
Gym Seena And Gundamma Marriage: ಕೊನೆಗೂ ಅಣ್ಣಯ್ಯ ತನ್ನ ಮೂವರ ತಂಗಿ ಒಬ್ಬಳ ಮದುವೆ ಮಾಡಿದ್ದಾನೆ. ರೋಚಕ ತಿರುವಿನಲ್ಲಿ ಗುಂಡಮ್ಮ ರಶ್ಮಿ ಮದುವೆ ಆಕೆಯ ಬದ್ಧವೈರಿ ಜಿಮ್ ಸೀನನೊಂದಿಗೆ ಆಗಿದೆ. ಮಾದಪ್ಪ ತೆಗೆದುಕೊಂಡ ನಿರ್ಧಾರದಿಂದ ಜಿಮ್ ಸೀನ ಮತ್ತು ರಶ್ಮಿ ಮದುವೆಯಾಗಿದ್ದಾರೆ. ಶಿವು ಕೊಟ್ಟ ವರದಕ್ಷಿಣೆ ಹಣ ಕಳೆದುಕೊಂಡ ಎಂಬ ಕಾರಣದಿಂದ ಕೋಪಗೊಂಡ ಮಾದಪ್ಪ ಈ ಮದುವೆ ಮಾಡಿಸಿದ್ದಾನೆ. ಆದ್ರೆ ಮದುವೆಯಾದ ಸೀನ, ರಶ್ಮಿಗೂ ಸೂತ್ರದ ಗೊಂಬೆಯಂತೆ ಹೊಸ ಜೀವನಕ್ಕೆ ಕಾಲಿಟಿದ್ದಾರೆ. ಮತ್ತೊಂದು ಜಿಮ್ ಸೀನನ ತಾಯಿ ಪದ್ಮಾಗೂ ಈ ಮದುವೆ ಇಷ್ಟವಿಲ್ಲ. ಗಂಡನ ಮುಂದೆ ಏನು ಮಾತನಾಡದೇ ಅಸಹಾಯಕಳಾಗಿರುವ ಪದ್ಮಾ, ತನ್ನ ಕೋಪವನ್ನೆಲ್ಲಾ ಸೊಸೆ ಮೇಲೆ ಹಾಕಲು ಆರಂಭಿಸಿದ್ದಾಳೆ.
ಹೌದು, ವರದಕ್ಷಿಣೆಯಿಂದಾಗಿ ಮದುವೆ ನಿಂತಿದ್ದಕ್ಕೆ ಅಣ್ಣ ಶಿವು ಹೇಳಿದಂತೆ ಬಾಲ್ಯದ ಗೆಳೆಯ ಜಿಮ್ ಸೀನನನ್ನೇ ಮದುವೆಯಾಗಿದ್ದಾಳೆ. ಸೀನ ತಾಳಿ ಕಟ್ಟುವಾಗಲೂ ರಶ್ಮಿ ಕಣ್ಣೀರು ಹಾಕಿದ್ದಳು. ಇನ್ನುಳಿದ ಕುಟುಂಬಸ್ಥರು ಸಂತೋಷದಿಂದ ಅಕ್ಷತೆ ಹಾಕಿದ್ದರು. ಆದ್ರೆ ಮದುವೆ ನಿಲ್ಲಲು ಶಿವು ತಾಯಿಯೇ ಕಾರಣ ಎಂದು ಯಾರಿಗೂ ಗೊತ್ತಿಲ್ಲ. ವೀರಭದ್ರನ ಮುಂದೆ ಬಂದಿರುವ ಶಿವು ತಾಯಿ ಮಗಳ ಜೀವನವನ್ನು ಕಾಪಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಮಾಂಗಲ್ಯಧಾರಣೆ ವೇಳೆಯಲ್ಲಿ ಮಗಳಿಗೆ ಅಕ್ಷತೆ ಹಾಕಿದ್ದೇನೆ. ಇನ್ನು ನಾಲ್ಕು ಅಕ್ಕಿ ಕಾಳು ಉಳಿಸಿಕೊಂಡಿದ್ದು, ನೀನು ಸತ್ತ ಮೇಲೆ ನಿನ್ನ ಬಾಯಿಗೆ ಹಾಕುವೆ ಎಂದು ಹೇಳಿ ಅಲ್ಲಿಂದ ಹೋಗಿದ್ದಾಳೆ.
