ಪುಟ್ಟಕ್ಕನ ಮಕ್ಕಳು: ಕಾಳಿ ಸಹನಾಳನ್ನ ಬೈಕ್ ಮೇಲೆ ಕೂರಿಸಿದ್ರೆ ಮ್ಯಾಕ್ಸ್‌ ಕಣ್ಣಲ್ಯಾಕೆ ಬೇಜಾರು?

By Bhavani Bhat  |  First Published Sep 25, 2024, 12:22 PM IST

ರೌಡಿ ಕಾಳಿ ಸಹನಾ ಜೊತೆ ಸಿಟಿಯಲ್ಲಿದ್ದಾನೆ. ಅವಳನ್ನು ಬೈಕ್ ಮೇಲೆ ಕೂರಿಸಿಕೊಂಡು ಹೊರಟಿದ್ದಾನೆ. ಇದನ್ನು ಕಂಡು ಮ್ಯಾಕ್ಸ್ ಮುಖ ಚಿಕ್ಕದಾಗಿದೆ. ಇದ್ಯಾಕೆ?


ಜೀ ಕನ್ನಡದ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ಸಹನಾ ಕಥೆ ವೀಕ್ಷಕರ ಫೇವರಿಟ್. ಈಕೆ ಪುಟ್ಟಕ್ಕನ ದೊಡ್ಡ ಮಗಳು. ಪುಟ್ಟಕ್ಕನ ಹಾಗೆ ಅಡುಗೆಯಲ್ಲಿ ಎತ್ತಿದ ಕೈ. ಊರಿನ ಮೇಷ್ಟ್ರ ಜೊತೆಗೆ ಈಕೆಗೆ ಲವ್ವಾಗಿ ಆತನನ್ನು ಮದುವೆಯೂ ಆಗುತ್ತಾಳೆ. ಆದರೆ ಅತ್ತೆಯ ಕೆಟ್ಟ ಬುದ್ಧಿಯಿಂದ ಅವಳು ಗಂಡನ ಮನೆಯಿಂದ ಹೊರಬರಬೇಕಾಗುತ್ತದೆ. ಮುಂದೆ ತವರಿಗೆ ಮರಳಿ ಪುಟ್ಟಕ್ಕನ ಜೊತೆಗೇ ಇರುತ್ತಾಳೆ. ಆದರೆ ಪುಟ್ಟಕ್ಕನಿಗೆ ತನ್ನ ಮಗಳ ಬದುಕು ತನ್ನಂತೆ ಒಂಟಿ ಆಗಬಾರದು, ಅವಳಿಗೆ ಎಲ್ಲ ಸುಖ, ಸಂತೋಷ ಸಿಗಬೇಕು ಎಂಬ ಆಸೆ. ಅದನ್ನು ಸಹನಾ ಮುಂದೆಯೂ ಬುದ್ಧಿವಾದ ಹೇಳುತ್ತಾಳೆ. ಆದರೆ ಇದರಿಂದ ಮನನೊಂದ ಸಹನಾ ಮನೆ ಬಿಟ್ಟು ಹೊರಡುತ್ತಾಳೆ. ತಾನೇನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂದುಕೊಳ್ಳುತ್ತಾಳೆ. ಈ ನಡುವೆ ಅವಳು ಬಹಳ ಕಷ್ಟಪಟ್ಟು ಊಟದ ಗಾಡಿ ಶುರು ಮಾಡ್ತಾಳೆ. ಈ ಟೈಮಲ್ಲಿ ಸಹನಾಳ ಗಂಡನಿಗೆ ಎರಡನೇ ಮದುವೆ ಮಾಡಲು ಪುಟ್ಟಕ್ಕ ಮುಂದಾಗುತ್ತಾಳೆ. ಈ ಸೀನ್ ಅಂತೂ ಬಹಳ ಸೊಗಸಾಗಿ ಬಂದಿತ್ತು. ತನ್ನ ಗಂಡನ ಮದುವೆಯ ಕ್ಯಾಟರಿಂಗ್ ಕಾಂಟ್ರಾಕ್ಟ್ ಸಹನಾಗೆ ಸಿಗುತ್ತೆ.

