ನಿನಗೆ ಕೋಪ ಜಾಸ್ತಿ; ಪತಿ ಮಾತಿಗೆ ವೇದಿಕೆ ಮೇಲೆ ಕಣ್ಣೀರಿಟ್ಟ ಛಾಯಾ ಸಿಂಗ್!

Published : Jul 03, 2023, 09:24 AM IST
ನಿನಗೆ ಕೋಪ ಜಾಸ್ತಿ; ಪತಿ ಮಾತಿಗೆ ವೇದಿಕೆ ಮೇಲೆ ಕಣ್ಣೀರಿಟ್ಟ ಛಾಯಾ ಸಿಂಗ್!

ಸಾರಾಂಶ

ಅವಾರ್ಡ್ ಕಾರ್ಯಕ್ರಮದಲ್ಲಿ ಪತಿ ಕೃಷ್ಣ ಮಾತುಗಳನ್ನು ಕೇಳಿ ಕಣ್ಣೀರಿಟ್ಟ ಛಾಯಾ ಸಿಂಗ್. ಎಮೋಷನ್ ಕ್ಷಣ ಸಿಕ್ಕಾಪಟ್ಟೆ ವೈರಲ್....   

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿ ಸೆನ್ಸೇಷನ್ ಸೃಷ್ಟಿ ಮಾಡುತ್ತಿದೆ. ನಟ ರಾಜೇಶ್ ಮತ್ತು ಛಾಯಾ ಸಿಂಗ್ ಆನ್‌ಸ್ಕ್ರಿನ್ ಕೆಮಿಸ್ಟ್ರಿ ಇಷ್ಟ ಪಟ್ಟಿರುವ ವೀಕ್ಷಕರು ಅವರಿಬ್ಬರ ರಿಯಲ್ ಲೈಫ್‌ ಬಗ್ಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕಟ್ಟುಕೊಂಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರ ಪರ್ಸನಲ್ ಲೈಫ್‌ ಫೋಟೋ, ವಿಡಿಯೋ ಮತ್ತು ಸುದ್ದಿ ಹರಿದಾಡುತ್ತಿದೆ. 3 ವರ್ಷಗಳ ಹಿಂದೆ ಛಾಯಾ ಸಿಂಗ್ ಮತ್ತು ಕೃಷ್ಣ ಸನ್ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಅವಾರ್ಡ್ ಸ್ವೀಕರಿಸಿದ ನಂತರ ನಿರೂಪಕನ ಡಿಮ್ಯಾಂಡ್‌ಗೆ ಕೃಷ್ಣ ಕೈಯಲ್ಲಿ ಹೂ ಹಿಡಿದು ಪ್ರಪೋಸ್ ಮಾಡುತ್ತಾರೆ.

'8 ವರ್ಷದಿಂದ ಒಟ್ಟಿಗಿದ್ದೀವಿ..ನಮ್ಮ ಜರ್ನಿ ನಿಜಕ್ಕೂ ಒಂದು ರೋಲರ್ ಕೋಸ್ಟರ್ ರೀತಿ ಇತ್ತು ..ಕೆಟ್ಟದು ಒಳ್ಳೆಯದು ಎರಡನ್ನೂ ನೋಡಿದ್ದೀವಿ. ನಾನು ನಿನಗೆ ತುಂಬಾ ಕಷ್ಟ ಕೊಟ್ಟಿದ್ದೀನಿ ತುಂಬಾ ಅಳಿಸಿರುವೆ ಅದೇ ಸಮಯಕ್ಕೆ ತುಂಬಾ ಸಂತೋಷ ಕೊಟ್ಟಿರುವೆ. ಸದಾ ನನ್ನ ಪರ ನಿಂತುಕೊಂಡು ಸಪೋರ್ಟ್ ಮಾಡಿದಕ್ಕೆ ಧನ್ಯವಾದಗಳು. ನನ್ನ ಜೀವನ ಪೂರ್ತಿ ನೀನು ನನ್ನ ಪಕ್ಕ ಇರಬೇಕು ಎಂದು ಏನು ಬೇಕಿದ್ದರೂ ಮಾಡಲು ರೆಡಿಯಾಗಿರುವೆ. ಐ ಲವ್ ಯು' ಎಂದು ಛಾಯಾ ಸಿಂಗ್ ಪತಿ ಕೃಷ್ಣ ಪ್ರಪೋಸ್ ಮಾಡಿದ್ದಾರೆ. 

