ಲಕ್ಷ್ಮೀ ನಿವಾಸದಲ್ಲಿ ಪುಟ್ಟ ಖುಷಿಯೊಂದಿಗೆ ಸೈಕೋ ಜಯಂತ್, ಈ ಹುಚ್ಚನಿಂದ ಮಗುವನ್ನು ಕಾಪಾಡು ದೇವ್ರೇ ಅಂತಿರೋ ನೆಟ್ಟಿಗರು!

By Bhavani Bhat  |  First Published Sep 4, 2024, 8:28 AM IST

ಲಕ್ಷ್ಮೀ ನಿವಾಸದಲ್ಲಿ ಸದ್ಯ ಜಯಂತ್ ಖುಷಿಯನ್ನು ಔಟಿಂಗ್ ಕರ್ಕೊಂಡು ಹೊರಟಿದ್ದಾನೆ. ಈ ಸೈಕೋ ಕೈಯಿಂದ ಆ ಮಗುವನ್ನು ಕಾಪಾಡು ದೇವ್ರೇ ಅಂತಿದ್ದಾರೆ ನೆಟ್ಟಿಗರು.


ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರ ಮತ್ತೆ ಸೌಂಡ್ ಮಾಡ್ತಿದೆ. ಈ ಮೊದಲು ತನ್ನ ಸೈಕೋ ವರ್ತನೆಗಳಿಂದಲೇ ನೋಡುಗರ ಎದೆಯಲ್ಲಿ ಭಯ ಹುಟ್ಟಿಸಿದ್ದ ಜಯಂತ್ ಕೈಗೆ ಮರುಗುಬ್ಬಿಯಂಥಾ ಪುಟ್ಟ ಹುಡುಗಿ ಖುಷಿ ಸಿಕ್ಕಿದ್ದಾಳೆ. ಔಟಿಂಗ್ ನೆವದಲ್ಲಿ ಜಯಂತ್ ಖುಷಿ ಜೊತೆ ಹೊರಗೆ ಬಂದಿದ್ದಾನೆ. ಆದರೆ ಜಯಂತ್ ವರ್ತನೆ ಯಾವ ಥರ ಇರುತ್ತೆ ಅಂತ ಮೊದಲೇ ಗೊತ್ತಿರೋ ವೀಕ್ಷಕರಿಗೆ ಇದು ಗುಬ್ಬಚ್ಚಿಯನ್ನ ಹದ್ದಿನ ಕೈಗಿಟ್ಟ ಫೀಲ್ ತರ್ತಿದೆ. ಅದಕ್ಕೆ ಅವರೆಲ್ಲ, 'ಈ ಹುಚ್ಚನಿಂದ ಆ ಮಗುವನ್ನು ಕಾಪಾಡಪ್ಪ ದೇವ್ರೇ' ಅಂತಿದ್ದಾರೆ. ಹಾಗಿದ್ರೆ ಈ ಜಯಂತ್ ಪುಟ್ಟ ಹುಡುಗಿಯನ್ನು ಏನ್ ಮಾಡಬಹುದು ಅನ್ನೋದು ಸದ್ಯದ ಭಯ. ಏಕೆಂದರೆ ಈ ಪುಣ್ಯಾತ್ಮನ ಮನಸ್ಸಲ್ಲಿ ಏನ್ ಓಡ್ತಿದೆ ಅನ್ನೋದನ್ನು ಈಗಾಗಲೇ ಈ ಸೀರಿಯಲ್ ಪ್ರೊಮೊ ಹೇಳಿದೆ. ಸೋ ಈತ ಈ ಪುಟಾಣಿಗೆ ತೊಂದರೆ ಮಾಡೋದಂತೂ ನಿಜ.

ಅಷ್ಟಕ್ಕೂ ಈ ಪುಟ್ಟ ಹುಡುಗಿ ಜಯಂತ್‌ಗೆ ಏನು ಮಾಡಿದ್ಲು? ಅವನ ಈ ವರ್ತನೆಗೆ ಏನು ಕಾರಣ ಅನ್ನೋ ಪ್ರಶ್ನೆ ಬರಬಹುದು, ಅದಕ್ಕೂ ಉತ್ತರ ಸಿಕ್ಕಿದೆ. ಆದರೆ ಜಯಂತ್‌ ಈ ಪುಟ್ಟ ಹುಡುಗಿಯನ್ನ ಹೇಗೆ ಸಂಕಷ್ಟದ ಸುಳಿಗೆ ಸಿಲುಕಿಸಬಹುದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.

