
ಭಾಗ್ಯಲಕ್ಷ್ಮಿ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಪತ್ನಿಗೆ ಮಾನಸಿಕ ಟಾರ್ಚರ್ ಕೊಡುತ್ತಲೇ ಲವರ್ ಶ್ರೇಷ್ಠಾ ಜೊತೆ ಎಂಜಾಯ್ ಮಾಡುತ್ತಿದ್ದ ತಾಂಡವ್, ಶ್ರೇಷ್ಠಾಳ ಕುತಂತ್ರದ ಅರಿವು ಇಲ್ಲದೇ ಈಗ ಆಕೆಯನ್ನು ಮದುವೆಯಾಗಿದ್ದಾನೆ. ತಾಳಿಯೇ ಸರ್ವಸ್ವ ಎಂದುಕೊಂಡು ಮಾತನಾಡುತ್ತಿದ್ದ ಭಾಗ್ಯ ಈಗ ತಾಳಿಯನ್ನು ಗಂಡನ ಕೈಗೆ ಇಟ್ಟಿದ್ದಾಳೆ. ಪತ್ನಿಗೆ ಬೆಲೆ ಇಲ್ಲದ ಮೇಲೆ ತಾಳಿಗೇನು ಬೆಲೆ, ಇದು ಹೇಗಿದ್ದರೂ ಶ್ರೇಷ್ಠಾಳಿಗೆ ಸೇರಿದ್ದು, ಅವಳಿಗೇ ಕಟ್ಟಿ ಎಂದು ಹೇಳಿ ಹೋಗಿದ್ದಾಳೆ. ಭಾಗ್ಯಳ ಈ ನಿರ್ಧಾರಕ್ಕೆ ಆಕೆಯ ಅಮ್ಮ ವಿರೋಧ ವ್ಯಕ್ತಪಡಿಸಿದರೂ ಅತ್ತೆ ಕುಸುಮಾ ಸೊಸೆಯ ಪರ ನಿಂತಿದ್ದಾಳೆ. ಇದನ್ನು ನೋಡಿದ ತಾಂಡವ್ಗೆ ಖುಷಿಯಾಗುವ ಬದಲು ಇಗೋ ಹರ್ಟ್ ಆಗಿದೆ. ಭಾಗ್ಯಳಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತಿದ್ದಾನೆ. ತನ್ನ ಪ್ರೇಯಸಿ ಜೊತೆ ಮದ್ವೆಯಾದರೂ ಆ ಖುಷಿ ಮಾಯವಾಗಿದೆ. ಈಗಲೂ ಭಾಗ್ಯಳ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.
ಇದು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯಾದ್ರೆ, ಇನ್ನು ನಿಜ ಜೀವನದಲ್ಲಿ ಭಾಗ್ಯ ಅರ್ಥಾತ್ ಸುಷ್ಮಾ ಕೆ. ರಾವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ವೈಯಕ್ತಿಕ ಮತ್ತು ಸೀರಿಯಲ್ಗೆ ಸಂಬಂಧಿಸಿದ ವಿಡಿಯೋಗಳನ್ನು ಆಗಾಗ್ಗೆ ಅವರು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮದುವೆಗೆ ಮುಂಚೆ ನಡೆದ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಅವರು ಅಳುವುದನ್ನು ನೋಡಬಹುದು.
ಗಂಡನ ಕೈಗೆ ತಾಳಿ ಇಟ್ಟು, ಪತಿಯನ್ನು ಲವರ್ಗೆ ಬಿಟ್ಟುಕೊಟ್ಟು ಕುಂಭಮೇಳಕ್ಕೆ ಹೊರಟ ಭಾಗ್ಯ: ನಟಿ ಹೇಳಿದ್ದೇನು ಕೇಳಿ..
