Divya Shridhar: ಹಸುಗೂಸಿನೊಡನೆ ಶೂಟಿಂಗ್‌ ಬರ್ತಾರೆ ಈ ನಟಿ!

By Suvarna News  |  First Published Jul 29, 2023, 1:16 PM IST

ಈ ನಟಿಯ ಹೆಸರು ದಿವ್ಯಾ ಶ್ರೀಧರ್. ಇಬ್ಬರ ಮಕ್ಕಳ ಈ ತಾಯಿ ತನ್ನ ಮಗುವಿನ ತಿಂಗಳು ತುಂಬುತ್ತಿರುವಂತೇ ಹಸುಗೂಸಿನೊಂದಿಗೆ ಶೂಟಿಂಗ್‌ಗೆ ಹೋಗುತ್ತಿರುವ ಫೋಟೋ ವೈರಲ್‌ ಆಗಿದೆ. ಅಷ್ಟಕ್ಕೂ ಏನು ಈಕೆಯ ಕಥೆ?


ನಮ್ಮಲ್ಲೆಲ್ಲ ಮಗುವಾಗಿ ಒಂಭತ್ತು ತಿಂಗಳವರೆಗೆ ಬಾಣಂತಿ, ಮಗುವಿನ ಆರೈಕೆ ಮಾಡುತ್ತಾರೆ. ಆದರೆ ಖ್ಯಾತ ಕಿರುತೆರೆ ನಟಿಯೊಬ್ಬರು ಇದೀಗ ತನ್ನ ತಿಂಗಳ ಹಸುಗೂಸಿನೊಂದಿಗೆ ಬೆಳಗ್ಗಿನಿಂದ ರಾತ್ರಿಯವರೆಗೂ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರ್ತಾರೆ. ಮಗುವಿನೊಂದಿಗೆ ಶೂಟಿಂಗ್‌ಗೆ ಬರುವ ಈಕೆ ಶೂಟಿಂಗ್‌ ನಡುವಿನ ಗ್ಯಾಪ್‌ನಲ್ಲೇ ಮಗುವಿನ ದೇಖಾರೇಖಿ ನೋಡಿಕೊಳ್ಳುತ್ತಾ, ಅತ್ತ ಶೂಟಿಂಗ್‌ನಲ್ಲೂ ಭಾಗಿಯಾಗುತ್ತಾ ಕರ್ತವ್ಯ ಮೆರೆಯುತ್ತಿದ್ದಾರೆ.

ಅಂದಹಾಗೆ ಈ ನಟಿಯ ಹೆಸರು ದಿವ್ಯಾ ಶ್ರೀಧರ್. ಆಕಾಶದೀಪ, ಅಮ್ಮಾ ಮೊದಲಾದ ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಸನಿಹ ಅನ್ನೋ ಸಿನಿಮಾಕ್ಕೂ ನಾಯಕಿಯಾಗಿದ್ದರು. ಬಳಿಕ ತಮಿಳು ಸೀರಿಯಲ್‌ನಲ್ಲಿ ನಟಿ ಬ್ಯುಸಿಯಾದರು. ಈ ನಡುವೆ ಆರ್ನವ್ ಎಂಬುವವರೊಂದಿಗೆ ಸ್ನೇಹವಾಯಿತು. ಈತ ಸೀರಿಯಲ್‌ನಲ್ಲಿ ಈಕೆಯ ಸಹನಟನೂ ಹೌದು. ಅರ್ನವ್‌ ಮೂಲ ಹೆಸರು ಅಮ್ಜದ್‌ ಖಾನ್‌. ದಿವ್ಯಾ ಹಾಗೂ ಅಮ್ಜದ್‌ ಖಾನ್‌ ಪರಿಚಯ, ನಂತರ ಪ್ರೀತಿಗೆ ತಿರುಗಿದೆ. 2017 ರಿಂದ ಪ್ರೀತಿಯಲ್ಲಿದ್ದ ಇವರು 2 ವರ್ಷಗಳ ಹಿಂದಷ್ಟೇ ಮದುವೆಯಾಗಿ ಚೆನ್ನೈನಲ್ಲಿ ಸೆಟಲ್‌ ಆಗಿದ್ದರು. ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗಿತ್ತು.

Tap to resize

Latest Videos

ಆದರೆ ಕೆಲವು ದಿನಗಳ ನಂತರ ಇಬ್ಬರ ನಡುವೆ ಬಿರುಕು ಉಂಟಾಗಿದೆ. ಅಷ್ಟೊತ್ತಿಗೆ ದಿವ್ಯಾ ಗರ್ಭವತಿಯಾಗಿದ್ದರು. ದಿವ್ಯಾಗೆ ಪತಿ ಅಮ್ಜದ್‌ ಖಾನ್‌ ಕಿರುಕುಳ ನೀಡಲು ಆರಂಭಿಸಿದ್ದಾರೆ. ಪತ್ನಿ ಗರ್ಭಿಣಿ ಎಂದೂ ನೋಡದೆ ಅಮ್ಜದ್‌ ಖಾನ್‌, ಆಕೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕೊಲೆ ಬೆದರಿಕೆ ಕೂಡಾ ಹಾಕಿದ್ದರು ಎಂದು ದಿವ್ಯಾ ಪರ ವಕೀಲರು ಮಾಹಿತಿ ನೀಡಿದ್ದರು.

