ಅಮೃತಧಾರೆ ಮುಗ್ಧ ಮಲ್ಲಿ ಫುಲ್ ಮಾಡರ್ನ್, ಜೈದೇವ್ ಜೊತೆ ಕುಣಿದ್ರೆ ಹಿಂಗಾ ಕಾಮೆಂಟ್ ಮಾಡೋದು?

By Bhavani Bhat  |  First Published Sep 19, 2024, 12:21 PM IST

 ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗೆ ಭರ್ಜರಿ ಸೀಮಂತ ನಡೀತಿದೆ. ಅಲ್ಲಿ ಫುಲ್ ಟ್ರೆಡಿಷನಲ್ ಡ್ರೆಸ್‌ನಲ್ಲಿ ಗರತಿ ಗೌರಮ್ಮನ ಥರ ರೆಡಿಯಾಗಿದ್ದಾರೆ. ಅದೇ ಮಲ್ಲಿ ಇನ್‌ಸ್ಟಾದಲ್ಲಿ ಜೈದೇವ್ ಜೊತೆ ಸ್ಟೆಪ್ ಹಾಕ್ತಿರೋದು ನೋಡಿ!


ಅಮೃತಧಾರೆ ಸೀರಿಯಲ್ ಇದೀಗ ಸಖತ್ ಹೈಪ್ ಪಡ್ಕೊಳ್ತಿದೆ. ಇದರಲ್ಲಿ ಹೈವೋಲ್ಟೇಜ್ ಸೀಮಂತ ನಡೀತಿದೆ. ಅದು ಮಲ್ಲಿಯ ಸೀಮಂತ. ಈ ಮಲ್ಲಿ ಮುಗ್ಧೆ, ಅನಾಥೆ. ಅವಳ ಜೊತೆ ದಿವಾನ್ ಮನೆತನದ ಗೌತಮ್ ದಿವಾನ್ ಮಲತಾಯಿ ಮಗ ಜೈದೇವ್ ರಿಲೇಶನ್‌ಶಿಪ್‌ನಲ್ಲಿದ್ದ. ಅವಳು ಗರ್ಭಿಣಿಯಾದಾಗ ಕೈ ಎತ್ತಿ ಗೌತಮ್ ಪತ್ನಿ ಭೂಮಿಕಾ ತಂಗಿ ಅಪೇಕ್ಷಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದ. ಅಷ್ಟರಲ್ಲಾಗಲೇ ಗೌತಮ್ ಕಿರಿಯ ತಮ್ಮನ ಜೊತೆಗೆ ಲವ್ವಲ್ಲಿ ಬಿದ್ದಿದ್ದ ಅಪೇಕ್ಷಾ ಈ ಮದುವೆ ಮುರಿದಾಗ ಖುಷಿ ಪಟ್ಟಳು. ಅದೇ ಹಸೆಮಣೆಯಲ್ಲಿ ಭೂಮಿಕಾ ಗೌತಮ್ ಸಮಯಪ್ರಜ್ಞೆಯಿಂದ ಮಲ್ಲಿಗೆ ತಾಳಿ ಕಟ್ಟೋ ಹಾಗಾಯ್ತು. ಆದರೆ ಇದು ಜೈದೇವ್ ಮನಸ್ಸು ಬದಲಾಯಿಸಿಲ್ಲ. ಆತ ದಿಯಾ ಅನ್ನೋ ಹುಡುಗಿ ಜೊತೆ ರಿಲೇಶನ್‌ಶಿಪ್ ಮುಂದುವರಿಸಿದ.

