
ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಪ್ರಸಾರ ಆಗುವಾಗಲೇ ಕಿಚ್ಚ ಸುದೀಪ್ ಅವರು ಮುಂದೆ ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದರು. ಆದರೆ ಈ ಬಾರಿಯೂ ಅವರೇ ಬಿಗ್ ಬಾಸ್ ನಿರೂಪಣೆ ಮಾಡ್ತಾರಂತೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಟೀಂ ಜೊತೆ ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಬಿಗ್ ಬಾಸ್ ಶೋ ಒಪ್ಪಲು ಕಾರಣ ಏನು?
ನಾನು ಬಿಗ್ ಬಾಸ್ ಶೋ ಮಾಡೋಕೆ ಆಗಲ್ಲ ಎಂದಿದ್ದಕ್ಕೂ ಕಾರಣ ಇತ್ತು. ಬಿಗ್‌ಬಾಸ್‌ಶೋ ಈಗ ಮಾಡ್ತೀನಿ ಎನ್ನೋದಿಕ್ಕೂ ಕಾರಣ ಇದೆ. ಪ್ರತಿಯೊಬ್ಬರೂ ಕೂಡ ನೀವು ಬಿಗ್‌ಬಾಸ್‌ನಿರೂಪಣೆ ಮಾಡಬೇಕು ಅಂತ ಹೇಳಿದರು. ಈ ಪ್ರೀತಿಗೆ ಒಪ್ಪಿ ನಾನು ಬಿಗ್‌ಬಾಸ್‌ಶೋ ಮಾಡಲು ಒಪ್ಪಿದ್ದೇನೆ.
ನಿಮ್ಮ ಮನೆಯಲ್ಲಿ ತಾಯಿ ಕೂಡ ಬಿಗ್ ಬಾಸ್ ಫ್ಯಾನ್ ಆಗಿದ್ರು
ಹೌದು, ಪ್ರತಿ ಸೀಸನ್ ನೋಡಿ ಖುಷಿಪಡುತ್ತಿದ್ದರು. ನನ್ನ ತಾಯಿ ನನಗೆ ಯಾವುದೇ ಸಲಹೆ ನೀಡದೆ, ನನ್ನನ್ನು ಇಷ್ಟಪಡುತ್ತಿದ್ದರು. ನನ್ನ ತಾಯಿಯೇ ನನ್ನ ಮೊದಲ ಅಭಿಮಾನಿ. ಬಿಗ್ ಭಾಸ್ ಕನ್ನಡ ಸೀಸನ್ 11ರ ಶೂಟಿಂಗ್ ನಡೆಯುವಾಗಲೇ ತಾಯಿ ಅನಾರೋಗ್ಯ ಆಗಿತ್ತು. ಇದರಿಂದ ಮಾನಸಿಕವಾಗಿ ನಾನು ಸಮತೋಲನ ಇರಲಿಲ್ಲ. ತಾಯಿ ಬಿಗ್ ಬಾಸ್ ನೋಡ್ತಿಲ್ಲ ಅಂತ ನನಗೆ ಆಸಕ್ತಿಯೇ ಹೋಯ್ತು, ಆಮೇಲೆ
ವಿವಾದಿತ ಸ್ಪರ್ಧಿಗಳು ಇರೋ ಬಗ್ಗೆ ನೀವು ಏನು ಹೇಳ್ತೀರಿ?
ಯಾಕೆ ಯಾವ ಸ್ಪರ್ಧಿಯನ್ನು ಮನೆಗೆ ಕಳಿಸ್ತೀರಿ ಎನ್ನೋ ಬಗ್ಗೆ ಕ್ಲಾರಿಟಿ ಇಟ್ಟುಕೊಳ್ಳಬೇಕು. ಎಲ್ಲರೂ ಕಾನೂನಾತ್ಮಕವಾಗಿ ಹೊರಗಡೆ ಇದ್ದಾರೆ ಅಂದ್ರೆ ಅವರಿಗೆ ಒಳಗಡೆ ಹೋಗುವ ಅರ್ಹತೆ ಕೂಡ ಇರುತ್ತದೆ. ಎಲ್ಲ ರೀತಿಯ ಕ್ಯಾರೆಕ್ಟರ್‌ಗಳು ಇರಬೇಕು. ಒಂದೇ ವ್ಯಕ್ತಿತ್ವದ ಎಲ್ಲರೂ ಹೋದರೆ ನನಗೂ ಬೇಜಾರು ಆಗುತ್ತದೆ. ಸ್ಪರ್ಧಿಗಳ ಬಗ್ಗೆ ನಾನು ಯಾವುದೇ ಒತ್ತಡ ಹೇರೋದಿಲ್ಲ. ಹೊರಗಡೆ ಚೆನ್ನಾಗಿರೋರು ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡಬಹುದು.
