ಜೇನಿನ ಧ್ವನಿಯ, ಅಚ್ಚು ಕನ್ನಡದಲ್ಲಿ ಮಾತನಾಡ್ತಿದ್ದ ನಿರೂಪಕಿ ಅಪರ್ಣಾ ನಮ್ಮನ್ನಗಲಿದ್ದಾರೆ. ಅವರನ್ನು ಕಳೆದುಕೊಂಡು ಇಡೀ ಕರ್ನಾಟಕವೇ ಅನಾಥವಾಗಿದೆ. ನಿರೂಪಕಿ ಅನುಶ್ರೀ, ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ಸ್ಟಾದಲ್ಲಿ ಬಿಗ್ ಬಾಸ್ ವಿಡಿಯೋ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಿರೂಪಣೆಗೆ ಘನತೆ ನೀವು ....ಕನ್ನಡಕ್ಕೆ ಶೋಭೆ ನೀವು ...ನಿರೂಪಣೆ ನೀವಿಲ್ಲದೆ ಅಪೂರ್ಣ ... ಅಪರ್ಣ..ಅಕ್ಕ Deeply saddened.. disappointed… Bigg boss ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ .. ಇಂದಿಗೂ ಹಸಿರಾಗಿದೆ ..ಅಂದು ಇಂದು ಎಂದೆಂದೂ ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ .. ಅದು ನೀವು…ಓಂ ಶಾಂತಿ.. ಹೀಗಂತ ಭಾವುಕ ಪೋಸ್ಟ್ ಹಾಕಿರುವ ನಿರೂಪಕಿ ಅನುಶ್ರೀ, ನಿರೂಪಕಿ ಅಪರ್ಣ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಪರ್ಣ ಕಳೆದುಕೊಂಡ ನಿರೂಪಕಿ ಭಾವುಕರಾಗಿದ್ದಾರೆ.
ಅಪ್ಪಟ ಕನ್ನಡತಿ, ಖ್ಯಾತ ನಿರೂಪಕಿ, ತಮ್ಮ ಧ್ವನಿಯಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿರುವ ಅಪರ್ಣಾ (Aparna) ಇನ್ನಿಲ್ಲ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸಿನಿಮಾ ತಾರೆಯರಿಂದ ಹಿಡಿದು, ಸೆಲೆಬ್ರಿಟಿಗಳು (Celebrities), ಸಾಮಾನ್ಯ ಜನರು ಶಾಕ್ ನಲ್ಲಿದ್ದಾರೆ. ಇದಕ್ಕೆ ನಿರೂಪಕಿ ಅನುಶ್ರೀ (Anushree) ಕೂಡ ಹೊರತಾಗಿಲ್ಲ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ, ಶ್ರದ್ಧಾಂಜಲಿ ಕೋರಿರುವ ಅನುಶ್ರೀ, ಬಿಗ್ ಬಾಸ್ ಶೋನ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವಿನಿಂದ ನನಗೆ ಗರ ಬಡಿದಂತಾಗಿದೆ: ಮಂಡ್ಯ ರಮೇಶ್ ಭಾವುಕ
ಈ ವಿಡಿಯೋದಲ್ಲಿ, ಅನುಶ್ರೀ ನನ್ನನ್ನು ಅರ್ಥ ಮಾಡಿಕೊಂಡ ನಿಮ್ಮ ಜೊತೆ ನಾನು ಮಾತನಾಡ್ತಿದ್ದರೆ ಅಮ್ಮನ ಜೊತೆ ಮಾತನಾಡಿದಂತೆ ಅನ್ನಿಸ್ತು ಅಂತ ಅಳ್ತಿದ್ದಾರೆ. ಅವರನ್ನು ಪ್ರೀತಿಯಿಂದ, ಅದೇ ಮುಗ್ಧ ನಗುವಿನಲ್ಲಿ ಅನುಶ್ರೀಯವರನ್ನು ಅಪರ್ಣಾ ಅಪ್ಪಿಕೊಳ್ತಾರೆ.
