ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾಳ ಪಾತ್ರ ಸೀರಿಯಲ್ ಆರಂಭದಿಂದಲೂ ಒಂದೇ ರೀತಿಯ ಡ್ರೆಸ್ ಮತ್ತು ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೆ ಬೇಸರ ತರಿಸಿದೆ. ಇದಲ್ಲದೆ, ಪಾತ್ರದಲ್ಲಿಯೂ ಹೆಚ್ಚಿನ ಬದಲಾವಣೆಗಳಿಲ್ಲದೆ ಏಕತಾನತೆಯುಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬ್ರಹ್ಮಗಂಟು ಸೀರಿಯಲ್‌ನಲ್ಲಿ ನಿಧಾನಕ್ಕೆ ಹೊಸ ಬದಲಾವಣೆ ಕಂಡೂ ಕಾಣದಂತೆ ಶುರುವಾಗ್ತಿದೆ. ಚಿನ್ನದಂಥಾ ಮನಸ್ಸಿದ್ದರೂ ಹೊರ ನೋಟಕ್ಕೆ ಅಂದವಾಗಿ ಕಾಣದ ದೀಪಾ ಕಂಡರೆ ಯಾರಿಗೂ ಇಷ್ಟವಿಲ್ಲ. ಅವಳ ರೂಪದ ಕಾರಣಕ್ಕೆ ಅವಳು ಸಮಾಜದಿಂದ ಕುಟುಂಬದಿಂದ ಹಿಂಸೆ, ನೋವು ಅನುಭವಿಸುತ್ತಲೇ ಇರುತ್ತಾಳೆ. ಇದೆಲ್ಲ ಈ ಸೀರಿಯಲ್ ನಾಯಕಿಯ ಕಥೆ. ಆದರೆ ಸೀರಿಯಲ್ ಶುರುವಾದಾಗಿಂದ ಈವರೆಗೂ ಈ ದೀಪಾಳನ್ನ ಒಂದೇ ಬಟ್ಟೆಯಲ್ಲಿ ನೋಡಿ ನೋಡಿ ವೀಕ್ಷಕರಿಗೆ ತಲೆ ಬಿಟ್ಟು ಹಿಡಿದಿದೆ. ಅದೇ ಡ್ರೆಸ್, ಅದೇ ಹೇರ್‌ಸ್ಟೈಲ್. ಒಂಚೂರೂ ವ್ಯತ್ಯಾಸ ಇಲ್ಲ. ಸೀರಿಯಲ್ ಶುರುವಾದಾಗಿಂದ ಇಲ್ಲೀವರೆಗೆ ಮದುವೆ, ಪ್ರೆಸ್‌ಮೀಟ್ ಸಂದರ್ಭ ಬಿಟ್ಟರೆ ಒಂದು ಸೀನ್‌ನಲ್ಲೂ ಈ ಪಾತ್ರದ ಡ್ರೆಸ್ ಬದಲಾಗಿಲ್ಲ. ಅದರ ಜೊತೆಗೆ ಈ ಪಾತ್ರ ಮೊದಲಿನಿಂದ ಇಲ್ಲೀವರೆಗೆ ಬದಲಾವಣೆಯೇ ಇಲ್ಲದೆ ಮುಂದುವರೀತಿದೆ. ಅಫ್‌ಕೋರ್ಸ್ ಪರಿಸ್ಥಿತಿಗಳಲ್ಲಿ ಕೊಂಚ ಬದಲಾವಣೆ ಆಗಿ ಒಂಚೂರು ಆಚೀಚೆ ಆದರೂ ಈ ಪಾತ್ರಗಳ ಆಟಿಟ್ಯೂಡ್‌ನಲ್ಲಿ ಸಣ್ಣ ಚೇಂಜ್ ಸಹ ಇಲ್ಲ. ಇದೆಲ್ಲ ವೀಕ್ಷಕರನ್ನು ಈ ಸೀರಿಯಲ್‌ನಿಂದ ಹಿಂತೆಗೆಯುವ ಹಾಗೆ ಮಾಡಿದೆ.
ಇದು ಈ ಸೀರಿಯಲ್‌ನ ಕಥೆಯೇ ಕೊಂಚ ಬೋರಿಂಗ್. ಮಧ್ಯಮ ವರ್ಗದ ಕುಟುಂಬ. ಸುಂದರವಾಗಿರುವ ಅಕ್ಕ, ಕುರೂಪಿ ತಂಗಿ. ಅವಳ ಕುರೂಪದ ಕಾರಣಕ್ಕೆ ಎಲ್ಲೆಲ್ಲೂ ಅವಳಿಗೆ ಅವಮಾನ. ಆದರೆ ಆ ತಂಗಿಯ ಮನಸೋ ದೇವತೆಯಂಥಾದ್ದು. ಅಕ್ಕ ಮಾಡಿದ ತಪ್ಪುಗಳನ್ನೆಲ್ಲ ತನ್ನ ತಲೆಮೇಲೆ ಹಾಕಿಕೊಳ್ಳುತ್ತ ಅಮ್ಮನಿಂದಲೇ ಪೆಟ್ಟು ತಿನ್ನುತ್ತಿರುತ್ತಾಳೆ ತಂಗಿ. ಚೆಂದುಳ್ಳಿ ಚೆಲುವಿ ಅಕ್ಕನ ಮೇಲೆ ಯಾರ ಕಣ್ಣೂ ಬೀಳಬಾರದೆಂದು, ಆಕೆಗೆ ದೃಷ್ಟಿಬೊಟ್ಟಾಗಿ ತಂಗಿ ಅಲ್ಲಿ ಇದ್ದೇ ಇರ್ತಾಳೆ.
