ಬಿಗ್​ಬಾಸ್​ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?

By Suchethana D  |  First Published Sep 19, 2024, 11:27 AM IST

ಬಿಗ್​ಬಾಸ್​ ಕನ್ನಡದ 11ನೇ ಸೀಸನ್​ ಇದೇ 29ರಿಂದ ಆರಂಭವಾಗಲಿದೆ. ಕಿಚ್ಚ ಸುದೀಪ್​ ಅವರೇ ನಡೆಸಿಕೊಡಲಿರುವ ಈ ಷೋನಲ್ಲಿ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಸಂಭಾವ್ಯ ಪಟ್ಟಿ ಈ ರೀತಿಯಾಗಿದೆ. 
 


ಬಿಗ್​ಬಾಸ್​ ಕನ್ನಡದ 11ನೇ ಸೀಸನ್​ ಯಾವಾಗ ಶುರುವಾಗುತ್ತೆ ಎಂದು ತುದಿಗಾಲಿನಲ್ಲಿ ನಿಂತಿರೋ ವೀಕ್ಷಕರು ಇನ್ನು 10 ದಿನವಷ್ಟೇ ಕಾಯಬೇಕಿದೆ.  ಬಿಗ್​ಬಾಸ್​ ಪ್ರೇಮಿಗಳಿಗೆ ಇದಾಗಲೇ ತಿಳಿದಿರುವಂತೆ ಇದೇ ಸೆಪ್ಟೆಂಬರ್ 29 ರಂದು  11ನೇ ಸೀಸನ್​ ಆರಂಭವಾಗಲಿದೆ. ಇದರ ಹೋಸ್ಟ್​ ಆಗಿ ಅವರು ಬರ್ತಾರೆ, ಇವರು ಬರ್ತಾರೆ ಎಂದು ಹಲವಾರು ಗಾಳಿಸುದ್ದಿಗಳು ಕೆಲ ತಿಂಗಳುಗಳಿಂದ ಹರಿದಾಡುತ್ತಲೇ ಇದೆ. ಆದರೆ,  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಫುಲ್​ ಖುಷ್​ ಆಗುವ ರೀತಿಯಲ್ಲಿ ಬಿಗ್​ಬಾಸ್​ ಪ್ರೊಮೋದಲ್ಲಿ ಅವರೇ ಕಾಣಿಸಿಕೊಂಡು ಹಿರಿಹಿರಿ ಹಿಗ್ಗುವಂತೆ ಮಾಡಿದ್ದಾರೆ.  10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು ಎಂದು ಇದಾಗಲೇ ಸುದೀಪ್​ ಪ್ರೊಮೋದಲ್ಲಿ ಹೇಳಿರುವ ಕಾರಣ, ಈ ಬಾರಿಯ ವಿಶೇಷತೆ ಏನು ಎಂಬ ಬಗ್ಗೆ ಫ್ಯಾನ್ಸ್​ ಬಿಟ್ಟ ಕಣ್ಣುಗಳಿಂದ ಕಾಯುತ್ತಿದ್ದಾರೆ.

ಹಾಗಿದ್ದರೆ ಬಿಗ್​ಬಾಸ್​-11ರಲ್ಲಿ ಯಾರ್ಯಾರು ಇರಲಿದ್ದಾರೆ ಎಂಬ ಬಗ್ಗೆ ಇದಾಗಲೇ ಕೆಲವಷ್ಟು ಮಾಹಿತಿ ಸಿಕ್ಕಿದೆ. ಸಂಭಾವ್ಯ ಪಟ್ಟಿ ಹೊರಬಂದಿದ್ದು, ಈ ಬಾರಿ ಈ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ದರೆ ಅವರು ಯಾರು ಎಂಬುದರ ಜೊತೆಗೆ ಕಿರು ಪರಿಚಯವನ್ನೂ ಇಲ್ಲಿ ಮಾಡಲಾಗಿದೆ. ನಿಮ್ಮ ನೆಚ್ಚಿನ ಸ್ಟಾರ್ಸ್​ ಯಾರಾದರೂ ಇದ್ದಾರಾ ನೋಡಿಬಿಡಿ. ಈ ಮೊದಲೇ ಹೇಳಿದಂತೆ, ಸೆಪ್ಟೆಂಬರ್ 29ರ ಭಾನುವಾರದಂದು 18 ಸ್ಪರ್ಧಿಗಳ ಗ್ರ್ಯಾಂಡ್ ಎಂಟ್ರಿಯೊಂದಿಗೆ ಪ್ರೀಮಿಯರ್ ಷೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡದಲ್ಲಿ ಷೋ ಆರಂಭವಾಗಲಿದೆ.  

