ಊಹೆ ನಿಜ ಆಗೇ ಬಿಟ್ತಲ್ಲಾ! ಅಮೃತಧಾರೆ ಸೀರಿಯಲ್‌ನಲ್ಲಿ ಕೋಮಾಕ್ಕೆ ಹೋಗೇ ಬಿಟ್ಟ ಆನಂದ್! ಅಬ್ಬಬ್ಬಾ, ಇದಕ್ಕೆ ಏನೇನೆಲ್ಲ ಕಾಮೆಂಟ್ಸ್!

By Bhavani Bhat  |  First Published Aug 24, 2024, 12:30 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್‌ಗೆ ಡಿಕ್ಕಿ ಹೊಡೆದು ಕೋಮಾಗೆ ಹೋಗಿದ್ದಾನೆ. ಜೈದೇವ್‌ನ ಕುತಂತ್ರದಿಂದ ಆನಂದ್‌ ಈ ಸ್ಥಿತಿಗೆ ತಲುಪಿದ್ದಾನೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಟ್ವಿಸ್ಟ್ ಸೀರಿಯಲ್‌ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ಅಮೃತಧಾರೆ ಸೀರಿಯಲ್‌ನಲ್ಲಿ ಜನರ ಗೆಸ್‌ ವರ್ಕ್‌ ನಿಜ ಆಗಿದೆ. ನಾಯಕ ಗೌತಮ್ ದಿವಾನ್ ಗೆಳೆಯ ಆನಂದ್ ಕೋಮಾಕ್ಕೆ ಹೋಗಿದ್ದಾನೆ. ಈ ಪ್ರೋಮಾಗೆ ಯಾವ ಲೆವೆಲ್‌ಗೆ ಕಾಮೆಂಟ್ಸ್ ಬರ್ತಿದೆ ಅಂದರೆ ಇದನ್ನು ನೋಡಿ ಸೀರಿಯಲ್ ಟೀಮ್ ಕೋಮಾಗೆ ಹೋಗದಿದ್ರೆ ಸಾಕು ಅಂತ ಕೆಲವ್ರು ಮಾತಾಡ್ಕೊಳ್ತಿದ್ದಾರೆ. ಈ ಹಿಂದಿನ ಎಪಿಸೋಡ್‌ನಲ್ಲಿ ಆನಂದ್‌ಗೆ ವಿಲನ್‌ ಜೈದೇವ್‌ನ ನಿಜವಾದ ಗುಣ ತಿಳಿದಿತ್ತು. ಆತನೇ ಪಾರ್ಥ ಮತ್ತು ಅಪೇಕ್ಷಾರನ್ನು ಕೊಲೆ ಮಾಡಲು ಸಂಚು ರೂಪಿಸಿದ ಸತ್ಯ ತಿಳಿದುಹೋಗಿತ್ತು. ಈ ವಿಷಯವನ್ನು ನೇರವಾಗಿ ಗೌತಮ್‌ಗೆ ಹೇಳದೆ ಜೈದೇವ್‌ಗೆ ಹೇಳಿ ತಪ್ಪು ಮಾಡಿದ್ದ ಆನಂದ್‌. ಗೌತಮ್‌ಗೆ ಈ ವಿಚಾರ ತಿಳಿದರೆ ಗೆಳೆಯ ಎದೆ ಒಡೆದು ಸಾಯಬಹುದು ಎಂಬ ಆತಂಕದಿಂದ ಆನಂದ್‌ ಈ ರೀತಿ ಮಾಡಿದ್ದ. ಇದೀಗ ಈ ನಡೆ ಆನಂದ್‌ ಪ್ರಾಣಕ್ಕೆ ಸಂಚಕಾರ ತರುವ ಲೆವೆಲ್‌ಗೆ ಬಂದಿದೆ. ಜೀ ಕನ್ನಡ ಬಿಡುಗಡೆ ಮಾಡಿದ ಪ್ರಮೋದಲ್ಲಿ ಜೈದೇವ್‌ ಕೈವಾಡದಿಂದ ಅಪಘಾತಕ್ಕೊಳಗಾದ ಆನಂದ್ ಕೋಮಾಗೆ ಹೋಗಿದ್ದಾನೆ. ಇದನ್ನು ಡಾಕ್ಟರ್ ನೇರವಾಗಿಯೇ ಗೌತಮ್ ಮುಂದೆ ಹೇಳಿದ್ದಾರೆ. ಅಲ್ಲಿಗೆ ಜೈದೇವ್ ಅನ್ನೋ ವಿಲನ್‌ ಸದ್ಯಕ್ಕಂತೂ ಸೇಫ್ ಆಗಿದ್ದಾನೆ.

