Latest Videos

ಪ್ರೀ ವೆಡ್ಡಿಂಗ್‌ ಶೂಟ್‌ ಸಂಭ್ರಮದಲ್ಲಿರೋ ಶ್ರೇಷ್ಠಾಳ ಕೆನ್ನೆ ಕೆಂಪು ಮಾಡಿದ ಭಾಗ್ಯ: ಭಲೆ ಭಲೆ ಎಂದ ಫ್ಯಾನ್ಸ್‌

By Suchethana DFirst Published Jun 21, 2024, 2:25 PM IST
Highlights

ಪ್ರೀ ವೆಡ್ಡಿಂಗ್‌ ಶೂಟ್‌ ಸಂಭ್ರಮದಲ್ಲಿರೋ ಶ್ರೇಷ್ಠಾಳ ಕಪಾಳಮೋಕ್ಷ ಮಾಡಿದ್ದಾಳೆ  ಭಾಗ್ಯ: ಭಲೆ ಭಲೆ ಎಂದ ಫ್ಯಾನ್ಸ್‌. ಅಷ್ಟಕ್ಕೂ ಆಗಿದ್ದೇನು? 
 

ಭಾಗ್ಯಳಿಂದಲೇ ಕದ್ದಿರೋ ಎರಡು ಲಕ್ಷ ರೂಪಾಯಿಗಳನ್ನು ಅವಳಿಗೇ ನೀಡಿ ಅದನ್ನು ಮತ್ತೆ ವಾಪಸ್ ಕೇಳಿದ್ದಾಳೆ ಶ್ರೇಷ್ಠಾ. ಮೇಲಾಗಿ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾಳೆ ಭಾಗ್ಯ. ತನ್ನ ಕಿತಾಪತಿ ಯಾರಿಗೂ ತಿಳಿಯಲ್ಲ ಎಂದುಕೊಂಡಿದ್ದ ಶ್ರೇಷ್ಠಾಳಿಗೆ ಶಾಕ್‌ ಆಗೋಗಿದೆ. ಭಾಗ್ಯಳಿಗೆ ಈ ಕಿತಾಪತಿಯ ಹಿಂದಿನ ಮಾಸ್ಟರ್‌ಮೈಂಡ್‌ ತನ್ನ ಪತಿಯೇ ಎನ್ನುವ ಅರಿವಿಲ್ಲ. ಆದರೆ ಪೂಜಾಳಿಂದ ಶ್ರೇಷ್ಠಾಳ ಕುತಂತ್ರವಷ್ಟೇ ಬಹಿರಂಗಗೊಂಡಿದೆ. 

ಅದೇ ಇನ್ನೊಂದೆಡೆ ತಾಂಡವ್‌ ಜೊತೆ ಪ್ರೀ ವೆಡ್ಡಿಂಗ್‌ ಶೂಟ್‌ನಲ್ಲಿ ಶ್ರೇಷ್ಠಾ ಬಿಜಿಯಾಗಿದ್ದಾಳೆ. ಇದಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಅಷ್ಟೊತ್ತಿಗಾಗಲೇ ಪೂಜಾಳಿಂದ ದುಡ್ಡಿನ ವಿಷಯ ಅರಿತ ಭಾಗ್ಯ ಶೂಟಿಂಗ್‌ ಮಾಡ್ತಿರೋ ಜಾಗಕ್ಕೆ ಬಂದು ಶ್ರೇಷ್ಠಾಳ ಕೆನ್ನೆಗೆ ರಪರಪ ಬಾರಿಸಿದ್ದಾಳೆ. ಒಂದು ಹೊಡೆದ ದುಡ್ಡು ಕದ್ದಿರೋದಕ್ಕೆ, ಇನ್ನೊಂದು ಕದ್ದ ದುಡ್ಡನ್ನು ನನಗೇ ಸಾಲ ಎಂದು ಕೊಟ್ಟಿರೋದಕ್ಕೆ, ಮತ್ತೊಂದು ಮನೆಯವರ ಎದುರು ದುಡ್ಡು ಕೊಡು ಎಂದ ಬೆದರಿಕೆ ಹಾಕಿದ್ದಕ್ಕೆ... ಎನ್ನುತ್ತಲೇ ರಪರಪ ಹೊಡೆದಿದ್ದಾಳೆ. ಈ ಏಟಿಗೆ ತತ್ತರಿಸಿರೋ ಶ್ರೇಷ್ಠಾ ಕೆಳಗೆ ಬಿದ್ದಿದ್ದಾಳೆ.

