ಅಣ್ಣಯ್ಯ ನೀಡಿದ ವಾರ್ನ್‌ಗೆ ಉಘೇ ಉಘೇ ಎಂದ ಲೇಡಿಸ್; ಶಿವು ಜೊತೆ ಪಾರುಗೆ ಬಹುಪರಾಕ್!

Published : Jul 01, 2025, 11:46 AM IST
Annayya

ಸಾರಾಂಶ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣ ತನ್ನ ತಂಗಿಯ ಸಂಸಾರಕ್ಕೆ ಕಂಟಕವಾಗುತ್ತಿರುವ ಪಿಂಕಿಗೆ ಎಚ್ಚರಿಕೆ ನೀಡಿದ್ದಾನೆ. ಸೀನನ ವರ್ತನೆಯ ಬದಲಾವಣೆಯನ್ನು ಗಮನಿಸಿದ ಪಾರು, ತಮ್ಮನಿಗೆ ಕಿವಿಮಾತು ಹೇಳಿದ್ದಾಳೆ. ಶಿವಣ್ಣನ ಕಾಳಜಿಗೆ ಮಹಿಳಾ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಂದು ಬಿಡುಗಡೆಯಾದ ಪ್ರೋಮೋ ನೋಡಿದ ಮಹಿಳೆಯರು, ಅಣ್ಣ ಅಂದ್ರೆ ಹೀಗಿರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಡ್ರಾಪ್ ಮಾಡಲು ಹೋದಾಗ ಶಿವು ನೀಡಿರುವ ಶಾಕ್‌ನ್ನು ಅರಗಿಸಿಕೊಳ್ಳಲು ಪಿಂಕಿಗೆ ವರ್ಷಗಳೇ ಬೇಕು. ಜಿಮ್ ಸೀನನ ಪ್ರೇಯಸಿಯೇ ಈ ಪಿಂಕಿ. ತನ್ನ ಸೋದರಿ ರಶ್ಮಿ ಸಂಸಾರಕ್ಕೆ ಪಿಂಕಿ ಕಂಟಕ ಆಗ್ತಾಳೆ ಅನ್ನೋದು ಶಿವಣ್ಣನ ಗಮನಕ್ಕೆ ಬಂದಿದೆ. ಹೀಗಾಗಿ ಸ್ವಲ್ಪವೂ ತಡಮಾಡದ ಶಿವಣ್ಣ ನೇರವಾಗಿ ಪಿಂಕಿಯನ್ನು ಎಚ್ಚರಿಸಿದ್ದಾನೆ. ಶಿವಣ್ಣನ ಮಾತು ಕೇಳಿ ಪಿಂಕಿ ಗಢ ಗಢ ನಡುಗಿದ್ದಾಳೆ.

ಶಿವಣ್ಣನ ಮನೆಯಲ್ಲಿ ರಾಣಿ ಮತ್ತು ಮನು ನಿಶ್ಚಿತಾರ್ಥ ನಡೆಯುತ್ತಿತ್ತು. ಶಿವು-ಪಾರ್ವತಿ ಮತ್ತು ಜಿಮ್ ಸೀನ-ಗುಂಡಮ್ಮ ಜೊತೆಯಾಗಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಸೀನನ ತಾಯಿ ಲೀಲಾ ಜೊತೆ ಪಿಂಕಿ ಬರುತ್ತಾರೆ. ಪಿಂಕಿಯನ್ನು ನೋಡುತ್ತಿದ್ದಂತೆ ಸೀನ ಶಾಕ್ ಆಗಿ ಡ್ಯಾನ್ಸ್ ಮಾಡೋದನ್ನೇ ಮರೆಯುತ್ತಾನೆ. ಇದರಿಂದ ಸೀನ ಮತ್ತು ಗುಂಡಮ್ಮ ಕೆಳಗೆ ಬೀಳುತ್ತಾರೆ. ಪಿಂಕಿ ಬರುತ್ತಿದ್ದಂತೆ ಸೀನನ ವರ್ತನೆಯಲ್ಲಾದ ಬದಲಾವಣೆ ಪಾರು ಗಮನಕ್ಕೂ ಬರುತ್ತದೆ.

ಸೀನನಿಗೆ ಪಾರು ಕಿವಿಮಾತು

ಸೀನನನ್ನು ಮನೆಯಿಂದ ಹೊರಗೆ ಕರೆದುಕೊಂಡ ಬಂದ ಪಾರು ತಮ್ಮನಿಗೆ ಕಿವಿಮಾತು ಹೇಳುತ್ತಾಳೆ. ಗುಂಡಮ್ಮನ ಜೊತೆ ನಿನ್ನ ಮದುವೆ ಹೇಗಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ನಾನು ಶಿವು ಮಾವನನ್ನು ಮದುವೆಯಾದಾಗ ನನ್ನ ಜೀವನವೇ ನಾಶ ಆಯ್ತು ಅಂದುಕೊಂಡಿದ್ದೆ. ಡಿವೋರ್ಸ್ ತೆಗೆದುಕೊಳ್ಳೋವರೆಗೂ ನಾನು ಮತ್ತು ಶಿವು ಮಾವ ಹೋಗಿದ್ದೇವೆ. ಇದೀಗ ನಾವಿಬ್ಬರು ಚೆನ್ನಾಗಿದ್ದೇವೆ. ಶಿವು ಮಾವನಂತಹ ಸಂಗಾತಿ ಸಿಕ್ಕಿರೋದು ನನ್ನ ಅದೃಷ್ಟ. ಎಲ್ಲರ ಜೀವನದಲ್ಲಿಯೂ ಹಳೆಯ ಘಟನೆಗಳಿರುತ್ತವೆ. ಎಲ್ಲವನ್ನು ಮರೆತು ಮುಂದೆ ಸಾಗಬೇಕು ಎಂದು ಪಾರು ಹೇಳಿದ್ದಾಳೆ.

