ಬಿಗ್ ಬಾಸ್ ಮನೆಯ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ರಾತ್ರಿಯಿಡೀ ಮಾತನಾಡಿ, ಕಿಚ್ಚನ ಮುಂದೆ ಜಗಳವಾಡುವ ನಾಟಕವಾಡುತ್ತಿದ್ದಾರೆ. ಈ ಜೋಡಿ ಕಿಚ್ಚ ಸುದೀಪ ಮತ್ತು ಎಲ್ಲ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆಯೇ? ಎಂಬ ಅನುಮಾನ ಎದುರಾಗಿದೆ.
ಬೆಂಗಳೂರು (ಜ.12): ಬಿಗ್ ಬಾಸ್ ಮನೆಯಲ್ಲಿ ರಾತ್ರಿ ಮಲಗುವುದನ್ನು ಬಿಟ್ಟು ಬೆಳಗ್ಗೆ 5 ಗಂಟೆವರೆಗೆ ಒಟ್ಟಿಗೆ ಕುಳಿತು ಹರಟೆ ಹೊಡೆಯುವ ತ್ರಿವಿಕ್ರಮ್ - ಭವ್ಯಾ ಗೌಡ ಜೋಡಿ, ಕಿಚ್ಚನ ಪಂಚಾಯಿತಿಯಲ್ಲಿ ಹಾವು-ಮುಂಗುಸಿಯಂತೆ ಪರಸ್ಪರ ದೂರುಗಳನ್ನು ಹೇಳಿಕೊಳ್ಳುತ್ತಾರೆ. ಇವರು ದೂರ ಆಗುವ ನಾಟಕ ಮಾಡುತ್ತಾ ಬಿಗ್ ಬಾಸ್, ಕಿಚ್ಚ ಸುದೀಪ್ ಹಾಗೂ ರಾಜ್ಯದ 6 ಕೋಟಿ ಕನ್ನಡದ ವೀಕ್ಷಕರನ್ನು ಬಕ್ರಾ ಮಾಡುತ್ತಿದ್ದಾರಾ? ಎಂಬ ಅನುಮಾನ ಕಂಡುಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ ಶನಿವಾರದ ಪಂಚಾಯಿತಿಯ ಹಿಂದಿನ ದಿನ ಟಾಸ್ಕ್ ಮುಗಿಸಿ ರಾತ್ರಿ ಎಲ್ಲರೂ ಮಲಗಿದರೆ, ತ್ರಿವಿಕ್ರಮ್ ಮತ್ತು ಭವ್ಯಾಗೌಡ ಅವರು ಮಾತ್ರ ಮಲಗಲೇ ಇಲ್ಲ. ರಾತ್ರಿಯಿಡೀ ಒಟ್ಟಿಗೆ ಕುಳಿತುಕೊಂಡು ಗಂಟೆಗಟ್ಟಲೆ ಮಾತನಾಡಿದ್ದಾರೆ. ಬೆಳಗ್ಗೆ 4.40ರವರೆಗೆ ಮಾತನಾಡಿದ್ದನ್ನು ಸ್ವತಃ ಬಿಗ್ ಬಾಸ್ ತೋರಿಸಿದ್ದಾರೆ. ಆದರೆ, ಈ ಜೋಡಿ ಒಟ್ಟಿಗೆ ಇರುವುದನ್ನು ವಾರದ ಪಂಚಾಯಿತಿ ವೇಳೆ ಕಿಚ್ಚ ಸುದೀಪ ಕೇಳಿದರೆ, ಹಾವು-ಮುಂಗುಸಿ ತರಹ ತಾವಿಬ್ಬರೂ ಕಿತ್ತಾಡುವವರು ಎಂಬಂತೆ ಒಬ್ಬರ ಮೇಲೆ ಮತ್ತೊಬ್ಬರು ದೂರು ಹೇಳಿಕೊಳ್ಳುತ್ತಾರೆ.
