧಾರಿ ಎಂಟ್ರಿ ಜೋರು!

Suvarna News   | Asianet News
Published : Apr 30, 2021, 02:33 PM IST
100 ಸಂಚಿಕೆ ದಾಟಿದ 'ಸತ್ಯ' ಧಾರಾವಾಹಿ'; ವಿಶೇಷ ಪಾತ್ರಧಾರಿ ಎಂಟ್ರಿ ಜೋರು!

ಸಾರಾಂಶ

ಸತ್ಯ ಧಾರಾವಾಹಿ 100 ಸಂಚಿಕೆ ದಾಟುತ್ತಿದ್ದಂತೆ, ಹೊಸ ಪಾತ್ರಧಾರಿ ಪ್ರವೇಶವಾಗಿದೆ. ಹೂ ಮಳೆಯಲ್ಲಿರುವ ಕಾರ್ಪೋರೇಟರ್‌ ಕಾವೇರಿ ಇಲ್ಲೇನು ಮಾಡುತ್ತಿದ್ದಾರೆ?  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ 100 ದಿನಗಳ ಸಂಚಿಕೆ ಪೂರೈಸಿದೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲೂ ಇಡಿ ತಂಡ ಸಂಭ್ರಮಿಸಲು ಒಂದು ಸಿಹಿ ವಿಚಾರ ಸಿಕ್ಕಿದೆ.  'ಹರಸಿ ಆರತಿ ಮಾಡ್ರಿ ಹೊಡ್ದವಳೇ 100 ಸತ್ಯ' ಎಂದು ನಿರ್ದೇಶಕ ಸ್ವಪ್ನ ಕೃಷ್ಣ ಬರೆದುಕೊಂಡಿದ್ದಾರೆ.

ಗೌತಮಿ ಜಾಧವ್ ತೆರೆದಿಟ್ಟ 'ಸತ್ಯ' ಸಮಾಚಾರ 

ಡಿಫರೆಂಟ್ ಆಗಿರುವ ಪೋಸ್ಟರ್ ರಿವೀಲ್ ಮಾಡುವ ಮೂಲಕ ಇಡೀ ತಂಡ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದೆ.  ಸತ್ಯ ಧಾರಾವಾಹಿ ವಿಭಿನ್ನ ಕಥೆವುಳ್ಳ ಧಾರಾವಾಹಿ. ಹುಡುಗನಂತೆ ಬೆಳೆದಿರುವ ಹುಡುಗಿ, ಹುಡುಗಿಯರಷ್ಟೇ ಸೂಕ್ಷ್ಮವಾಗಿ ಬೆಳೆದಿರುವ ಸಿರಿವಂತ ಹುಡುಗ. ಮಿಡಲ್‌ ಕ್ಲಾಸ್-ಹೈ ಕ್ಲಾಸ್‌ ಜನರ ನಡುವೆ ಪ್ರೀತಿ, ಆದರೆ ಎಷ್ಟೆಲ್ಲಾ  ಹೊಂದಾಣಿಕೆಗಳನ್ನು ಎದುರಿಸಬೇಕು ಎಂಬುದನ್ನು ಈ ಧಾರಾವಾಹಿಯಲ್ಲಿ ನೋಡಬಹುದು.

ನಿಜ ಜೀವನದ 'ಸತ್ಯ' ರೊಂದಿಗೆ ಮಾತನಾಡಿದ ಸತ್ಯ! 

ಇನ್ನು ಹೂ ಮಳೆ ಹಾಗೂ ಸರಸು ಧಾರಾವಾಹಿಯಲ್ಲಿ ಮಿಂಚುತ್ತಿರುವ ಸುಜಾತಾ ಅಕ್ಷಯ 'ಚಿಂದಂಗಿ ಬಾಯ್' ಪಾತ್ರದ ಮೂಲಕ ಸತ್ಯ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲವು ಸಂಚಿಕೆಗಳ ಚಿತ್ರೀಕರಣದಲ್ಲಿ ಸುಜಾತ ಭಾಗಿಯಾಗಿದ್ದರು. ಕಿರುತೆರೆಯಲ್ಲಿ ವಿಲನ್ ಪಾತ್ರಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿರುವ ಸುಜಾತಾ ಸೋಷಿಯಲ್ ಮೀಡಿಯಾದಲ್ಲೂ ತುಂಬಾನೇ ಫೇಮಸ್‌. ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುವ ಕಾರಣ ಗೃಹಿಣಿಯರು ಅವರ ಸೀರೆ ಹಾಗೂ ಆಭರಣ ಸೆಲೆಕ್ಷನ್ ಬಗ್ಗೆ ಮಾಡುವ ವಿಡಿಯೋಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್