ನಿಯಮ ಉಲ್ಲಂಘನೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ 'ಪಾರು' ನಟಿ!

Suvarna News   | Asianet News
Published : Jul 27, 2020, 03:53 PM IST
ನಿಯಮ ಉಲ್ಲಂಘನೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ 'ಪಾರು' ನಟಿ!

ಸಾರಾಂಶ

ಫ್ಯಾನ್‌ ಪೇಜ್‌ ತೆರೆಯುವುದಾಗಿ ಹೇಳಿ ನಂಬರ್ ಕೊಡುವಂತೆ ಕರುತೆರೆ ನಟಿಗೆ ಹಿಂಸಿಸುತ್ತಿದ್ದ ನೆಟ್ಟಿಗ. ಅಭಿಮಾನಿಗಳ ಖಾತೆಯಿಂದ ಸಿಕ್ತು, ಘಟನೆ ಬಗ್ಗೆ ಫುಲ್ ಕ್ಲಾರಿಟಿ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಪಾರು' ವೀಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದೆ. ಟಾಪ್‌ ಟಿಆರ್‌ಪಿ ಪಡೆಯುವ ಈ ಧಾರಾವಾಹಿಯ ಅನುಷ್ಕಾ ಪಾತ್ರಧಾರಿ ಮಾನ್ಸಿ ಜೋಶಿ ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಇರುವ ಮಾನ್ಸಿ ಹೀಗೆ ಮಾಡಲು  ಕಾರಣವೇನು? ಅವರೇ ಹೇಳಿದ್ದಾರೆ ನೋಡಿ....

ಇನ್‌ಸ್ಟಾಗ್ರಾಂ ಅಭಿಮಾನಿ ಕಾಟ:
ಮಾನ್ಸಿ ತಮ್ಮ ಧಾರಾವಾಹಿ ವಿಚಾರ ಹಾಗೂ ಫೋಟೋಶೋಟ್‌ ಮಾಡಿಸಿದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದರು. ಆಪ್ತರ ಕಾಮೆಂಟ್ಸ್‌ಗೆ ಮಾತ್ರವಲ್ಲದೇ, ಅಭಿಮಾನಿಗಳಿಗೂ ಸ್ಪಂದಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿ ಎಂದು ಹೇಳಿ ಮೆಸೇಜ್‌ ಮಾಡುತ್ತಿದ್ದವನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಈಗಾಗಲ್ೇ ಇನ್‌ಸ್ಟಾಗ್ರಾಂನಲ್ಲಿ ಮಾನ್ಸಿ ಸಾಕಷ್ಟು ಫ್ಯಾನ್‌ ಪೇಜ್‌ ಹೊಂದಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಎಂದು ಹೇಳಿ ಮಾನ್ಸಿ ಅವರ ನಂಬರ್ ಪಡೆಯಲು ಪ್ರಯತ್ನಿಸಿದ್ದಾನೆ. ಮಾನ್ಸಿ ನಿರಾಕರಿಸಿದ ಕಾರಣ ಮತ್ತೆ ಇನ್ನೆರಡು ಅಕೌಂಟ್‌ ತೆರೆದು ನಂಬರ್ ಕೇಳಿದ್ದಾನೆ. ಆತನ ಮಾತಿಗೆ ಬಗ್ಗದ ಕಾರಣ ಮಾನ್ಸಿ ವಿರುದ್ಧ ಕೆಟ್ಟ ಟ್ರೋಲ್‌ಗಳನ್ನು ಶೇರ್ ಮಾಡಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿ ಮಾನ್ಸಿ ಸೈಬರ್‌ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ. 

ರಿವೀಲಾಯ್ತು 'ಪಾರು' ವೈಲೆಂಟ್ ವಿಲನ್ ಅನುಷ್ಕಾಳ ಇನ್ನೊಂದು ಮುಖ!

ಈ ವಿಚಾರದ ಬಗ್ಗೆ ಅಭಿಮಾನಿಗಳ ಪೇಜ್ ಮೂಲಕ ಮಾಹಿತಿ ನೀಡಿದ್ದಾರೆ ಮಾನ್ಸಿ. 'ಎಲ್ಲರಿಗೂ ಗುಡ್‌ ಮಾರ್ನಿಂಗ್, ನನ್ನ ಇನ್‌ಸ್ಟಾಗ್ರಾಂ ಖಾನೆ ಕಾಣಿಸದೇ ಇರುವುದಕ್ಕೆ ನಿಮ್ಮಲ್ಲಿ ಹಲವರಿಗೆ ಆತಂಕ ಉಂಟಾಗಿರುವುದು ನನಗೆ ತಿಳಿದಿದೆ. ದಯವಿಟ್ಟು ಯಾರೂ ಗಾಬರಿ ಆಗಬೇಡಿ. ನನ್ನ ಹೆಸರಿನಲ್ಲಿ ಫ್ಯಾನ್‌ ಪೇಜ್‌ ತೆರೆದು ಅನುಮಾನಸ್ಪದ ಚಟುವಟಿಗಳನ್ನು ನಡೆಯುತ್ತಿರುವ  ಕಾರಣ ನಾನು ಮತ್ತು ನನ್ನ ಟೀಂ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ.  ಈಗಾಗಲೇ ನಾನು ಸೈಬರ್ ಕ್ರೈಮ್‌ ಮೊರೆ ಹೋಗಿದ್ದೇನೆ. ಅವರ ಸಹಾಯದಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇನೆ. ಈ ಕಾರಣಕ್ಕೆ ನನ್ನ ಖಾತೆಯೂ ನಿರ್ವಹಣೆಯಲ್ಲಿದೆ. ಈ ಸಂದರ್ಭವನ್ನು ಅರ್ಥ ಮಾಡಿಕೊಂಡು, ಸಪೋರ್ಟ್‌ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು' ಎಂದು ಪೋಸ್ಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ಫ್ಯಾನ್ಸ್ ಎಂಬ ನೆಪದಲ್ಲಿ ನಟ, ನಟಿಯರನ್ನು ಹಿಂಸಿಸುವುದು ಹೆಚ್ಚಾಗುತ್ತಿದೆ. ಅಲ್ಲದೇ ಗಣ್ಯರ ಸೋಷಿಯಲ್ ಮೀಡಿಯಾ ಪೇಜ್‌ಗಳು ಹ್ಯಾಕ್ ಆಗುವುದೂ ಹೆಚ್ಚಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?