ಹಳ್ಳಿ ಮೇಷ್ಟ್ರೇ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿ ಫ್ಯಾನ್ಸ್​ ನಶೆಯೇರಿಸಿದ ಭೂಮಿಕಾ!

Published : Sep 12, 2023, 02:19 PM ISTUpdated : Sep 12, 2023, 02:21 PM IST
ಹಳ್ಳಿ ಮೇಷ್ಟ್ರೇ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿ ಫ್ಯಾನ್ಸ್​ ನಶೆಯೇರಿಸಿದ  ಭೂಮಿಕಾ!

ಸಾರಾಂಶ

25 ಲಕ್ಷ ಹಿಂಬಾಲಕರನ್ನು ಪಡೆದ ಕನ್ನಡದ ಮೊದಲ ರೀಲ್ಸ್ ಕ್ವೀನ್ ಎಂದೇ ಫೇಮಸ್​ ಆಗಿರೋ  ಭೂಮಿಕಾ ಬಸವರಾಜ್ ಸೀರೆಯುಟ್ಟು ಹಳ್ಳಿಮೇಸ್ಟ್ರೆ ಹಾಡಿಗೆ ರೀಲ್ಸ್​ ಮಾಡಿದ್ದಾರೆ.  

ಇಂದು ಕೆಲವರು ಸೋಷಿಯಲ್​ ಮೀಡಿಯಾ ಸ್ಟಾರ್​ (social media star) ಎನಿಸಿಕೊಳ್ಳುತ್ತಿದ್ದಾರೆ. ಯಾವ ನಟ-ನಟಿಯರಿಗೂ ಕಮ್ಮಿಇಲ್ಲದಂತೆ ಇವರದ್ದೇ ಪ್ರಪಂಚದಲ್ಲಿ ಲಕ್ಷಾಂತರ ಫ್ಯಾನ್ಸ್​ಗಳೂ ಹುಟ್ಟಿಕೊಳ್ಳುತ್ತಾರೆ. ಇಂಥ ಸ್ಟಾರ್​ಗಳು ಯಾವುದಾದರೂ ರೀಲ್ಸ್​, ವಿಡಿಯೋ ಹಾಕಿದರೆ ಸಾಕು, ಅದಕ್ಕೆ ನಟ-ನಟಿಯರಿಗೂ ಬರದಷ್ಟು ಲೈಕ್ಸ್​​, ಕಮೆಂಟ್ಸ್​, ವ್ಯೂಸ್​ ಬರುವುದು ಇದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಎಂದರೆ ಅವರಿಗೆ ಇರುವ ಗೌರರವೇ ಬೇರೆ. ಯೂಟ್ಯೂಬ್​ ಮೂಲಕ ಕೋಟಿಗಟ್ಟಲೆ ವ್ಯೂಸ್​ ತರುವ ಸೋಷಿಯಲ್​ ಮೀಡಿಯಾ ಸ್ಟಾರ್​ಗಳಿಗೂ ಇಂದು ಕಮ್ಮಿಯೇನಿಲ್ಲ. ಹೀಗೆ ಸಾಮಾಜಿಕ ಜಾಲತಾಣದಿಂದಲೇ ಸಕತ್​ ಫೇಮಸ್​ ಆಗಿ ಕಿರುತೆರೆ, ಹಿರಿತೆರೆ ಪ್ರವೇಶಿಸಿದವರೂ ಇದ್ದಾರೆ. ಅದೇನೇ ಇದ್ದರೂ ಏರುಗತಿಯಲ್ಲಿ ಸಾಗುತ್ತಿರುವ ಇಂದಿನ ತಂತ್ರಜ್ಞಾನದಿಂದ ರಾತ್ರೋ ರಾತ್ರಿ ಸ್ಟಾರ್​ಗಳೂ ಆಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಸೋಷಿಯಲ್​ ಮೀಡಿಯಾ ಸ್ಟಾರ್​ ಎಂದೇ ಫೇಮಸ್​ ಆಗಿರೋ ಭೂಮಿಕಾ ಬಸವರಾಜ್​.

