ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್​ ಕೊನೆಗೂ ಬಂತು: ಫ್ಯಾನ್ಸ್​ ಫುಲ್​ ಖುಷ್​!

By Suvarna News  |  First Published Nov 25, 2023, 4:38 PM IST

ಬಿಗ್​ಬಾಸ್​  ಮನೆಯಲ್ಲಿಯೇ ಗರ್ಭಿಣಿಯಾದೆ ಎಂದಿದ್ದ ನಟಿ ಅಂಕಿತಾ ಲೋಖಂಡೆಯವರ ಪ್ರೆಗ್ನೆನ್ಸಿ ರಿಪೋರ್ಟ್​ ಕೊನೆಗೂ ಹೊರಬಿದ್ದಿದೆ. ಅದರಲ್ಲಿ ಇರುವುದು ಏನು? 
 


 ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಸಕತ್​ ಸುದ್ದಿ ಮಾಡುತ್ತಿದೆ. ಇದಕ್ಕೆ  ಕಾರಣ, ಇದರ ಸ್ಪರ್ಧಿ  ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದಾರೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್​ ಆಗಿತ್ತು.   

ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿ ವಾರ ಕಳೆಯುತ್ತಾ ಬಂದಿದೆ.  ತಾವು  ಬಹುಶಃ  ಗರ್ಭಿಣಿ ಇರಬಹುದು ಎಂದು ಅಂಕಿತಾ ಹೇಳಿದ್ದ ವಿಡಿಯೋ ವೈರಲ್​ ಆಗಿತ್ತು.  ತಮಗೆ  ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ  ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವೈದ್ಯಕೀಯ ವರದಿಗೆ ಮೂತ್ರವನ್ನು ಕಳುಹಿಸಿರುವುದಾಗಿ ಹೇಳಿ ಹಲವು ದಿನಗಳು ಕಳೆದರೂ ಈ ಬಗ್ಗೆ ಬಿಗ್​ಬಾಸ್​ ಮತ್ತು ನಟಿ ಇಬ್ಬರೂ ಮೌನವಾಗಿದ್ದಾರೆ. ಇವೆಲ್ಲವೂ ಪ್ರಚಾರದ ಗಿಮಿಕ್​ ಎಂದು  ಪ್ರೇಕ್ಷಕರು ಸಕತ್​ ಟ್ರೋಲ್​ ಮಾಡುತ್ತಿದ್ದರು. ಇದರ ನಡುವೆಯೇ ಇದೀಗ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದೆ ಎನ್ನಲಾಗಿದ್ದು, ಅಂಕಿತಾ ಗರ್ಭಿಣಿ ಅಲ್ಲ ಎಂದು ವರದಿ ಹೇಳಿದೆ. ಅಂದರೆ ನೆಗೆಟಿವ್​ ರಿಪೋರ್ಟ್​ ಬಂದಿದೆ.  

Tap to resize

Latest Videos

ಬಿಗ್​ಬಾಸ್​ ಮನೆಯಲ್ಲಿ ಮಿತಿ ಮೀರ್ತಿದೆ ಹುಚ್ಚಾಟ: ಗಂಡ-ಹೆಂಡತಿ ಒಟ್ಟಿಗೆ ಮಲಗಲು ಬಿಡದ ಸ್ಪರ್ಧಿ!