Tap to resize

Latest Videos

undefined

ಬಿಗ್​ಬಾಸ್​ಗೆ ಹೊಸ ಚೀಫ್​ ನೇಮಕ: 'ಮನೆಯೇ ಮಂತ್ರಾಲಯ’ ನಟ ನಿಖಿಲ್​ಗೆ ಒಲಿಯಿತು ಪಟ್ಟ
 
ಸ್ಯಾಂಡಲ್​ವುಡ್​ ನಟಿ ಪ್ರೇಮಾ (Prema)
ಸ್ಯಾಂಡಲ್​ವುಡ್​ ಬ್ಯೂಟಿ, ಎವರ್​ಗ್ರೀನ್​ ತಾರೆ  ಪ್ರೇಮಾ ಬಿಗ್​ಬಾಸ್​ 11ರ ಮನೆ  ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ 'ಮಹಾನಟಿ' ಷೋ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಪ್ರೇಮಾ,  'ಬಿಗ್ ಬಾಸ್' ಮನೆಗೆ ಕಾಲಿಡುತ್ತಾರಾ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.  

ಹರೀಶ್ ನಾಗರಾಜು
ಜನಪ್ರಿಯ ಟಿ.ವಿ ನಿರೂಪಕ ಹರೀಶ್ ನಾಗರಾಜು ಅವರೂ ಈ ಬಾರಿ ಇರಲಿದ್ದಾರೆ ಎನ್ನಲಾಗಿದೆ. ಕಳೆದ ಸೀಸನ್‌ನಲ್ಲಿ, ಅವರ ಮಾಜಿ ಸಹೋದ್ಯೋಗಿ ಗೌರಿಶ್ ಅಕ್ಕಿ ಮನೆಗೆ ಪ್ರವೇಶಿಸಿದ್ದರು, ಆದರೆ ಕೆಲವೇ ವಾರಗಳಲ್ಲಿ ಅವರು ಮನೆಯಿಂದ ಹೊರಬಂದರು. 


ಅಮೂಲ್ಯಾ ಭಾರದ್ವಾಜ್ (Amoolya Bharadhwaj)
'ದಾಸ ಪುರಂದರ' ಮತ್ತು 'ಬೃಂದಾವನ'ದಲ್ಲಿ ನಟಿಸಿರುವ ನಟಿ ಅಮೂಲ್ಯ ಭಾರದ್ವಾಜ್ ಅವರು ಮತ್ತೊಂದು ಸಂಭಾವ್ಯ ಸ್ಪರ್ಧಿಯಾಗಿದ್ದು, ಅವರು ಆಫರ್ ಅನ್ನು ಒಪ್ಪಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. 


ಮಾನಸ ತುಕಾಲಿ ಸಂತೋಷ (Manasa Tukali Santosh)
ಅವರು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖ, 'ಗಿಚ್ಚಿ ಗಿಲಿಗಿಲಿ ಸೀಸನ್​ 3' ರ ರನ್ನರ್ ಅಪ್ ಮಾನಸಾ ತುಕಾಲಿ ಸಂತೋಷ್ ಈ ಬಾರಿ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಇದ್ದಾರೆ. ಇವರ ಪತಿ ತುಕಾಲಿ ಸಂತೋಷ್ ಹಿಂದಿನ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು. ಆ ಸಂದರ್ಭದಲ್ಲಿ ಮಾನಸಾ ಮ  ಅವರು ತಮ್ಮ ಗಂಡನನ್ನು ಭೇಟಿಯಾಗಲು ಮನೆಗೆ ಪ್ರವೇಶಿಸಿದ್ದರು. 


