'ಸೊಂಟದ ವಿಷ್ಯ' ಮಾತಿಗೆ ಫುಲ್‌ ಟ್ರೋಲ್‌, ಕವಿತೆ ಬರೆದು ಸೈಲೆಂಟ್‌ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

Published : Jul 13, 2023, 05:53 PM IST
'ಸೊಂಟದ ವಿಷ್ಯ' ಮಾತಿಗೆ ಫುಲ್‌ ಟ್ರೋಲ್‌, ಕವಿತೆ ಬರೆದು ಸೈಲೆಂಟ್‌ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

ಸಾರಾಂಶ

'ಹುಡುಗರು, ಯುವತಿಯರ ಸೊಂಟದ ಮೇಲೆ ಕೈಯಿಟ್ಟರೆ ಅದನ್ನು ಎಂಜಾಯ್‌ ಮಾಡಬೇಕು..' ಎಂದು ಹೇಳಿದ್ದ ತಮಿಳು ಕಿರುತೆರೆ ನಟಿ ರೇಖಾ ನಾಯರ್‌ ಇದಕ್ಕಾಗಿ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈಗ ಆಕೆ ಟ್ರೋಲರ್‌ಗಳಿಗೆ ಕವಿತೆ ಬರೆದು ಎಲ್ಲವನ್ನೂ ಸೈಲೆಂಟ್‌ ಮಾಡಿದ್ದಾರೆ.

ಚೆನ್ನೈ (ಜು.13): ಹುಡುಗರು, ಮಹಿಳೆಯರ ಸೊಂಟದ ಮೇಲೆ ಕೈಯಿಟ್ಟರೆ ಅದನ್ನು ಎಂಜಾಯ್‌ ಮಾಡಬೇಕು. ಅದನ್ನೇ ದೊಡ್ಡ ವಿಚಾರವನ್ನಾಗಿ ಮಾಡಬಾರದು ಎಂದು ವಿವಾದಿತ ಹೇಳಿಕೆ ನೀಡಿದ್ದ ತಮಿಳು ಕಿರುತೆರೆ ನಟಿ ಹಾಗೂ  ಬಿಗ್‌ ಬಾಸ್‌-7 ಸ್ಪರ್ಧಿ ರೇಖಾ ನಾಯರ್‌ ಫುಲ್‌ ಟ್ರೋಲ್‌ ಆಗಿದ್ದರು. ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ರೇಖಾ ನಾಯರ್‌ ಟ್ರೋಲಿಗರಿಗೆ ಕಾವ್ಯಾತ್ಮಕವಾಗಿ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಖಾ ನಾಯರ್‌, ಹುಡುಗಿಯರ ಸೊಂಟದ ಮೇಲೆ ಪುರುಷರು ಕೈಯಿಟ್ಟರೆ ಅದನ್ನು ಅವರು ಎಂಜಾಯ್ ಮಾಡಬೇಕು. ದೂರು ನೀಡಬಾರದು. ಹುಡುಗಿಯರು ತಮ್ಮ ಸ್ವಾತಂತ್ರ‍್ಯವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.  ನಾನು ಧರಿಸುವ ಡ್ರೆಸ್‌ನ ಬಗ್ಗೆ ಸಾಕಷ್ಟು ಮಹಿಳೆಯರು ಪ್ರಶ್ನೆ ಮಾಡ್ತಾರೆ.ಹಾಗೇನಾದರೂ ನಾನು ಸೊಂಟ ಕಾಣಿಸುವಂಥ ಡ್ರೆಸ್ ಹಾಕಿದ್ದಾಗ, ಯಾರಾದರೂ ಪುರುಷ ನನ್ನ ಸೊಂಟದ ಮೇಲೆ ಕೈಯಿಟ್ಟರೆ ನಾನದನ್ನು ಎಂಜಾಯ್ ಮಾಡುತ್ತೇನೆ ಎಂದು ರೇಖಾ ನಾಯರ್ ಹೇಳಿದ್ದರು. ಈ ಹೇಳಿದ್ದ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದವು.