ಪಿಂಕಿಗೆ ಶಿವಣ್ಣ ಎಚ್ಚರಿಕೆ

ಶಿವಣ್ಣನ ಮನೆಯಿಂದ ಹೊರಡುವ ವೇಳೆ ಕತ್ತಲಾಗಿರುತ್ತದೆ. ಪಿಂಕಿಯನ್ನು ಮನೆಗೆ ಬಿಟ್ಟು ಬರುವಂತೆ ಸೀನನಿಗೆ ಆತನ ತಾಯಿ ಹೇಳುತ್ತಾಳೆ. ಆದ್ರೆ ತಾಯಿ ಹೇಳಿದ ಕೆಲಸವನ್ನು ಗೋಡಂಬಿಗೆ ಸೀನ ಹೇಳುತ್ತಾನೆ. ದಯವಿಟ್ಟು ಪಿಂಕಿಯನ್ನು ಮನೆಗೆ ತಲುಪಿಸುವಂತೆ ಸೀನ ಮನವಿ ಮಾಡಿಕೊಳ್ಳುತ್ತಾಳೆ. ಗೋಡಂಬಿ ಸಹ ಪಿಂಕಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿರುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಶಿವು, ನಾನೇ ಹೋಗಿ ಬಿಟ್ಟು ಬರುವೆ ಎಂದು ಪಿಂಕಿಯನ್ನು ಕರೆದುಕೊಂಡು ಹೋಗುತ್ತಾನೆ.

ಪಿಂಕಿ ಮನೆ ಬರುತ್ತಿದ್ದಂತೆ ಶಿವಣ್ಣ, ಈ ಮಾರಿಗುಡಿ ಶಿವುಗೆ ಎಲ್ಲಾ ವಿಷಯವೂ ಗೊತ್ತಿರುತ್ತದೆ. ಇರುವೆಗಳೆಲ್ಲಾ ಸಕ್ಕರೆಯನ್ನು ಹುಡುಕಿಕೊಂಡು ಹೋಗುತ್ತವೆ. ಸದ್ಯಕ್ಕೆ ನಮ್ಮ ಮನೆಯಲ್ಲಿರೋ ಸಕ್ಕರೆ ಅಂದ್ರೆ ಅದು ನಮ್ಮ ಜಿಮ್ ಸೀನ. ಮಾಕಾಳವ್ವನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಮ್ಮ ತಂಗಿಯರ ಜೀವನದಲ್ಲಿ ಏನಾದ್ರು ಬದಲಾವಣೆ ಆದ್ರೆ ನಾನು ಸುಮ್ಮಿನರಲ್ಲ. ಸೀನ ಮತ್ತು ಗುಂಡಮ್ಮ ಇಬ್ಬರು ಚೆನ್ನಾಗಿ ಬದುಕಬೇಕು. ಆ ವ್ಯವಸ್ಥೆಯನ್ನು ನೀನೇ ಮಾಡಬೇಕು ಎಂದು ಹೇಳಿದ್ದಾನೆ. ಶಿವಣ್ಣನ ಮಾತು ಕೇಳಿ ಪಿಂಕಿ ಫುಲ್ ಶಾಕ್ ಆಗಿದ್ದಾಳೆ.

ತಂಗಿಯರ ಮೇಲಿನ ಶಿವಣ್ಣ ಪ್ರೀತಿಗೆ ವೀಕ್ಷಕರು ಹೇಳಿದ್ದೇನು?

ಇದಪ್ಪ ಮನೆ ಹೆಣ್ಣುಮಕ್ಕಳುನಾ ಕಾಪಾಡೋದು ಅಂದ್ರೆ. ಸೀನ ನಮ್ಮ ಪಾರು ಹೇಳಿದ್ದ ಮಾತನ್ನ ಕೇಳುತ್ತಿದ್ದಾನೆ. ಖಂಡಿತ ಇವನು ಬದಲಾಗೇ ಬದಲಾಗುತ್ತಾನೆ. ನಮ್ಮ ಗುಂಡಮ್ಮಂಗೇ ಇರೋ ಒಳ್ಳೆ ಮನಸೀಗೆ ಇವನು ಅವ್ಳ ಪ್ರೀತಿಮಾಡೋಕ್ಕೆ ಶುರು ಮಾಡೇ ಮಾಡುತ್ತಾನೆ. ಒಮ್ಮೊಮ್ಮೆ ನಿರ್ದೇಶಕ ಧಾರಾವಾಹಿ ಕಥೆಯನ್ನು ಚಂದದಲ್ಲಿ ತೆಗೆದುಕೊಂಡು ಹೋಗುತ್ತಾರೆ. ತಂಗಿ ಬಾಯ್ ಬಿಟ್ ಹೇಳಿಲ್ಲ ಅಂದ್ರು ಅಣ್ಣ ಆದವರಿಗೆ ಎಲ್ಲಾ ಅರ್ಥ ಆಗುತ್ತೆ. ಸೀನ ನೀನು ಬಂಗಾರ. ಇಂತಹ ಒಬ್ಬ ಅಣ್ಣ ಇರಬೇಕು ಎಂದು ಮಹಿಳಾ ವೀಕ್ಷಕರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?