ಸಹನಾ ತನ್ನ ಗಂಡನ ಮದುವೆಗೆ ತಾನೇ ಊಟ ಸಪ್ಲೈ ಮಾಡುವ ಕ್ಷಣ ಬಂದಿದೆ. ಈ ನಡುವೆ ಎಲ್ಲ ಇದೆ ಮೇಷ್ಟ್ರೇ, ಆದ್ರೆ ಅದೇ ಇಲ್ಲ ಅಂತ ಕಂಠಿ ಹೇಳ್ತಿರೋದೇನು?
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಇಂಟರೆಸ್ಟಿಂಗ್ ಎಪಿಸೋಡ್ ನಡೀತಿದೆ. ಸಹನಾ ದೊಡ್ಡ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾಳೆ. ಇದು ಯಾರಿಗೂ ಬರಬಾರದ ಪರೀಕ್ಷೆ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಪುಟ್ಟಕ್ಕಳ ಹಿರಿಯ ಮಗಳು ಸಹನಾ ಸತ್ತಿದ್ದಾಳೆ ಅಂತ ಎಲ್ಲರೂ ಭಾವಿಸಿದ್ದರು. ಈ ಕಾರಣಕ್ಕೆ ಇನ್ನೊಂದು ಕಡೆ ಸಹನಾಳ ಗಂಡ ಇನ್ನೊಂದು ಮದುವೆಯಾಗಲು ರೆಡಿ ಆಗಿದ್ದಾನೆ. ಹಾಗೆಯೇ ಸಹನಾ ಬದುಕಿರುವ ವಿಷಯ ಕಾಳಿಗೆ ಗೊತ್ತಾಗಿದೆ. ಈಗ ಸಹನಾ ಬದುಕಿರೋದು ಮುರಳಿಗೂ ಗೊತ್ತಾಗುತ್ತಾ.. ತನ್ನ ಹೆಂಡತಿಯೇ ತನ್ನ ಮದುವೆಯ ಊಟ ಕಾಂಟ್ರಾಕ್ಟ್ ತಗೊಂಡಿದ್ದಾಳೆ ಅಂದಾಗ ಮುರಳಿ ರಿಯಾಕ್ಷನ್ ಹೇಗಿರಬಹುದು, ಅಷ್ಟಕ್ಕೂ ಈ ಮದುವೆ ನಡೆಯುತ್ತಾ ಅಥವಾ ನಿಲ್ಲುತ್ತಾ ಅನ್ನುವುದು ಸದ್ಯದ ಕುತೂಹಲ. ಆದರೆ ಈ ಮದುವೆ ನಿಂತರೆ ಸಹನಾ ಯಾವ ಲೆವೆಲ್‌ಗೆ ಸ್ಟ್ರಾಂಗ್ ಇದ್ದಾಳೆ ಅಂತ ತೋರಿಸೋ ಅವಕಾಶ ತಪ್ಪಿಹೋಗುತ್ತೆ. ಕಥೆಯ ಡೆವೆಲಪ್‌ಮೆಂಟ್‌ಗೆ ಹೆಚ್ಚು ಅವಕಾಶ ಇರಲಿಕ್ಕಿಲ್ಲ. ಅದೇ ತನ್ನ ಗಂಡನ ಮದುವೆಯನ್ನು ಕಣ್ಣೆದುರೇ ನೋಡುತ್ತಾ, ಆತನ ಮದುವೆಗೆ ತಾನೇ ಊಟ ಬಡಿಸೋ ಸೀನ್ ಬೇರೆ ಥರ ಫೀಲ್ ಕೊಡುತ್ತೆ. ಬಹುಶಃ ಸೀರಿಯಲ್ ಕಥೆ ಈ ರೀತಿಯೇ ಸಾಗಬಹುದು ಅನಿಸುತ್ತೆ.
ಹಾಗೆ ನೋಡಿದರೆ ಮುರಳಿಗೆ ಮರು ಮದುವೆ ಮಾಡಿಸ್ತಿರೋದೇ ಪುಟ್ಟಕ್ಕ. ಸಹನಾ ಸತ್ತು ಹೋದಳು ಎಂಬ ದುಃಖದಲ್ಲಿದ್ದ ಮುರಳಿ ಕುಡಿದು, ಕುಡಿದು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದನು. ಮುರಳಿಯನ್ನು ಈ ರೀತಿ ನೋಡಲಾಗದೆ ಪುಟ್ಟಕ್ಕಳೇ, ಮುಂದೆ ನಿಂತು ಅವನಿಗೆ ಇನ್ನೊಂದು ಮದುವೆ ಮಾಡಲು ರೆಡಿ ಆಗಿದ್ದಾಳೆ.