ಚಿಕ್ಕಮಗಳೂರಿನ 22 ವರ್ಷದ  ಭೂಮಿಕಾ ಅವರಿಗೆ ಅಸಂಖ್ಯ ಫ್ಯಾನ್ಸ್​ ಇದ್ದಾರೆ. ಹೆಚ್ಚಾಗಿ ಸೀರೆಯಲ್ಲಿಯೇ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡು ಈಕೆ ಡ್ಯಾನ್ಸ್​ ಮಾಡಿದರೆ ಫ್ಯಾನ್ಸ್​ ಹುಚ್ಚೆದ್ದು ಕಮೆಂಟ್ಸ್​ ಮಾಡುವುದು ಇದೆ. ಈಚೆಗೆ ಈಕೆ,   ಫೇಸು ಟು ಫೇಸು.. ಎಂಬ ಹಿಂದಿ ಹಾಡಿಗೆ   ಡ್ಯಾನ್ ಮಾಡಿದ್ದರು. ಅದು ಸಖತ್ ವೈರಲ್ ಆಗಿತ್ತು. ಈ ರೀಲ್ಸ್​​  ಒಂದೇ ರೀಲ್  29 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವುದೂ ಭೂಮಿಕಾ ಅವರ ಹೆಗ್ಗಳಿಕೆ.

ಮೈ ಚಳಿ ಬಿಟ್ಟು ಸ್ವಾತಿ ಮುತ್ತಿನ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ 'ಹಿಟ್ಲರ್​ ಕಲ್ಯಾಣ'ದ ಅಂತರಾ

ಭೂಮಿಕಾ ಅವರ ಇನ್​ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಇದಾಗಲೇ ಎರಡೂವರೆ ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಕೆಲವು ಸ್ಟಾರ್​ ನಟ-ನಟಿಯರೂ ಇವರ ಫಾಲೋವರ್​ ಆಗಿದ್ದಾರೆ. ಅಷ್ಟೇ ಅಲ್ಲದೇ, ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಮೂಲಕ 25 ಲಕ್ಷ ಹಿಂಬಾಲಕರನ್ನು ಪಡೆದ ಕನ್ನಡದ ಮೊದಲ ರೀಲ್ಸ್ ಕ್ವೀನ್ ಎಂದೂ ಈಕೆಗೆ ಬಿರುದು ಇದೆಯಂತೆ! ಹೀಗೆ ಕನ್ನಡ, ಹಿಂದಿ  ಹಾಗೂ ತಮಿಳು ಮುಂತಾದ ಭಾಷೆಯ ಹಾಡುಗಳಿಗೆ ಈಕೆ ರೀಲ್ಸ್​ ಮಾಡುತ್ತಾರೆ. ಅವುಗಳ ಪೈಕಿ ಹೆಚ್ಚಿನವರು ಸೀರೆಯುಟ್ಟು ಸೊಂಟ ಬೆಳಕಿಸುವುದೇ ವಿಶೇಷ.  ಯೂಟ್ಯೂಬ್​ ಚಾನೆಲ್​ ಕೂಡ ಹೊಂದಿರುವ ಭೂಮಿಕಾ ಅಲ್ಲಿಯೂ ಅಪಾರ ಪ್ರಮಾಣದ ಚಂದಾದಾರನ್ನು ಹೊಂದಿದ್ದಾರೆ. ಅಲ್ಲಿ ಮೇಕಪ್​ ಟಿಪ್ಸ್​ ಮುಂತಾದವುಗಳನ್ನು ನೀಡುತ್ತಿರುತ್ತಾರೆ. 
 
ಈ ಹಿಂದೆ ಬಿಗ್​ಬಾಸ್​ (Biggboss) ಮನೆಗೂ ಈಕೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಸೋಷಿಯಲ್​ ಮೀಡಿಯಾ ಮೂಲಕ ಕ್ರೇಜ್ ಹೆಚ್ಚಿಸುವವರನ್ನು ಸಾಮಾನ್ಯವಾಗಿ ಬಿಗ್​ಬಾಸ್​ ಮನೆಯೊಳಕ್ಕೆ ಪ್ರವೇಶಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭೂಮಿಕಾ ಬಸವರಾಜ್​ ಅವರೂ ಮನೆ ಪ್ರವೇಶಿಸುತ್ತಿದ್ದಾರೆ ಎನ್ನಲಾಗಿತ್ತು. 

ರೋಚಕ ವಿಧಾನದಿಂದ ಕನ್ನಡ ಕಲಿತ ಸಾನ್ಯಾ ಅಯ್ಯರ್! ಅಜ್ಜಿಯ ಪಾಠ ವಿಧಾನ ತಿಳಿಸಿದ ನಟಿ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!