"ಅಪರ್ಣಾಗೆ 6 ತಿಂಗಳು ಬದುಕೋದೆ ಡೌಟ್ ಎಂದಿದ್ದರು, ಛಲದಿಂದ ಒಂದೂವರೆ ವರ್ಷ ಬದುಕಿದ್ಳು"!

By Chethan Kumar  |  First Published Jul 12, 2024, 12:47 AM IST

ಅಪರ್ಣಾ ಅವರ ಕ್ಯಾನ್ಯರ್ ತಿಳಿದಾಗ ವೈದ್ಯರು 6 ತಿಂಗಳು ಬದುಕೋದೆ ಡೌಟ್ ಎಂದಿದ್ದರು. ಆದರೆ ಅವಳು ಛಲಗಾತಿ ನಾನು ಬದುಕ್ತೀನಿ ಹೇಳಿದ್ದಳು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ದಳು. ಈಗ ನಾವು ಸೋತಿದ್ದೇವೆ ಎಂದು ಪತಿ ನೋವು ತೋಡಿಕೊಂಡಿದ್ದಾರೆ.
 


ಬೆಂಗಳೂರು(ಜು.11) ಖ್ಯಾತ ನಿರೂಪಕಿ, ನಟಿ ಅಪರ್ಣ ನಿಧನಕ್ಕೆ ಗಣ್ಯರು ಸೇರಿದಂತೆ ಕರ್ನಾಟಕ ಕಂಬನಿ ಮಿಡಿದಿದೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲಿದ ಅಪರ್ಣ ಜು.11ರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ ಅಪರ್ಣ ನಿಧನ ಕುರಿತು ಪತಿ ನಾಗರಾಜ್ ರಾಮಸ್ವಾಮಿ ವತ್ಸರೆ ಸಂದೇಶ ನೀಡಿದ್ದಾರೆ.  ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು.ಅಷ್ಟೇ ಖಾಸಗಿಯಾಗಿ ನಾನು ಅವಳನ್ನ  ಬೀಳ್ಕೊಡುತ್ತಿದೀನಿ ಎಂದು ನಾಗರಾಜ್ ಹೇಳಿದ್ದಾರೆ.  

ಹಾಗಂತ ನನಗಿಂತ ಮುಂಚೆನೇ ಹೆಚ್ಚಾಗಿ ಅಪರ್ಣಾ ಖಾಸಗಿ ಜೀವನದಲ್ಲಿ ಇದ್ದವಳು.  ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದಾಗ ಅಪರ್ಣ ಆರು ತಿಂಗಳು ಬದುಕೋದೆ ಡೌಟ್ ಅಂತಾ  ವೈದ್ಯರು ಹೇಳಿದ್ದರು. ಆದರೆ ಅಪರ್ಣ ಅವಳು ಛಲಗಾತಿ. ಆಕೆ ಪ್ರತಿ ಬಾರಿ ನಾನು ಬದುಕ್ತೀನಿ ಅಂತಾ ಹೇಳುತ್ತಿದ್ದಳು. ಅಲ್ಲಿಂದ ಪೆಬ್ರವರಿ ವರೆಗೆ ಅವಳು ಸೋತಿದ್ಳು. ಕಳೆದ ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ಧೀರೆ.. ಇಷ್ಟು ದಿನಾ ಬದುಕಿದ್ದಾಳೆ ಎಂದು ನಾಗರಾಜ್ ಹೇಳಿದ್ದಾರೆ.

Tap to resize

Latest Videos

ಕಾದಿದ್ದೇನೆ ಮರಳಿ ಜೀವ ತಂದಾಳೆಂದು, ಅಪರ್ಣ ಸಾವಿಗೂ ಮುನ್ನ ಪತಿ ಬರೆದ ನೋವಿನ ಕವನ!

ವೈದ್ಯರ ವರದಿ, ಕ್ಯಾನ್ಸರ್ ಸ್ಟೇಜ್ ಎಲ್ಲವೂ ವಿರುದ್ಧವಾಗಿತ್ತು. ಆದರೆ ಛಲಗಾತಿ ಅಪರ್ಣ ಪ್ರತಿ ದಿನ ಹೋರಾಡುತ್ತಿದ್ದಳು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದೀಗ ನಾವಿಬ್ಬರು ಜಂಟಿಯಾಗಿ ಸೋತಿದ್ದೇವೆ.  ಮುಂಬರುವ ಅಕ್ಟೋಬರ್ ತಿಂಗಳಿಗೆ ಅಪರ್ಣಗೆ 58 ವರ್ಷ ತುಂಬುತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೋರಿಸಲಿಲ್ಲ ಎಂದು ಪತಿ ಹೇಳಿದ್ದಾರೆ. ಇವತ್ತು ಒಂದು ದಿನ ನಾನು ನನ್ನ ಕುಟುಂಬದ ಜೊತೆ ಇರುತ್ತೇನೆ ಎಂದು ಮಾಧ್ಯಮಕ್ಕೆ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.  ಕುಟುಂಬದ ಖಾಸಗೀತನಕ್ಕೆ ಗೌರವ ನೀಡಲು ಪತಿ ನಾಗರಾಜ್ ಮನವಿ ಮಾಡಿದ್ದಾರೆ. ಈ ಶಿಥಿಲ ಸಂದರ್ಭದಲ್ಲಿ ಕುಟುಂಬ ಖಾಸಗಿ ದುಃಖ ಅನ್ನೋದು ಇರುತ್ತೆ ಎಂದು ನಾಗರಾಜ್ ಹೇಳಿದ್ದಾರೆ. 

ಅಪರ್ಣಾ ಅಚ್ಚ ಹಾಗೂ ಸ್ಪಷ್ಟ ಕನ್ನಡದ ನಿರೂಪಣೆಯಿಂದ ಮನೆಮಾತಾಗಿದ್ದಾರೆ. ಸಿನಿಮಾ, ಧಾರವಾಹಿ, ರಿಯಾಲಿಟಿ ಶೋ, ಆಕಾಶವಾಣಿ, ಚಂದನ ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ ಹೆಗ್ಗಳಿಗೆ ಅಪರ್ಣಾ ಪಾತ್ರರಾಗಿದ್ದಾರೆ. ಮೆಟ್ರೋ ಸೇರಿದಂತೆ ಹಲವು ಕಡೆಗಳಲ್ಲಿ ಹಿನ್ನಲೆ ಧ್ವನಿ ನೀಡಿ ಚಿರಪರಿತರಾಗಿದ್ದಾರೆ. 

ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!

ಅಪರ್ಣಾ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕನ್ನಡ ಚಿತ್ರರಂಗ, ಕಿರುತೆರೆ ಲೋಕದ ಗಣ್ಯರು, ಸಾಹಿತಿಗಳು ಸೇರಿದಂತೆ ಕರ್ನಾಟಕ ಜನ ಕಂಬನಿ ಮಿಡಿದಿದೆ. 
 

click me!