ಝೀ ಕನ್ನಡದ ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಹೊಸ ಟ್ವಿಸ್ಟ್ ನೀಡಿ ವೀಕ್ಷಕರ ಬಾಯಿಗೆ ಆಹಾರವಾಗಿದ್ದ ಡೈರೆಕ್ಟರ್ ಕಥೆ ಬದಲಿಸಿದಂತಿದೆ. ಹೊಸ ಪ್ರೋಮೋದಲ್ಲಿ ಕಥೆಗೆ ಸ್ವಲ್ಪ ಟ್ವಿಸ್ಟ್ ಸಿಕ್ಕಿದ್ದು, ತುಳಸಿಗೆ ಗರ್ಭಪಾತವಾಗುತ್ತಾ ಎಂಬ ಪ್ರಶ್ನೆ ಈಗ ವೀಕ್ಷಕರ ಮುಂದಿದೆ.
ಝೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್ (Zee Kannada Shrirasthu Shubhamasthu serial) ಗೆ ಬಿಗ್ ಟ್ವಿಸ್ಟ್ ನೀಡಿ ತುಳಸಿ ಗರ್ಭಿಣಿ ಎಂದಿದ್ದ ಡೈರೆಕ್ಟರ್ ಈಗ ಮತ್ತೊಂದು ಬದಲಾವಣೆ ತರ್ತಿದ್ದಾರೆ. ತುಳಸಿ ಪ್ರೆಗ್ನೆಂಟ್ (Pregnant) ಎನ್ನುವ ವಿಷ್ಯ ಕೇಳ್ತಿದ್ದಂತೆ ವೀಕ್ಷಕರು ಕಂಗಾಲಾಗಿದ್ರು. ಸೋಶಿಯಲ್ ಮೀಡಿಯಾ (Social Media) ದಲ್ಲಿ ಇದು ಟ್ರೋಲ್ ಮೇಲೆ ಟ್ರೋಲ್ ಆಗಿತ್ತು. ಈ ವಯಸ್ಸಿನಲ್ಲಿ ತುಳಸಿ ಗರ್ಭಧರಿಸೋದು ಎಷ್ಟು ಸರಿ ಅಂತ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಆರ್ ಪಿ ಗಿಟ್ಟಿಸಿಕೊಳ್ಳಲು ಕಥೆಯ ದಾರಿಯನ್ನೇ ಬದಲಿಸೋದು ಸರಿಯಲ್ಲ ಎಂದಿದ್ದರು ಫ್ಯಾನ್ಸ್. ತುಳಸಿಯಾಗಿರುವ ಸುಧಾರಾಣಿಗೆ ಈ ಪಾತ್ರ ಸೂಟ್ ಆಗೋದಿಲ್ಲ ಎಂಬುದು ಅಭಿಮಾನಿಗಳ ಕಮೆಂಟ್ ಆಗಿತ್ತು. ಅಜ್ಜಿಯಾಗುವ ಟೈಂನಲ್ಲಿ ತುಳಸಿ ಅಮ್ಮನಾಗೋದು ಎಷ್ಟು ಸರಿ ಎಂಬುದೇ ಬಹುತೇಕರ ಪ್ರಶ್ನೆಯಾಗಿತ್ತು. ನಿರ್ದೇಶಕರ ಮೇಲೆ ಗರಂ ಆಗಿದ್ದ ವೀಕ್ಷಕರು, ಬಾಯಿಗೆ ಬಂದಂತೆ ಕಮೆಂಟ್ ಮಾಡಿದ್ರು. ಟ್ರೋಲ್ ಆಗ್ತಿರೋದನ್ನು ನೋಡಿ ಕಮೆಂಟ್ ಸೆಕ್ಷನ್ ಆಫ್ ಮಾಡಿತ್ತು ಝೀ ಕನ್ನಡ. ಆದ್ರೂ ವೀಕ್ಷಕರು ಬಿಟ್ಟಿರಲಿಲ್ಲ. ಈಗ ತುಳಸಿ ಗರ್ಭಿಣಿ ಆಗೋದು ಬೇಡ ಎಂದಿದ್ದ ವೀಕ್ಷಕರಿಗೆ ಖುಷಿ ಸುದ್ದಿ ಸಿಕ್ಕಂತಿದೆ.
ತುಳಸಿಗೆ ಈಗಾಗಲೇ ಮೂರು ಮಕ್ಕಳಿದ್ದಾರೆ. ಮೊಮ್ಮಕ್ಕಳನ್ನು ಬಯಸುತ್ತಿರುವ ತುಳಸಿ, ಗರ್ಭಿಣಿ ಎನ್ನುವ ವಿಷ್ಯ ಮಗನಿಗೆ ಗೊತ್ತಾಗಿದೆ. ಇನ್ನು ಪತಿ ಮಾಧವ್ ಕೂಡ ಈ ವಿಷ್ಯವನ್ನು ಆರಾಮವಾಗಿ ತೆಗೆದುಕೊಂಡಿದ್ರು. ನಮ್ಮ ಮದುವೆಯಲ್ಲೂ ಜನ ಮಾತನಾಡಿದ್ರು. ಈಗ್ಲೂ ಮಾತನಾಡ್ತಾರೆ. ಹಾಗಂತ ಜನರಿಗೆ ಹೆದರಿ ಕೂರಲು ಆಗುತ್ತಾ ಎಂಬುದು ಮಾಧವ್ ಪ್ರಶ್ನೆಯಾಗಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ತುಳಸಿಗೆ ಬೆಂಬಲವಾಗಿ ನಿಂತಿದ್ದ ಮಾಧವ್, ತುಳಸಿಯನ್ನು ಆಸ್ಪತ್ರೆಗೆ ಕರೆದೊಯ್ದು ಡಾಕ್ಟರ್ ಅಭಿಪ್ರಾಯ ಕೇಳಿದ್ದಾರೆ.
