ಡಾ.ಬ್ರೋ ಬಿಗ್ಬಾಸ್ಗೆ ಹೋಗ್ತಿದ್ದಾರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ? ಯೂಟ್ಯೂಬ್ ನೇರಪ್ರಸಾರದಲ್ಲಿ ಬಂದ ಗಗನ್ ಖುದ್ದು ಹೇಳಿದ್ದೇನು?
ಡಾ.ಬ್ರೋ ಕುರಿತು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಹೇಳುವುದೇ ಬೇಡ ಬಿಡಿ. ಅಷ್ಟು ಮನೆಮಾತಾಗಿರುವ ಯುವಕ ಈತ. ಅರ್ಚಕರ ಮಗನಾಗಿ ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗ ಇವರು. ಇಂದು ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ನಮಸ್ಕಾರ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
ಇದೀಗ ಡಾ.ಬ್ರೋ ಬಿಗ್ಬಾಸ್ಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಇದು ಭಾರಿ ಸದ್ದು ಮಾಡುತ್ತಿದೆ. ಬಿಗ್ಬಾಸ್ನಲ್ಲಿ ಹೋಗಬೇಕು ಎಂದರೆ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮಾಡಿಕೊಂಡಿರಬೇಕು, ಇಲ್ಲದಿದ್ದರೆ, ಡಾ.ಬ್ರೋ ರೀತಿ ತುಂಬಾ ಫೇಮಸ್ ಆಗಿರಬೇಕು. ಇನ್ನೇನು ಬಿಗ್ಬಾಸ್ ಸೀಸನ್ 11 ಶುರುವಾಗಲಿದ್ದು, ಸಂಭಾವ್ಯರ ಪಟ್ಟಿ ಒಂದೊಂದಾಗಿ ಹೊರಬರುತ್ತಾ ಇದೆ. ಇದರಲ್ಲಿ ಡಾ.ಬ್ರೋ ಅರ್ಥಾತ್ ಗಗನ್ ಅವರ ಹೆಸರು ಕೂಡ ಇದೆ. ಈಗ ಇದರ ಬಗ್ಗೆ ಖುದ್ದು ಗಗನ್ ಅವರೇ ಮಾತನಾಡಿದ್ದಾರೆ.
ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಲಗ್ಗೆ ಇಟ್ಟು ಬಿಟ್ರಾ ಡಾ.ಬ್ರೋ? ಮೈ ಝುಂ ಎನ್ನುವ ಭಯಾನಕ ದೃಶ್ಯದ ಸೆರೆ...
ಇದೇ ಮೊದಲ ಬಾರಿಗೆ ಯೂಟ್ಯೂಬ್ ಲೈವ್ಗೆ ಬಂದಿರುವ ಗಗನ್ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಧ್ಯೆ ಕೆಲವು ದಿನಗಳು ಅಂತರ ಕಾಪಾಡಿಕೊಂಡಿದ್ದ ಬಗ್ಗೆ ವಿವರಿಸಿರುವ ಗಗನ್, ಒಂದು ದೇಶಕ್ಕೆ ಹೋಗಬೇಕು ಎಂದರೆ ಸಿಕ್ಕಾಪಟ್ಟೆ ಪ್ರಕ್ರಿಯೆಗಳು ಇರುತ್ತವೆ. ಅದನ್ನೆಲ್ಲಾ ಸರಿದೂಗಿಸಿ, ರೆಡಿ ಆಗಿ ಹೋಗಲು ಟೈಂ ಬೇಕಾಗುತ್ತದೆ. ಇದೇ ಕಾರಣಕ್ಕೆ ಅವುಗಳ ಪ್ರಕ್ರಿಯೆಯಲ್ಲಿದ್ದೆ ಎಂದಿದ್ದಾರೆ. ಇದೇ ವೇಳೆ ಯಶಸ್ವಿ ಯೂಟ್ಯೂಬರ್ ಆಗಲು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಗಗನ್ ಮಾತನಾಡಿದ್ದಾರೆ.
ಬಿಗ್ಬಾಸ್ಗೆ ಹೋಗುತ್ತೀರಾ ಎನ್ನುವ ಪ್ರಶ್ನೆ ಕೇಳಿದಾಗ, ಅರೆ ಕ್ಷಣ ಮೌನವಾಗಿರುವ ಡಾ.ಬ್ರೋ. ಮೂರು ತಿಂಗಳು ಒಂದೇ ಕಡೆ ಇರುವುದು ನನಗೆ ಕಷ್ಟವಾಗಬಹುದು. ಅದೇ ಟೈಂನಲ್ಲಿ ನಾನು ಕೆಲವು ದೇಶ ಸುತ್ತಬಹುದು. ಆದ್ದರಿಂದ ಈ ಬಗ್ಗೆ ನಾನು ಏನೂ ಯೋಚನೆ ಮಾಡಲಿಲ್ಲ, ಉತ್ತರ ಹೇಳುವುದು ಕಷ್ಟ ಎನ್ನುತ್ತಲೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಬಿಗ್ಬಾಸ್ಗೆ ಹೋಗುತ್ತೇನೋ, ಇಲ್ಲವೋ ಎನ್ನುವುದು ತಮಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಆದರೆ ಬಿಗ್ಬಾಸ್ಗೆ ಹೋಗಬೇಡಿ, ನಿಮಗೆ ನಿಮ್ಮದೇ ಆದ ಗುರುತು, ಗೌರವ ಇದೆ. ಅದನ್ನು ಕಳೆದುಕೊಳ್ಳಬೇಡಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಮತ್ತೆ ಕೆಲವರು ಬಿಗ್ಬಾಸ್ನಲ್ಲಿ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.
ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