Latest Videos

ನಂಬಿ ಮದ್ವೆ ಮಾಡಿಕೊಂಡೆ ಆದ್ರೆ ತುಂಬಾ ಕಷ್ಟ ಆಯ್ತು ಹೊಂದಾಣಿಕೆ ಬರಲಿಲ್ಲ: ಕಣ್ಣೀರಿಟ್ಟ ಚೈತ್ರಾ ವಾಸುದೇವನ್

By Vaishnavi ChandrashekarFirst Published Jun 21, 2024, 6:18 PM IST
Highlights

 ಮದುವೆ ವಿಚ್ಛೇದನದಿಂದ ತುಂಬಾ ಕುಗ್ಗಿದೆ ಎಂದು ನಿರೂಪಕಿ ಚೈತ್ರಾ ವಾಸುದೇವನ್‌ ಜೀ ವೇದಿಕೆ ಮೇಲೆ ಭಾವುಕರಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ ಶೋನಲ್ಲಿ ಚೈತ್ರಾ ವಾಸುದೇವನ್ ಮೆಂಟರ್‌ ಅಥವಾ ಟೀಂ ಲೀಡರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲೆ ತಮ್ಮ ವೈಯಕ್ತಿಕ ಜೀವನ ನೆನೆದು ಕಣ್ಣೀರಿಟ್ಟಿದ್ದಾರೆ.

'ನಾನು ಕಳೆದ ಹತ್ತು ವರ್ಷಗಳಿಂದ ನಿರೂಪಕಿಯಾಗಿ ಆಗಿ ಕೆಲಸ ಮಾಡುತ್ತಿದ್ದೇನೆ. ವಿಜೆಯಾಗಿ ದುಡಿಯುವುದು ನನ್ನ ನೆಚ್ಚಿನ ಹವ್ಯಾಸವು ಆಗಿತ್ತು. ಇಂಜಿನಿಯರಿಂಗ್ ಪದವಿ ಮುಗಿದ ನಂತರ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಿದರು. ಉದ್ಯಮವಿದೆ ಬಾಳ ಸಂಗಾತಿಯನ್ನು ಆರಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ ಎಂದು ಮನೆಯವರು ಕನಸು ಕಂಡರು. ಅದೇ ಸರಿ ಎಂದು ನಂಬಿ ಒಬ್ಬರನ್ನು ಮದುವೆ ಮಾಡಿಕೊಂಡೆ. ಆದರೆ ನಾನು ತಿಳಿದಿದ್ದೇ ಒಂದು. ಅಲ್ಲಿ ಆದದ್ದು ಮತ್ತೊಂದು. ನಮ್ಮ ನಡುವೆ ಯಾವುದೇ ರೀತಿ ಹೊಂದಾಣಿಕೆ ಬರಲಿಲ್ಲ. ಬಹಳ ಕಷ್ಟ ಪಡಬೇಕಾಗಿ ಬಂತು. ಕೊನೆಗೆ ವಿಚ್ಛೇದನಕ್ಕೂ ಹೋಯಿತ್ತು' ಎಂದು ಚೈತ್ರಾ ವಾಸುದೇವನ್ ಕಣ್ಣೀರಿಟ್ಟು ಮಾತನಾಡಿದ್ದಾರೆ.

ಮೈ ಕೈಗೂ ಮೇಕಪ್‌ ಹಾಕಿದ್ದಾರಾ?; ನಮ್ರತಾ ಗೌಡ ಹಾಟ್‌ ಡ್ರೆಸ್‌ ಹಾಕಿದ್ರೂ ಜನರ ಕಣ್ಣು ಬೇರೆ ಕಡೆನೇ ಇದೆ!

'ಅದೂವರೆಗೂ ನನ್ನ ಜೀವನದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಇರಲಿಲ್ಲ. ಮದುವೆ ಮ್ತು ಅದರಿಂದ ಎದುರಾದ ಸಂಕಷ್ಟುಗಳು ಕೊನೆಗೆ ವಿಚ್ಛೇದನ ಎಲ್ಲವೂ ನನ್ನ ಕಾನ್ಫಿಡೆನ್ಸ್ ಅನ್ನು ಬಹಳ ಕುಗ್ಗಿಸಿತ್ತು. ಈ ಎಲ್ಲಾ ಕಷ್ಟದ ದಿನಗಳಿಂದ ಹೊರ ಬರಲು ನನಗೆ ಚಾನೆಲ್ ಬಹಳ ಸಹಾಯ ಮಾಡಿದೆ. ಬಹಳಷ್ಟು ಬೇರೆ ಬೇರೆ ರೀತಿಯ ಕೆಲಸಗಳನ್ನು ಕೊಟ್ಟು ನನ್ನ ನೋವಿನಿಂದ ಹೊರ ಬರಲು ಸಹಕಾರ ನೀಡಿದೆ. ಈ ವಿಚಾರವಾಗಿ ನಾನು ಚಾನೆಲ್‌ಗೆ ಹಾಗೂ ನನ್ನೆಲ್ಲಾ ಸಹೋದ್ಯೋಗಿಗಳಿಗೆ ಬಹಳ ಋಣಿಯಾಗಿದ್ದೇನೆ' ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.

ನೆಟ್ಟಗೆ ಒಂದೆರಡು ಸಿನಿಮಾ ಮಾಡಿಲ್ಲ ಆಗ್ಲೇ 2 ಲಕ್ಷ ರೂ. ಬಟ್ಟೆ- ಚಪ್ಲಿ ಬೇಕು ಶೋಕಿಗೆ; ನಟಿ ಶನಯಾ ಟ್ರೋಲ್!

'ದೇವರು ಎಂದೂ ಕೈ ಬಿಡುವುದಿಲ್ಲ. ದೇವರನ್ನು ಸ್ಥಿರವಾಗಿ ನಂಬು. ಹೆಂಡತಿ ಸತ್ತಾಗ ಗಂಡಂದಿರು ಸನ್ಯಾಸಿಯಂತೆ ಕೂರುವುದಿಲ್ಲ. ಬದಲಾಗಿ ಇನ್ನೊಂದು ಮದುವೆ ಮಾಡಿಕೊಳ್ಳುವ ಯೋಚನ ಮಾಡುತ್ತಾರೆ. ಅಂತೆಯೇ ನೀನು ಕೂಡ ಜೀವನದಲ್ಲಿ ಹೊಸತನಕ್ಕ ಹೊಸ ಸಂಗಾತಿಯನ್ನು ಆರಿಸುವುದರಲ್ಲಿ ತಪ್ಪೇನಿಲ್ಲ. ಹಳೆಯದನ್ನು ಮರೆತು ಹೊಸತನಕ್ಕೆ ಹೊಸ ಸಂಗಾತಿಯನ್ನು ಆರಿಸುವುದರಲ್ಲಿ ತಪ್ಪೇನಿಲ್ಲ. ಹಳೆಯದನ್ನು ಮರೆತು ಹೊಸ ಜೀವನದೆಡೆಗೆ ನಡೆ' ಎಂದು ನಟ ಜಗ್ಗೇಶ್ ಧೈರ್ಯ ತುಂಬಿದ್ದಾರೆ. 

click me!