ಅಣ್ಣಯ್ಯ ಸೀರಿಯಲ್ : ಡಾಕ್ಟರ್‌ ಪ್ರೇಮಿಯನ್ನು ಪರಿಚಯಿಸಿಯೇ ಬಿಟ್ಟಳು ಪಾರು, ತ್ಯಾಗರಾಜ ಆಗ್ತಾನ ಶಿವಣ್ಣ!

Published : Sep 11, 2024, 01:29 PM ISTUpdated : Sep 11, 2024, 01:56 PM IST
ಅಣ್ಣಯ್ಯ ಸೀರಿಯಲ್ :  ಡಾಕ್ಟರ್‌ ಪ್ರೇಮಿಯನ್ನು ಪರಿಚಯಿಸಿಯೇ ಬಿಟ್ಟಳು ಪಾರು, ತ್ಯಾಗರಾಜ ಆಗ್ತಾನ ಶಿವಣ್ಣ!

ಸಾರಾಂಶ

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಣ್ಣಯ್ಯದಲ್ಲಿ ಶಿವಣ್ಣನಿಗೆ ಪಾರು ಆಘಾತಕಾರಿ ಸುದ್ದಿ ನೀಡಿದ್ದಾಳೆ. ಶಿವಣ್ಣನ ಪ್ರೀತಿಯನ್ನು ನಿರಾಕರಿಸಿ ಬೇರೆಯವರನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾಳೆ.

ಜೀ ಕನ್ನಡದ ಜನಪ್ರಿಯ ಸೀರಿಯಲ್ 'ಅಣ್ಣಯ್ಯ'. ಇದು ಅಣ್ಣ ತಂಗಿಯರ ಬಾಂಧವ್ಯವನ್ನು ಹೇಳುವ ಸೀರಿಯಲ್‌. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಸೀರಿಯಲ್‌ನಲ್ಲಿ ಆಕಸ್ಮಿಕ ತಿರುವು ಬಂದಿದೆ. ಪಾರು ಜೊತೆ ಪ್ರೀತಿಯಲ್ಲಿ ಬಿದ್ದಿರುವ ಶಿವಣ್ಣನಿಗೆ ಭಲೇ ಆಘಾತವಾಗಿದೆ. ಯಾವತ್ತೂ ಇತರರ ಕಷ್ಟಕ್ಕೆ ಸ್ಪಂದಿಸುವ ಶಿವಣ್ಣ ಇದೀಗ ಮತ್ತೆ ತ್ಯಾಗರಾಜನಾಗಬೇಕಿದೆ. ಏಕೆಂದರೆ ಅವನು ಪ್ರೀತಿಸುವ ಹುಡುಗಿ ಪಾರು ಅವನಿಗೆ ಉಲ್ಟಾ ಹೊಡೆದಿದ್ದಾಳೆ. ತನ್ನ ಲೈಫ್‌ ಪಾರ್ಟನರ್‌ ಅನ್ನು ಪರಿಚಯಿಸುವ ಮೂಲಕ ಶಿವಣ್ಣನಿಗೆ ಬಹುದೊಡ್ಡ ಶಾಕ್ ನೀಡಿದ್ದಾಳೆ.

ಇದಕ್ಕೂ ಮೊದಲು ತನ್ನ ತಂಗಿ ರಮ್ಯಾ ದೊಡ್ಡೋಳಾದ ಶಾಸ್ತ್ರವನ್ನು ಅಣ್ಣಯ್ಯ ತುಂಬಾ ಸಡಗರ ಹಾಗೂ ಸಂಭ್ರಮದಿಂದ ಮಾಡಿದ್ದಾನೆ. ಆದರೆ ರಮ್ಯಾ ಅವನ ಸ್ವಂತ ತಂಗಿ ಅಲ್ಲ ಎಂಬ ವಿಷಯವನ್ನು ಗೌಡರು ಪುಟ್ಟ ತಂಗಿ ರಮ್ಯಾಗೆ ತಿಳಿಸಲು ಹೋಗಿದ್ದರು. ಆಗ ಶಿವ ಕಾಡಿಬೇಡಿ ಮಾವನನ್ನು ತಡೆದಿದ್ದಾನೆ. ಸತ್ಯ ಹೇಳಬೇಕು ಎಂದುಕೊಂಡರೂ ಕೊನೆಗೆ ಅವನ ಮಾತನ್ನು ಕೇಳಿ ಮಾವ ಬೇಕು ಎಂದೇ ಸುಮ್ಮನಾಗಿದ್ದಾನೆ. ಅದಾದ ನಂತರ ತುಂಬಾ ಅಲಂಕಾರ ಮಾಡಿಕೊಂಡು ತಲೆ ಕೂದಲನ್ನು 10 ಬಾರಿ ಬಾಚಿಕೊಂಡು, ತಂಗಿಯರ ಸೆಂಟ್ ಹಾಕಿಕೊಂಡು, ಶಿವು ಫುಲ್ ರೆಡಿಯಾಗಿದ್ದಾನೆ. ಇವನು ಯಾಕೆ ಅಷ್ಟೊಂದು ರೆಡಿಯಾಗಿದ್ದಾನೆ? ಎಂದು ತಂಗಿಯರಿಗೆಲ್ಲ ಆಶ್ಚರ್ಯ ಆಗಿದೆ.