ಸಹನಾ ತನ್ನ ಗಂಡನ ಮದುವೆಗೆ ಊಟದ ವ್ಯವಸ್ಥೆ ಮಾಡಿರುತ್ತಾಳೆ. ಆದರೆ ಆಕೆಗೂ ಕೂಡ ತನ್ನ ಗಂಡನ ಮದುವೆ ಸಮಾರಂಭ ಎಂಬ ವಿಚಾರ ಗೊತ್ತಾಗಿರುವುದಿಲ್ಲ. ಮದುವೆಗೆ ಕಾಳಿ ಕೂಡ ಬಂದಿರುತ್ತಾನೆ. ಕಾಳಿ ಕುಡಿದ ಕಾರಣ ಮೊದಲಿಗೆ ಸಹನಾ ನೋಡಿ ಶಾಕ್‌ ಆಗುತ್ತಾನೆ. ಆದರೆ ಸಹನಾ ಮಾತ್ರ ವಿನುತಾ ಹಾಗೂ ಮುರಳಿ ಮದುವೆಯ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾಳೆ. ಆಕೆಯ ಹೋಟೆಲ್ ನಿಂದ ಫುಡ್ ಸರ್ವಿಸ್ ಎಂದು ಕಾಳಿಗೆ ಗೊತ್ತಿರುವುದಿಲ್ಲ. ಕಾಳಿಯನ್ನು ಕಂಡೊಡನೆ ಸಹನಾ ಕೂಡ ಗಾಬರಿ ಆಗುತ್ತಾಳೆ. ಬಳಿಕ ಕಾಳಿ ಇಲ್ಲಿ ಮುರುಳಿ ಮದುವೆ ಆಗುತ್ತಿದೆ ಎಂದು ಸತ್ಯವನ್ನು ಹೇಳಿಬಿಡುತ್ತಾನೆ. ಮೊದಲಿಗೆ ಸಹನಾ ಈ ಸತ್ಯ ಅರಿತು ಬಿಕ್ಕಿ ಬಿಕ್ಕಿ ಅತ್ತರೂ ಕಾಳಿಗೆ ತಾನು ಬದುಕಿರುವ ವಿಚಾರ ಹೇಳಬೇಡ ಎಂದೇ ಹೇಳುತ್ತಾಳೆ.

Tap to resize

Latest Videos

undefined

Puttakkana makkalu: ಸಹನಾ ಮುಟ್ಟಲು ಬಂದವನಿಗೆ ಬಿತ್ತು ಗೂಸಾ! ಸೂಪರ್ ಹೀರೋ ರೇಂಜಲ್ಲಿ ಬಿಲ್ಡಪ್ ಕೊಟ್ಟ ಕಾಳಿ

ಇದಾದ ಮೇಲಿಂದ ಕಾಳಿ ಸಹನಾಗೆ ಜೊತೆಯಾಗಿದ್ದಾನೆ. ಅವಳ ಜೊತೆಗೆ ಸಿಟಿಗೆ ಬಂದಿದ್ದಾನೆ. ಸಹನಾಗೆ ಫೈನಾನ್ಶಿಯರ್ ಕಾಟ ಕೊಟ್ಟಾಗ ಅವಳನ್ನು ಕಾಪಾಡಿದ್ದಾನೆ. ಇದಾಗಿ ಸಹನಾಳಿಗೆ ಬೇಕಾದ ಸಣ್ಣಪುಟ್ಟ ಸಹಾಯ ಮಾಡಿಕೊಂಡು ಅವಳ ಜೊತೆಗೇ ಇದ್ದುಬಿಟ್ಟಿದ್ದಾನೆ. ಕಾಳಿ ಸಹನಾ ಜೋಡಿಯನ್ನು ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ. ಇವರಿಬ್ಬರೂ ಮದುವೆ ಆದರೆ ಬಹಳ ಚೆನ್ನಾಗಿರುತ್ತೆ ಅನ್ನೋ ಮಾತನ್ನು ಬಹಳ ಸಲ ಆಗಿದ್ದಾರೆ. ಆದರೆ ಇದೀಗ ಇಲ್ಲೊಂದು ಜೀವ ಸಹನಾ ಮತ್ತು ಕಾಳಿಯ ನಡುವೆ ಬರುವ ಎಲ್ಲ ಲಕ್ಷಣ ಕಾಣುತ್ತಿದೆ. ಅದು ಮತ್ಯಾರೂ ಅಲ್ಲ, ಮ್ಯಾಕ್ಸ್. ಈತ ಫಾರಿನರ್. ಯೂಟ್ಯೂಬರ್. ಇಂಡಿಯನ್ ಅಡುಗೆಗಳ ವೀಡಿಯೋ ಮಾಡುತ್ತ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾನೆ.

