ಅಗ್ನಿಸಾಕ್ಷಿಗಿಂತ ಬಿಗ್ ಬಾಸ್‌ನಲ್ಲಿ ತುಂಬಾ ಇಷ್ಟ ಅದ್ರಿ ವೈಷ್ಣವಿ ಎಂದ ನೆಟ್ಟಿಗರು. ಬರ್ತಿದೆ ಸಾವಿರಾರು ಪ್ರಪೋಸಲ್‌ಗಳು...
ಬಿಗ್ ಬಾಸ್ ಅತಿ ಹೆಚ್ಚು ಜನಪ್ರಿಯತೆ ಪಡೆದ ಸ್ಪರ್ಧಿ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ವೈಷ್ಣವಿ ತಮ್ಮ ಮುಗ್ಧತೆ, ಜಾಣತನ ಮತ್ತು ತಾಳ್ಮೆಯಿಂದ ಇನ್ನೂ ಹೆಚ್ಚು ವೀಕ್ಷಕರ ಪ್ರೀತಿ ಗೆದ್ದಿದ್ದಾರೆ.
ವೈಷ್ಣವಿ ಗಂಡ ಒಂದೇ ದಿನಕ್ಕೆ ಓಡಿ ಹೋಗುತ್ತಾನೆ; ಶುಭಾ ಟಾಂಗ್‌ಗೆ ಕ್ಲಾರಿಟಿ ಕೊಟ್ಟ ಸನ್ನಿಧಿ!
ಹಲವು ವರ್ಷಗಳಿಂದ ವೈಷ್ಣವಿಗೆ ಮದುವೆ ಪ್ರಪೋಸಲ್‌ಗಳು ಬರುತ್ತಿರುವುದು ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವು ದಿನಗಳ ಹಿಂದೆ ಅಣ್ಣನ ಮದುವೆ ಆದ ಬಳಿಕ ಎಲ್ಲರಿಗೂ ವೈಷ್ಣವಿ ಮದುವೆ ಯಾವಾಗ ಎಂಬ ಪ್ರಶ್ನೆ ಕಾಡಿದೆ. ಬಿಗ್ ಬಾಸ್ ಮನೆಯಲ್ಲಿ ಮದುವೆ ಬಗ್ಗೆ ವೈಷ್ಣವಿ ಅಭಿಪ್ರಾಯ ತಿಳಿದುಕೊಂಡ ಮೇಲಂತೂ ಪ್ರಪೋಸಲ್‌ಗಳು ಜಾಸ್ತಿ ಆಗಿವೆ.
'ನನಗೆ ಮದುವೆ ಅಂದ್ರೆ ತುಂಬಾ ಇಷ್ಟ. ನನಗೆ ಅದರ ಬಗ್ಗೆ ಕೆಲವೊಂದು ಕನಸಿಗೆ ಹಾಗೂ ನಿರೀಕ್ಷೆ ಇದೆ. ಆದರೆ ಬಿಗ್ ಬಾಸ್ ಮನೆಯೊಳಗೆ ನಾನು ಮದುವೆ ಬಗ್ಗೆ ಅಷ್ಟೊಂದು ಮಾತನಾಡಿರುವುದು ಈಗ ಗೊತ್ತಾಗುತ್ತಿದೆ. ಇಮೇಲ್ ಹಾಗೂ ಇನ್‌ಸ್ಟಾಗ್ರಾಂ ಚೆಕ್ ಮಾಡಿದರೆ ಬರೀ ಮದುವೆ ಪ್ರಪೋಸಲ್‌ಗಳು ಕಾಣಿಸುತ್ತದೆ. ಸರಿಯಾದ ಸಮಯಕ್ಕೆ ನಾನು ಮದುವೆ ಆಗುತ್ತೇನೆ'ಎಂದಿದ್ದಾರೆ ವೈಷ್ಣವಿ.
ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್ ಬಾಸ್' ನೋಡ್ತಿದ್ದಾರೆ ಹೆಣ್ಣುಮಕ್ಕಳು?
ಸದ್ಯ ವೈಷ್ಣವಿ ಅಭಿನಯದ 'ಬಹುಕೃತ ವೇಶ್ಮ' ಒಂದು ಸಾಂಗ್ ಹೊರತುಪಡಿಸಿ ಬಹುತೇಕ ಚಿತ್ರೀಕರಣ ಮುಗಿಸಿದೆ. ಬಿಬಿ ಮನೆಯಿಂದ ಹೊರ ಬಂದು ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳುತ್ತಿರುವ ವೈಷ್ಣವಿ ಕೊರೋನಾ ಸೋಂಕಿನ ಎರಡನೇ ಅಲೆ ಬಗ್ಗೆ ತಿಳಿದುಕೊಂಡು ಗಾಬರಿ ಆಗಿದ್ದಾರೆ.