ಸಂಭಾವನೆ ಜಾಸ್ತಿ ಆಗಿದೆಯಾ?
ಇದು ನನ್ನ ವೈಯಕ್ತಿಕ. ನನ್ನ ರೇಟ್ ಇಷ್ಟೇ ಅಂತ ಫಿಕ್ಸ್ ಮಾಡಿಕೊಳ್ಳೋದಿಲ್ಲ.
ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ಅವರನ್ನು ಒಪ್ಪಿಸೋಕೆ ಎಷ್ಟು ಸಮಯ ತಗೊಂಡ್ರು?
ಹನ್ನೆರಡು ಮೀಟಿಂಗ್ ಬಳಿಕ ನಾನು ಒಪ್ಪಿಕೊಂಡೆ. ಆರಂಭದ ಮೂರು ತಿಂಗಳುಗಳ ಕಾಲ ದಯವಿಟ್ಟು ನನ್ನ ಬಳಿ ಈ ವಿಷಯವಾಗಿ ಬರಬೇಡಿ ಅಂತ ಕಲರ್ಸ್ ಟೀಂಗೆ ಹೇಳಿದ್ದೆ.
ಸಿನಿಮಾ, ಬಿಗ್ ಬಾಸ್ ಹೇಗೆ ಬ್ಯಾಲೆನ್ಸ್ ಮಾಡ್ತೀರಿ.
ಇದಕ್ಕೆ ಯಾವುದೇ ಆಪ್ಶನ್ ಇಲ್ಲ. ಪಾಂಡಿಚೇರಿ, ಗೋವಾ ಎಂದು ಸಿನಿಮಾ ಶೂಟಿಂಗ್ ಇರುತ್ತದೆ. ಹೀಗಾಗಿ ನನಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಬಿಗ್ ಬಾಸ್ ವೀಕೆಂಡ್‌ಗೆ ಬಂದು ಶೂಟಿಂಗ್ ಮಾಡಲೇಬೇಕಿದೆ.
ನಿಮ್ಮ ರಿಪ್ಲೇಸ್‌ಮೆಂಟ್ ಆಗಿಲ್ಲ, ಇದು ಪ್ರಯೋಜನವೇ? ದುಷ್ಪ್ರಯೋಜನವೇ?
ರಿಪ್ಲೇಸ್‌ಮೆಂಟ್ ಬಗ್ಗೆ ಯೋಚನೆ ಮಾಡಿಲ್ಲ.
ಆರ್ಥಿಕವಾಗಿ ಸಿನಿಮಾ ಮಾರ್ಕೆಟ್, ಬಿಗ್ ಬಾಸ್ ಮಾರ್ಕೆಟ್ ಬಗ್ಗೆ ಹೇಳಿ
ದುಡ್ಡಿನ ಬಗ್ಗೆ ಯೋಚನೆ ಮಾಡೋದಿಲ್ಲ.
ಸ್ಪರ್ಧಿಗಳ ಬಗ್ಗೆ ಮಾನದಂಡ ಇದೆಯೇ? ಈ ಹಿಂದಿನ ಸ್ಪರ್ಧಿಗಳು ಕಾಂಟ್ರವರ್ಸಿ ಮಾಡಿಕೊಂಡಿದ್ದರು.
ಬಿಗ್ ಬಾಸ್ ಮನೆಯೊಳಗಡೆ ಹೋದಮೇಲೆ ಸ್ಪರ್ಧಿಗಳು ಹೇಗೆ ವರ್ತಿಸ್ತಾರೆ ಅಂತ ಹೇಳೋಕೆ ಆಗೋದಿಲ್ಲ. ವಿವಿಧ ರೀತಿಯ ವ್ಯಕ್ತಿತ್ವ ಅಲ್ಲಿ ಇರಬೇಕಾಗುತ್ತದೆ.