ಕೊಲೆಗೆ ಸುಪಾರಿ ಕೊಟ್ಟವನ ಸಾಕ್ಷ್ಯ ತರಲು ಹೋದ ಕೆಂಚ ಶೆಡ್‌ಗೆ ಶಿಫ್ಟ್‌ ಆದ್ನಾ? ಇದೇನು ಹೇಳ್ತಿದ್ದಾರೆ ನೆಟ್ಟಿಗರು?

ಭಾಗ್ಯಳ ಈ ಕಾಳಿ ಅವತಾರ ನೋಡಿ ನೆಟ್ಟಿಗರು ಭೇಷ್‌ ಭೇಷ್‌ ಎನ್ನುತ್ತಿದ್ದಾರೆ. ಇದೀಗ ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಗಂಡನನ್ನೇ ಎನ್ನೋ ಸತ್ಯ ಯಾವಾಗ ಈ ಪೆದ್ದು ಭಾಗ್ಯಳಿಗೆ ಗೊತ್ತಾಗೋದು ಎಂದು ಕೇಳುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಭಾಗ್ಯಳ ಗೋಳು ಮುಗಿದಿದೆ. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ.  ಸಾಮಾನ್ಯವಾಗಿ ಸ್ಟಾರ್​ ಹೋಟೆಲ್​ಗಳ ಶೆಫ್​ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ.  ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್​ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ಬಂದಿದ್ದು, ಅದನ್ನು ಬ್ಯಾಂಕ್​ಗೆ ಹೋಗಿ ಹಣ ತಂದಿದ್ದಾಳೆ.  ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್​. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. 

ಸ್ವಂತ ದುಡಿಮೆ. ಅದೆಷ್ಟು ಖುಷಿ! ಮಕ್ಕಳಿಗೆ ಒಂದಿಷ್ಟು ತಿನಿಸುಗಳನ್ನು ತೆಗೆದುಕೊಂಡು ಹೋಗಿರುವ ಭಾಗ್ಯ, ಸ್ವಂತ ದುಡಿಮೆಯ ಹಣದಲ್ಲಿ ಪಾನಿಪುರಿ ತಿಂದಿದ್ದಾಳೆ. ಇಷ್ಟು ದಿನ ಚಿಕ್ಕಪುಟ್ಟ ಖರ್ಚಿಗೂ ಗಂಡನ ಬಳಿ ಕೈಚಾಚುತ್ತಿದ್ದೆ, ಇದೀಗ ಸ್ವಂತ ದುಡಿಮೆಯಿಂದ ತಿನ್ನುತ್ತಿದ್ದೇನೆ ಎನ್ನುತ್ತಲೇ ಖುಷಿ ಪಟ್ಟಿದ್ದಾಳೆ ಭಾಗ್ಯ. ಕೊನೆಗೆ ಒಂದು ಲಕ್ಷ ರೂಪಾಯಿಯನ್ನು ಶ್ರೇಷ್ಠಾಳಿಗೆ ಕೊಟ್ಟಿದ್ದಾಳೆ. ಇನ್ನು ಆ ಹಣದ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ ಫ್ಯಾನ್ಸ್‌.

'ಹಾಳಾಗೋದೆ’ ಕೇಳಿ ಚಂದನ್‌ ಶೆಟ್ಟಿಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ

click me!