ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಕೊನೆಯ ಗಳಿಗೆಯಲ್ಲಿ ಭಾಷಣ ಮಾಡಿದ ಅವರು, ಮನೆಯಲ್ಲಿ ಕಳಪೆ ಆಟವಾಡಿದ್ದರೂ ಉತ್ತಮ ಎನಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಕ್ಯಾಪ್ಟನ್ ಆಗಲು ಆಗದ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ.12): ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿದ್ದಾರೆ. ಅದರಲ್ಲಿಯೂ ಒಂದು ವೇದಿಕೆ ಸಿಕ್ಕಿದರೆ ಸಾಕು ಬೇಜಾನ್ ಭಾಷಣ ಕೊರೆಯುತ್ತಿದ್ದ ಚೈತ್ರಾ ಕುಂದಾಪುರ ಅವರು ಕೊನೆಯ ಗಳಿಗೆಯಲ್ಲಿ ಏನು ಮಾತನಾಡಿದ್ದಾರೆ ಎಂಬುದನ್ನು ನೀವೇ ನೋಡಿ..
ಬಿಗ್ ಬಾಸ್ ಮನೆಗೆ ನರಕವಾಸಿಯಾಗಿ ಆಗಮಿಸಿದ ಚೈತ್ರಾ ಕುಂದಾಪುರ ಬಾಯಿ ಸದ್ದಿನಿಂದಲೇ ಹೆಸರು ಮಾಡಿದ್ದಾರೆ. ಅವರ ಧ್ವನಿಗೆ, ಅವರ ಮಾತಿಗೆ ಮಾತು ಕೊಡಲಾಗದೇ ಎಷ್ಟೋ ಜನರು ಸುಮ್ಮನಾಗಿದ್ದರು. ಇನ್ನು ಚೈತ್ರಾ ಕುಂದಾಪುರ ಅವರಿಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಒಂದಷ್ಟು ಮಾತನಾಡಿ ಎಂದು ಹೇಳಿದರೂ ನಾನ್ ಸ್ಟಾಪ್ ಮಾತನಾಡುತ್ತಿದ್ದರು. ಜೊತೆಗೆ, ಅನಗತ್ಯವಾಗಿ ಮಾತನಾಡುತ್ತಾ ಕಿಚ್ಚ ಸುದೀಪ್ ಅವರ ಕೋಪಕ್ಕೂ ಗುರಿಯಾಗಿದ್ದರು. ಆದರೆ, ಇದೀಗ ಬಿಗ್ ಬಾಸ್ ಫಿನಾಲೆಗೆ ಎರಡು ವಾರಗಳು ಇರುವಾಗ ಎಲಿಮಿನೆಟ್ ಆಗಿ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ, ಮಾತನ್ನು ಆರಂಭಿಸಿದ ಅವರು ನಾನು ಇಲ್ಲಿ ತುಂಬಾ ದಿನಗಳಿಂದ ಕಳಪೆಯನ್ನು ಪಡೆದುಕೊಂಡಿದ್ದೇನೆ. ಇಲ್ಲಿ ನನ್ನನ್ನು ಕೆಲವರು ತುಂಬಾ ಸಹಿಸಿಕೊಂಡಿದ್ದೀರಿ. ನಾನು ಈಗ ಎಲಿಮಿನೇಟ್ ಆದರೂ ನಿಮಗೆ ಭಾಷಣ ಮಾಡಿ ತೊಂದರೆ ಕೊಡುವುದಿಲ್ಲ. ಇಷ್ಟು ದಿನ ನಾನು ತುಂಬಾ ಕಳಪೆ ಆಗಿ ಆಟವಾಡಿದರೂ ಅದೇ ಅಪವಾದವನ್ನು ತೆಗೆದುಕೊಂಡು ಹೋಗದೇ ಎಲ್ಲರಿಂದ ನಾನು ಉತ್ತಮ ಎನಿಸಿಕೊಂಡು ಮೆಡಲ್ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಈ ಮನೆಯ ಅನ್ನದ ಋಣ ನಂಬಿ ಬಂದವಳು. ಈ ವಾರ ಪೂರ್ತಿ ಚೆನ್ನಾಗಿ ತಿಂದೆ, ಚೆನ್ನಾಗಿ ಆಟವಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಕಿಚ್ಚ ಸುದೀಪ್, ಬಿಗ್ ಬಾಸ್ ವೀಕ್ಷಕರನ್ನು ಬಕ್ರಾ ಮಾಡ್ತಿದ್ದಾರಾ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಜೋಡಿ?
ಮುಂದುವರೆದು ನಾನು ಈ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಲು ಆಗಲಿಲ್ಲ, ಕಿಚ್ಚನ ಚಪ್ಪಾಳೆ ಸಿಗಲಿಲ್ಲ ಎಂಬ ಬೇಸರವೂ ಇದೆ. ಆದರೆ, ಇನ್ನುಮುಂದೆ ನಿಮಗೆ ಕಿರುಚಾಡೋ, ಅರಚಾಡೋ ಚೈತ್ರ ನಿಮಗೆ ಸಿಗುವುದಿಲ್ಲ. ನಿಮಗೆ ಬೇಜಾರಾದರೂ ಸಹ ನಾನು ಮಾತನಾಡುವುದು ಬಿಡುವುದಿಲ್ಲ. ಎಲ್ಲರಿಗೂ ಥ್ಯಾಂಕ್ಸ್ ನನಗೆ ಉತ್ತಮ ಕೊಟ್ಟು ಮನೆಗೆ ಕಳುಹಿಸುತ್ತಿರುವುದಕ್ಕೆ. ಬಿಗ್ ಬಾಸ್ ನಿಮಗೆ ಥ್ಯಾಂಕ್ಸ್. ನನ್ನನ್ನು ಚೈತ್ರಾ ಆಗಿ ಮನೆಗೆ ಕರೆದುಕೊಂಡು ಬಂದು, ಚೈತ್ರಕ್ಕಾ ಆಗಿ ವಾಪಸ್ ಕಳುಹಿಸಿಕೊಡುತ್ತಿರುವುದಕ್ಕೆ ಎಂದು ಹೇಳಿದ್ದಾರೆ.