ನೂರಾರು ಜನರ ಎದುರು ಪತ್ನಿ ಹಣೆಗೆ ಕುಂಕುಮ ಇಡದೆ ಮುಂದೋದ ನಟ ನವೀನ್ ಕೃಷ್ಣ; ಏನಿದು ಘಟನೆ!

Published : Sep 13, 2023, 04:34 PM IST
ನೂರಾರು ಜನರ ಎದುರು ಪತ್ನಿ ಹಣೆಗೆ ಕುಂಕುಮ ಇಡದೆ ಮುಂದೋದ ನಟ ನವೀನ್ ಕೃಷ್ಣ; ಏನಿದು ಘಟನೆ!

ಸಾರಾಂಶ

 ಮೊದಲ ಸಲ ಪತ್ನಿ ಬಗ್ಗೆ ಕಪಲ್ ಕಿಚನ್‌ನಲ್ಲಿ ಮಾತನಾಡಿದ ನವೀನ್ ಕೃಷ್ಣ. ಭೂಮಿಗೆ ಬಂತು ಭಗವಂತ ಏನ್ ಹೇಳಿದಾ ಗೊತ್ತಾ?   

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಪಲ್ಸ್ ಕಿಚನ್ ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಮತ್ತು ಪತ್ನಿ ಅಶ್ವಿನಿ ಆಗಮಿಸಿದ್ದರು. ಪ್ರತಿ ಎಪಿಸೋಡ್‌ಗೆ ಆಗಮಿಸುವ ಕಪಲ್ ತಮ್ಮ ನೆಚ್ಚಿನ ರೆಸಿಪಿ ಅಡುಗೆ ಮಾಡಿ ಮತ್ತೊಬ್ಬರಿಗೆ ರುಚಿ ನೋಡಲು ಕೊಡಬೇಕು. 

ನವೀನ್ ಕೃಷ್ಣ ಮತ್ತು ಅಶ್ವಿನಿ ಆಗಮಿಸಿದ ಸ್ಪೆಷಲ್ Mushroom ಚಿಲ್ಲಿ ಮಾಡಿದ್ದಾರೆ. ಚಿಲ್ಲಿ ಚಿಕನ್ ಮಸಾಲೆಗೆ ಮಶ್ರೂಮ್ ಹಾಕಿದರೆ ಮುಗಿಯುತ್ತೆ ಎಂದು ನವೀನ್ ಹಾಸ್ಯ ಮಾಡಿದ್ದಾರೆ. ಅಲ್ಲದೆ ಯಾವ ಕ್ಷಣ ಅಶ್ವಿನಿ ನನ್ನ ಹುಡುಗಿ ಅನಿಸಿತ್ತು ಎಂದು ರಿವೀಲ್ ಮಾಡಿದ್ದಾರೆ. 

ನಿಂಗೆ ಸ್ಟೈಲ್ ಮಾಡೋಕೆ ಬರಲ್ಲ; ದಿನಾ ಸೀರೆಯಲ್ಲಿ 'ಲಕ್ಷಣ' ನೋಡಲು ಬೋರು ಎಂದ ನೆಟ್ಟಿಗರು!

'ಯಾವ ದಿನ ಯಾವ ಕ್ಷಣ ಆಕೆ ನನ್ನವಳು ಎಂದು ಫೀಲ್ ಆಗಿದ್ದು ಎಂದು ಇಂದು ನಾನು ಹೇಳಿಕೊಳ್ಳುವೆ. ಒಮ್ಮೆ ನಾನು ಕರಗ ಡ್ಯಾನ್ಸ್‌ ಮಾಡಿಸಿದೆ. ಇಡೀ ತಂಡದಲ್ಲಿರುವವರಿಗೆ ಸಂಪೂರ್ಣ ಮೇಕಪ್ ಮತ್ತು ಹೇರ್‌ ಸ್ಟೈಲ್ ಮಾಡಿರುವೆ..ಕೊನೆಯಲ್ಲಿ ಫಿನಿಶಿಂಗ್ ಅಂತ ಎಲ್ಲರ ಹಣೆಗೆ ಕುಂಕುಮ ಇಡುತ್ತಾ ಬರುತ್ತಿದ್ದೆ ಅಲ್ಲಿದ್ದ ಹುಡುಗರಿಗೆ ಮಾತ್ರವಲ್ಲ ಪಕ್ಕದ್ದಲ್ಲಿದ್ದ ಹುಡುಗಿಯರಿಗೂ ಇಡುತ್ತಾ ಬರುತ್ತಿದ್ದೆ...ಸಾಮಾನ್ಯವಾಗಿ ಇಡುವ ರೀತಿ ಎಲ್ಲ ಹುಡುಗಿಯರು ಇಡಿಸಿಕೊಳ್ಳುತ್ತಿದ್ದರು ಆಗ ಈಕೆ ಎದುರು ಬಂದಾಗ ಇಡಲು ಆಗುತ್ತಿಲ್ಲ ಕೈ ನಡುಗುತ್ತಿದೆ ಇವರ ಕಣ್ಣಿನಲ್ಲಿ ಏನೋ ಹೇಳುತ್ತಿದ್ದೆ. ಬೇರೆ ಹುಡುಗಿಯರ ಕಣ್ಣಿನಲ್ಲಿ ಏನೂ ಫೀಲಿಂಗ್ಸ್‌ ಇರಲಿಲ್ಲ'  ಎಂದು ನವೀನ್ ಕೃಷ್ಣ ಹೇಳಿದ್ದಾರೆ. 

ರೀಲ್ಸ್‌ನಿಂದ ಅರಳಿದ ಪ್ರೀತಿ; ಬೈಕ್ ಚಿನ್ನ ಪಡೆದು ವರುಣ್‌ - ವರ್ಷಾ ಬ್ರೇಕಪ್, ಪೋಸ್ಟ್ ವೈರಲ್!

'ನವೀನ್ ಅಲ್ಲಿಂದ ಹೊರಟರು ನನ್ನ ಹಣೆಗೆ ಇಡಲಿಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಪ್ರಶ್ನೆ ಯಾಕೆ ಇವಳಿಗೆ ಮಾತ್ರ ಇಟ್ಟಿಲ್ಲ' ಎಂದು ನವೀನ್ ಪತ್ನಿ ಅಶ್ವಿನಿ ಹೇಳಿದಕ್ಕೆ ತಕ್ಷಣವೇ ಮಾಸ್ಟರ್ ಆನಂದ್ ಸೆಟ್‌ನಲ್ಲಿದ್ದ ಅರಿಶಿಣ ಕುಂಕುಮ ತರಿಸಿ ಸಿಂಧೂರ ಇಡಿಸುತ್ತಾರೆ. ಕೊನೆಯಲ್ಲಿ ನವೀನ್ ಪತ್ನಿಗೆ ದೃಷ್ಠಿ ತೆಗೆಯುತ್ತಾರೆ. ಹೀಗೆ ಸಣ್ಣ ಪುಟ್ಟ ಪ್ರೋಮೋದಲ್ಲಿ ನಾನು ನೇರವಾಗಿ ನನ್ನನ್ನು ಮದುವೆಯಾಗುತ್ತೀಯಾ ಎಂದು ಆಕೆಯನ್ನು ಕೇಳಿದೆ ಆಕೆ ಆಗ 10ನೇ ಕ್ಲಾಸ್‌ನಲ್ಲಿದ್ದಳು ಎಂದು ನವೀನ್ ಹೇಳಿದ್ದರು. 

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ನವೀನ್ ಕೃಷ್ಣ ನಟಿಸುತ್ತಿದ್ದಾರೆ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದರು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?