ಅಂಕಿತಾ ಗರ್ಭಿಣಿ ಅಲ್ಲ ಎಂದು ತಿಳಿಯುತ್ತಲೇ ಅವರ  ಫ್ಯಾನ್ಸ್​ ತುಂಬಾ ಖುಷಿಯಾಗಿದ್ದಾರೆ.  ಇದಕ್ಕೆ ಕಾರಣ, ಒಂದು ವೇಳೆ ಅವರು ಗರ್ಭಿಣಿ ಆಗಿದ್ದರೆ ಮನೆಯಿಂದ ಹೊರಕ್ಕೆ ಹೋಗಬೇಕಾಗಿತ್ತು. ಅವರು ಬಿಗ್​ಬಾಸ್​ನಲ್ಲಿ ಮುಂದುವರೆಯದಿದ್ದರೆ ತಮಗೆ ಬೇಸರ ಆಗುತ್ತಿತ್ತು ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಅಂಕಿತಾ ಮತ್ತು ಅವರ ಪತಿ ವಿಕ್ಕಿ ಬಿಗ್​ಬಾಸ್​ ಮನೆಯಲ್ಲಿ ಕಿತ್ತಾಡುತ್ತಿರುತ್ತಾರೆ. ಅವರ ಹುಚ್ಚಾಟ ಮಿತಿಮೀರಿದೆ. ಮೊನ್ನೆಯಷ್ಟೇ ಆಹಾರದ ವಿಷಯದಲ್ಲಿ ಅಂಕಿತಾ ಅವರ ಕುತ್ತಿಗೆಯನ್ನು ವಿಕ್ಕಿ ಹಿಡಿದಿದ್ದರೆ, ಪತಿಗೇ ಚಪ್ಪಲಿಯಿಂದ ಹೊಡೆದಿದ್ದರು ಅಂಕಿತಾ. ಕೊನೆಗೆ ಇದು ತಮಾಷೆಗಾಗಿ ಎನ್ನಲಾಗಿತ್ತು. ಈ ಪರಿಯ ಹುಚ್ಚಾಟ ಬಿಗ್​ಬಾಸ್​ ಮನೆಯಲ್ಲಿ ಇಲ್ಲದಿದ್ದರೆ, ಅದನ್ನು ನೋಡಿ ಏನು ಪ್ರಯೋಜನ ಎನ್ನುವುದು ಅಭಿಮಾನಿಗಳಿಗೆ ಆತಂಕವಾಗಿತ್ತು. ಇದೇ ಕಾರಣಕ್ಕೆ ಅಂಕಿತಾ ಗರ್ಭಿಣಿ ಅಲ್ಲ ಎಂಬ ಸುದ್ದಿ ತಿಳಿಯುತ್ತಲೇ ಖುಷಿಯಾಗಿದ್ದಾರೆ. 
 
 ಗರ್ಭಿಣಿ ಅಲ್ಲ ಅಂದ ಮೇಲೆ ಹುಳಿ ತಿನ್ನುವ ಆಸೆಯಾಗಿತ್ತು, ಪೀರಿಯಡ್ಸ್​ ಮಿಸ್​ ಆಗಿದೆ ಎಂದೆಲ್ಲಾ ಅಂಕಿತಾ ಏಕೆ ಹೇಳಿದ್ದರು ಎನ್ನುವುದು ತಿಳಿದು ಬಂದಿಲ್ಲ. ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಭಾವನೆಗಳು ಏರುಪೇರಾಗುವುದು, ಹುಳಿ ತಿನ್ನುವ ಆಸೆಯಾಗುವುದು, ಪೀರಿಯಡ್ಸ್​ ಮಿಸ್​ ಆಗುವುದು ಎಲ್ಲವೂ ಸಹಜ. ಇವೆಲ್ಲವೂ ತಮಗೆ ಆಗುತ್ತಿದೆ ಎಂದು ಅಂಕಿತಾ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿದರಾ ಎನ್ನುತ್ತಿದ್ದಾರೆ ವೀಕ್ಷಕರು. ಹೇಳಿ ಕೇಳಿ ಇದು ಬಿಗ್​ಬಾಸ್​. ನಾಟಕ, ಅಸಭ್ಯ ವರ್ತನೆ, ಗಲಾಟೆ ಎಲ್ಲವೂ ಮಾಮೂಲಾಗಿರುವ ಕಾರಣ, ಅಂಕಿತಾ ಅವರೂ ಹೀಗೆಯೇ ಮಾಡಿದ್ದಾರೆ ಎಂದು ಕೆಲವರು ಭಾವಿಸುತ್ತಿದ್ದರೆ, ಬಿಗ್​ಬಾಸ್​ನಲ್ಲಿ ಎಲ್ಲವೂ ಸ್ಕ್ರಿಪ್ಟೆಡ್​ ಎನ್ನುವುದು ಗೊತ್ತಿಲ್ಲವೆ? ಪ್ರಚಾರಕ್ಕಾಗಿ ಸ್ಪರ್ಧಿಗಳಿಂದ ಹೀಗೆಲ್ಲಾ ಮಾಡಿಸಲಾಗುತ್ತದೆ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರೆಗ್ನೆನ್ಸಿ ಡ್ರಾಮಾ ಇಲ್ಲಿಗೆ ಮುಗಿದಿದೆ. 

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿ ಸುದ್ದಿ ಬೆನ್ನಲ್ಲೇ ದಂಪತಿ ಮಾರಾಮಾರಿ: ಪತಿ ಕುತ್ತಿಗೆ ಹಿಡಿದ್ರೆ, ಪತ್ನಿ ಚಪ್ಪಲಿ ಎಸೆದಳು!

click me!