Tap to resize

Latest Videos

ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!

ಹಾಗೆ ನೋಡಿದರೆ ಈ ಸೀರಿಯಲ್ ಶುರುವಾದ ಹೊಸತರಲ್ಲಿ ಕನ್ನಡ ಕಿರುತೆರೆಯ ಪ್ರೇಕ್ಷಕರು ಈ ಪಾತ್ರದ ಬಗ್ಗೆಯೇ ಮಾತನಾಡುತ್ತಿದ್ದರು. ಜಯಂತ್ ಪಾತ್ರ ಆ ಲೆವೆಲ್‌ಗೆ ಆಡಿಯನ್ಸ್ ಮನಸ್ಸಲ್ಲಿ ಕೂತು ಬಿಟ್ಟಿತ್ತು. ಅದಕ್ಕೆ ಸರಿಯಾಗಿ ಜಯಂತ್ ಪಾತ್ರದಲ್ಲಿ ನಟ ದೀಪಕ್ ಸುಬ್ರಹ್ಮಣ್ಯ ಅವರ ತೀವ್ರ ನಟನೆಯ ಇದೆ. ಹೆಂಡ್ತಿಯನ್ನು ಅತಿಯಾಗಿ ಪ್ರೀತಿ ಮಾಡುವ ಜಯಂತ್‌ ಸೈಕೋ, ಅನುಮಾನ ಪಿ‍ಶಾಚಿ. ನಾನು ಮದುವೆಯಾಗುವ ಹುಡುಗ ಬಡವ ಆಗಿದ್ರೂ ಪರವಾಗಿಲ್ಲ, ಅವನು ಪ್ರೀತಿ ಹಂಚೋದರಲ್ಲಿ ಶ್ರೀಮಂತ ಆಗಿರಬೇಕು ಅಂತ ಕೆಲ ಹುಡುಗೀರು ಆಸೆಪಡ್ತಾರೆ. ಆದರೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರ ನೋಡಿದ್ಮೇಲೆ ಕೆಲವರು ಈ ಥರದ ಗಂಡ ಮಾತ್ರ ಸಿಗಬಾರದು ಅಂತ ಪ್ರಾರ್ಥನೆ ಮಾಡ್ತಿದ್ದಾರೆ.

ಜಯಂತ್ ಎನ್ನುವ ಆಗರ್ಭ ಶ್ರೀಮಂತನಿಗೆ ಅಪ್ಪ-ಅಮ್ಮನೂ ಇಲ್ಲ, ಯಾವ ಚಟವೂ ಇಲ್ಲ. ಇಂಥ ಬಂಗಾರದ ಹುಡುಗನನ್ನು ಮಧ್ಯಮ ಕುಟುಂಬದ ಜಾಹ್ನವಿ ಮದುವೆ ಆಗಿದ್ದಾಳೆ. ಇಷ್ಟು ಒಳ್ಳೆಯ ಹುಡುಗ ನಮಗೆ ಅಳಿಯನಾಗಿ ಸಿಕ್ಕಿದ್ದಾನೆ ಅಂತ ಜಾಹ್ನವಿ ಮನೆಯವರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಆದರೆ ಅಸಲಿ ಸತ್ಯ ಬೇರೆಯೇ ಇದೆ. ಜಯಂತ್‌ಗೆ ಸಿಕ್ಕಾಪಟ್ಟೆ ಪೊಸೆಸ್ಸಿವ್‌ನೆಸ್ ಇದೆ. ತನ್ನ ಹೆಂಡ್ತಿ ತನ್ನನ್ನು ಮಾತ್ರ ಇಷ್ಟಪಡಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು, ನನ್ನ ಜೊತೆ ಮಾತಾಡಬೇಕು, ಮನೆ ಬಿಟ್ಟು ಎಲ್ಲಿಗೂ ಹೋಗಬಾರದು.. ಹೀಗೆ ಜಯಂತ್, ಜಾಹ್ನವಿ ಸುತ್ತ ಗೆರೆ ಎಳೆದಿದ್ದಾನೆ. ಇದು ಜಾಹ್ನವಿಗೆ ಅರ್ಥ ಆಗ್ತಿಲ್ಲ. ಫಸ್ಟ್‌ನೈಟ್ ದಿನ ಜಾಹ್ನವಿ ಮೇಲೆ ಜಿರಳೆ ಹರಿಯಿತು ಅಂತ ಅದನ್ನು ಹಾಲಿನ ಲೋಟಕ್ಕೆ ಹಾಕಿ ಗಟಗಟನೆ ಕುಡಿದಿದ್ದ ‘ಸೈಕೋ’ ಜಯಂತ್‌ಗೆ ಬರೀ ಅನುಮಾನ. ಇಡೀ ಮನೆಗೆ ಸಿಸಿಟಿವಿ ಹಾಕಿ ಹೆಂಡ್ತಿ ಏನು ಮಾಡುತ್ತಿದ್ದಾಳೆ ಅಂತ ಆಫೀಸ್‌ನಲ್ಲಿ ಕೂತು, ಕದ್ದು ನೋಡುವ ಜಯಂತ್‌ಗೆ ಬರೀ ಜಾಹ್ನವಿಯದ್ದೇ ಯೋಚನೆ. ಹೆಂಡ್ತಿ ಅತ್ತೆ ಜೊತೆ ಮಾತನಾಡಿದರೂ ಕೂಡ ಅವನಿಗೆ ಸಹಿಸೋಕೆ ಆಗೋದಿಲ್ಲ.