ಇತ್ತ ಗೌತಮ್, ಜೈದೇವ್ ನನ್ನು ದಾರಿಗೆ ತರಬೇಕು. ಮನೆ ಒಡೆಯಬಾರದು. ತನ್ನ ಸಹೋದರರು ಖುಷಿಯಾಗಿರಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಿದ್ದಾನೆ. ಆದರೆ, ಜೈದೇವ್ ಮಾತ್ರ ತಾನು ನಡೆದಿದ್ದೇ ದಾರಿ. ತಾನು ಮಾಡಿದ್ದೇ ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಗೌತಮ್ ಎಷ್ಟೇ ವಾರ್ನಿಂಗ್ ಕೊಟ್ಟರೂ ತಲೆ ಕೆಡಿಸಿಕೊಳ್ಳದೇ ತನ್ನ ದಾರಿಯಲ್ಲೇ ಸಾಗಿದ್ದಾನೆ. ದಿಯಾ ಮತ್ತು ಜೈದೇವ್ ಪದೇ ಪದೇ ಭೇಟಿಯಾಗುತ್ತಿದ್ದರೆ, ಮಲ್ಲಿಗೆ ಸಮಸ್ಯೆ ಆಗುತ್ತದೆ ಎಂದು ಗೌತಮ್ ಗಾಬರಿಯಾಗಿದ್ದಾನೆ. ಹೀಗಾಗಿ ದಿಯಾಳನ್ನು ಬೆಂಗಳೂರಿನಿಂದ ದೆಹಲಿಗೆ ಕಳಿಸುವ ಪ್ಲಾನ್ ಮಾಡಿದ್ದಾನೆ.

Tap to resize

Latest Videos

undefined

ಭೂಮಿಕಾಗೆ ಮಗು ಆಗ್ಲಿಲ್ಲಾ ಅಂತಂದ್ರೆ ಗೌತಮ್​ ಸುಮ್ನೆ ಬಿಡ್ತಾನಾ? ತಲೆ ತಗ್ಗಿಸೇ ಬಿಟ್ರಲ್ಲಾ ಹೆಂಗಸ್ರು!

ಈ ನಡುವೆ ಮಲ್ಲಿ ತನ್ನ ಸೀಮಂತದ ಆಸೆಯನ್ನು ಭೂಮಿಕಾ ಮುಂದೆ ಹೇಳ್ಕೊಂಡಿದ್ದಾಳೆ. ಭೂಮಿಕಾ ಮತ್ತು ಗೌತಮ್ ಅದಕ್ಕೊಪ್ಪಿ ಮನೆಯಲ್ಲೇ ಭರ್ಜರಿ ಸೀಮಂತ ಮಾಡಿಸಲು ಮುಂದಾಗಿದ್ದಾರೆ. ಸೀಮಂತ ಇದೀಗ ಭರ್ಜರಿಯಾಗಿಯೇ ನಡೆಯುತ್ತಿದೆ. ಮಲ್ಲಿ ತನ್ನ ಸೀಮಂತ ಎಂದು ಬಹಳ ಖುಷಿಯಾಗಿದ್ದಾಳೆ. ಅಲ್ಲದೇ, ಸೀಮಂತ ಮುಗಿದ ಬಳಿಕ ಪತಿ ಜೊತೆಗೆ ತವರಿಗೆ ಹೋಗುವ ಸಂಭ್ರಮದಲ್ಲಿ ಮಲ್ಲಿ ಇದ್ದಾಳೆ. ಆದರೆ ಭೂಮಿಕಾ ಮಲ್ಲಿಗೆ ಜೈದೇವ್ ಬಗ್ಗೆ ಗಮನ ಕೊಡು, ನಿನ್ನ ಜೊತೆಗೆ ಇರುವಂತೆ ನೋಡಿಕೋ ಎಂದು ಎಚ್ಚರಿಕೆ ಕೊಟ್ಟಿದ್ದು, ಮಲ್ಲಿ ಕೆಂಡಾಮಂಡಲಗೊಂಡಿದ್ದಾಳೆ. ನನ್ನ ಪತಿಗೆ ಯಾರ ಸಂಗವೂ ಇಲ್ಲ. ದಿಯಾ ಸ್ನೇಹಿತೆ ಅಷ್ಟೇ ಎಂದು ಭೂಮಿಕಾ ಮೇಲೆಯೇ ಹಾರಾಡಿದ್ದಾಳೆ. ಮಲ್ಲಿ ಜೈದೇವ್ ನನ್ನು ಅತಿಯಾಗಿ ನಂಬಿದ್ದು, ಇದರಿಂದ ಮುಂದೆ ಸಮಸ್ಯೆ ಅನುಭವಿಸುವುದಂತೂ ಪಕ್ಕಾ.