ಲಕ್ಷ್ಮೀ ಬಾರಮ್ಮದ ಭೂಮಿ ಗಗನ್ ಜೊತೆ ಲವ್ವಿ ಡವ್ವಿ, ವೈಷ್ಣವ್‌ನ ಮರೆತೇ ಬಿಟ್ರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್
ಊರ ದೇವರ ಜಾತ್ರೆಯಲ್ಲೂ ನನಗೆ ಏನೂ ಬೇಡ, ನನ್ನಕ್ಕನಿಗೇ ಎಲ್ಲವನ್ನೂ ಕೊಟ್ಟು ಬಿಡು ತಾಯಿ ಅಂತ ಬೇಡಿಕೊಳ್ಳುವ ಗುಣದವಳು ತಂಗಿ. ಹೀಗೆ ಅಕ್ಕನಿಗಾಗಿ ಮಿಡಿಯುವ, ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತಂಗಿಯ ಕತೆಯೇ ಈ ಬ್ರಹ್ಮಗಂಟು. ಸದ್ಯ ಅಕ್ಕನನ್ನು ಮದುವೆ ಆಗಬೇಕಿದ್ದ ಸುರ ಸುಂದರಾಂಗ, ಮಹಾಶ್ರೀಮಂತ ಹುಡುಗನ ಜೊತೆ ಇವಳಿಗೆ ಮದುವೆಯಾಗಿದೆ.
ಗಂಡನ ಮನೆಯಲ್ಲೂ ಎಲ್ಲರೂ ಇವಳನ್ನೇ ಬೈಯ್ಯುವವರು. ಗಂಡನಿಗಾಗಲೀ, ಮನೆಯವರಿಗಾಗಲೀ ಇವಳು ಕಾಲಕಸಕ್ಕಿಂತ ಕಡೆ. ಸದ್ಯ ಚಿರಾಗ್ ಅತ್ತಿಗೆ ಸೌಂದರ್ಯ ಮನೆ ಕೆಲಸದವಳಂತಿದ್ದ ದೀಪಾಗೆ ಸೊಸೆಯಂತೆ ಇರುವ ಅವಕಾಶ ಕೊಟ್ಟಿದ್ದಾಳೆ. ಸೌಂದರ್ಯ ಕೊಟ್ಟಿರುವ ಅವಕಾಶವನ್ನು ಹೇಗೆ ನಿಭಾಯಿಸಬೇಕು ಎಂಬುದು ಅರ್ಥವಾಗದೇ ಎಲ್ಲಿ ಸೋತು ಹೋಗುತ್ತೇನೋ ಎಂಬುದು ದೀಪಾಳ ಆತಂಕ. ಆ ಮನೆಯ ಸೊಸೆಯಾಗಿ ಇರಲಾಗದೇ, ಮನೆ ಬಿಟ್ಟು ಹೋಗಬೇಕಾಗಿ ಬರುತ್ತದೋ ಎಂದು ಆತಂಕಗೊಂಡಿದ್ದಾಳೆ. ದೀಪಾಳ ಆತಂಕ ಕಂಡು ಅರ್ಚನಾ ಧೈರ್ಯ ಹೇಳಿದ್ದಾಳೆ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಹೆದರದೇ, ಎಲ್ಲಾ ಕೆಲಸದಲ್ಲೂ ಭಾಗಿಯಾಗು. ಎಲ್ಲರಿಗೂ ನೀನು ಈ ಮನೆಗೆ ಅಗತ್ಯವಾಗಿರುವ ಹಾಗೂ ತಕ್ಕುನಾದ ಸೊಸೆ ಎಂದು ತೋರಿಸು ಎಂದು ಬುದ್ಧಿ ಹೇಳುತ್ತಾಳೆ. ದೀಪಾಳಿಗೆ ಅರ್ಚನಾ ಮಾತುಗಳನ್ನು ಕೇಳಿ ಸ್ವಲ್ಪ ಖುಷಿಯಾಗುತ್ತದೆ.
ಭಾಗ್ಯಲಕ್ಷ್ಮೀ ಸೀರಿಯಲ್ ನ ತಾಂಡವ್ ಗೆ ರಿಯಲ್‌ನಲ್ಲಿ ಲೇಡೀಸ್ ಫ್ಯಾನ್ಸ್ ಜಾಸ್ತಿ ಯಾಕೆ ಗೊತ್ತಾ?
ದಿಯಾ ಪಾಲಕ್ಕಾಲ್ ಎಂಬ ಈ ಹಿಂದೆ ಬಾಲನಟಿಯಾಗಿದ್ದ ಹುಡುಗಿ ಈ ದೀಪಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೋಡೋದಕ್ಕೆ ಪರಮ ಸುಂದರಿಯಾಗಿರೋ ಈಕೆ ಸೀರಿಯಲ್‌ಗಾಗಿ ಕುರೂಪಿಯಾಗಿದ್ದಾರೆ. ಸೊಗಸಾಗಿ ಆಕ್ಟ್ ಮಾಡೋ ಈ ಹುಡುಗಿ ಸದ್ಯ ಬ್ರಹ್ಮಗಂಟಿನ ದೀಪಾ ಆಗಿಯೇ ಫೇಮಸ್ ಆಗ್ತಿದ್ದಾರೆ. ಆದರೆ ಸದ್ಯಕ್ಕೆ ಈಕೆಯ ಬಟ್ಟೆಗೊಂದು ಗತಿ ಕಾಣಿಸಬೇಕಿದೆ.