ಕಾಳಿ ಬರುವ ಮೊದಲು ಸಹನಾಗೆ ಅವಳ ಊರಿನ ಸಮಾಚಾರ ತಲುಪಿಸುತ್ತಿದ್ದದ್ದು ಇವನೇ. ಅವಳನ್ನು ಬೇಕಾದಲ್ಲಿ ಕರೆದುಕೊಂಡು ಹೋಗ್ತಿದ್ದವನೂ ಈ ಮ್ಯಾಕ್ಸ್. ಆದರೆ ಇದೀಗ ಕಾಳಿ ಬಂದಮೇಲೆ ಈ ಎಲ್ಲವನ್ನೂ ಕಾಳಿಯೇ ಮಾಡುತ್ತಿದ್ದಾನೆ. ಹೊಸ ಬೈಕ್ ತಂದು ಸಹನಾ ಎದುರು ನಿಲ್ಲಿಸಿ ರೈಡ್‌ ಹೋಗಾಣ ಬಾ ಅಂತ ಕರೀತಾನೆ. ಮೊದಲು ಸ್ವಲ್ಪ ಯೋಚನೆ ಮಾಡುವ ಸಹನಾ ಆಮೇಲೆ ಗಾಡಿ ಏರಿದ್ದಾಳೆ. ಇದನ್ನು ನೋಡಿ ಮ್ಯಾಕ್ಸ್ ಮುಖ ಚಿಕ್ಕದಾಗಿದೆ. ಸಹನಾ ಕಾಳಿ ಜೋಡಿಗೆ ಸದಾ ಓಟ್ ಮಾಡ್ತಾ ಇವರಿಬ್ರು ಮದುವೆ ಆಗಬೇಕು ಅಂತ ಹೇಳ್ತಿದ್ದ ವೀಕ್ಷಕರು ಇದೀಗ ಮ್ಯಾಕ್ಸ್ ಸಪ್ಪಗಾದ ಮುಖ ನೋಡಿ ತಲೆ ಕೆಡಿಸಿಕೊಂಡಿದ್ದಾರೆ.

ಕಪ್ಪಗಿರೋದು ಅಂದ್ರೆ ಕುರೂಪನ? ರೇಸಿಸಂ ಮಾಡ್ತಿದ್ದೀರ? ದೃಷ್ಟಿಬೊಟ್ಟು ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ

ಸದ್ಯ ಈ ಸೀಕ್ವೆನ್ಸ್ ನೋಡ್ತಿದ್ರೆ ಇಲ್ಲೊಂದು ಟ್ರಯಾಂಗಲ್ ಲವ್‌ಸ್ಟೋರಿ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಅತ್ತ ಮ್ಯಾಕ್ಸ್‌ಗೆ ಸಹನಾ ಕಂಡರೆ ಇಷ್ಟ. ಇತ್ತ ಕಾಳಿಗೂ ಸಹನಾ ಮೇಲೆ ತುಂಬ ಮನಸ್ಸಿದೆ. ಅವಳನ್ನು ಕಂಡಾಗ ಅವನ ಮುಖದಲ್ಲಿ ಕಾಣುವ ನಾಚಿಕೆ, ಪ್ರೀತಿ ಇವೆಲ್ಲ ಫ್ಯಾನ್ಸ್‌ಗೂ ಇಷ್ಟವಾಗಿದೆ. ಮುಂದೆ ಈ ಜೋಡಿ ಮದುವೆ ಆಗಲಿ ಅಂತಿರೋ ವೀಕ್ಷಕರು ಮುಂದಿನ ತಿರುವಿಗೆ ಕಾಯ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!