ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಅಪ್ಪ ಯಾರು ಎಂಬುದು ಬಹಿರಂಗವಾಗಿದ್ದು, ಡಾ.ಮೇಘಶ್ಯಾಮ ಮತ್ತು ಸಿಹಿ ನಡುವಿನ ತಂದೆ-ಮಗಳ ಸಂಬಂಧದ ಸುಳಿವುಗಳನ್ನು ಧಾರಾವಾಹಿ ನೀಡುತ್ತಿದೆ. ಆದರೆ, ಡಾ.ಮೇಘಶ್ಯಾಮ ಸೀತಾಳ ಗಂಡನಲ್ಲ ಎಂಬುದು ಇಲ್ಲಿನ ಟ್ವಿಸ್ಟ್.
ಬೆಂಗಳೂರು (ಸೆ.03): ಸೀತಾರಾಮ ಧಾರಾವಾಹಿಯಲ್ಲಿ ವೀಕ್ಷಕರನ್ನು ಅತಿಹೆಚ್ಚು ಕಾಡುತ್ತಿರುವ ಪ್ರಶ್ನೆ ಎಂದರೆ ಸಿಹಿಯ ಅಪ್ಪ ಯಾರು? ಎಂಬುದು. ಪ್ರಸ್ತುತ ಸೀತಾರಾಮ ಧಾರಾವಾಹಿ ಸಿಹಿಯ ಜನ್ಮರಹಸ್ಯದ ಸುತ್ತಲೂ ಸುತ್ತುತ್ತಿದೆ. ಇದೀಗ ಸಿಹಿ ಯಾರ ಮಗಳು ಎಂಬುದು ರಿವೀಲ್ ಆಗಿದೆ. ಸಿಹಿ ಸೀತಾಳ ಮಗಳು ಎಂಬುದು ಶೇ.100ಕ್ಕೆ ನೂರು ಸತ್ಯ. ಈಗ ಹೊಸ ವಿಷಯವೇನೆಂದರೆ ಡಾ.ಮೇಘಶ್ಯಾಮನೇ ಸಿಹಿಯ ತಂದೆ ಆಗಿದ್ದಾನೆ. ಆದರೆ, ಈತ ಸೀತಾಳ ಮೊದಲ ಗಂಡನಲ್ಲ. ಇದೇನಿದು ತಲೆಗೆ ಹುಳ ಬಿಡ್ತಾರೆ ಎಂದುಕೊಳ್ಳಬೇಡಿ. ಇಲ್ಲಿದೆ ಅಸಲಿ ಧಾರಾವಾಹಿ ಸಂಬಂಧಗಳ ವಿವರಣೆ...
ಸೀತಾಳ ಮಗಳು ಸಿಹಿ ಬೋರ್ಡಿಂಗ್ ಸ್ಕೂಲ್‌ಗೆ ಸೇರಿದ ನಂತರ ಧಾರಾವಾಹಿಗೆ ಎಂಟ್ರಿ ಕೊಟ್ಟಿರುವ ಡಾ.ಮೇಘಶ್ಯಾಮ ಹಾಗೂ ಅವರ ಕಿರಿಕ್ ಪತ್ನಿಯ ಪಾತ್ರಗಳು ಇವರನ್ನು ಇಷ್ಟು ಒತ್ತುಕೊಟ್ಟು ತೋರಿಸಲು ಕಾರಣವೇನು ಎಂದು ಚಿಂತಿತರಾಗಿದ್ದಾರೆ. ಬೋರ್ಡಿಂಗ್ ಸ್ಕೂಲ್ ವೈದ್ಯರಾಗಿರುವ ಡಾ.ಮೇಘಶ್ಯಾಮ ಸಿಹಿಗೆ ಸಕ್ಕರೆ ಕಾಯಿಲೆ ಇರುವುದನ್ನು ನೋಡಿ ಹಾಗೂ ಸಿಹಿಯ ಒಳ್ಳೆಯ ಗುಣಗಳಿಂದ, ಕ್ಯೂಟ್ ಮಾತುಗಳಿಂದ ತುಂಬಾ ಮನಸೋತಿದ್ದಾರೆ. ಸಿಹಿಯನ್ನು ತನ್ನ ಮಗಳಿಗಿಂತಲೂ ಹೆಚ್ಚು ಕೇರ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಬೋರ್ಡಿಂಗ್ ಶಾಲೆಯಲ್ಲಿ ನೂರಾರು ಮಕ್ಕಳಿದ್ದರೂ ಸಿಹಿಯ ಮೇಲೆ ಇಷ್ಟೊಂದು ಅಟ್ಯಾಚ್‌ಮೆಂಟ್ ಬೆಳೆಯಲು ಇವರಿಬ್ಬರ ನಡುವೆ ಯಾವುದಾದರೂ ಒಂದು ಸಂಬಂಧ ಅಥವಾ ಬಾಂಧವ್ಯ ಇದ್ದೇ ಇರುತ್ತದೆ ಎಂಬ ವೀಕ್ಷಕರ ಅನುಮಾನ ನಿಜ. ಡಾ. ಮೇಘಶ್ಯಾಮನಿಗೂ ಸಿಹಿಗೂ ಸಂಬಂಧವಿದೆ.