ಸೀತಾರಾಮ: ಪಾಪ ಅಶೋಕ್! ಒಂದು ಕಡೆ ಪ್ರಿಯಾ, ಇನ್ನೊಂದು ಕಡೆ ರಾಮ್, ಒಳ್ಳೇವ್ರಿಗೆ ಯಾವತ್ತು ಹೀಗೇನ?

ಅಂಥಾದ್ರಲ್ಲಿ ಜಯಂತ್ ಮತ್ತು ಜಾಹ್ನವಿ ಮನೆಗೆ ಅಕ್ಕ ಭಾವನಾ ತನ್ನ ಮಗಳು ಖುಷಿ ಜೊತೆಗೆ ಬಂದಿದ್ದಾಳೆ. ಇದು ಜಯಂತ್‌ಗೆ ಇರಿಟೇಟ್ ಆಗಿದೆ. ಅದನ್ನು ಹೇಗೋ ಕಷ್ಟಪಟ್ಟು ಸಹಿಸಿಕೊಂಡಿದ್ದಾನೆ. ಆದರೆ ಖುಷಿ ಜಾಹ್ನವಿಯನ್ನು ತಬ್ಬಿ ಮಲಗಿದ್ದು ಅವನೊಳಗಿನ ಸೈಕೋನನ್ನು ಬಡಿದೆಬ್ಬಿಸಿದೆ. ಅದಕ್ಕಾಗಿ ಅವನ ಸಿಹಿ ಮಾತಿನಿಂದ ಖುಷಿಯನ್ನು ಮರಳು ಮಾಡಿ ತನ್ನ ಆಫೀಸಿಗೆ ಕರೆದುಕೊಂಡು ಹೊರಟಿದ್ದಾನೆ. ಜೊತೆಗೆ ತನ್ನ ಹೆಂಡತಿಯನ್ನು ಮುಟ್ಟಿದ ನಿನ್ನನ್ನು ಸುಮ್ನೆ ಬಿಡಲ್ಲ ಅಂತ ಹಲ್ಲು ಕಡಿದಿದ್ದಾನೆ. ಇವರ ಈ ವರ್ತನೆ ವೀಕ್ಷಕರಲ್ಲಿ ಭಯ ಹುಟ್ಟಿಸಿದೆ. ಈ ಹುಚ್ಚನಿಂದ ಪುಟ್ಟ ಮಗುವನ್ನು ಕಾಪಾಡಪ್ಪ ದೇವ್ರೇ ಅಂತ ಹಲವಾರು ಜನ ಮೊರೆ ಇಡೋದಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಸೀರಿಯಲ್ ಕಥೆಗಾರನಿಗೂ ಹಿಗ್ಗಾಮಗ್ಗಾ ಝಾಡಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!