ಗಂಡ ಸರಿಯಾಗಿದ್ರೆ ಮಾತ್ರ ಜೀವನದಲ್ಲಿ ನೆಮ್ಮದಿಯಾಗಿರಬಹುದು: ಮದುವೆ ಬಗ್ಗೆ ಛಾಯಾ ಸಿಂಗ್ ಮಾತು

'ಮದುವೆಯಾದ ದಿನದಿಂದ ನಾನು ಒಂದೇ ಹೇಳುತ್ತಿರುವುದು ಕೃಷ್ಣ ಅವರಿಗೆ ಪತ್ನಿಯಾಗಿರುವುದಕ್ಕೆ ನಾನು ಪುಣ್ಯ ಮಾಡಿರುವೆ. ವೇದಿಕೆ ಮೇಲೆ ನಾನು ಕಣ್ಣೀರಿಡುತ್ತಿರುವೆ ಕೆಲವರಿಗೆ ವಿಚಿತ್ರ ಅನಿಸಬಹುದು ಆದರೆ ನನ್ನ ಭಾವನೆಗಳು ನಿಜ ಏಕೆಂದರೆ ಕೃಷ್ಣ ಅವರಿಗಿಂತ ಒಳ್ಳೆಯ ವ್ಯಕ್ತಿಯನ್ನು ಹುಡುಕಲು ಆಗುತ್ತಿರಲಿಲ್ಲ. ನಾನು ಕೂಡ ನಿಮ್ಮನ್ನು ತುಂಬಾ ಇಷ್ಟ ಪಡುವೆ ನನ್ನ ಜೀವನವನ್ನು ತುಂಬಾ ಬ್ರೈಟ್ ಮಾಡಿದಕ್ಕೆ ಧನ್ಯವಾದಗಳು. ಕಣ್ಣೀರಿಡುತ್ತಿರುವುದಕ್ಕೆ ಕ್ಷಮಿಸಬೇಕು ಇಷ್ಟೊಂದು ಎಮೋಷನಲ್‌ ಕ್ಷಣಕ್ಕೆ ನಾನು ರೆಡಿಯಾಗಿರಲಿಲ್ಲ' ಎಂದು ಛಾಯಾ ಸಿಂಗ್ ಭಾವುಕರಾಗಿದ್ದಾರೆ. 

