'ರಾಧಾ ಕಲ್ಯಾಣ' ರಾಧೆಗೆ ಕಂಕಣ ಭಾಗ್ಯ; ಮನಸೋತ ಕೃಷ್ಣಯಾರು?

By Web DeskFirst Published Nov 5, 2019, 2:40 PM IST
Highlights

ರಾಮನಂತ ಹುಡುಗಬೇಕೆನ್ನುವ ಕನಸು ಈಕೆಯದು, ಆದರೆ ಒಲಿಯುವುದು ಮಾತ್ರ ಕೃಷ್ಣನಂತ ಹುಡುಗ. ಎಸ್, ಇವರೇ ಕರಾವಳಿಯ ಮುದ್ದು ಮುಖದ ಚೆಂದುಳ್ಳಿ ಚೆಲುವೆ ರಾಧಾ ಅಲಿಯಾಸ್‌ ರಾಧಿಕಾ ರಾವ್.

ಮನಸ್ಸಿಲ್ಲದ ಮನಸ್ಸಿನಿಂದ ಬಣ್ಣದ ಲೋಕಕ್ಕೆ ಎಂಟ್ರಿ:

ರಾಧಿಕಾ ಅವರು ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ಇಲ್ಲಿನ ಕರಾವಳಿ ಕಾಲೇಜಿನಲ್ಲಿ ಫ್ಯಾಶನ್‌ ಡಿಸೈನ್ ಮಾಡುತ್ತಿರುವಾಗ ತುಳು ಸಿನೆಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುವ ಯಾವುದೇ ಆಸಕ್ತಿಯೂ ಇವರಿಗಿರಲಿಲ್ಲ. ತಮ್ಮ ಸಂಬಂಧಿಕರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಪುದ್‌ಗೊರಂಜಿ ಬುಡೆದಿ ಎಂಬ ತುಳು ಚಿತ್ರದಲ್ಲಿ ಕಾಣಿಸಿಕೊಂಡರು. ತದ ನಂತರ 'ಏಸಾ' ಎಂಬ ತುಳು ಸಿನಿಮಾ ಕಥೆ ಉತ್ತಮವಾಗಿದ್ದರಿಂದ ಆ ಸಿನಿಮಾವನ್ನು ಒಪ್ಪಿಕೊಂಡಿದ್ದರು.

ರಿಯಲ್ ಲೈಫ್‌ ಕೃಷ್ಣನ ಹುಡುಕಿಕೊಂಡ 'ರಾಧಾ ಕಲ್ಯಾಣ' ರಾಧಿಕಾ!

ಅಮ್ಮನ ಮಾತೇ ಮಗಳಿಗೆ ಸ್ಫೂರ್ತಿ:

ಇವರ ಟಾಲೆಂಟ್‌ಗೆ  ಸಾಕಷ್ಟು ಆಫರ್ಸ್‌ಗಳು ಬರುತ್ತಿತ್ತುಆದರೆ ನಟಿಸುವ ಮನಸ್ಸು ಮಾತ್ರ ಇವರಿಗಿರಲಿಲ್ಲ. ಒಂದು ದಿನ ಇವರ ತಾಯಿ ಮನೆ ಬಾಗಿಲಿಗೆ ಬಂದ ಅವಕಾಶಗಳನ್ನು ಕಳೆದುಕೊಳ್ಳಬೇಡ ಸ್ಟೋರಿ ಚೆನ್ನಾಗಿದ್ದರೆ ನಟಿಸು ಎಂಬ ಧೈರ್ಯ ನೀಡಿದ್ದರಂತೆ. ಹಾಗಾಗಿ ತಾಯಿಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರು. ಆ ನಂತರ ದೊರಕಿದ್ದು ಬಿಗ್ ಹಿಟ್‌ಧಾರವಾವಿ ಎನಿಸಿಕೊಂಡ 'ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ'.

ಮಂಗ್ಳೂರಿನ ಅಮೂಲ್ಯ ಎಂದೇ ಪೇಮಸ್:

ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಧಾರವಾಹಿ ಇವರ ಸಿನಿ ಬದುಕನ್ನೇ ಬದಲಾಯಿಸಿತ್ತು. ಭಾಷೆ ಬೇರೆ, ಸಂಸ್ಕೃತಿ ಸಂಪ್ರದಾಯ, ಆಚಾರ ವಿಚಾರಗಳೇ ಬೇರೆ ಬೇರೆಯಾಗಿರುವ ಈ ಕಥೆ ಕರ್ನಾಟಕದಲ್ಲಿ ಒಂದು ರೀತಿಯ ಹವಾ ಕ್ರಿಯೆಟ್ ಮಾಡಿತ್ತು.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

ಪರಭಾಷೆಯಲ್ಲೂ ಸೈ ಎನಿಸಿಕೊಂಡ ಪ್ರತಿಭೆ:

ರಾಧಿಕಾ ರಾವ್ ಕೇವಲ ತುಳು, ಕನ್ನಡ ಮಾತ್ರವಲ್ಲದೇ ತಮಿಳಿನಲ್ಲೂ ನಟಿಸಿರುವ ಇವರು 'ಪೊನ್ನು ಕುತಂಗ ಮನಸ್' ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ 'ಲುಂಗಿ', 'ಎಲ್ಲಿಂದ್ದಿಇಲ್ಲಿತನಕ', 'ಮಹಾರಾಣಿ' ಎಂಬ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ರಾಧಾ ಕಲ್ಯಾಣದ ರಾಧೆ:

ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾ ಕಲ್ಯಾಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ರಾಧೆಗೆ ರಾಮನಂತ ಗಂಡ ಸಿಗಬೇಕೆನ್ನುವ ಆಸೆ. ಆದರೆ ಬಾಳ ಸಂಗಾತಿಯಾಗುವ ಕೃಷ್ಣ ನಂತಿರುವ ಹುಡುಗ. ಎಸ್, ಇದುವೇ ರಾಧಾ ಕಲ್ಯಾಣ ಧಾರವಾಹಿಯ ರಾಧಾ ಕಥೆ.

'ಮುಂದಿನ ನಿಲ್ದಾಣ'ಕ್ಕೆ 'U-ಟರ್ನ್' ತೆಗೆದುಕೊಂಡ ರಾಧಿಕಾ!

ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ:

ಈಗಾಗಲೇ ಮಹಾರಾಣಿ ಎಂಬ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರಿಗೆ ಇನ್ನೂ ಚಾಲೆಂಜಿಗ್ ಮತ್ತು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು. 

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸುಷ್ಮಾ ಸದಾಶಿವ್
ವಿವೇಕಾನಂದ ಕಾಲೇಜು ಪುತ್ತೂರು

 

click me!