6 ತಿಂಗಳು ಮುಹೂರ್ತ ಇಲ್ಲ, ಓಡಿ ಹೋಗಿ ಮದುವೆಯಾಗ್ತಾರಾ ಗೌತಮ್‌ -ಭೂಮಿಕಾ!

By Gowthami K  |  First Published Jul 14, 2023, 1:22 PM IST

ಗೌತಮ್ ಮನೆಯಲ್ಲಿ ಮದುವೆಗೆ ಯಾರನ್ನೆಲ್ಲ ಆಮಂತ್ರಿಸಬೇಕೆಂಬ  ಚರ್ಚೆ ನಡೆದಿದೆ. ಈ ನಡುವೆ ಮದುವೆಗೆ ಮುಹೂರ್ತ ಇಲ್ಲ ಎಂದು ಪುರೋಹಿತರು ತಿಳಿಸಿದ್ದಾರೆ.


ಬೆಂಗಳೂರು (ಜು.14): ವಿಭಿನ್ನ ಕಥಾಹಂದರ ಹೊಂದಿರುವ ಜೀ ಕನ್ನಡದ ಧಾರವಾಹಿ ಅಮೃತಧಾರೆ ಪ್ರೇಕ್ಷಕರಿಗೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಸದ್ಯ 45 ವರ್ಷದ ಮಲ್ಟಿ ಮಿಲ್ಲೇನಿಯರ್ ಆಂಡ್ ಬಿಸಿನೆಸ್ ಐಕಾನ್ ಗೌತಮ್ ದಿವಾನ್ ಮತ್ತು 35 ವರ್ಷದ ಭೂಮಿಕಾಗೆ ಎಂಗೇಜ್ ಮೆಂಟ್ ಆಗಿದ್ದು ಇವರ ಮದುವೆಗೆ  ನೂರೆಂಟು ಅಡ್ಡಿಯಾಗುತ್ತಿದೆ. ಇದೀಗ ನಾಯಕ ಗೌತಮ್‌ ತಂಗಿ ಮಹಿಮಾ ಮತ್ತು ನಾಯಕಿ ಭೂಮಿಕಾ ತಮ್ಮ ಜೀವನ್  ಮಧ್ಯೆ ಗಲಾಟೆ ನಡೆದು ಅವರಿಬ್ಬರ ಮದುವೆ ನಿಲ್ಲೋ ಹಂತಕ್ಕೆ ಬಂದಿತ್ತು. ಒಂದು ಕಡೆ ಮಹಿಮಾ ಗರ್ಭಿಣಿ ಆಗಿದ್ದು, ಜೀವನ್  ಜೊತೆ ಮದುವೆಯಾಗಲೇಬೇಕೆಂದು  ಮಹಿಮಾ ತಾಯಿ ಕಂಡೀಷನ್ ಹಾಕಿದ್ದಾಳೆ. ಹೀಗಾಗಿ ಮತ್ತೆ ಮದುವೆಗೆ ಎಲ್ಲಾ ತಯಾರಿ ನಡೆಯುತ್ತಿದೆ.

Chaya Singh: 'ಅಮೃತಧಾರೆ' ಭೂಮಿಕಾ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?

Tap to resize

Latest Videos

ಇದೆಲ್ಲದರ ನಡುವೆ ಮದುವೆಗೆ ಅತಿಥಿಗಳಾಗಿ ಯಾರೆಲ್ಲ ಬರಬೇಕು. ಯಾರಿಗೆಲ್ಲ ಆಮಂತ್ರಣ ನೀಡಬೇಕೆಂಬುದರ ಬಗ್ಗೆ ಗೌತಮ್ ಮನೆಯಲ್ಲಿ ಚರ್ಚೆ ನಡೆದಿದೆ. ಆದರೆ ಗೌತಮ್ ಗೆ ಮದುವೆ ಸರಳವಾಗಿ ನಡೆಯಬೇಕೆನ್ನುವ ಮಹದಾಸೆ. ಹೀಗಾಗಿ ಮದುವೆಗೆ ಇರೋ ಬರೋ ಸ್ನೇಹಿತರು ಸಂಬಂಧಿಕರು ಬೇಡ ಎಂದು ತನ್ನ ಗೆಳೆಯನ ಬಳಿ ಗೌತಮ್ ಹೇಳಿಕೊಂಡಿದ್ದು, ಆತ ನೀವಿಬ್ಬರೂ ಓಡಿ ಹೋಗಿ ಮದುವೆ ಆಗಿ ಎಂದು ಹೇಳಿದ್ದಾನೆ. ಈ ನಡುವೆ ಮದುವೆ ದಿನಾಂಕ ನಿಶ್ಚಯಿಸಲು ಪುರೋಹಿತರನ್ನು ಮಹಿಮಾ ತಾಯಿ ಕರೆಸಿದ್ದು, ಸದ್ಯ 6 ತಿಂಗಳು ಯಾವುದೇ ಮುಹೂರ್ತ ಇಲ್ಲ ಎಂದು ಪುರೋಹಿತರು ಹೇಳಿದ್ದಾರೆ. ಇದು ಮಹಿಮಾ ತಾಯಿಗೆ ಶಾಕ್ ಕೊಟ್ಟಿದೆ. ಗೌತಮ್-ಭೂಮಿಕಾರ ಮದುವೆ ಮುಹೂರ್ತ ನಿಶ್ಚಯವಾಗತ್ತಾ? ಎಂಬುದೇ ಸದ್ಯ ಇರುವ ಪ್ರಶ್ನೆ.