ರಾಜ್ಯ ಮತ್ತೊಂದು ಮುತ್ತನ್ನು ಕಳೆದುಕೊಂಡಿದೆ ಎಂದು ಅನುಶ್ರೀ ಪೋಸ್ಟ್ ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ನಿರೂಪಕ ಕ್ಷೇತ್ರದ ಒಂದು ಮುಖ್ಯವಾದ ರತ್ನ ಕಳಚಿ ಬಿದ್ದಿದೆ ಎಂದು ನಿರೂಪಕ ದರ್ಶ್ ಶೆಟ್ಟಿ ಭಾವುಕರಾಗಿದ್ದಾರೆ. ಮೆಟ್ರೋದಲ್ಲಿ ನಿಮ್ಮ ನೆಚ್ಚಿನ ಧ್ವನಿ ಇನ್ನು ಮಿಸ್ ಆಗ್ಬಹುದು ಎಂಬ ಬೇಸರವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಅಪರ್ಣಾ ಹಾಗೂ ಅನುಶ್ರೀ ನಿರೂಪಕ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಲಾವಿದರು. ಅಪರ್ಣಾ ನಿರೂಪಣೆ ನೋಡಿ ಕಲಿತವರಲ್ಲಿ ಅನುಶ್ರೀ ಕೂಡ ಒಬ್ಬರು. ಇಬ್ಬರು ಅನೇಕ ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಅವರನ್ನು ಮತ್ತಷ್ಟು ಹತ್ತಿರಕ್ಕೆ ತಂದಿತ್ತು. ಒಂದೇ ಮನೆಯಲ್ಲಿ ಸ್ವಲ್ಪ ದಿನಗಳನ್ನು ಒಟ್ಟಿಗೆ ಕಳೆದಿದ್ದ ಇಬ್ಬರು ಪರಸ್ಪರ ಮತ್ತಷ್ಟು ಅರ್ಥ ಮಾಡಿಕೊಂಡಿದ್ದರು.
ಸರಳ ಸ್ವಭಾವದ, ಸೌಮ್ಯ ಗುಣದ ನಿರೂಪಕಿ ಅಪರ್ಣಾ ನಿಧನ ಇಡೀ ಕರ್ನಾಟಕಕ್ಕೆ ತುಂಬಲಾಗದ ನಷ್ಟ. ಬರೀ ಸ್ಟೇಜ್ ಶೋಗಳಲ್ಲಿ ಮಾತ್ರವಲ್ಲ ಮೆಟ್ರೋ ಸೇರಿದಂತೆ ರಾಜ್ಯದ ಅನೇಕ ಸಮಾರಂಭಕ್ಕೆ ಧ್ವನಿಯಾದವರು ಅಪರ್ಣಾ. ದೂರದರ್ಶನ, ಆಕಾಶವಾಣಿಯಲ್ಲಿ ಕೆಲಸ ಮಾಡಿದ್ದ ಅಪರ್ಣಾ, ಬಿಗ್ ಬಾಸ್, ಮಜಾ ಟಾಕೀಸ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಒನ್ ಎಂಡ್ ಓನ್ಲಿ ವರಲಕ್ಷ್ಮಿಯಾಗಿ ಕೋಟ್ಯಾಂತರ ಅಭಿಮಾನಿಗಳು ನಗಲು ಕಾರಣವಾಗಿದ್ದು ಅಪರ್ಣಾ.
1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಅಪರ್ಣಾ ಅವರು, 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಕಾರ್ಯಕ್ರಮಗಳ ನಿರೂಪಣೆ ಆರಂಭಿಸಿದ್ದರು. 1998ರಲ್ಲಿ ದೀಪಾವಳಿ ಕಾರ್ಯಕ್ರಮವೊಂದನ್ನು ಸತತವಾಗಿ 8 ತಾಸುಗಳ ಕಾಲ ನಿರೂಪಣೆ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಅಪರ್ಣಾ ನಿರ್ಮಿಸಿದ್ದರು.
ಖ್ಯಾತ ನಿರೂಪಕಿ ಅಪರ್ಣಾರ ಕೊನೆ ಆಸೆ ಬಗ್ಗೆ ಹೇಳಿ ಭಾವುಕರಾದ ಪತಿ ನಾಗರಾಜ್ ವಸ್ತಾರೆ
ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ, ನಿನ್ನೆ ನಮ್ಮನ್ನಗಲಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ. ಎರಡು ವರ್ಷಗಳ ಹಿಂದೆ ಜುಲೈನಲ್ಲಿ ಅವರಿಗೆ ಕ್ಯಾನ್ಸರ್ ಇರೋದು ಪತ್ತೆಯಾಗಿತ್ತು. ಇನ್ನು ಆರೇ ತಿಂಗಳು ಅವರು ಇರ್ತಾರೆ ಅಂತಾ ವೈದ್ಯರು ಹೇಳಿದ್ದರು. ಆದ್ರೆ ಅಪರ್ಣಾ ಧೈರ್ಯದಿಂದ ಒಂದುವರೆ ವರ್ಷವನ್ನು ಕಳೆದಿದ್ದರು. ಅಪರ್ಣಾ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬನಶಂಕರಿ ವಿದ್ಯುತ್ ಚಿತಗಾರದಲ್ಲಿ ಅಂತಿಮ ವಿಧಿವಿಧಾನ ಇಂದು ನಡೆಯಲಿದೆ.