ಈ ಹಿಂದಿನ ಎಪಿಸೋಡ್‌ನಲ್ಲಿ ತನ್ನ ಮನೆಹಾಳ ಮಾವನ ಜೊತೆ ಮಾತಾಡುವ ಜೈದೇವ್‌ ಆನಂದ್‌ಗೆ ನನ್ನ ವಿಷಯ ಗೊತ್ತಾಗಿದೆ ಎಂದು ಹೇಳುತ್ತಾನೆ. ಈ ವಿಷಯವನ್ನು ಆನಂದ್‌ ಗೌತಮ್‌ಗೆ ಹೇಳಬಹುದು. ಅಲ್ಲಿಗೆ ನಿನ್ನ ಕಥೆ ಫಿನಿಶ್‌ ಎಂದು ಮಾವ ಹೇಳುತ್ತಾರೆ. ಅದಕ್ಕೆ ಜೈದೇವ್‌ 'ಅದಕ್ಕೆ ಈಗಾಗಲೇ ಆನಂದ್‌ ಮುಗಿಸಲು ಏರ್ಪಾಡು ಮಾಡಿದ್ದೇನೆ' ಎನ್ನುತ್ತಾನೆ.

Tap to resize

Latest Videos

Amrutadhare Serial: ಮುಂಚೆಯೇ ಗೆಸ್‌ ಮಾಡಿದ್ರು ವೀಕ್ಷಕರು, ಆನಂದ್ ಕೋಮಾಕ್ಕೆ ಹೋಗೋದು ಗ್ಯಾರಂಟಿ!

ಅದೇ ಸಮಯದಲ್ಲಿ ಆನಂದ್‌ ಮನೆಯಿಂದ ಹೊರಕ್ಕೆ ಬಂದಿದ್ದಾನೆ. ತನ್ನ ಮಡದಿ ಅಪರ್ಣಾಗೆ ಟಾಟಾ ಮಾಡುತ್ತ ಹೊರಡುವಾಗ ಮೆಟಾಡೋರ್‌ ವಾಹನ ಬಂದು ಆನಂದ್‌ಗೆ ಡಿಕ್ಕಿ ಹೊಡೆದಿದೆ. ಆನಂದ್‌ ರಸ್ತೆಯಲ್ಲಿ ಬಿದ್ದಿದ್ದಾನೆ. ಆ ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಅಪರ್ಣಾ ಅಳುತ್ತಾ ಈ ವಿಚಾರ ಗೌತಮ್‌ಗೆ ಹೇಳಿದ್ದಾಳೆ. ಹೆಂಡತಿ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಗೌತಮ್ ಈ ವಿಚಾರ ಕೇಳಿ ಕಂಗಾಲಾಗಿ ಆಸ್ಪತ್ರೆಗೆ ಓಡೋಡಿ ಬಂದಿದ್ದಾನೆ. ಅಲ್ಲಿ ಡಾಕ್ಟರ್ ಆತನಿಗೆ ಆನಂದ್ ಕಂಡೀಶನ್ಸ್ ಬಗ್ಗೆ ಹೇಳಿದ್ದಾರೆ.

