ಲಾಕ್‌ಡೌನ್ ವೇಳೆ ಜೊತೆ ಜೊತೆಯಲಿ ಹೊಸ ಸಂಚಿಕೆಗಳನ್ನು ವೀಕ್ಷಿಸಿ ವೀಕ್ಷಕರು ಸಂಭ್ರಮಿಸುತ್ತಿದ್ದಾರೆ. ಆದರೆ ಎಷ್ಟು ದಿನ ಹೊಸ ಎಪಿಸೋಡ್ಸ್ ಬರುತ್ತವೆ?
ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ, ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿತ್ತು. ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಚಿತ್ರೀಕರಣ ಮಾಡಿರುವ ಎಪಿಸೋಡ್‌ಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಮನೋರಂಜಿಸಬೇಕಿದೆ. ಆದರೀಗ ವೀಕ್ಷಕರಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ.
'ರಾಜನಂದಿನಿ' ಪಾತ್ರಕ್ಕೆ ಕಾವ್ಯ ಗೌಡ ಜೊತೆ ಈ ನಟಿಯ ಪೈಫೋಟಿ; ವೀಕ್ಷಕರಿಗೆ ಯಾರು ಬೇಕು?
ಕಳೆದ ವರ್ಷ ಲಾಕ್‌ಡೌನ್ ಆದಾಗಲೂ ಹಳೆ ಎಪಿಸೋಡ್‌ಗಳನ್ನೇ ಮರು ಪ್ರಸಾರ ಮಾಡಲಾಗಿತ್ತು. ಈ ಸಲವೂ ಎರಡು ಸಲ ಲಾಕ್‌ಡೌನ್ ಮಾಡಿದರೂ, ಕಿರುತೆರೆ ಧಾರಾವಾಹಿಗಳು ಹೊಸ ಎಪಿಸೋಡ್ ಪ್ರಸಾರ ಮಾಡುತ್ತಿವೆ ಹೇಗೆ ಎಂದು. ಅದರಲ್ಲೂ ಧಾರಾವಾಹಿ ಈಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವತಃ ಅನು ಸಿರಿಮನೆ ಆರ್ಯನ ಆದಷ್ಟು ಬೇಗ ಮದುವೆ ಆಗಬೇಕು ಎಂದು ನಿರ್ಧರಿಸಿದ್ದಾಳೆ. ಕುತೂಹಲ ಹೆಚ್ಚಾಗುತ್ತಿದ್ದಂತೆ ಅರ್ಧಕ್ಕೆ ನಿಂತ ಬೇಸರವಾಗುತ್ತದೆ ಎನ್ನುತ್ತಿದ್ದಾರೆ.
'ಈ ಲಾಕ್‌ಡೌನ್ ಮುಗಿಯುವವರೆಗೆ ಸಾಕಾಗುವಷ್ಟು ಸಂಚಿಕೆಗಳ ಬ್ಯಾಂಕಿಂಗ್ ನಮ್ಮಲ್ಲಿವೆ. ಲಾಕ್‌ಡೌನ್ ಮುಂದುವರಿದರೆ ಎಪಿಸೋಡ್‌ಗಳ ಬ್ಯಾಂಕಿಂಗ್ ಇಲ್ಲ. ವಾಹಿನಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಬಹುಶಃ ಮರುಪ್ರಸಾರ ಮಾಡಬಹುದು. ಆದರೆ ಧಾರಾವಾಹಿ ಒಂದು ತಿಂಗಳಿಗೆ ಸಾಕಾಗುಷ್ಟು ಬ್ಯಾಂಕಿಂಗ್ ಮಾಡುವುದು ಸಾಧ್ಯವಿಲ್ಲ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡೋಕೆ ಸಾಧ್ಯವೋ ಅಷ್ಟು ಮಾತ್ರ ಬರವಣಿಗೆ ಆಗಬೇಕು. ಅವರಿಗೂ ಪ್ರೆಷರ್ ಇರುತ್ತದೆ. ಕೆಲವೊಮ್ಮೆ ಕೊನೆ ಸಮಯದಲ್ಲಿ ಡೈಲಾಗ್ ಕಳುಹಿಸುತ್ತಾರೆ. ಇದರಲ್ಲಿ ಅರ್ಜೆನ್ಸಿ ಮಾಡಲು ಆಗೋಲ್ಲ. ಮಾಡಿದರೆ ಕ್ವಾಲಿಟಿ ನಿರ್ವಹಣೆ ಮಾಡೋಕೆ ಆಗಲ್ಲ,' ಎಂದು ನಟ ಅನಿರುದ್ಧ ಹೇಳಿದ್ದಾರೆ.