ಹುಲಿ ಕಾರ್ತಿಕ್
ಸಂಭಾವ್ಯ ಸ್ಪರ್ಧಿಗಳ ಪೈಕಿ ಹಾಸ್ಯನಟ ಹುಲಿ ಕಾರ್ತಿಕ್ ಅವರ ಹೆಸರೂ ಇದೆ, 'ಗಿಚ್ಚಿ ಗಿಲಿಗಿಲಿ 3' ವಿಜೇತರಾಗಿರುವ ಇವರು, ಹಾಸ್ಯಕ್ಕೆ ಹೆಸರುವಾಸಿಯಾಗಿದ್ದಾರೆ.  


ಐಶ್ವರ್ಯಾ ರಂಗರಾಜನ್
'ಮಗಳು ಜಾನಕಿ' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಗಾಯಕಿ ಮತ್ತು ನಟಿ ಐಶ್ವರ್ಯಾ ರಂಗರಾಜನ್ ಕೂಡ ದೊಡ್ಮನೆ ಪ್ರವೇಶಸಲಿದ್ದಾರೆ ಎನ್ನಲಾಗಿದೆ.  ಹಿನ್ನೆಲೆ ಗಾಯಕಿಯಾಗಿಯೂ ಇವರು ಗುರುತಿಸಿಕೊಂಡಿದ್ದಾರೆ.

10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು


 ಭವ್ಯಾ ಗೌಡ (Bhavya Gowda)
ಭವ್ಯಾ ಈ ಹಿಂದೆ 'ಗೀತಾ' ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಅವರು 'ಬಿಗ್ ಬಾಸ್ ಕನ್ನಡ' ಮಿನಿ ಸೀಸನ್‌ನಲ್ಲಿಯೂ ಕಾಣಿಸಿಕೊಂಡರು. 


ದೀಪಕ್ ಗೌಡ
'ಒಲವಿನ ಪಾಷಾ' ಚಿತ್ರದ ಮೂಲಕ ಖ್ಯಾತಿ ಪಡೆದ ಕನ್ನಡ ನಟ ಅಕ್ಷಯ್ ನಾಯಕ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ. 


ಗೌರವ ಶೆಟ್ಟಿ
'ಬಿಗ್ ಬಾಸ್ ಕನ್ನಡ 11' ಮನೆಗೆ ನಟ ಗೌರವ್ ಶೆಟ್ಟಿ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. 


ಲೇಖಿ ಗೋಸ್ವಾಮಿ
ತಮ್ಮ ಯೂಟ್ಯೂಬ್ ಚಾನೆಲ್ ಲೇಖಿ ರೈಡರ್ ಮೂಲಕ ಗಮನ ಸೆಳೆದ ಸಾಮಾಜಿಕ ಮಾಧ್ಯಮದ ವ್ಯಕ್ತಿ ಲೇಖಿ ಗೋಸ್ವಾಮಿ ಅವರು 'ಬಿಗ್ ಬಾಸ್ ಕನ್ನಡ 11' ನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. 


ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ
ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಪ್ರಖ್ಯಾತ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಕೂಡ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂಬ ವದಂತಿಗಳಿವೆ. ಅಥವಾ ಇಬ್ಬರಲ್ಲಿ ಒಬ್ಬರು ಮನೆಗೆ ಪ್ರವೇಶಿಸುತ್ತಾರೆಯೆ ಎಂಬುದು ಸ್ಪಷ್ಟವಾಗಿಲ್ಲ.


ಇವರ ಹೊರತಾಗಿ,  ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಮತ್ತು ಶರತ್ ಕುಮಾರ್ ಅವರಂತಹ ಪ್ರಭಾವಿಗಳ ಹೆಸರು ಕೂಡ ಚಾಲ್ತಿಯಲ್ಲಿದೆ.  ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಈ ಸ್ಟಾರ್‌ಗಳಲ್ಲಿ ಯಾರು 'ಬಿಗ್ ಬಾಸ್ ಕನ್ನಡ 11' ಮನೆಗೆ ಕಾಲಿಡುತ್ತಾರೆ ಮತ್ತು ವಿಜೇತರಾಗಿ ಹೊರಹೊಮ್ಮುತ್ತಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. 

click me!