
ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಪದೇ ಪದೇ ಕೇಳಿ ಬರುವ ಒಂದು ಪದ ಅಂದ್ರೆ ಗುಂಪುಗಾರಿಕೆ. ಸೀಸನ್ 8ರಲ್ಲೂ ಅದೇ ಆಗಿದ್ದು. ಸಾಮಾನ್ಯವಾಗಿ ಮನೆಯಿಂದ ಹೊರ ಬಂದರ ನಂತರ ಎಲ್ಲರೂ ಒಂದಾಗುತ್ತಾರೆ, ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿ ಇರುತ್ತಾರೆ. ಈಗಲೂ ಅದೇ ನಡೆಯುತ್ತಿರುವುದು ಆದರೆ ಈ ಮೂವರಿಗೆ ಮಾತ್ರ ನೋ ಎಂಟ್ರಿ ಅಂದಿದ್ದಾರಂತೆ ಸದಸ್ಯರು.
ಬಿಗ್‌ಬಾಸ್ ನನ್ನ ಮುಖವಾಡ ಕಳಚಿದೆ ! - ಪ್ರಶಾಂತ್ ಸಂಬರಗಿ
ಹೌದು! ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಿದ್ದಂತೆ ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ಮುಂದುವರೆದ ಕಾರಣ ಹೆಚ್ಚಾಗಿ ಖಾಸಗಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿಲ್ಲ. ಬದಲಿಗೆ ಕಲರ್ಸ್ ಕನ್ನಡ ಫೇಸ್‌ಬುಕ್ ಖಾತೆಯಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ಜನರ ಜೊತೆ ಮಾತನಾಡಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕಬ್ಬು ಬೆಳೆಯೋದು ಹೇಗೆಂದು ಹೇಳಿಕೊಟ್ಟ ಸಂಬರಗಿ; ಬಿದ್ದು ಬಿದ್ದು ನಕ್ಕಿದ ಸ್ಪರ್ಧಿಗಳು!
ಹೀಗೆ ಒಂದು ದಿನ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಲೈವ್‌ನಲ್ಲಿ ಮಾತನಾಡುವಾಗ ಒಂದು ಸತ್ಯ ತಿಳಿದು ಬಂದಿದೆ. 'ನಮ್ಮನ್ನು ಇಲ್ಲಿ ಒಂದು ಗ್ಯಾಂಗ್ ಮಾಡಿ ಹಾಕಿದ್ದಾರೆ' ಎಂದು ಪ್ರಶಾಂತ್ ಹೇಳುತ್ತಾರೆ. 'ಯಾವ ಗ್ಯಾಂಗ್' ಎಂದು ಚಕ್ರವರ್ತಿ ಕೇಳಿದಾಗ 'ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ನಾನು ನೀನು ಇಲ್ಲ. ಇದೇ ಗುಂಪುಗಾರಿಕೆ' ಎಂದು ಪ್ರಶಾಂತ್ ಉತ್ತರ ನೀಡಿದ್ದಾರೆ. ತಕ್ಷಣವೇ ಲೈವ್‌ನಲ್ಲಿದ್ದ ಪ್ರಿಯಾಂಕಾ 'ನಾನೂ ಆ ಗ್ರೂಪ್‌ನಲ್ಲಿ ಇಲ್ಲ. ನಾನು ಯಾವಾಗಲೂ ಸಿಂಗಲ್' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.