ನೀವು ಬಿಗ್ ಬಾಸ್ ಶೋಗೆ ಬರೋಕೆ ಏನಾದರೂ ಸಲಹೆ ನೀಡಿದ್ದೀರಾ?
ನನಗೆ ಕಲರ್ಸ್ ಕನ್ನಡ ವಾಹಿನಿಯಿಂದ ಯಾವುದೇ ಸಮಸ್ಯೆ ಬರಲಿಲ್ಲ. ಆದರೆ ಮೇಲಿನ ಅಧಿಕಾರಿಗಳಿಂದ ಕನ್ನಡ ಬಿಗ್ ಬಾಸ್ ಶೋಗೆ, ಕನ್ನಡಕ್ಕೆ ಸರಿಯಾದ ಪ್ರಾಮುಖ್ಯತೆ ಕಾಣಿಸಿರಲಿಲ್ಲ. ಹೀಗಾಗಿ ನಾನು ಈ ಶೋ ನಡೆಸಿ ಅಂತ ಹಿಂದೆ ಸರಿದೆ. ನಮ್ಮ ಸ್ಪರ್ಧಿಗಳು, ನಮ್ಮ ತಾಂತ್ರಿಕ ವರ್ಗಕ್ಕೆ, ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ನಾನು ಹೇಳಿದ್ದೆ. ನಮಗೆ ಏನೇ ರೇಟಿಂಗ್ ಬಂದರೂ ಕೂಡ ಅದಕ್ಕೆ ಕನ್ನಡಿಗರೇ ಕಾರಣ.
ಕಾಸ್ಟ್ಯೂಮ್ ಬಗ್ಗೆ ಹೇಳಿ
ನಾನು ಆರಂಭದಲ್ಲಿ ಕಾಸ್ಟ್ಯೂಮ್ ಬಗ್ಗೆ ಯೋಚನೆ ಮಾಡಿರಲಿಲ್ಲ. ಆಮೇಲೆ ಜನರು ಈ ಕಾಸ್ಟ್ಯೂಮ್ ನೋಡಿ ಇಷ್ಟಪಟ್ಟರು. ನನ್ನ ತಾಯಿ ಬಿಗ್ ಬಾಸ್ ಶೋ ನೋಡೋಕೆ ಇಲ್ಲ ಅಂತ ಬೇಸರ ಆಯ್ತು. ಆಮೇಲೆ ನಾನು ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸಿದ್ದೆ. ಆದರೆ ಟೀಂ ಮಾತ್ರ ಕಾಸ್ಟ್ಯೂಮ್ ಬದಲಾಯಿಸಿ ಅಂತ ಹೇಳುತ್ತಲಿದ್ರು. ಮನೆಯಲ್ಲಿಯೂ ಕೂಡ ಅಕ್ಕಂದಿರು, ಪ್ರಿಯಾ ಎಲ್ಲರೂ ಬಿಗ್ ಬಾಸ್ ಶೋವನ್ನು ಅಮ್ಮ ಇಷ್ಟಪಟ್ಟಿದ್ದರು. ಅವರಿಗೆ ಇಷ್ಟ ಆಗುವ ಕೆಲಸ ಮಾಡಿ ಅಂತ ಹೇಳಿದರು. ಈಗ ಬಿಗ್ ಬಾಸ್ ಶೋ ನಿರೂಪಣೆ ಮಾಡ್ತಿರೋದಿಕ್ಕೆ ಮನೆಯಲ್ಲಿ ಎಲ್ಲರಿಗೂ ತುಂಬ ಖುಷಿಯಿದೆ.
ಮುಂದಿನ ಎಷ್ಟು ಸೀಸನ್ ನಿರೂಪಣೆ ಮಾಡ್ತೀರಾ?
ಒಟ್ಟೂ ನಾಲ್ಕು ಸೀಸನ್ ನಿರೂಪಣೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದ್ದೇನೆ.
ನಿಮ್ಮ ಪ್ರಕಾರ ಯಾರು ಸ್ಪರ್ಧಿಗಳು ಇರಬೇಕು?
ಚಕ್ರವರ್ತಿ ಚಂದ್ರಚೂಡ್, ಶಾರದಾ ( ಹಿರಿಯ ಪತ್ರಕರ್ತೆ ) ಸ್ಪರ್ಧಿಗಳಾಗಬೇಕು ( ತಮಾಷೆಯಿಂದ )
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.