ಮತ್ತೊಂದೆಡೆ ಸೊಸೆಯಾಗಿ ಮಾದಪ್ಪನ ಮನೆಯನ್ನು ರಶ್ಮಿ ಸೇರಿದ್ದಾಳೆ. ಪಾರು ತಾಯಿ ಮತ್ತು ಚಿಕ್ಕಮ್ಮ, ಅಡುಗೆಮನೆಯೊಳಗೆ ಹೋಗಿ ನಿನ್ನ ಕೈಯಾರೆ ಎಲ್ಲರಿಗೂ ಸಿಹಿ ಮಾಡಿಕೊಂಡು ಬರುವಂತೆ ಹೇಳಿದ್ದಾಳೆ. ಅಡುಗೆಮನೆಗೆ ಎಂಟ್ರಿ ಕೊಡುತ್ತಲೇ ರಶ್ಮಿಗೆ ಅತ್ತೆ ಕಾಟ ಶುರುವಾಗಿದೆ. ರಶ್ಮಿ ಹಾಲು ಹುಡುಕುತ್ತಿರುವಾಗ ಹಿಂದೆ ನಿಂತಿದ್ದ ಹಾಲಿನ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿ ಇಡುತ್ತಾಳೆ. ಒಲೆ ಹಚ್ಚಲು ರಶ್ಮಿ ಕಡ್ಡಿ ಗೀರಿದ್ರೆ ಅದನ್ನು ಹಿಂದಿನಿಂದ ಊದಿ ಆರಿಸುತ್ತಿದ್ದಾಳೆ. ಎರಡ್ಮೂರು ಬಾರಿ ಗೀರಿದ ಬೆಂಕಿ ಕಡ್ಡಿಯನ್ನು ಊದಿ ನಂದಿಸಿದ್ದಾಳೆ. ಕೂಡಲೇ ಹಿಂದಿರುಗಿ ನೋಡಿದ್ರೆ ಪಾರು ನಿಂತಿದ್ದಾಳೆ. ಪಾರು ನಿಂತಿರೋದನ್ನು ನೋಡುತ್ತಿದ್ದಂತೆ ಅತ್ತೆ ಪದ್ಮಾ ತರತರ ನಡುಗಿದ್ದಾಳೆ.
ಇದನ್ನೂ ಓದಿ: ಅಣ್ಣಯ್ಯನ ಮೇಲೆ ಪಾರುಗೆ ಈಗಷ್ಟೇ ಶುರುವಾಗಿದೆ ಲವ್: ಅಬ್ಬಬ್ಬಾ ಇಲ್ಲಿ ನೋಡಿ ಈ ಪರಿ ರೊಮಾನ್ಸ್...
ಏನ್ ಮಾಡ್ತಾಳೆ ಪಾರು?
ತಾನೇ ಮುಂದೆ ನಿಂತು ಸೀನ-ರಶ್ಮಿ ಮದುವೆ ಮಾಡಿಸಿರುವ ಪಾರು ನಾದಿನಿಗೆ ಎದುರಾಗಿರುವ ಸಮಸ್ಯೆಯನ್ನ ಹೇಗೆ ಪರಿಹರಿಸುತ್ತಾಳೆ? ಅತ್ತೆಗೆ ಕ್ಲಾಸ್ ತೆಗೆದುಕೊಂಡು ಪಾರು ರೆಬೆಲ್ ಆಗ್ತಾಳಾ? ಇಲ್ಲಾ ಇರೋ ವಿಷಯವನ್ನು ತಿಳಿ ಹೇಳುತ್ತಾಳಾ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಪೆಟ್ಟು ತಿಂದ ನಾಗರಹಾವು ಆದ ವೀರಭದ್ರ!
ಇತ್ತ ವೀರಭದ್ರನ ಎಲ್ಲಾ ಲೆಕ್ಕಾಚಾರ ತೆಲಕೆಳಗಾಗಿದ್ದರಿಂದ ವೀರಭದ್ರ ಮತ್ತು ಆತನ ಮಗ ಪೆಟ್ಟು ತಿಂದ ನಾಗರಹಾವಿನಂತಾಗಿದ್ದಾರೆ. ಶಿವು ಮತ್ತು ಆತನ ಸೋದರಿಯರ ರಕ್ಷಣೆಗೆ ಮಗಳ ಜೊತೆ ಅವರ ತಾಯಿ ಬಂದಿರೋದು ವೀರಭದ್ರನಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ವೀರಭದ್ರನ ಮಗ ಶಿವು ಕೊಲೆಗೆ ರೂಪಿಸಿದ ಸಂಚು ಸಹ ವಿಫಲವಾಗಿದೆ.
ಇದನ್ನೂ ಓದಿ: ಅಣ್ಣಯ್ಯ ಸೀರಿಯಲ್ನಲ್ಲಿ ನಾಯಕಿ ಪಾರು ರೋಲ್ ಬದಲು? ನಟ ವಿಕಾಶ್ ಹೇಳಿದ್ದೇನು ಕೇಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.