ಅಶೋಕನ ಹೆಂಡತಿ ಪ್ರಿಯಾಗೆ ಕ್ಯಾನ್ಸರ್ ಮುನ್ಸೂಚನೆ ಕೊಟ್ರಾ ವೈದ್ಯರು!
ಸಿಹಿಯ ತಂದೆ ಡಾ. ಮೇಘಶ್ಯಾಮ!
ಹೌದು, ಸಿಹಿ ಮತ್ತು ಡಾ. ಮೇಘಶ್ಯಾಮ ನಡುವಿನ ಸಂಬಂಧ ಬೇರೇನೂ ಅಲ್ಲ, ತಂದೆ ಮಗಳ ಸಂಬಂಧ ಎನ್ನುವ ಸ್ಪಷ್ಟ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿಯೇ ಬೋರ್ಡಿಂಗ್ ಸ್ಕೂಲ್‌ನಲ್ಲಿ ತಮ್ಮ ನಡುವೆ ಯಾವುದೇ ಸಂಬಂಧ ಇಲ್ಲವೆಂದರೂ ಸಿಹಿ ಮತ್ತು ಮೇಘಶ್ಯಾಮ ಇಬ್ಬರ ನಡುವೆ ಯಾರೇ ಸ್ವಲ್ಪ ದುಃಖ ಅಥವಾ ಕಷ್ಟದಲ್ಲಿದ್ದರೂ ಅವರಿಬ್ಬರ ಮನಸ್ಸು ಮಿಡಿಯುತ್ತಿತ್ತು. ಹೀಗಾಗಿ, ತಮ್ಮ ರಕ್ತ ಸಂಬಂಧಿಗಳೇ ಸಂಕಷ್ಟದಲ್ಲಿದ್ದಾರೆ ಎಂಬ ಸಂಕಟ ಅನುಭವಿಸುತ್ತಿದ್ದರು. ಈ ಮೂಲಕ ನಿರ್ದೇಶಕರು ಇವರಿಬ್ಬರ ನಡುವಿನ ತಂದೆ ಮಗಳ ಸಂಬಂಧವನ್ನು ತಿಳಿಸಲು ಬೋರ್ಡಿಂಗ್ ಸ್ಕೂಲ್‌ನಲ್ಲಿ ಇವರಿಬ್ಬರ ನಡುವಿನ ಸ್ನೇಹದ ಮೂಲಕ ಪೀಠಿಕೆ ಹಾಕಿದ್ದಾರೆ.
ಡಾ.ಮೇಘಶ್ಯಾಮ ಸಿಹಿಯ ಅಪ್ಪನಾದರೂ ಸೀತಾಳ ಗಂಡನಲ್ಲ:
ಪುಟಾಣಿ ಸಿಹಿ ಸೀತಾಳ ಮಗಳೇ ಎಂಬ ಪ್ರಶ್ನೆ ಈಗಲೂ ವೀಕ್ಷಕರಲ್ಲಿ ಕಾಡುತ್ತಿದೆ. ಆದರೆ, ಸಿಹಿ ಸೀತಾ ಜನ್ಮ ಕೊಟ್ಟ ಮಗಳಾಗಿದ್ದಾಳೆ. ಆದರೆ, ಇಲ್ಲಿ ಸಿಹಿಯ ತಂದೆ ಡಾ.ಮೇಘಶ್ಯಾಮ ಆಗಿದ್ದರೂ ಸೀತಾಳ ಗಂಡನಲ್ಲ. ಮೇಘಶ್ಯಾಮನ ಹೆಂಡತಿಗೆ ಮಕ್ಕಳು ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ. ಆಗ ಡಾ. ಮೇಘಶ್ಯಾಮನ ಸ್ನೇಹಿತೆಯೂ ಆಗಿರುವ ಡಾ.ಅನಂತ ಲಕ್ಷ್ಮಿ ಅವರನ್ನು ಸಂಪರ್ಕ ಮಾಡಿದ್ದಾನೆ. ಆಗ ಅನಂತಲಕ್ಷ್ಮಿ ಬಡತನದಲ್ಲಿ ಬೆಳೆಯುತ್ತಿದ್ದ ಸೀತಾಳನ್ನು ಸಂಪರ್ಕ ಮಾಡಿದ್ದಾರೆ. ಆಗ ಸೀತಾ ಮದುವೆಗೂ ಮೊದಲೇ ಬಾಡಿಗೆ ತಾಯಿ ಆಗಲು ಒಪ್ಪಿಕೊಂಡು, ತನ್ನ ಗರ್ಭದಲ್ಲಿ ಡಾ.ಮೇಘಶ್ಯಾಮ ದಂಪತಿಯ ಮಗುವನ್ನು 9 ತಿಂಗಳು ಹೊತ್ತು, ಹೆತ್ತಿದ್ದಾಳೆ. ಆದ್ದರಿಂದ ಸಿಹಿಗೆ ಸೀತಾ ಅಮ್ಮನಾಗಿದ್ದರೂ, ಮೇಘಶ್ಯಾಮ ತಂದೆಯಲ್ಲ ಎಂದು ಊಹಿಸಬಹುದು.