ಇದೀಗ ಸ್ವತಃ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಗೆಲುವಿಗೆ ಯಾರು ಅಡ್ಡಿಯಾಗಿದ್ದಾರೆ ಅವರನ್ನು ತೋರಿಸಿ ಅವರ ಮುಖಕ್ಕೆ ಬಣ್ಣ ಎರಚಿ ಎಂದು ಹೇಳುತ್ತಾರೆ. ಆಗ ಭವ್ಯಾ ಗೌಡ ನನಗೆ ತ್ರಿವಿಕ್ರಮ್ ಗೆಲ್ಲುವುದಕ್ಕೆ ಅಡ್ಡಿ ಆಗಿದ್ದಾನೆ ಎಂದು ಹೇಳುತ್ತಾರೆ. ತ್ರಿವಿಕ್ರಮ್‌ನ ಸ್ಟ್ರಾಟರ್ಜಿ ಹಾಗೂ ಅವರು ಮಾತನಾಡುವ ಮಾತುಗಳು ನನ್ನ ಆಟಕ್ಕೆ ತೊಂದರೆ ಉಂಟಾಗಿ ಅವರು ಮುಂದಕ್ಕೆ ಹೋಗುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಭವ್ಯಾ ಹೇಳುತ್ತಾರೆ. ಇದಕ್ಕೆ ತಿರುಗೇಟು ನೀಡುವ ತ್ರಿವಿಕ್ರಮ್ ಈಗ ಮಾರಿ ಹಬ್ಬ ಶುರುವಾಗಿದೆ ಅಣ್ಣಾ.. ಅದರ ಬಣ್ಣ ನನ್ನ ಮುಖದಲ್ಲಿ ಕಾಣುತ್ತಿದೆ ಎಂದು ಹೇಳುತ್ತಾರೆ. ಅಂದರೆ, ರಾತ್ರಿಯಿಡೀ ಒಟ್ಟಿಗೆ ಕುಳಿತು ಮಾತನಾಡಿ, ಬೆಳಗ್ಗೆ ಕಿಚ್ಚನ ಸುದೀಪ ಅವರ ಮುಂದೆ ಹೀಗೆ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಾರೆ. ಇದಾದ ನಂತರ ಮುಂದಿನ ವಾರದ ಟಾಸ್ಕ್ ಶುರುವಾದರೆ ಪುನಃ ಒಂದಾಗಿ ಆಟ ಶುರು ಮಾಡುತ್ತಾರೆ. ಕಳೆದ ಮೂರ್ನಾಲ್ಕು ವಾರಗಳಿಂದ ಈ ಜೋಡಿ, ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಇಡೀ ರಾಜ್ಯದ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಫೈನಲಿಸ್ಟ್ ಹನುಮಂತನ ಮಾತಿಗೆ ಸಹ-ಸ್ಪರ್ಧಿಗಳು ಮಾತ್ರವಲ್ಲ, ಕಿಚ್ಚ ಸುದೀಪನೇ ಬೆಚ್ಚಿಬಿದ್ರು!
ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಇಂದಿಗೆ 105 ದಿನಗಳು ಪೂರ್ಣಗೊಂಡಿವೆ. ಆರಂಭದ ಒಂದೆರಡು ವಾರಗಳನ್ನು ಬಿಟ್ಟರೆ ಉಳಿದ 13 ವಾರಗಳಿಂದ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಜೋಡಿ ಎಲ್ಲರಿಗೂ ಕಣ್ಣು ಕುಕ್ಕುತ್ತಿದೆ. ಆದರೆ, ಈ ಬಿಗ್ ಬಾಸ್ ಸೀಸನ್ 11ರಲ್ಲಿ ಮಾತ್ರ ಯಾರನ್ನೂ ಜೋಡಿಯಾಗಿ (ಕಪಲ್) ಆಟವಾಡುವುದಕ್ಕೆ ಬಿಗ್ ಬಾಸ್ ಮಾತ್ರ ಬಿಡುತ್ತಿಲ್ಲ. ಹೀಗಾಗಿ, ಜೋಡಿಯಾಗಿ ಆಟವಾಡುತ್ತಿದ್ದ ಧರ್ಮ ಕೀರ್ತಿರಾಜ್-ಅನುಷಾ ರೈ ಹಾಗೂ ಶಿಶಿರ್ ಶಾಸ್ತ್ರಿ-ಐಶ್ವರ್ಯಾ ಸಿಂಧೋಗಿ ಜೋಡಿಯನ್ನು ಮನೆಗೆ ಕಳಿಸಲಾಗಿದೆ. ಇವರಲ್ಲಿ ಧರ್ಮ ಮತ್ತು ಅನುಷಾ ರೈ ಅವರು ಟಾಸ್ಕ್ ಸರಿಯಾಗಿ ಆಟವಾಡದೇ ಜೋಡಿಯಾಗಿ ಕಾಲ ಕಳೆಯುವುದಕ್ಕೆಂದೇ ಬಂದಿದ್ದಾರೆ ಎಂಬ ಮಾತು ಕೂಡ ವೀಕ್ಷಕರ ವಲಯದಿಂದ ಕೇಳಿಬಂದಿತ್ತು.