ಹೀಗೆ ಸೀರಿಯಲ್‌ನಲ್ಲಿ ಪರಮ ಮುಗ್ಧೆಯಾಗಿ ಬೆಳ್ಳಗಿರೋದೆಲ್ಲ ಹಾಲು ಅಂತ ನಂಬಿರೋ ಮಲ್ಲಿ ಸಖತ್ ಟ್ರೆಡಿಷನಲ್ ಉಡುಗೆಯಲ್ಲೇ ಕಾಣಿಸಿಕೊಳ್ಳೋದು. ಈಕೆಯ ಟ್ರೆಡಿಶನಲ್ ಲುಕ್ ನೋಡಿ ಎಷ್ಟೋ ಜನ ಹೆಂಗಸ್ರು, ಎಂಥಾ ಲಕ್ಷಣವಾದ ಹುಡುಗಿ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟಿದ್ದಾರೆ. ಆದರೆ ಇನ್‌ಸ್ಟಾದಲ್ಲಿ ಬೇರೆದೇ ಕಥೆ ಇದೆ. ಈ ಪಾತ್ರ ಮಾಡಿರೋ ರಾಧಾ ಭಗವತಿ ಮತ್ತು ಜೈದೇವ್ ಪಾತ್ರ ಮಾಡಿರೋ ರಾನವ್ ಕೊರಿಯನ್ ಆಲ್ಬಂಗೆ ಈಕೆಯ ಹುಕ್ ಸ್ಟೆಪ್ಸ್ ನೋಡಿ ಜನ ದಂಗಾಗಿಬಿಟ್ಟಿದ್ದಾರೆ.

ನಗುವ ನಯನ ಎಂದು ಮರ ಸುತ್ತಿದ ನಟಿ ಅದಿತಿ ಪ್ರಭುದೇವ: ಅಭಿಮಾನಿಗಳಿಗೋ ಮಗುವಿನದ್ದೇ ಚಿಂತೆ!

'ಹಿಂಗೆ ಕುಣಿದ್ರೆ ಮಗು ಆಚೆ ಬರುತ್ತೆ ಮಲ್ಲಿ..' ಅಂತಿದ್ದಾರೆ. ಇನ್ನೂ ಕೆಲವರು, 'ಮಲ್ಲಿ ಜೈದೇವ್ ಪ್ಯಾರಲಲ್ ವರ್ಲ್ಡ್' ಅಂತ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಫುಲ್ ಬೆಂಕಿ ಪರ್ಫಾಮೆನ್ಸ್‌ಗೆ ಸಾಕಷ್ಟು ಜನ ಶಬ್ಬಾಸ್ ಅಂತಿದ್ದಾರೆ.ಒಟ್ಟಾರೆ ಕೊರಿಯನ್ ಮ್ಯೂಸಿಕ್‌ಗೆ ರಾಧಾ ಭಗವತಿ ಮತ್ತು ರಾನವ್ ಡ್ಯಾನ್ಸ್ ಮಾತ್ರ ಬಿಂದಾಸ್ ಆಗಿದೆ. ಸೀರಿಯಲ್‌ನಲ್ಲಿ ಮಾಡ್ತಿರೋ ಪಾತ್ರಕ್ಕಿಂತ ಸಖತ್ ಡಿಫರೆಂಟಾಗಿ ಲೈವ್‌ಲೀ ಆಗಿ ಕಾಣಿಸಿಕೊಂಡಿರೋ ಈ ಜೋಡಿಗೆ ಫ್ಯಾನ್ಸ್ ಸಿಟ್ಟು ಮರೆತು ಕ್ಲಾಪ್ ಮಾಡ್ತಿದ್ದಾರೆ.

 

click me!