ಅಮೃತಧಾರೆ: ಛಾಯಾ ಸಿಂಗ್ ರಾಜೇಶ್ ನಟರಂಗಗೆ ಅಣ್ಣಾ ಅಂತಿದ್ರಂತೆ! ಕಾರಣವಿಲ್ಲಿದೆ

ದಿವ್ಯ ಹಾಗೂ ಅಮ್ಜದ್‌, ಗುಟ್ಟಾಗಿ ಮದುವೆ ಆಗಿದ್ದು ಪತಿಯಿಂದ ದೂರಾಗುವ ಕೆಲವು ದಿನಗಳ ಮುನ್ನ, ನಾವಿಬ್ಬರು ಮದುವೆಯಾಗಿದ್ದೇವೆ ಎಂಬ ವಿಚಾರವನ್ನು ದಿವ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಮದುವೆ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅಮ್ಜದ್‌ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಕೂಡಾ ದಿವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದರು.

ಆ ಬಳಿಕ ಪತಿಯಿಂದ ದೂರಾದ ಈ ನಟಿ ಒಂಟಿಯಾಗಿ ಬದುಕಲಾರಂಭಿಸಿದರು. ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅದಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಮೇ 21ರಿಂದಲೇ ಅವರು ಮತ್ತೆ ಕೆಲಸ ಶುರು ಮಾಡಿದ್ದಾರೆ. ಹೊಟ್ಟೆಪಾಡಿಗಾಗಿ ಹಸುಗೂಸನ್ನು ಕೂಡ ಅವರು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತನ್ನಿಬ್ಬರು ಮಕ್ಕಳ ಜೊತೆ ದಿವ್ಯಾ ಶೂಟಿಂಗ್ ಸ್ಥಳಕ್ಕೆ ಬರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದಿವ್ಯಾ ಅವರಿಗೆ ಮೊದಲ ಮದುವೆಯಿಂದ ಓರ್ವ ಹೆಣ್ಣು ಮಗಳಿದ್ದಾಳೆ. ಈಗ ಎರಡನೇ ಪತಿಯಿಂದ ದೂರ ಆಗಿರುವ ದಿವ್ಯಾ ಅವರು ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಈ ಮಗು ಜನಿಸಿದಾಗ ದಿವ್ಯಾ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿತ್ತು. 'ಸ್ವರ್ಗದಿಂದ ನನಗಾಗಿ ಕಳಿಸಲಾದ ಪುಟ್ಟ ಭಾಗ ಇದು, ನನ್ನ ಪ್ರೀತಿಯ ದೇವತೆ, ಮನೆಗೆ ಸ್ವಾಗತ' ಎಂದು ದಿವ್ಯಾ ಶೀಧರ್‌ ಬರೆದುಕೊಂಡಿದ್ದರು.

'ಬಹಳ ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ, ಇದು ನಿಜಕ್ಕೂ ಬಹಳ ವಿಶೇಷವಾದದ್ದು. ಹಿಂದೆ ಏನು ನಡೆಯಿತೋ ಅದು ಮುಖ್ಯವಲ್ಲ, ಮುಂದಿನ ದಿನಗಳು ಮುಖ್ಯ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ನೀವು ನೀಡಿದ ಧೈರ್ಯ ಯಾವುದಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಬೆಂಬಲಕ್ಕೆ ನಿಂತ, ಕಷ್ಟದ ದಿನಗಳಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು' ಎಂದು ಒಡನಾಡಿಗಳಿಗೆ ಧನ್ಯವಾದ ಅರ್ಪಿಸಿದ್ದರು.

ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್‌ ಕನ್ನಡದವಳಲ್ಲ, ಭಾಷೆ ಕಲಿತಿದ್ದು ಹೇಗೆ?

ಅಮ್ಜದ್‌ ಖಾನ್‌ ಅವರನ್ನು ಪ್ರೀತಿಸಿದ ಬಳಿಕ ನಾನೂ ಕೂಡಾ ಅವರ ಧರ್ಮಕ್ಕೆ ಮತಾಂತರವಾಗಿ ಅವರೊಂದಿಗೆ ಜೀವನ ನಡೆಸುತ್ತಿದ್ದೆ. ಆದರೆ ಆತನಿಗೆ ಬೇರೆ ನಟಿಯೊಂದಿಗೆ ಅಫೇರ್‌ ಇದೆ. ಆದ್ದರಿಂದ ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದು ದಿವ್ಯಾ ಹಿಂದೆ ಆರೋಪಿಸಿದ್ದರು. ಜೊತೆಗೆ ತುಂಬು ಗರ್ಭಿಣಿಯಾಗಿದ್ದಾಗ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 'ಹೆರಿಗೆಗೆ ಇನ್ನು 15 ದಿನಗಳು ಇದ್ದರೂ ಕೆಲಸ ಮಾಡುತ್ತಿದ್ದೇನೆ. ನನ್ನವರು ಯಾರೂ ನನಗೆ ಆರ್ಥಿಕವಾಗಿ ಬೆಂಬಲ ನೀಡುತ್ತಿಲ್ಲ' ಎಂದು ನೋವು ಹಂಚಿಕೊಂಡಿದ್ದರು. ಇದೀಗ ಮಗುವಿಗೆ ಮೂರೂವರೆ ತಿಂಗಳಾಗಿದ್ದು ಅದರೊಂದಿಗೇ ಶೂಟಿಂಗ್‌ಗೆ ಹೋಗಿ ಹೊಟ್ಟೆಹೊರೆಯುವ ಕೆಲಸ ಮಾಡುತ್ತಿದ್ದಾರೆ.

click me!