ಛಾಯಾ ಸಿಂಗ್, ರಾಜೇಶ್ ನಟರಂಗ ನಟಿಸಿರೋ ಅಮೃತಧಾರೆ ಟಿಆರ್‌ಪಿಯಲ್ಲಿ ನಂ.1 ಆಗಿ ಹೊರಹೊಮ್ಮಿದೆ. ಶುರುವಲ್ಲಿ ಜನ ಬೈಯ್ಯುತ್ತಿದ್ದ ಸೀರಿಯಲ್ ಅನ್ನೇ ಜನ ಬಹಳ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಅಮ್ಮಮ್ಮನ ಎಂಟ್ರಿ ಕಾರಣನಾ?
ಸೀರಿಯಲ್ ಅನ್ನೋದು ಮಧ್ಯಮ ವರ್ಗದ ಹೆಂಗಳೆಯರ ಮನಸ್ಥಿತಿಗೆ ತಕ್ಕ ಹಾಗೆ ರೂಪುಕೊಳ್ಳುವ ಕಥಾ ಜಗತ್ತು. ಇದರಲ್ಲಿ ಬರೋ ಕಥೆಗಳೆಲ್ಲ ಒಂದೋ ಈ ಹೆಣ್ಮಕ್ಕಳು ಅನುಭವಿಸುವ ಕಷ್ಟ ಸುಖಗಳ ಕಥೆ ಆಗಿರಬೇಕು, ಇಲ್ಲಾಂದ್ರೆ ಅವರ ಕಲ್ಪನೆಗೆ ಕನಸಿಗೆ ಸರಿಹೊಂದುವ ಕಥೆ ಆಗಿರಬೇಕು. ಜಗತ್ತು ಆಧುನಿಕ ಎಲ್ಲೆಲ್ಲೋ ಮುಂದೋಡುತ್ತಾ ಕೊರಿಯನ್ ಎಂಟರ್‌ಟೇನ್‌ಮೆಂಟ್, ಎನಿಮೆ ಅಂತೆಲ್ಲ ಏನೇನೋ ಎಂಟರ್‌ಟೇನ್‌ಮೆಂಟ್‌ಗಳು ಬಂದಿದ್ದರೂ ಸೀರಿಯಲ್‌ಗಳು ಮಾತ್ರ ಅಷ್ಟು ಇಷ್ಟು ಆಚೀಚೆ ಸರಿದು ಮತ್ತದೇ ಸ್ಥಾನಕ್ಕೆ ಬಂದು ನಿಲ್ಲುತ್ತವೆ. ಈ ಸೀರಿಯಲ್ ನಡೆಸುವ ಚಾನೆಲ್‌ಗಳ ಗುರಿ ಮಧ್ಯಮ ವರ್ಗದ ಗೃಹಿಣಿಯರ ಗಮನ ಸೆಳೆಯುವುದು. ಹೆಚ್ಚಿನ ಓದು ಇಲ್ಲದ, ಮನೆ ಗಂಡ ಮಕ್ಕಳು ಸಂಸಾರ ಅನ್ನೋ ಜಗತ್ತಿನಲ್ಲರುವ ಹೆಂಗಸರು ಈ ಸೀರಿಯಲ್ ಕಥೆಗಳನ್ನು ಬಹಳ ಇಂಟೆನ್ಸ್ ಆಗಿ ನೋಡುವ ಜತೆಗೆ ಕಿರುತೆರೆಯ ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಯನ್ನು ಬಹುಕೋಟಿ ಉದ್ಯಮವಾಗಿ ಬೆಳೆಸಿದ್ದಾರೆ.
ಇಂಥಾ ಕಿರುತೆರೆ ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಯಲ್ಲಿ ಒಂದು ಸೀರಿಯಲ್ ಬರ್ತಿದೆ ಅಂತಾದಾಗ ಜನ ಕುತೂಹಲದಿಂದ ಆ ಕಥೆಗೆ ಕಾಯ್ತಾರೆ. ಅವರಿಗೆ ಕೋರ್ ಸಬ್ಜೆಕ್ಟ್‌ನಲ್ಲಿ ಸಾಮ್ಯ ಇದ್ದರೂ ಪರ್ವಾಗಿಲ್ಲ, ಕಥೆ ಮಾತ್ರ ಹೊಸತಾಗಿರಬೇಕು.