ಸೀತಾರಾಮದ ಹೀರೋ ಗಗನ್ ಮತ್ತು ವೈಷ್ಣವಿ ನಡುವೆ ಸಮ್‌ಥಿಂಗ್ ಸ್ಪೆಷಲ್.. ಸಿಕ್ಕೇ ಬಿಡ್ತಲ್ಲಾ ಸಾಕ್ಷಿ!
ಬಾಡಿಗೆಗೆ ತಾಯಿ ಆಗಿದ್ದ ಸೀತಾಳ ಬಳಿ ಸಿಹಿ ಉಳಿದುಕೊಂಡಿದ್ಯಾಕೆ?
ಡಾ. ಮೇಘಶ್ಯಾಮ ದಂಪತಿಗೆ ಮಗು ಪಡೆಯಲು ಬಾಡಿಗೆ ತಾಯಿ ಆಗಲಿಕ್ಕೆ ಒಪ್ಪಿಕೊಂಡಿದ್ದ ಸೀತಾ, ಒಪ್ಪಂದದಂತೆ ಮಗುವಿಗೆ ಜನ್ಮ ನೀಡಿ ಮಗುವನ್ನು ಕೊಡಬೇಕಿತ್ತು. ಆದರೆ, ಸೀತಾ ಜನ್ಮಕೊಟ್ಟ ಸಿಹಿಗೆ ಹುಟ್ಟಿನಿಂದಲೇ ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳಿರುವುದು ತಿಳಿದುಬಂದಿದೆ. ಹೀಗಾಗಿ, ರೋಗಗ್ರಸ್ತ ಮಗುವನ್ನು ಡಾ.ಮೇಘಶ್ಯಾಮನ ಹೆಂಡತಿ ಬೇಡವೆಂದು ನಿರಾಕರಿಸಿದ್ದಾಳೆ. ಆಗ ಡಾ. ಅನಂತಲಕ್ಷ್ಮೀ ಮಗುವನ್ನು ಅನಾಥಾಶ್ರಮಕ್ಕೆ ಕೊಡಲು ಮುಂದಾಗಿರುತ್ತಾರೆ. ಆದರೆ, ತಾನು ಮದುವೆ ಆಗದಿದ್ದರೂ ಬಾಡಿಗೆ ತಾಯಿ ಆಗಿ ಜನ್ಮ ನೀಡಿದ ಮಗು ಅನಾಥ ಆಗುವುದಕ್ಕೆ ಬಿಡುವುದಿಲ್ಲವೆಂದು, ಸೀತಾ ತನ್ನ ಮಗಳು ಸಿಹಿಯನ್ನು ಸಾಕಲು ಮುಂದಾಗುತ್ತಾಳೆ. ಈವರೆಗೆ ಸಿಹಿಗೆ ಸಿಂಗಲ್ ಪೇರೆಂಟ್ ಆಗಿದ್ದ ಸೀತಾಗೆ ಈಗ ರಾಮ ಜೋಡಿಯಾಗಿದ್ದಾನೆ. ಈಗ ಸಿಹಿಗೆ ಅಪ್ಪ, ಅಮ್ಮ ಇಬ್ಬರ ಪ್ರೀತಿಯೂ ಸಿಕ್ಕಿದೆ ಎಂದು ಹೇಳಬಹುದು.
ವಿಶೇಷ ಸೂಚನೆ: ಸೀತಾ ರಾಮ ಧಾರಾವಾಹಿಯ ಬಗ್ಗೆ ಈವರೆಗೆ ಓದಿದ ಮಾಹಿತಿ ಧಾರಾವಾಹಿ ವೀಕ್ಷಕರು ಮುಂದೇನಾಗಬಹುದು ಎಂಬುದನ್ನು ಊಹಿಸಿ, ಬರಹಗಾರರಿಗೆ ಮಾಹಿತಿ ನೀಡಿರುವುದು ಮಾತ್ರ. ಆದರೆ, ಅಂತಿಮವಾಗಿ ನಿರ್ದೇಶಕರು ಧಾರಾವಾಹಿಯನ್ನು ಯಾವ ರೀತಿಯಲ್ಲಿ ಮುನ್ನಡೆಸುತ್ತಾರೆ, ಸಿಹಿಯ ತಂದೆ ಯಾರು? ಎಂಬುದನ್ನು ಹೇಳುತ್ತಾರೋ ಕಾದು ನೋಡಬೇಕಿದೆ. ಸಿಹಿಯ ತಂದೆ ಯಾರೆಂಬುದರ ಬಗ್ಗೆ ಸ್ಪಷ್ಟ ಮಾಹಿತಿಗೆ ಮುಂದಿನ ಎಪಿಸೋಡ್‌ಗಳನ್ನು ತಪ್ಪದೆ ವೀಕ್ಷಿಸುವುದೇ ಎಲ್ಲದಕ್ಕೂ ಉತ್ತರ ದೊರೆಯಲಿದೆ.