ಮುರಳಿ ಜೊತೆ ಕೆಲಸ ಮಾಡುತ್ತಿದ್ದ ಟೀಚರ್‌ಗೂ, ಮುರಳಿಗೂ ಮದುವೆ ಮಾಡಲು ಸಕಲ ತಯಾರಿ ನಡೆದಿದೆ. ಇನ್ನೊಂದು ಕಡೆ ಸಹನಾ ತನ್ನದೇ ಆದ ಸ್ವಂತ ಫುಡ್ ಟ್ರಕ್ ಆರಂಭಿಸಿದ್ದಾಳೆ. ತನಗೋಸ್ಕರ ತನ್ನ ತಾಯಿ ಬೆಂಗಳೂರಿಗೆ ಬಂದು ಊರೂರು ಅಲೆದರೂ ಕೂಡ ಸಹನಾ ಮಾತ್ರ ತಾನು ಬದುಕಿರುವ ವಿಷಯವನ್ನು ರಿವೀಲ್ ಮಾಡಲೇ ಇಲ್ಲ. ಇನ್ನೊಂದು ಕಡೆ ಕಾಳಿ ಕಂಡರೂ ಕೂಡ ಅವನಿಗೂ ಅವಳು ಈ ವಿಷಯವನ್ನು ಯಾರಿಗೂ ಹೇಳಬೇಡ ಅಂತ ಹೇಳಿದ್ದಾಳೆ.
ಹಾಗಂತ ಮುರಳಿಗೆ ಸಹನಾಳನ್ನು ಮರೆತು ಇನ್ನೊಂದು ಮದುವೆ ಆಗಲು ಇಷ್ಟವಿಲ್ಲ. ಆದರೆ ಪುಟ್ಟಕ್ಕನ ಒತ್ತಾಯಕ್ಕೆ ಮಣಿದು ಅವನು ಇನ್ನೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈಗ ಮುರಳಿ ಮದುವೆಯ ಊಟದ ಕಾಂಟ್ರ್ಯಾಕ್ಟ್ ಸಹನಾಗೆ ಸಿಕ್ಕಿದೆ. ಸಹನಾಳೇ ಈ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆಗ ಕಂಠಿ ಅವಳಿಗೆ ನಿನ್ನ ಗಂಡನ ಮದುವೆ ಆಗ್ತಿದೆ ಅಂತ ಹೇಳುತ್ತಾಳೆ. ಅದನ್ನು ಕೇಳಿ ಸಹನಾ ಕುಸಿದು ಬೀಳ್ತಾಳೆ.
ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!
ಮದುಮಗನನ್ನು ಕಂಠಿಯೇ ರೆಡಿ ಮಾಡಿಸ್ತಾ ಇದ್ದಾನೆ. ಮದುಮಗ ಏನೋ ಚೆನ್ನಾಗಿಯೇ ರೆಡಿ ಆಗಿದ್ದಾನೆ. ಆದರೆ ಮದುಮದುನಿಗೆ ಇರಬೇಕಾದ ಮುಖ್ಯ ಅಂಶವೇ ಮಿಸ್ಸಿಂಗ್ ಅಂತ ಕಾಳಿ ಹೇಳ್ತಿದ್ದಾನೆ. ಆ ಮುಖ್ಯ ಅಂಶ ಮತ್ತೇನೂ ಅಲ್ಲ. ಮದುಮಗನ ಕಳೆ, ನಗು ಮುಖ. ಆ ಎರಡೂ ಮುರಳಿಂದ ಸದ್ಯ ಮಿಸ್ ಆಗಿದೆ. ಆತನಿಗೆ ಮದುವೆ ಆಗೋಕೆ ಸ್ವಲ್ಪವೂ ಮನಸ್ಸು ಇಲ್ಲ. 'ಕೆಲವೊಂದು ವಿಚಾರಗಳೆಲ್ಲ ಜೀವನದಲ್ಲಿ ಒಂದೇ ಸಲ ಆಗೋದು. ಅದು ಹಾಗಾದ್ರೇ ಚಂದ. ಮತ್ತೊಂದು ಸಲ ಆಗ್ಬೇಕು ಅಂದರೆ ಬಲವಂತದಲ್ಲಿ ಇದನ್ನೆಲ್ಲ ತರಲು ಸಾಧ್ಯ ಇಲ್ಲ' ಅನ್ನೂ ಮಾತನ್ನು ಮುರಳಿ ಹೇಳ್ತಿದ್ದಾನೆ. ಆತನನ್ನ ಸಮಾಧಾನ ಮಾಡೋ ಕಂಠಿ, 'ಬಲವಂತದಲ್ಲಾದರೂ ಹಿಂದಿನದನ್ನೆಲ್ಲ ಮರೀಬೇಕು. ಮನಸ್ಸಿಗೆ ಆ ಶಕ್ತಿ ಇದೆ' ಎಂದು ಸಮಾಧಾನ ಮಾಡ್ತಿದ್ದಾನೆ. ಸೋ ಮದುಮಗನ ಹತ್ರ ಎಲ್ಲ ಇದ್ದರೂ ಮದುಮಗನ ಕಳೆಯೇ ಮಿಸ್ಸಿಂಗ್ ಆಗಿರೋದು ಸದ್ಯಕ್ಕೆ ಎದ್ದು ಕಾಣ್ತಿರೋ ಸಂಗತಿ.