ಡಾಕ್ಟರ್ ಹೇಳಿಕೆ ಪ್ರಕಾರ ಆನಂದ್ ಕೋಮಾಗೆ ಹೋಗಿದ್ದಾನೆ. ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಥರಾವರಿ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಸೀರಿಯಲ್ ನೋಡ್ತಿದ್ರೆ ನಾವೂ ಕೋಮಾಗೆ ಹೋಗ್ತೀವಿ', 'ಗೊತ್ತಿತ್ತು ಹೀಗೇ ಆಗುತ್ತೆ ಅಂತ. ಇನ್ನು ಆನಂದ್‌ಗೆ ಮನೇಲಿ ಟ್ರೀಟ್‌ಮೆಂಟ್ ಬೇರೆ ಶುರು ಮಾಡಿದ್ರೆ ಆನಂದ್‌ ಇನ್ನೇನು ಕೋಮಾದಿಂದ ಆಚೆ ಬರ್ತಾನೆ ಅನ್ನುವಾಗ ಜೈದೇವ್ ಮತ್ತೆ ಅಪಾಯ ಮಾಡ್ತಾನೆ. ಈ ರೀತಿ ಸೀರಿಯಲ್ ಮುಂದೆ ಹೋಗೋದು ಗ್ಯಾರಂಟಿ' ಅಂತ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಕೋಮಾ ಕೋಮಾ.. ಎಲ್ಲ ಸೀರಿಯಲ್‌ನ ಕಥೆಯೂ ಇದೇ ಆಗ್ತಿದೆ' ಅಂತ ಮಗದೊಬ್ಬರು ಗೊಣಗಿದ್ದಾರೆ.

ಫೈನಲೀ ಪುಟ್ಟಕ್ಕನ ಮಡಿಲು ಸೇರೇ ಬಿಟ್ಲು ಸಹನಾ, ಆದ್ರೆ ಇದು ರಿಯಲ್ಲಾ, ಕನಸಾ?

ಜನ ಈ ಸೀರಿಯಲ್‌ಗೆ ಎಷ್ಟೇ ಉಗ್ದು ಉಪ್ಪಿನಕಾಯಿ ಹಾಕಿದ್ರೂ ನೋಡೋದಂತೂ ನೋಡೇ ನೋಡ್ತಾರೆ ಅನ್ನೋದನ್ನು ಈ ಸೀರಿಯಲ್ ಪ್ರೋಮೋಗೆ ಬಂದಿರೋ ವ್ಯೂಸ್ ಹೇಳುತ್ತೆ. ಈ ಪ್ರೋಮೋ ಪ್ರಸಾರವಾದ ಸ್ವಲ್ಪ ಹೊತ್ತಿಗೇ ಹದಿಮೂರು ಲಕ್ಷಕ್ಕೂ ಅಧಿಕ ಮಂದಿ ಈ ಪ್ರೋಮೋ ನೋಡಿದ್ದಾರೆ. ಇದನ್ನು ಇನ್ನು ಈ ಸೀರಿಯಲ್‌ನಲ್ಲಿ ಆನಂದ್ ಪಾತ್ರವನ್ನು ನಿರ್ವಹಿಸಿದವರ ಹೆಸರೂ ಆನಂದ್. ಇವರು ಈ ಹಿಂದೆ ಸಿಲ್ಲಿಲಲ್ಲಿ ಸೀರಿಯಲ್‌ ಮೂಲಕ ಫೇಮಸ್ ಆಗಿದ್ರು. ಇವರಿಗೆ ಸಿಲ್ಲಿಲಲ್ಲಿ ಆನಂದ್ ಅನ್ನೋ ಹೆಸರೂ ಇದೆ. ಇವರ ಪತ್ನಿ ಅಪರ್ಣಾ ಪಾತ್ರದಲ್ಲಿ ಸ್ವಾತಿ ನಟಿಸಿದ್ದಾರೆ. ಉಳಿದಂತೆ ಛಾಯಾ ಸಿಂಗ್, ರಾಜೇಶ್ ನಟರಂಗ, ವನಿತಾವಾಸು ಮುಖ್ಯಪಾತ್ರಗಳಲ್ಲಿ ಇದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!