undefined
ವೀಕ್ಷಕರ ಕಮೆಂಟ್ ಗೆ ಹೆದರಿ, ಡೈರೆಕ್ಟರ್ ಕಥೆ ಬದಲಿಸುವ ಲಕ್ಷಣ ಕಾಣ್ತಿದೆ. ಡಾಕ್ಟರ್ ಬಾಯಲ್ಲಿ ಮಗು ಬೇಡ ಎಂಬ ಮಾತನ್ನು ಹೇಳಿಸಿದ್ದಾರೆ. ತುಳಸಿಗೆ ವಯಸ್ಸಾಗಿದೆ. ಈ ಸಮಯದಲ್ಲಿ ಮಗು ಹೊಟ್ಟೆಯಲ್ಲಿರೋದು ಬಹಳ ಅಪಾಯ. ಮಗು ಹಾಗೂ ತಾಯಿ ಇಬ್ಬರ ಪ್ರಾಣಕ್ಕೂ ಅಪಾಯವಾಗ್ಬಹುದು. ಹಾಗಾಗಿ ಆಪರೇಷನ್ ಮಾಡಿಸೋದೇ ಬೆಸ್ಟ್ ಎಂದು ಡಾಕ್ಟರ್ ಹೇಳ್ತಾರೆ. ಈ ಮಾತನ್ನು ಕೇಳಿದ ಮಾಧವ್ ಹಾಗೂ ತುಳಸಿ ಶಾಕ್ ಆಗ್ತಾರೆ. ಮಗುವನ್ನು ತೆಗೆಯೋ ನೋವು ಅವರನ್ನು ಕಾಡ್ತಿದೆ. ಮಗು ಇದ್ರೆ ಎಂಬ ಮಾಧವ್ ಮಾತಿಗೆ, ವೈದ್ಯರು ಖಡಕ್ ಆಗಿ ಉತ್ತರ ನೀಡಿದ್ದು, ನೋಡಿ ಮುಂದೆ ಏನಾಗುತ್ತೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ. ಅಲ್ಲದೆ ನಿರ್ಧಾರವನ್ನು ತುಳಸಿ ಹಾಗೂ ಮಾಧವ್ ಗೆ ಬಿಟ್ಟಿದ್ದಾರೆ.
ತುಳಸಿ ಹಾಗೂ ಮಾಧವ್ ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ವಾರ ಸಮಯ ನೀಡಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೋಮೋ ಪೋಸ್ಟ್ ಆಗ್ತಿದ್ದಂತೆ ಶ್ರೀರಸ್ತು – ಶುಭಮಸ್ತು ಧಾರಾವಾಹಿ ವೀಕ್ಷಕರು ಖುಷಿಯಾಗಿದ್ದಾರೆ. ಜನರ ಮಾತು ಕೇಳಿ ಕೊನೆಗೂ ಡೈರೆಕ್ಟರ್ ಕಥೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಚೆನ್ನಾಗಿ ಬೈದಿರೋದಕ್ಕೆ ಡೈರೆಕ್ಟರ್ ಕಥೆನೆ ಬದಲಿಸಿದ್ದಾರೆ. ಒಳ್ಳೆಯ ಕೆಲಸ. ಸುಧಾರಾಣಿ ವ್ಯಕ್ತಿತ್ವಕ್ಕೆ ಇದು ಶೋಭೆ ತರುತ್ತಿರಲಿಲ್ಲ ಎಂದಿದ್ದಾರೆ ಫ್ಯಾನ್ಸ್. ವೀಕ್ಷಕರ ಒತ್ತಾಯದ ಮೇರೆಗೆ ಸ್ಟೋರಿ ಚೇಂಜ್ ಆಗಿದೆ, ಪ್ರತಿ ದಿನ ನಮಗೆ ಹೇಗೆ ಕಥೆ ಬೇಕು ಅಂತ ಹೇಳ್ತೇವೆ, ಹಾಗೆ ಬದಲಿಸಿ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆದ್ರೆ ಕೆಲವರು, ಇಷ್ಟಕ್ಕೆ ಖುಷಿಪಡಬೇಡಿ. ಬೇಬಿನಾ ಟೆಕ್ನಾಲಜಿ ಬಳಸಿ ಡೆವಲಪ್ ಮಾಡಿ ಆರೋಗ್ಯಕರ ಮಗು ಹುಟ್ಟುವಂತೆ ಮಾಡ್ಬಹುದು ಇಲ್ಲ ತುಳಸಿ ಸಾಯಿಸಿ ಈ ಮಗುವನ್ನು ಪೂರ್ಣಿಗೆ ಕೊಡಬಹುದು ಅಂತ ತಾವೇ ಕಥೆ ಊಹೆ ಶುರು ಮಾಡಿದ್ದಾರೆ.