ಎಮೋಷನಲ್ ಕ್ಷಣ ಮುಗಿಯುತ್ತಿದ್ದಂತೆ ನಿರೂಪಕ ಮತ್ತೊಂದು ಬೇಡಿಕೆ ಮುಂದಿಡುತ್ತಾರೆ. ಕೃಷ್ಣ ಅವರ ಬಗ್ಗೆ 5 ವಿಚಾರಗಳನ್ನು ಹೇಳಬೇಕು ಎಂದು. 'ಕೃಷ್ಣ ಪುಟ್ಟ ಮಗುವಿದ್ದಂತೆ ಮುದ್ದು ಮಾಡಬೇಕು ಅನಿಸುತ್ತದೆ. ಕೃಷ್ಣ ನನಗೆ ಒಳ್ಳೆಯ ಸ್ನೇಹಿತ. ಎಂಥ ಕ್ರೂರ ವ್ಯಕ್ತಿಯಾಗಿದ್ದರೂ ಅವರು ಕೃಷ್ಣ ಮುಂದೆ ಕರಗುತ್ತಾರೆ ಪ್ರೀತಿಸಲು ಶುರು ಮಾಡುತ್ತಾರೆ. ಖಂಡಿತಾ ಪ್ರತಿ ಹೆಣ್ಣಿಗೂ ಕೃಷ್ಣ ರೀತಿ ಗಂಡ ಸಿಗಬೇಕು ಎಂದು ಇಷ್ಟ ಪಡುತ್ತಾರೆ' ಎಂದು ಛಾಯಾ ಉತ್ತರಿಸಿದ್ದಾರೆ. ಇದೇ ಪ್ರಶ್ನೆಗೆ ಕೃಷ್ಣ ಕೂಡ 'ಛಾಯಾ ಸಿಂಗ್ ಡ್ಯಾನ್ಸ್‌ ಇಷ್ಟ. ಛಾಯಾ ಕೋಪ ತುಂಬಾ ಇಷ್ಟ ಏಕೆಂದರೆ ತುಂಬಾ ತುಂಬಾ ಕೋಪ ಮಾಡಿಕೊಳ್ಳುತ್ತಾಳೆ ಒಳ್ಳೆಯ ವ್ಯಕ್ತಿ ಅದೆಷ್ಟೋ ವಿಚಾರಗಳಲ್ಲಿ ಭಯ ಪಡುತ್ತಾಳೆ ನನಗೋಸ್ಕರ ಧೈರ್ಯವಾಗಿರುತ್ತಾಳೆ' ಎಂದು ಉತ್ತರಿಸಿದ್ದಾರೆ. 

2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

010ರಲ್ಲಿ ತೆರೆ ಕಂಡ ಆನಂದಪುರತ್ತು ವೀಡು ಎನ್ನುವ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾದಲ್ಲಿ ನಟ ಕೃಷ್ಣ ಹಾಗೂ ಛಾಯಾ ಸಿಂಗ್ ನಟಿಸಿದ್ದರು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ಕೃಷ್ಣ ಅವರು ಛಾಯಾ ತಾಯಿ ಬಳಿ ಹಿಂದಿಯಲ್ಲಿ ಆಗಾಗ ಮಾತನಾಡುತ್ತಿದ್ದರು. ಇದು ಛಾಯಾಗೆ ಗೊತ್ತಿರಲಿಲ್ಲ. ಒಮ್ಮೆ ಕೃಷ್ಣ ಸೆಟ್‌ನಲ್ಲಿ ಪುಸ್ತಕ ಓದುತ್ತಿದ್ದರು. ಅದು ಛಾಯಾ ಕಣ್ಣಿಗೆ ಬಿತ್ತು. ಛಾಯಾ ಅವರಿಗೂ ಪುಸ್ತಕ ಓದುವ ಹವ್ಯಾಸ ಇದ್ದಿದ್ದರಿಂದ ಅವರು ಕೃಷ್ಣ ಬಳಿ ಬಂದು ಯಾವ ಪುಸ್ತಕ ಇದು ಎಂದು ಪ್ರಶ್ನೆ ಮಾಡಿದ್ದರಂತೆ. ಅಲ್ಲಿಂದ ಇವರಿಬ್ಬರ ಮಾತು ಶುರುವಾಗಿತ್ತು. ಆಮೇಲೆ ಕೃಷ್ಣ ಹಾಗೂ ಛಾಯಾ ನಡುವೆ ಸ್ನೇಹ ಬೆಳೆದು, ಪ್ರೀತಿಯಾಗಿ ತಿರುಗಿ 2012ರಲ್ಲಿ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ. ಇವರಿಬ್ಬರು ಸಾಂಪ್ರದಾಯಿಕವಾಗಿ, ಆತ್ಮೀಯರು, ಕುಟುಂಬಸ್ಥರ ಸಾಕ್ಷಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