 Puttakkana makkalu: ಸಹನಾ ಮುಟ್ಟಲು ಬಂದವನಿಗೆ ಬಿತ್ತು ಗೂಸಾ! ಸೂಪರ್ ಹೀರೋ ರೇಂಜಲ್ಲಿ ಬಿಲ್ಡಪ್ ಕೊಟ್ಟ ಕಾಳಿ

ಇನ್ನೊಂದೆಡೆ ಶಿವಣ್ಣನ ಅತ್ತೆ ಅವನ ಮಾವನ ಬಳಿ, 'ಪಾರ್ವತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇವೆ. ನಾವು ಹರಕೆ ಹೊತ್ತಿದ್ದೆವು. ಅವಳ ಎಂಗೇಜ್ಮೆಂಟ್ ಸರಾಗವಾಗಲಿ ಎಂದು ಅದು ಈಗ ನೆರವೇರಿದೆ ಹಾಗಾಗಿ ನಾವು ಹೋಗಿಬರುತ್ತೇವೆ ನೀವು ಒಪ್ಪಿಗೆ ಕೊಡಬೇಕು' ಎಂದು ಕೇಳುತ್ತಾರೆ. ಆಗ ಮಾವಯ್ಯ ಆಯ್ತು ಹೋಗಿ ಬನ್ನಿ ಎಂದು ಹೇಳುತ್ತಾರೆ. ಹಾಗೆ ಸುಳ್ಳು ಹೇಳಿಕೊಂಡು ಪಾರ್ವತಿಯನ್ನ ಅವರು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿಂದ ಶಿವು ಅವಳನ್ನು ಮೆಡಿಕಲ್ ಕ್ಯಾಂಪ್ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ತುಂಬಾ ಎಮರ್ಜೆನ್ಸಿ ಇರುತ್ತದೆ. ಒಂದು ಮಹಿಳೆ ಅವಳಿಗೆ ಪ್ರಸವ ವೇದನೆ ಆರಂಭವಾಗಿರುತ್ತದೆ. ಆದರೆ ಆ ಜಾಗಕ್ಕೆ ಬಂದ ಬೇರೆಯವರು ಈ ಜಾಗವನ್ನು ಕೂಡಲೇ ಖಾಲಿ ಮಾಡಬೇಕು ಇದು ನಮ್ಮ ಜಾಗ ಎಂದು ದಬ್ಬಾಳಿಕೆ ಮಾಡುತ್ತಾರೆ.

ಆಗ ಶಿವು ಅವರನ್ನೆಲ್ಲ ಹೊಡೆದು ಹೆರಿಗೆ ಆಗುವಷ್ಟು ಸಮಯ ಹೇಗೋ ಆ ಜಾಗವನ್ನು ಸಂರಕ್ಷಿಸುತ್ತಾನೆ. ಅದಾದ ನಂತರ ಪಾರ್ವತಿ ಅವನಿಗೆ ಧನ್ಯವಾದ ತಿಳಿಸುತ್ತಾಳೆ. ನಿನಗೊಂದು ಸರ್ಪ್ರೈಸ್ ಇದೆ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಆಗ ಕಾರಿನಿಂದ ಯಾರೋ ಒಬ್ಬ ವ್ಯಕ್ತಿ ಇಳಿದಿದ್ದಾನೆ.

ಮತ್ತೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕಾರ್ತಿಕ್ ಮಹೇಶ್… ಈ ಬಾರಿ ಸ್ಪರ್ಧಿಯಾಗಿ ಅಲ್ಲ, ನಿರೂಪಕನಾಗಿ ಎಂಟ್ರಿ

ಆತನ ಬಳಿಗೆ ಓಡಿದ ಪಾರು ಶಿವಣ್ಣನಿಗೆ ಆಘಾತವಾಗುವ ಸುದ್ದಿ ಹೇಳಿದ್ದಾಳೆ. 'ನಿಂಗೊಂದು ಸರ್ಪೈಸ್ ಇದೆ, ಬಾ ನನ್ನ ಜೊತೆ' ಅಂತ ಶಿವಣ್ಣನಿಗೆ ಹೇಳುತ್ತಾ, 'ಇವರು ಸಿದ್ಧಾರ್ಥ್. ನಾನು ಬಹಳ ಇಷ್ಟಪಟ್ಟು ಮದುವೆ ಆಗಬೇಕು ಅಂದುಕೊಂಡಿರುವ ಹುಡುಗ' ಎಂಬ ಎದೆ ಒಡೆಯುವ ಸುದ್ದಿ ಹೇಳುತ್ತಾಳೆ. ಇದನ್ನು ಶಿವಣ್ಣ ಹೇಗೆ ಅರಗಿಸಿಕೊಳ್ತಾನೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!