103 ಡಿಗ್ರಿ ಜ್ವರ ಇದ್ರೆ ಕೈ ನಡುಗದೇ ಏನ್ ಆಗುತ್ತೆ?; ವಿಶಾಲ್ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಖುಷ್ಬೂ
ಅವರ ಲೈಫಲ್ಲಿ ಜವಾಬ್ದಾರಿ, ಟೆನ್ಶನ್‌ಗಳ ನಡುವೆ ಕಳೆದುಹೋದಂತಿರುವ ರೊಮ್ಯಾಂಟಿಕ್ ಅನುಭವ ಅವರಿಗೆ ಸೀರಿಯಲ್ ಮೂಲಕ ಆದರೂ ಸಿಗಬೇಕು. ಸೋ ಕೋರ್‌ನಲ್ಲಿ ಪ್ರೇಮದ ಕಥೆ ಇದ್ದು ಹೊರ ಆವರಣದಲ್ಲಿ ಸಂಸಾರದ ಕಥೆ ಇರುವ ಸೀರಿಯಲ್ ಎಲ್ಲ ಹೆಂಗಸರ ಫೇವರಿಟ್. ಈ ಮಾತು ಸತ್ಯ ಹೌದೋ ಅಲ್ವೋ ಗೊತ್ತಿಲ್ಲ. ಆದರೆ ಇದು ಸತ್ಯ ಅಂತ ಚಾನೆಲ್‌ಗಳು ನಂಬಿವೆ. ಮತ್ತು ಆ ಥರದ ಸೀರಿಯಲ ಮಾಡುತ್ತಿವೆ. ಬೇರೆ ಆಯ್ಕೆ ಇಲ್ಲದ ಗೃಹಿಣಿಯರು ಈ ಕಥೆಯ ಮಾಯಾಜಾಲದೊಳಗೆ ಸಿಲುಕಿ ಬಿಡ್ತಾರೆ.
ಇರಲಿ, ಇಷ್ಟೆಲ್ಲ ಮಾತು ಬರೋದಕ್ಕೆ ಕಾರಣ ಅಮೃತಧಾರೆ ಅನ್ನೋ ಸೀರಿಯಲ್. ಟ್ವಿಸ್ಟ್, ಸೆಂಟಿಮೆಂಟ್ ಅಂತ ವೀಕ್ಷಕರನ್ನು ಈ ಧಾರಾವಾಹಿ ಹಿಡಿಟ್ಟುಕೊಂಡಿದೆ. 'ಅಮೃತಧಾರೆ' ಧಾರಾವಾಹಿ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಗಳಿಸಿ ನಂಬರ್ ವನ್ ಸ್ಥಾನವನ್ನು ಆವರಿಸಿಕೊಂಡಿದೆ. ಕರ್ನಾಟಕದ ಮನೆ ಮನೆಯಲ್ಲಿ ಮೆರೆದ ಧಾರಾವಾಹಿ ಅಮೃತಧಾರೆ ಕನ್ನಡ ಧಾರಾವಾಹಿಗಳಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದೆ. ಎರಡನೇ ಸ್ಥಾನ 'ಅಣ್ಣಯ್ಯ' ಧಾರಾವಾಹಿಗೆ ಗಿಟ್ಟಿಸಿಕೊಂಡಿದೆ. 