ತಮ್ಮ ಮಾತುಗಳ ಮೂಲಕವೇ ಗಮನಸೆಳೆಯುವ ರೇಖಾ ನಾಯರ್‌, ತಮಿಳು ಭಾಷೆಯ ಮೇಲಿನ ಪ್ರೀತಿ ಹಾಗೂ ಸವಾಲಿನ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುವ ಕಾರಣದಿಂದಾಗಿಯೂ ಗಮನಸೆಳೆದಿದ್ದಾರೆ. 

ಇನ್ನು ತಮ್ಮ ಹೇಳಿಕೆಗೆ ಸಂಬಂಧಪಟ್ಟಂತೆ ಬರುತ್ತಿರುವ ನೆಗೆಟಿವಿಟಿಗೆ ರೇಖಾ ನಾಯರ್‌ ಕೊನೆಗೂ ಉತ್ತರ ನೀಡಿದ್ದಾರೆ. ಸೋಶಿಯಲ್‌ ಮೀಡಿಯಾ ವೇದಿಕೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. 'ನೀವು ಏನೇ ಮಾಡಿ, ನಿಮ್ಮ ಬಾಯಿ ಹಾಗೂ ಹೊಟ್ಟೆ ಉರಿಯುತ್ತಲೇ ಇರಲಿ. ಅಸೂಯೆ ಇರಲಿ, ಕೋಪವಿರಲಿ. ನೀವು ಏನು ಹೇಳುತ್ತೀರಿ, ನೀವು ಏನು ಬರೆಯುತ್ತೀರಿ, ನಿಮಗೆ ಮಾತನಾಡುವ ಮತ್ತು ಬರೆಯುವ ಹಕ್ಕು ಇದ್ದರೆ, ಅದನ್ನು ಜಯಿಸಲು ಸಾಧ್ಯ. ನನಗೆ ಆ ಧೈರ್ಯ ಮತ್ತು ನಂಬಿಕೆ ಇದೆ' ಎಂದು ಟ್ರೋಲರ್‌ಗಳಿಗೆ ತಿರುಗೇಟು ನೀಡಿದ್ದಾರೆ. 

ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

ಸೀರೆ ಉಟ್ಟುಕೊಂಡಾಗ ನನ್ನ ಸೊಂಟ ಕಾಣುತ್ತದೆ. ಬಸ್‌ನಲ್ಲಿ ಪ್ರಯಾಣಿಸುವಾಗ ಯಾವುದಾದರೂ ಪುರುಷ ಸೊಂಟದ ಮೇಲೆ ಕೈಯಿಟ್ಟರೆ ನನಗೇನೂ ಅನಿಸೋದಿಲ್ಲ. ಈ ದಿನಗಳಲ್ಲಿ ಮಹಿಳೆ ಕೂಡ ಇಂಥ ಮಾನಸಿಕತೆಗಳಿಂದ ಹೊರಬರಬೇಕು. ಇನ್ನು ಜಾಗಿಂಗ್ ಮಾಡುವಾಗ ಯಾವುದಾದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಕೂಡ ಸೊಂಟ ಕಾಣುವಂಥ ಡ್ರೆಸ್ ಹಾಕುತ್ತೇನೆ. ಇದು ನನಗೂ ಖುಷಿ ಕೊಡುತ್ತದೆ ಎಂದು ರೇಖಾ ನಾಯರ್ ಹೇಳಿದ್ದಾರೆ. ಸೊಂಟ ಕಾಣುವಂಥ ಡ್ರೆಸ್ ಹಾಕಿಕೊಂಡು ಮಾಲ್‌ಗೆ ಹೋದಾಗ, ಪುರುಷ ಅದನ್ನೇ ನೋಡುತ್ತಾನೆ. ಆತ ನಿಮ್ಮನ್ನೇ ನೋಡುವಂತೆ ಮಾಡಿದ್ದು ಯಾರು? ಹಾಗೇನಾದರೂ ನಾನು ಸ್ವಲ್ಪ ಪ್ರಮಾಣದಲ್ಲಿ ನನ್ನ ಬ್ಲೌಸ್‌ಅನ್ನು ಜಾರಿಸಿದರೆ, ಆತ ದಿಟ್ಟಿಸಿ ನೋಡವುದು ಇನ್ನೂ ಹೆಚ್ಚಾಗುತ್ತದೆ ಎಂದು ಸಂದರ್ಶನದಲ್ಲಿ ಅವರು ಮಾತನಾಡಿದ್ದರು.

