ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯ ಮುಂದೇನು ಮಾಡ್ತಾಳೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಳಾಗಿದ್ದ ಸೈಕಲನ್ನು ಭಾಗ್ಯ ರಿಪೇರಿ ಮಾಡ್ತಾಳಾ? ಸರಿಯಾದ ಟೈಂಗೆ ಊಟ ತಲುಪಿಸ್ತಾಳಾ?
ಊಟ ತೆಗೆದುಕೊಂಡು ಹೋಗ್ತಿದ್ದ ಭಾಗ್ಯಳ ಸೈಕಲ್ ಪಂಚರ್ (Bicycle puncture) ಆಗಿತ್ತು. ಭಾಗ್ಯ ಮುಂದೇನು ಮಾಡ್ತಾಳೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ಭಾಗ್ಯನ ಸಹಾಯಕ್ಕೆ ಯಾರು ಬರ್ತಾರೆ ಎನ್ನುವ ಕುತೂಹಲ ಎಲ್ಲರನ್ನು ಕೆರಳಿಸಿತ್ತು. ಭಾಗ್ಯಾ ಸಹಾಯಕ್ಕೆ ಶ್ರೇಷ್ಠಾ ಬರ್ಬಹುದು ಅಂತ ವೀಕ್ಷಕರು ಭಾವಿಸಿದ್ರು. ಆದ್ರೆ ವೀಕ್ಷಕರ ಗೆಸ್ ಉಲ್ಟಾ ಆಗಿದೆ. ಭಾಗ್ಯ, ಯಾರ ಸಹಾಯವನ್ನೂ ಪಡೆಯದೇ ತಾನೇ ಕೆಲಸ ಶುರು ಮಾಡಿದ್ದಾಳೆ. ಇಷ್ಟು ದಿನ ಏನೇನೋ ಸಾಹಸ ಮಾಡಿದ್ದ ಭಾಗ್ಯ ಈಗ ಸೈಕಲ್ ಪಂಚರ್ ಹಾಕಲು ಮುಂದಾಗಿದ್ದಾಳೆ. ಹೌದು, ಪಂಚರ್ ಅಂಗಡಿ ಮಾಲೀಕ ಹೇಳಿದಂತೆ ಸೈಕಲ್ ರಿಪೇರಿ ಮಾಡಿಕೊಂಡಿದ್ದಾಳೆ ಭಾಗ್ಯ.
ಕಲರ್ಸ್ ಕನ್ನಡ (Colors Kannada ) ದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ಈಗ ಭಾಗ್ಯ ಅಡುಗೆಯನ್ನು ಸರಿಯಾದ ಟೈಂಗೆ ತಲುಪಿಸ್ತಾಳಾ ಅನ್ನೋದೆ ದೊಡ್ಡ ಪ್ರಶ್ನೆ. ಭಾಗ್ಯ ಅಂತೂ ಇಂತೂ ಅಡುಗೆ ಮುಗಿಸಿದ್ದಾಳೆ. ನಿನ್ನೆ ಎಪಿಸೋಡ್ ನಲ್ಲಿ ಭಾಗ್ಯ, ಸೈಕಲ್ ಹತ್ತಿದ್ದನ್ನು ವೀಕ್ಷಕರು ನೋಡಿದ್ದಾರೆ. ಪ್ರೋಮೋ ಬಿಡುಗಡೆ ಆಗ್ತಿದ್ದಂತೆ, ಕಾರಿದೆಯಲ್ಲ, ಸೈಕಲ್ ಯಾಕೆ ಅಂತ ಪ್ರಶ್ನೆ ಮಾಡಿದ್ದರು. ಅದಕ್ಕೆ ಎಪಿಸೋಡ್ ನಲ್ಲಿ ಉತ್ತರ ಸಿಕ್ಕಿತ್ತು. ಟ್ರಾಫಿಕ್ ಹೆಚ್ಚಿರುವ ಕಾರಣ ಸರಿಯಾದ ಟೈಂಗೆ ಊಟ ತಲುಪಿಸೋದು ಸಾಧ್ಯವಿಲ್ಲ ಅಂತ ಭಾಗ್ಯ ಸೈಕಲ್ ತೆಗೆದುಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದಳು. ಆದ್ರೆ ಸೈಕಲ್ ಮಧ್ಯದಾರಿಯಲ್ಲೇ ಕೈ ಕೊಟ್ಟಿದೆ. ಒಂದ್ಕಡೆ ಆರ್ಡರ್ ನೀಡಿದ ವ್ಯಕ್ತಿ ಪದೇ ಪದೇ ಭಾಗ್ಯಾಗೆ ಫೋನ್ ಮಾಡ್ತಿದ್ದಾನೆ. ಇನ್ನೊಂದು ಕಡೆ ಭಾಗ್ಯಗೆ ಏನು ಮಾಡ್ಬೇಕು ಅನ್ನೋದು ಗೊತ್ತಾಗ್ತಿಲ್ಲ. ಹಾಗೋ ಹೀಗೋ ಪಂಚರ್ ಅಂಗಡಿಗೆ ಬಂದ ಭಾಗ್ಯ, ಬೇಗನೆ ಪಂಚರ್ ಹಾಕಿಕೊಡುವಂತೆ ಅಂಗಡಿಯವನನ್ನು ಕೇಳ್ತಾಳೆ. ಆದ್ರೆ ಇನ್ನೊಂದು ಕಸ್ಟಮರ್ ಇದ್ದಾರೆ, ಅವರನ್ನು ಮೊದಲು ಅಟೆಂಡ್ ಮಾಡ್ಬೇಕು, ಹದಿನೈದು ನಿಮಿಷ ಆಗುತ್ತೆ ಅಂತ ಅಂಗಡಿಯಾತ ಹೇಳ್ತಾನೆ. ಇದ್ರಿಂದ ಭಾಗ್ಯ ಟೆನ್ಷನ್ ಮತ್ತಷ್ಟು ಹೆಚ್ಚಾಗುತ್ತೆ. ಈ ಟೈಂನಲ್ಲಿ ಭಾಗ್ಯ ಪವರ್ ಫುಲ್ ನಿರ್ಧಾರಕ್ಕೆ ಬರ್ತಾಳೆ. ನಾನೇ ಪಂಚರ್ ಹಾಕಿಕೊಳ್ತೇನೆ, ಟೂಲ್ ಕೊಡಿ ಅಂತಾಳೆ. ಆಕೆ ಮಾತು ಕೇಳಿ, ಪಂಚರ್ ಶಾಪ್ ನವನು ದಂಗಾಗ್ತಾನೆ. ಅಡುಗೆ ಡಬ್ಬವನ್ನು ತೆಗೆದಿಟ್ಟ ಭಾಗ್ಯ, ಸೈಕಲ್ ಮಲಗಿಸಿ ಕೆಲಸ ಶುರು ಮಾಡಿದ್ದಾಳೆ. ಪಂಚರ್ ಹಾಕಿ, ಮತ್ತೆ ಸೈಕಲ್ ಏರಿದ್ದಾಳೆ. ಭಾಗ್ಯ ಕೆಲಸ ನೋಡಿ ಪಂಚರ್ ಅಂಗಡಿಯಾತ ಭೇಷ್ ಹೇಳಿದ್ದಾನೆ.