ನಿವಾರಣೆ ಆಗುತ್ತಾ ಅಡಚಣೆ?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9 pic.twitter.com/KksMoakl9W
ಈ ಎರಡು ಜೋಡಿಗಳನ್ನು ಹೊರತುಪಡಿಸಿ ಇನ್ನೂ 3 ಜೋಡಿಗಳು ಮನೆಯಲ್ಲಿದ್ದಾರೆ. ಅದು ತ್ರಿವಿಕ್ರಮ್ - ಭವ್ಯಾ ಗೌಡ ಜೋಡಿ ಎಲ್ಲರ ಕಣ್ಣಿಗೆ ಕುಕ್ಕುತ್ತಿದೆ. ಇವರಿಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿದ್ದೂ, ಪ್ರೀತಿ-ಪ್ರೇಮ-ಪ್ರಣಯದ ಹೊಗೆ ಆಡುತ್ತಿದೆ ಎಂದು ವೀಕ್ಷಕರು ಚರ್ಚೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಇನ್ನು ಸ್ನೇಹಿತರಾಗಿ ಕಾಣಿಸಿಕೊಳ್ಳುವ ಉಗ್ರಂ ಮಂಜು - ಗೌತಮಿ ಜಾಧವ್ ಹಾಗೂ ಗಾಯಕ ಹನುಮಂತ - ಧನರಾಜ್ ಆಚಾರ್ ಜೋಡಿ. ಇದರಲ್ಲಿ ಹನುಮಂತು - ಧನರಾಜ್ ಇಬ್ಬರೂ ಸ್ನೇಹಕ್ಕೂ ಜೈ, ಸಮರಕ್ಕೂ ಸೈ ಎಂಬಂತೆ ಆಟ ಮತ್ತು ಸ್ನೇಹವನ್ನು ಎರಡನ್ನೂ ಪ್ರತ್ಯೇಕವಾಗಿ ನೋಡುತ್ತಾರೆ. ಆದರೆ, ತ್ರಿವಿಕ್ರಮ್ - ಭವ್ಯಾ ಗೌಡ ಹಾಗೂ ಗೌತಮಿ - ಉಗ್ರಂ ಮಂಜು ಜೋಡಿಗಳು ತಮ್ಮ ಸ್ನೇಹವನ್ನು ಸ್ಪರ್ಧೆಯಲ್ಲಿಯೂ ಅಳವಡಿಕೆ ಮಾಡಿಕೊಂಡು ಟಾಸ್ಕ್ ವೇಳೆ ಉಳಿದವರ ಮೇಲೆ ದುಷ್ಪರಿಣಾಮ ಬೀರುತ್ತಿದ್ದಾರೆ.
ಇದನ್ನೂ ಓದಿ: ಗೌತಮಿ ಜಾಧವ್, ಉಗ್ರಂ ಮಂಜು ಜೊತೆಗಿನ ಸ್ನೇಹ 85% ಕಡಿದುಕೊಂಡಿದ್ದರೂ, ರಾತ್ರಿಯಿಡೀ ಜೈಲಿನ ಬಳಿ ಮಲಗಿದ್ದೇಕೆ?
ಅದರಲ್ಲಿಯೂ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಜೋಡಿ ಮಾಡದಿದ್ದರೆ ಬಿಗ್ ಬಾಸ್ ಅಥವಾ ಜನರ ಕೆಟ್ಟ ದೃಷ್ಟಿ ಇವರ ಮೇಲೆ ಬೀಳುತ್ತಿರಲಿಲ್ಲ. ಆದರೆ, ಇವರಿಬ್ಬರೂ ಎಲ್ಲ ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟವಾಡುವ ಜೊತೆಗೆ ತಮ್ಮ ಗೆಲುವಿಗಾಗಿ ಇತರರನ್ನು ಜೊತೆಯಾಗಿಯೇ ತುಳಿಯುತ್ತಿದ್ದಾರೆ. ಇದೀಗ ಇಬ್ಬರ ಮೇಲೆ ಬಿಗ್ ಬಾಸ್ ಮತ್ತು ರಾಜ್ಯದ ವೀಕ್ಷಕರ ಕಣ್ಣು ಬೀಳುತ್ತಿದ್ದಂತೆ ತಾವಿಬ್ಬರೂ ವೈರಿಗಳಂತೆ ಬಿಂಬಿಸಿಕೊಳ್ಳುತ್ತಾರೆ. ಪುನಃ ಇಬ್ಬರೂ ಒಟ್ಟುಗೂಡಿ ಆಟ ಶುರು ಮಾಡುತ್ತಾರೆ.