ನನಗೆ ತುಂಬಾ ಹರ್ಟ್ ಆಗ್ತಿದೆ, ಈ ಸೀನ್ ಮಾಡಲು ಆಗ್ತಿಲ್ಲ ಎಂದಿದ್ದಾರೆ. ಶೂಟಿಂಗ್ ಸಮಯದಲ್ಲಿಯೇ ಹೊರಗಡೆ ಜೋರಾಗಿ ಮಳೆ ಬರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಎಲ್ಲರಿಗೂ ತಿಳಿದಿರುವಂತೆ, ಸೀರಿಯಲ್ಗಳ ಶೂಟಿಂಗ್ ಅನ್ನು ತುಂಬಾ ಮೊದಲೇ ಮಾಡಿರಲಾಗುತ್ತದೆ. ಬೆಂಗಳೂರಿನಲ್ಲಿ ಮಳೆ ಜೋರಾದ ಟೈಮ್ನಲ್ಲಿ ಈ ಶೂಟಿಂಗ್ ನಡೆದಿತ್ತು. ಆಗಿನ್ನೂ ಶ್ರೇಷ್ಠಾ ಮತ್ತು ತಾಂಡವ್ ಮದುವೆಯ ಬಗ್ಗೆ ಮಾತುಕತೆ ನಡೆಯುತ್ತಿತ್ತಷ್ಟೇ. ಆ ಸಮಯದಲ್ಲಿ ನಡೆದ ಶೂಟಿಂಗ್ ಇದು. ಕಾವ್ಯಾ ಅವರು ನಿಜಕ್ಕೂ ಅಳ್ತಾ ಇದ್ದಾರೋ ಅಥವಾ ತಮಾಷೆ ಮಾಡುತ್ತಿದ್ದಾರೋ ಎಂದು ಅಲ್ಲಿದ್ದವರೆಲ್ಲಾ ಒಮ್ಮೆಯೇ ಭಯ ಬಿದ್ದರು. ತಾಂಡವ್ ಪಾತ್ರಧಾರಿ ಸುದರ್ಶನ್ ಅವರು, ಸೀರಿಯಲ್ ಆಗಿ ಅಳ್ತಾ ಇದ್ಯಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಆಗ ಶ್ರೇಷ್ಠಾ ನಿಜಕ್ಕೂ ಅಳ್ತಾ ಇದ್ದೀನಿ ಅಂದಿದ್ದಾರೆ. ಆಮೇಲೆ ಅವರು ಗ್ಲಿಸರಿನ್ ಹಾಕಿಕೊಂಡಿರೋದು ಎನ್ನೋದು ತಿಳಿದಿದೆ. ಎಲ್ಲರೂ ಅಬ್ಬಾ ಎಷ್ಟೊಂದು ಡ್ರಾಮಾ ಮಾಡ್ತಿಯಾ ಎಂದೆಲ್ಲಾ ಹೇಳಿದ್ದಾರೆ. ಇದನ್ನು ಸುಷ್ಮಾ ಕೆ. ರಾವ್ ಅವರು ಶೇರ್ ಮಾಡಿದ್ದು, ಚಿತ್ರ ನಟರ ಬಾಂಡಿಂಗ್ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ತಮ್ಮ ಮತ್ತು ಶ್ರೇಷ್ಠಾ ಪಾತ್ರದ ಕುರಿತು ಮಾತನಾಡಿದ್ದ ಸುಷ್ಮಾ, ಹಾಗೆ ನೋಡಿದ್ರೆ ಎರಡು ಮಕ್ಕಳ ತಂದೆಯನ್ನು ಪ್ರೀತಿ ಮಾಡಿರುವುದು ಶ್ರೇಷ್ಠಾಳ ತಪ್ಪೇನೂ ಅಲ್ಲ ಎನ್ನುತ್ತಲೇ ಅದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದರು. ಪಾಪ ಅವಳಿಗೆ ಲವ್ ಮಾಡುವಾಗ ತಾಂಡವ್ ಬಗ್ಗೆ ಗೊತ್ತಿರುವುದಿಲ್ಲ. ಆಮೇಲೆ ಗೊತ್ತಾಗತ್ತೆ. ಅವಳಾದ್ರೂ ಏನು ಮಾಡ್ತಾಳೆ. ಪ್ರೀತಿ ಕುರುಡು ಅಂತಾರಲ್ಲ ಹಾಗಾಗಿದೆ ಅವಳ ಪರಿಸ್ಥಿತಿ. ಲವ್ ಮಾಡಿ ಆಗಿರುತ್ತೆ, ಆಮೇಲೆ ಏನೂ ಮಾಡುವ ಸ್ಥಿತಿಯಲ್ಲಿ ಇರಲ್ಲ. ಆದರೆ, ಎಲ್ಲಾ ಗೊತ್ತಾದ ಮೇಲೆ ಅವಳು ಹಿಂದಕ್ಕೆ ಸರಿಯಬಹುದಿತ್ತು. ಮದುವೆ, ಮಕ್ಕಳು ಎಂದೆಲ್ಲಾ ತಿಳಿದ ಮೇಲೆ ತನ್ನದು ತಪ್ಪು ನಿರ್ಧಾರ ಎಂದು ತಿಳಿದುಕೊಳ್ಳಬೇಕಿತ್ತು. ಆದರೆ ಅವಳು ಹಠಕ್ಕೆ ಬಿದ್ದು ಮುಂದುವರೆದದ್ದು ತಪ್ಪು ಎಂದಿದ್ದರು. ಆದರೆ ಸೀರಿಯಲ್ನಲ್ಲಿ ಎಲ್ಲವೂ ಆಗಿಬಿಟ್ಟಿದೆ. ಭಾಗ್ಯಳ ಮುಂದಿನ ನಿರ್ಧಾರ ಏನು ಎನ್ನುವುದನ್ನು ನೋಡಬೇಕಿದೆ.
ಎರಡು ಮಕ್ಕಳ ಅಪ್ಪನ ಲವ್ ಮಾಡಿರೋ ಶ್ರೇಷ್ಠಾಳಂತ ಹೆಣ್ಮಕ್ಳದ್ದೂ ತಪ್ಪಿರಲ್ಲ...ಆದ್ರೆ... ನಟಿ ಸುಷ್ಮಾ ಮಾತು ಕೇಳಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.