
ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಯಮುನಾ ಶ್ರೀನಿಧಿ ಬಹಳ ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆ ಸುದ್ದಿಯಾಗುತ್ತಿದೆ. ಕಳೆದ 7 ವರ್ಷಗಳಿಂದ ಸುಮಾರು 10,000 ಎನ್‌ಸಿಸಿ ಕೆಡೆಟ್‌ಗಳಿಗೆ ಮತ್ತು 6,000 ಗ್ರಾಮೀಣ ವಿದ್ಯಾರ್ಥಿಗಳಿಗೆ ಮಥದು ಕೌಶಲ್ಯ ಮತ್ತು ಜೀವನ ಕೌಶಲ್ಯಗಳ ತರಬೇತಿ ನೀಡಿದ್ದಾರೆ. ಈ ಮೂಲಕ ಆರ್ಥಿಕವಾಗಿ ಹಿಮದುಳಿದ ಅನೇಕ ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲ ನೀಡಿದ್ದಾರೆ. ಯಮುನಾ ಶ್ರೀನಿಧಿ ತಂದೆ ಕೂಡ ಶಿಕ್ಷಕರಾಗಿದ್ದು ಅವರ ಗೌರವಾರ್ಥವಾಗಿ 'ಫ್ರೋ. ಕೃಷ್ಣೇಗೌಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ' ಆರಂಭಿಸಿದ್ದಾರೆ.
'ನನ್ನ ತಂದೆ ಪ್ರೋ. ಕೃಷ್ಣೇಗೌಡರು ಸಮಾಜ ಸುಧಾರಣ ಕೆಲಸಗಳಿಗೆ ಪ್ರೇರಣೆ. ಚಿಕ್ಕಂದಿನಿಂದಲೂ ನನ್ನ ತಂದೆ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುವುದನ್ನು ನೋಡುತ್ತಾ ಬಂದಿದ್ದೇನೆ. ಪ್ರೋಫೆಸರ್ ಕೆಲಸಕ್ಕೆ ಸೇರಿದ ಸಮಯದಿಂದಲೂ ನನ್ನ ತಂದೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕುವಂತೆ ಸಹಾಯ ಮಾಡಿದ್ದಾರೆ. ಎಷ್ಟೋ ಬಡ ಮಕ್ಕಳನ್ನು ನಮ್ಮ ಮನೆಯಲ್ಲಿ ಇಟ್ಟು ಸಾಕಿದ್ದಾರೆ. ಆ ಮಕ್ಕಳು ತಮ್ಮ ಕಾಲುಗಳ ಮೇಲೆ ನಿಂತುಕೊಳ್ಳುವವರೆಗೂ ಅವರ ಖರ್ಚು ನೋಡಿಕೊಳ್ಳುತ್ತಿದ್ದರು. ನಾನು ಶಿಕ್ಷಣ ಮುಗಿಸಿ ಆರ್ಥಿಕವಾಗಿ ಸ್ವಂತಂತ್ರವಾದ ನಂತರ ತಂದೆ ನಡೆಸಿಕೊಂಡು ಬಂದಿರುವ ಕಾರ್ಯದಲ್ಲಿ ಸಹಾಯ ಮಾಡಿಕೊಂಡು ಬಂದಿದ್ದೇನೆ' ಎಂದು ಯಮುನಾ ಶ್ರೀನಿಧಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಶಬರಿಮಲೆ- ವೀರಪ್ಪನ್ ಘಟನೆ; ರಜನಿಕಾಂತ್ ಜೊತೆಗಿನ ನಂಟು ಬಿಚ್ಚಿಟ್ಟ ಶಿವರಾಜ್‌ಕುಮಾರ್
'ಇಂತಹ ಸಮಾಜ ಸುಧಾರಕ ಕಾರ್ಯಗಳಿಗೆ ಪ್ರೇರಣೆಯಾಗಿರುವುದು ನನ್ನ ತಂದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಬಡ ಕುಟುಂಬಗಳಿಗೆ ಈ ರೀತಿ ಸಣ್ಣ ಪುಟ್ಟ ಹಣಕಾಸಿನ ಸಹಾಯ ಮಾಡುವುದು ನನಗೆ ಬಹಳ ತೃಪ್ತಿ ಕೊಡುತ್ತದೆ' ಎಂದು ಯಮುನಾ ಶ್ರೀನಿಧಿ ಹೇಳಿದ್ದಾರೆ.
19 ವರ್ಷಗಳ ನಂತರ ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾ ಮತ್ತೆ ರಿಲೀಸ್; ಏನಿದರ ಹಿಂದಿನ ಪ್ಲ್ಯಾನ್?
'ಪ್ರೊ. ಕೃಷ್ಣೇಗೌಡ ವಿದ್ಯಾರ್ಥಿವೇತನ” ವು ಶಿಕ್ಷಣ ತಜ್ಞರು, ಸಶಸ್ತ್ರ ಪಡೆ ಸಿಬ್ಬಂದಿ, ಎನ್‌ಸಿಸಿ ಅಧಿಕಾರಿಗಳು ಮತ್ತು ನನ್ನ ಆತ್ಮೀಯ ಸ್ನೇಹಿತರಿಂದ ಶ್ಲಾಘಿಸಲ್ಪಟ್ಟಿದೆ. ನನ್ನ ಈ ಸಮಾಜಮುಖಿ ಕಾರ್ಯದಲ್ಲಿ ನಿಮ್ಮ ಆತ್ಮೀಯ ಮಾತುಗಳಿಂದ ನನ್ನನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ.ಗೌರವ ಮತ್ತು ಪ್ರೋತ್ಸಾಹಕ್ಕಾಗಿ ಡಿಡಿಜಿ ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಏರ್ ಕಮೋಡರ್ ಎಸ್‌ಬಿ ಅರುಣ್‌ಕುಮಾರ್ ವಿಎಸ್‌ಎಂ ಅವರಿಗೆ ಧನ್ಯವಾದಗಳು' ಎಂದು ಯಮುನಾ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.