ಸಂಜು ಬಸಯ್ಯನನ್ನು ಕೊಂದು ಸಾಯಿಸಿಬಿಡು, ಉಪಯೋಗವಿಲ್ಲ: ಜನರು ಮಾತಿಗೆ ಕಣ್ಣೀರಿಟ್ಟ ತಾಯಿ

By Vaishnavi Chandrashekar  |  First Published Sep 22, 2023, 4:35 PM IST

ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಕುಟುಂಬಸ್ಥರು ಭಾವುಕ. ಅಕ್ಕ ತಮ್ಮ ನಡುವೆ ಇದ್ದ ಮನಸ್ಥಾಪ  ಈಗಿಲ್ಲ...... 


ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಸಂಜು ಬದಯ್ಯ ಹೆಸರು ಮಾಡಿದ್ದರು. ಅಲ್ಲಿಂದ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಸರು ಮತ್ತು ಹಣ ಸಂಪಾದನೆ ಮಾಡಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಪ್ರೀತಿಸಿದ ಹುಡುಗಿ ಪಲ್ಲವಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ನಡುವೆ ಜನರಿಂದ ಎದುರಿಸಿದ ಅವಮಾನಗಳನ್ನು ನೆನಪಿಸಿಕೊಂಡು ಕುಟುಂಬಸ್ಥರು ಭಾವುಕರಾಗಿದ್ದಾರೆ.

ತಾಯಿ ಮಾತು: 

Tap to resize

Latest Videos

'ಸಂಜು ಗಿಡ್ಡ ಇದ್ದಾನೆ ಅಂತ ಸಾಕುವಾಗ ನಮಗೆ ಬಹಳ ತೊಂದರೆ ಆಗಿತ್ತು.ಜನರ ಮಾತುಗಳನ್ನು ಕೇಳಿ ನಮಗೆ ದುಖಃ ಆಗುತ್ತಿತ್ತು. ಕಾರ್ಯಕ್ರಮ ಕೊಡುವುದಕ್ಕೆ ಶುರು ಮಾಡಿದ ಮೇಲೆ ನಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಆಯ್ತು. ಕುಳ್ಳಗಿದ್ದರೂ ನಮಗೆ ಹೆಮ್ಮೆ ತಂದ ಅಂತ ಖುಷಿ ಆಯ್ತು. ಮಾತನಾಡುತ್ತಿದ್ದ ಜನರ ಬಾಯಿಗೆ ಈಗ ಹೊಡೆದ ಹಾಗೆ ಆಗಿದೆ' ಎಂದು ಸಂಜು ಬಸಯ್ಯ ತಾಯಿ ಕಣ್ಣೀರಿಟ್ಟಿದ್ದಾರೆ.

ಅಕಿ ಸುಖ ಕಂಡಾಳ, ಚಟಕ್ಕೆ ಪ್ರೀತಿ ಪ್ರೇಮ ಮಾಡ್ಬೇಡಿ: ಪತ್ನಿ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಸಂಜು ಬಸಯ್ಯ

'ಸಂಜುನ ಯಾಕೆ ಹೆತ್ತೆ? ಗಿಡ್ಡ ಯಾಕೆ ಬೇಕು? ಕೊಂದು ಸಾಯಿಸಿಬಿಡು ಇವನಿಂದ ಏನು ಉಪಯೋಗ ಇದೆ? ನಿಮಗೆ ಏನು ತಂದು ಹಾಕುತ್ತಾನೆಂದು ಇವನನ್ನು ಹೆತ್ತೆ ದೊಡ್ಡವನಿದ್ದಾನಲ್ಲ ಅವನಿಂದ ಜೀವನ ಮಾಡಿಕೊಳ್ಳಿ ಇವನ್ನು ಕೊಂಡು ಹಾಕು ಅಂತಿದ್ದರು ಜನರು. ಇವತ್ತು ಒಂದು ಹಂತಕ್ಕೆ ಬಂದಿದ್ದೇವೆ ಇವತ್ತು ಹಾಗೆಲ್ಲಾ ಮಾತನಾಡಿದ ಜನರೇ ನಮಗೆ ಕೈ ಮುಗಿದು ಹೇಗಿದ್ದೀರಾ ಅಪ್ಪಾಜಿ ಎಂದು ಕೇಳ್ತಾರೆ' ಎಂದು ಸಂಜು ಹೇಳಿದ್ದರು.

'ಇಂತಹ ಗಂಡನನ್ನು ಪಡೆಯುವುದಕ್ಕೆ ಖುಷಿಯಾಗುತ್ತಿದೆ. ಬಹಳ ಪುಣ್ಯ ಮಾಡಿದ್ದೀವಿ. ಹೊರಗಿನ ಜನರಿಗೆ ಗೊತ್ತಿಲ್ಲ ಆದರೆ ಊರಿನಲ್ಲಿ ಇವರಿಗೆ ಇರುವ ಮರ್ಯಾದೆ ಯಾವ ನನ್ಮಗನಿಗೂ ಇಲ್ಲ ಅವರಿಗೆ ಅಷ್ಟು ಮರ್ಯಾದೆ ಇದೆ ಅದು ನನಗೆ ಗೊತ್ತಿದೆ' ಎಂದು ಪತ್ನಿ ಪಲ್ಲವಿ ಹೇಳಿದ್ದಾರೆ.

'ನಾನು ಕಲೆ ಕ್ಷೇತ್ರಕ್ಕೆ ಕಾಲಿಟ್ಟಗ ಅನೇಕರು ನನ್ನ ತಂದೆಗೂ ಅವಮಾನ ಮಾಡಿದ್ದರು ನಿಮ್ಮ ಮಗ ಗಿಡ್ಡ ಇದ್ದಾನೆ ಅವನಿಂದ ನೀನು ದುಡಿಮೆ ಮಾಡಿಸಿ ಹಣ ತಿನ್ನುತ್ತಿರುವೆ ಎಂದು. ನಾನು 7ನೇ ವರ್ಷದಿಂದ ಆರ್ಕೇಸ್ಟ್ರ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿ ದುಡಿಯಲು ಅರಂಭಿಸಿದೆ. ಅಲ್ಲಿಂದ ಅವಮಾನ ಆರಂಭವಾಗಿತ್ತು. ಪಲ್ಲವಿಯನ್ನು ಪ್ರೀತಿಸುತ್ತಿರುವಾಗ ಅನೇಕರು ಸೂಪರ್ ಜೋಡಿ ಹಾಗೆ ಹೀಗೆ ಎನ್ನುತ್ತಿದ್ದರು ಆದರೆ ಹಿಂದೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವಳು ಹಾಗೆ ಹೀಗೆ ಸುಖ ಕಂಡಾಳ ಎಂದು ಎಲ್ಲ ರೀತಿ ಮಾತನಾಡುತ್ತಿದ್ದರು. ಆಕೆ ನನ್ನ ಅರ್ಥ ಮಾಡಿಕೊಂಡಿದ್ದಾರೆ ನಾನು ಆಕೆ ಅರ್ಥ ಮಾಡಿಕೊಂಡಿದ್ದೀನಿ ಪ್ರೀತಿ ಪ್ರೇಮಾ ಚಟಕ್ಕೆ  ಮಾಡಬೇಡಿ ಮನಸ್ಸಿನಿಂದ ಪ್ರೀತಿ ಮಾಡಿ' ಎಂದು ಸಂಜು ಮಾತನಾಡಿದ್ದಾರೆ. 

click me!