ಯುವ ನಟನೊಂದಿಗೆ ಐಶ್ವರ್ಯಾ ರಜನಿಕಾಂತ್‌ ಎರಡನೇ ಮದುವೆ?

ನಟಿ, ಬಿಗ್ ಬಾಸ್ ಸ್ಪರ್ಧಿ ರೇಖಾ ನಾಯರ್ ಅವರು ಸದಾ ಒಂದಲ್ಲಾ ಒಂದು ಕಿರಿಕ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ವಿವಾದದಿಂದಲೇ ಹೆಚ್ಚು ಜನಪ್ರಿಯರಾಗಿದ್ದಾರೆ. ವಿಜೆ ಹಾಗೂ ನಿರೂಪಕಿಯಾಗಿಕೆಲಸ ಆರಂಭಿಸಿದ್ದ ರೇಖಾ ನಾಯರ್‌ ತಮ್ಮ ಮಾತುಗಾರಿಕೆಯಿಂದಲೇ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದರು. ಟಿವಿ ಸೀರಿಯಲ್‌ಗಳಾದ ಭೈರವಿ, ವಂಶಂ, ಅಂದಾಲ್‌ ಅಜ್ಗಾರ್‌, ಪಾಗಲ್‌ ನಿಲುವು, ಬಾಲ ಗಣಪತಿ ಮತ್ತು ನಾಮ್‌ ಇರುವರ್‌ ನಮಕ್ಕು ಇರುವರ್‌ಗಳಿಂದ ದೊಡ್ಡ ಮಟ್ಟದ ಫ್ಯಾನ್‌ ಬೇಸ್‌ಅನ್ನು ಬರೆದುಕೊಂಡಿದ್ದಾರೆ. ಇದೇ ಜನಪ್ರಿಯತೆಯಿಂದಾಗಿಯೇ ಸೀಸನ್‌-7 ತಮಿಳು ಬಿಗ್‌ ಬಾಸ್‌ನಲ್ಲೂ ರೇಖಾ ನಾಯರ್‌ ಗಮನಸೆಳೆದಿದ್ದರು.

ತನ್ನ ನಟನಾ ಕೌಶಲ್ಯವನ್ನು ಮೀರಿ, ರೇಖಾ ನಾಯರ್ ತನ್ನ ಕಲೆಗೆ ಅಪಾರವಾದ ಪ್ರೀತಿಯನ್ನು ತೋರಿಸಿದ್ದಾರೆ. ಭಾಷಣಕಾರರಾಗಿ, ಬರಹಗಾರರಾಗಿ ಮತ್ತು ಕವಿಯಾಗಿ, ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮಿಳು ಭಾಷೆ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ನಿರಂತರವಾಗಿ ಪ್ರದರ್ಶಿಸುತ್ತಾರೆ. ಆಕೆಯ ಕಾವ್ಯಾತ್ಮಕ ಪದಗಳು ಮತ್ತು ಆಳವಾದ ಆಲೋಚನೆಗಳಿಂದಾಗಿ ಬಹುಮುಖಿ ಕಲಾವಿದೆಯಾಗಿ ಮತ್ತಷ್ಟು ಜನಪ್ರಿಯರಾಗಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ: ನಟಿ Bhavya Gowda ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?