9.8 ಟಿಆರ್‌ಪಿ ಮೂಲಕ ಕರ್ನಾಟಕ ಪ್ರೇಕ್ಷಕರ ಮನಗೆದ್ದ ಧಾರಾವಾಹಿಯಾಗಿ 'ಅಮೃತಧಾರೆ' ಹೊರಹೊಮ್ಮಿದೆ. ಇನ್ನು ಎಪಿಸೋಡ್‌ನಲ್ಲಿ ಗೌತಮ್ ತನ್ನ ತಂಗಿಯನ್ನು ಕರೆದು ರಕ್ಷಾ ಬಂಧನದ ಕಟ್ಟುವಂತೆ ಹೇಳಿದಾಗ ಪಾಪ ಸುಧಾಗೆ ಬಹಳ ಖುಷಿ ಆಗುತ್ತೆ. ಪ್ರತಿ ವರ್ಷ ಗೌತಮ್ ರಕ್ಷಾ ಬಂಧನದ ದಿನದಂದು ತನ್ನ ಪ್ರೀತಿಯ ತಂಗಿಯ ನೆನಪಾಗಿ ಒಂದು ರಕ್ಷಾ ಬಂಧನ ಎತ್ತಿಡುತ್ತಿದ್ದರು. ಆದರೆ, ಇದೀಗ ತನ್ನ ತಂಗಿಯ ಬಳಿ ಇದೆಲ್ಲವನ್ನೂ ಒಂದೇ ದಿನ ತನ್ನ ಕೈಗೆ ಕಟ್ಟುವಂತೆ ಹೇಳಿದಾಗ ಸುಧಾಗೆ ಎಲ್ಲಿಲ್ಲದ ಖುಷಿ ಆಗುತ್ತದೆ.
ಸೀರೆ ಉಡುಸ್ತೀನಿ ಅಂದೋರು ಕೈ ಕೊಟ್ರು ಹೋದ್ರು, ಆಮೇಲೆ ಹೀಗೆಲ್ಲಾ ಆಯ್ತು; ತನಿಷಾ ಕುಪ್ಪಂಡ!
ಶುರುವಿನಲ್ಲಿ ಅಮೃತಧಾರೆ ಸೀರಿಯಲ್ ಬಂದಾಗ ಇದು ಆಂಟಿ ಅಂಕಲ್ ಕತೆ ಅಂತ ಜನ ಬಾಯಿಗೆ ಬಂದ ಹಾಗೆ ಬೈದಿದ್ರು. ಇದಕ್ಕೆ ಕಾರಣ ಜೀ ಯಲ್ಲಿ ಬರುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್. ಇದರಲ್ಲೂ ಮಧ್ಯ ವಯಸ್ಸಿನ ಗಂಡಸು ನಾಯಕನಾಗಿದ್ದ. ಸದ್ಯ ಅಮೃತಧಾರೆಯಲ್ಲಿ ನಾಯಕ, ನಾಯಕಿ ಇಬ್ಬರೂ ಮಧ್ಯ ವಯಸ್ಸಿನವರು. ಒಬ್ಬರು ಶ್ರೀಮಂತರು, ಇನ್ನೊಬ್ಬರು ಮಿಡಲ್ ಕ್ಲಾಸ್. ಆದರೆ ಅಮೃತಧಾರೆಯ ಕಥೆಯಲ್ಲಿ ಜನರಿಗೆ ಮಜಾ ಸಿಕ್ಕಿದೆ. ಅವರು ಈ ಸೀರಿಯಲ್ ಅನ್ನು ಹೆಚ್ಚೆಚ್ಚು ನೋಡೋ ಮೂಲಕ ಗೆಲ್ಲಿಸಿದ್ದಾರೆ. ಈ ಸೀರಿಯಲ್‌ಗೆ ಇತ್ತೀಚೆಗೆ ಕನ್ನಡತಿ ಅಮ್ಮಮ್ಮನಾಗಿ ಫೇಮಸ್ ಆಗಿದ್ದ ಚಿತ್ಕಳಾ ಬಿರಾದಾರ್ ಮುಖ್ಯಪಾತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಅವರ ಎಂಟ್ರಿ, ಅಮ್ಮ ಮಗನ ಪುನರ್‌ಭೇಟಿ ಎಲ್ಲ ಬಹಳ ಎಮೋಶನಲ್ ಆಗಿ ಬಂದಿದ್ದೇ ಏಕಾಏಕಿ ಈ ಸೀರಿಯಲ್ ನಂ.1 ಆಗಿ ಹೊರಹೊಮ್ಮಿದೆ.