
ಕಿರುತೆರೆ ಲೋಕದ ಸುಂದರಿ ಶ್ವೇತಾ ಚೆಂಗಪ್ಪ ಕೊರೋನಾ ಸೋಂಕಿಗೆ ತುತ್ತಾಗಿ 21 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮತ್ತೊಮ್ಮೆ ಕೊರೋನಾ ಪರೀಕ್ಷೆ ಮಾಡಿಸಿ ವರದಿ ನೆಗೆಟಿವ್ ಬಂದಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಶ್ವೇತಾ ಚಂಗಪ್ಪ ಫ್ಲೋಲರ್ ಸಾರಿ ಬ್ಯಾಕ್ ಲುಕ್ ನೋಡಿ ನೆಟ್ಟಿಗರು ಅಂದ್ರು ಅಬ್ಬಬ್ಬಾ!
'ಎಲ್ಲರಿಗೂ ಹಾಯ್. ನಮಸ್ತೆ. ನೀವೆಲ್ಲರೂ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು. 21 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಎಲ್ಲರಿಂದ ಐಸೋಲೇಟ್ ಆಗಿದ್ದೆ, ತುಂಬಾ ಕಷ್ಟದ ದಿನಗಳಿವು. ಮತ್ತೊಮ್ಮೆ ಟೆಸ್ಟ್ ಮಾಡಿಸಿ ವರದಿ ನೆಗಟಿವ್ ಬಂದಿದೆ. ನಿಮ್ಮ ಪ್ರಾರ್ಥನೆಗೆ ನಾನು ಚಿರಋಣಿ,' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ಈ 21 ದಿನಗಳ ಕಾಲ ತಮ್ಮ ಪುತ್ರನಿಂದ ದೂರವಿರುವುದು ಎಷ್ಟು ಕಷ್ಟ ಎಂಬುದನ್ನು ಪುತ್ರನ ಜೊತೆಗಿರುವ ಹಳೆ ಪೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ವಿವರಿಸುತ್ತಿದ್ದರು. 'ನಮ್ಮ ಪ್ರೀತಿ ಪಾತ್ರರಿಂದ ದೂರವಿರುವುದು ತುಂಬಾನೇ ಕಷ್ಟ. ಆದರೆ ಏನೂ ಮಾಡಲಾಗುವುದಿಲ್ಲ. ಈ ಕಷ್ಟದ ದಿನಗಳನ್ನು ಎದುರಿಸಲು ಶಕ್ತಿ ನೀಡು ಎಂದು ಮಾತ್ರ ಪ್ರಾರ್ಥಿಸ ಬಹುದು,' ಎಂದು ಹೇಳಿದ್ದಾರೆ.
ನಟಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್ ತುಂಟಾಟ; ಅಮ್ಮನಿಗೆ ಡಬಲ್ ಕೆಲಸ!
ಕೊರೋನಾ ನೆಗೆಟಿವ್ ಬಂದಿರುವ ವಿಚಾರವನ್ನು ಶ್ವೇತಾ ಹಂಚಿಕೊಂಡಾಗ ಚಿತ್ರರಂಗದ ಆಪ್ತರು ಸಂತಸ ವ್ಯಕ್ತ ಪಡಿಸಿದ್ದಾರೆ. 'ನೀವು ಕೊರೋನಾ ಎದುರಿಸಿದ ಕ್ಷಣಗಳು, ಐಸೋಲೇಟ್ ಆದಾಗ ಮನಸ್ಥಿತಿ ಹೇಗಿತ್ತು ಎಂದು ಒಂದು ವಿಡಿಯೋ ಮಾಡಿ. ಇದರಿಂದ ಅನೇಕರಿಗೆ ಸಹಾಯವಾಗುತ್ತದೆ,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.