ನೆನಪಿನ ಶಕ್ತಿ ಕಳೆದುಕೊಂಡು ವಿಶ್ವನ ಮನೆಗೆ ಬರ್ತಾಳಾ ಜಾನು? ರೋಚಕ ಟ್ವಿಸ್ಟ್‌ಗೆ ವೀಕ್ಷಕರು ಫಿದಾ
ಅಡ್ಡಿ ನಿವಾರಿಸಲು ಭಾಗ್ಯ ಪವರ್ ಫುಲ್ ಎಫರ್ಟ್ ಅಂತ ಶೀರ್ಷಿಕೆ ಹಾಕಲಾಗಿದೆ. ಪ್ರೋಮೋ ನೋಡಿದ ವೀಕ್ಷಕರು, ಭಾಗ್ಯಾ ಕೈನಲ್ಲಿ ಇನ್ನೇನೇನು ಕೆಲಸ ಮಾಡಿಸ್ತೀರಿ ಅಂತ ಕೇಳಿದ್ದಾರೆ. ಟ್ರಾಫಿಕ್ ಏನೂ ಇರಲಿಲ್ಲ, ಭಾಗ್ಯ ಆರಾಮವಾಗಿ ಕಾರ್ ತೆಗೆದುಕೊಂಡ ಹೋಗ್ಬಹುದಿತ್ತು ಅನ್ನೋದು ಅನೇಕರ ಅಭಿಪ್ರಾಯ. ಸೈಕಲ್ ಪಂಚರ್ ಹಾಕೋದ್ರಲ್ಲೂ ಭಾಗ್ಯ ಮುಂದಿದ್ದಾಳೆ ಅನ್ನೋದನ್ನು ತೋರಿಸೋದೇ ನಿರ್ದೇಶಕರ ಗುರಿ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಭಾಗ್ಯ ಮುಂದೆ ಪಂಚರ್ ಶಾಪ್ ಹಾಕ್ಬಹುದು ಅಂತ ಕೆಲ ವೀಕ್ಷಕರು ಮುಂದಿನ ಕಥೆ ಗೆಸ್ ಮಾಡಿದ್ದಾರೆ.
ದೀಪಿಕಾ ದಾಸ್ ಹೊಸ ಲುಕ್ ನೋಡಿ ರೌಡಿ ಬೇಬಿ ಎಂದ ಪಡ್ಡೆ ಹುಡುಗ್ರು
ತನ್ವಿ ಗಲಾಟೆ ಮಧ್ಯೆ ಭಾಗ್ಯ ಧೈರ್ಯವಾಗಿ ಅಡುಗೆ ಮುಗಿಸಿದ್ದು, ಸರಿಯಾದ ಸಮಯಕ್ಕೆ ಅಡುಗೆ ತಲುಪಿಸುವ ಸಾಧ್ಯತೆ ಇದೆ. ಇತ್ತ ಶ್ರೇಷ್ಠಾ ಮೇಲೆ ತಾಂಡವ್ ಪ್ರೀತಿ ನಿಧಾನವಾಗಿ ಕಡಿಮೆ ಆಗ್ತಿದೆ. ಆಕೆ ಮಾಡೋ ಕೆಲಸವನ್ನು ತಾಂಡವ್ ಖಂಡಿಸ್ತಾ ಇದ್ದಾನೆ. ಈಗಾಗಲೇ ಕಪಾಳಮೋಕ್ಷ ಮಾಡಿಸಿಕೊಂಡಿರುವ ಶ್ರೇಷ್ಠಾ, ಶೌರ್ಯ ವಿಷ್ಯವನ್ನು ತಾಂಡವ್ ಗೆ ಹೇಳಿರಲಿಲ್ಲ. ಅದು ಗೊತ್ತಾಗಿ ಉರಿಉರಿ ಕೆಂಡವಾಗಿದ್ದ ತಾಂಡವ್, ಶ್ರೇಷ್ಠಾಳನ್ನು ಕ್ಷಮಿಸಿದ್ದಾನೆ.