ಯಾಕೆಂದರೆ ಇನ್ನು 6 ತಿಂಗಳು ಮುಹೂರ್ತ ಇಲ್ಲಾ ಎಂದಾದರೆ ಮಹಿಮಾ ಗರ್ಭಿಣಿ ಅನ್ನೋ ಸತ್ಯವನ್ನು ಮುಚ್ಚಿಡುವುದು ಕಷ್ಟವಾಗಲಿದೆ. ಜೊತೆಗೆ ಗೌತಮ್ - ಭೂಮಿಕಾಳನ್ನು ಆದಷ್ಟು ಬೇಗ ಮಗುವೆ ಆಗಬೇನ್ನುವುದು ಮಹಿಮಾಳ ತಾಯಿಗೆ ಬಹುಮುಖ್ಯ ಉದ್ದೇಶ. ಹೀಗಾಗಿ ಯಾವುದೇ ಮುಹೂರ್ತ ಇಲ್ಲ ಎನ್ನುವ ವಿಚಾರ ಶಾಕ್ ಕೊಟ್ಟಿದೆ.

ಬಿಕಿನಿಯಲ್ಲಿ ಸಖತ್ ಹಾಟ್ ಕಾಣಿಸಿದ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ

ಹೀಗಾಗಿ ಇಂದಿನ ಎಪಿಸೋಡ್‌ ಅತ್ಯಂತ ಕುತೂಹಲ ಮೂಡಿಸಿದೆ. ಮೊದಲು ಗೌತಮ್ -ಭೂಮಿಕಾ ಮದುವೆ ನಡೆದು ಬಳಿಕ ಮಹಿಮಾ-ಜೀವನ್ ಮದುವೆ ನಡೆಯುತ್ತಾ? ಅಥವಾ ಗೌತಮ್ ತಾಯಿಯ ಮುಂದಿನ ನಡೆಯೇನು ಎಂಬುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ. 

ರಾಜೇಶ್ ನಟರಂಗ, ಛಾಯಾ ಸಿಂಗ್, ಚಿತ್ರಾ ಶೆಣೈ, ವನಿತಾ ವಾಸು, ಶಶಿ ಹೆಗಡೆ, ಸಾರಾ ಅಣ್ಣಯ್ಯ, ಅಮೃತಾ ನಾಯ್ಕ್, ಸಿಹಿ ಕಹಿ ಚಂದ್ರು ಮುಂತಾದವರು ನಟಿಸಿದ್ದಾರೆ. ಉತ್ತಮ್ ಮಧು ನಿರ್ದೇಶನದ 'ಅಮೃತಧಾರೆ' ಧಾರಾವಾಹಿ ಈ ಮೂಲಕ ಖುರ್ಚಿ ತುದೀಲಿ ಕೂರೋ ಹಾಗೆ ಮಾಡಿದೆ. ದಿನೇ ದಿನೇ ಸೀರಿಯಲ್ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕತೆ ನಿರೂಪಣೆ ಜೊತೆಗೆ ಸೂಪರ್ರಾಗಿ ಅಭಿನಯಿಸ್ತಿರೋ ಕಲಾವಿದರ ಬಗೆಗೂ ಒಳ್ಳೆ ಮಾತು ಕೇಳಿ ಬರುತ್ತಿದೆ. 

click me!