ಕನ್ನಡ ಸೀರಿಯಲ್‌ಗಳ ಟ್ರೆಂಡ್ ಬದಲಾಗ್ತಿದೆಯಾ? ಯಾವ ಸೀರಿಯಲ್ ತೆಗ್‌ದ್ರೂ ಮಕ್ಕಳೇ ಕಾಣ್ತಿದ್ದಾರೆ, ಯಾಕೆ ಹೀಗೆ?
ಮಕ್ಕಳ ಸಿನಿಮಾಗಳಿಗೆ ಬೇಡಿಕೆ ಇಲ್ಲ ಅನ್ನೋದು ತುಂಬ ಹಿಂದಿಂದ ಕೇಳಿ ಬರ್ತಿರೋ ಮಾತು. ಆದ್ರೆ ಸೀರಿಯಲ್‌ಗಳು ಮಕ್ಕಳನ್ನೇ ಮಾರ್ಕೆಟ್ ತಂತ್ರವಾಗಿ ಬಳಸಿಕೊಂಡಿರೋ ರೀತಿ ಮಜವಾಗಿದೆ. ಹಿಂದೆ ಆ್ಯಡ್‌ಗಳಲ್ಲಿ ಈ ತಂತ್ರ ಬಳಕೆ ಆಗ್ತಿತ್ತು. ಬೇರೆ ಬೇರೆ ಜಾಹೀರಾತುಗಳನ್ನು ಮಕ್ಕಳಿಗೆ ಕನೆಕ್ಟ್ ಆಗೋ ಹಾಗೆ ಕಾನ್ಸೆಪ್ಟ್ ಮಾಡಿ ಪ್ರಸಾರ ಮಾಡ್ತಿದ್ರು. ಅದು ಜನರಿಗೆ ಬಹುಬೇಗ ಕನೆಕ್ಟ್ ಆಗ್ತಿತ್ತು. ಇದರ ಹಿಂದೆ ಒಂದು ಸೈಕಾಲಜಿ ಇದೆ. ನಿಮ್ಮ ಮನೆಯಲ್ಲಿ ಸೆಂಟರ್ ಯಾರು ಅನ್ನೋದನ್ನು ನೆನಪು ಮಾಡ್ಕೊಳ್ಳಿ. ಆಗ ನಿಮಗೆ ಗೊತ್ತಾಗುತ್ತೆ, ಮನೆಯಲ್ಲಿ ಮಗುವೇ ಮಹಾರಾಜ ಅಥವಾ ಮಹಾರಾಣಿ ಅಂತ. ಹೀಗಿರುವಾಗ ನಿಮ್ಮ ಪ್ರಾಡಕ್ಟ್ ಮಗುವಿನ ಗಮನ ಸೆಳೆದರೆ ಅದು ಮನೆಯವರ ಗಮನ ಸೆಳೆಯಲು ಹೆಚ್ಚು ಟೈಮ್ ಬೇಕಿಲ್ಲ. ಮಗು ಹಠ ಮಾಡಿ ತನಗೆ ಬೇಕಾದ್ದನ್ನು ತರಿಸಿಕೊಳ್ಳುತ್ತೆ. ಅಲ್ಲಿ ನೋ ಕಾಂಪ್ರಮೈಸ್. ಸೋ ಅಲ್ಲಿಗೆ ಮಗುವನ್ನು ಮಂಗ ಮಾಡಿದ್ರೆ ಬ್ಯುಸಿನೆಸ್ ಕುದುರೋದು ಪಕ್ಕಾ ಅನ್ನೋದು ಲೆಕ್ಕಾಚಾರ.
ಜಾಹೀರಾತಿನ ವಿಚಾರದಲ್ಲಿ ಈ ತಂತ್ರ ವರ್ಕೌಟ್ ಆದ್ರೆ ಸೀರಿಯಲ್‌ಗಳು ಮಗುವಿನ ಕಥೆಯನ್ನೇ ಅಥವಾ ಮಕ್ಕಳ ಕಥೆಯನ್ನೇ ಮುಖ್ಯ ಮಾಡ್ಕೊಳ್ತಿವೆ. 'ಸೀತಾರಾಮ'ದಂಥಾ ಸೀರಿಯಲ್‌ನಲ್ಲಿ ಮಗುವಿಗೇ ಪ್ರಧಾನ ಪಾತ್ರ. ಇದರ ಬೆನ್ನಲ್ಲೇ ಇದಕ್ಕೆ ಕಾಂಪಿಟೀಶನ್ ಕೊಡೋ ರೀತಿ ಆದರೆ ಕೊಂಚ ಭಿನ್ನ ಕಥಾಹಂದರಲ್ಲಿ 'ಚುಕ್ಕಿ' ಸೀರಿಯಲ್ ಬಂದಿದೆ. ಈ ಎರಡು ಸೀರಿಯಲ್‌ಗಳ ಕಾಮನ್ ಥಿಂಗ್ ಅಂದರೆ ಎರಡರಲ್ಲೂ ಹೆಣ್ಣು ಮಕ್ಕಳಿದ್ದಾರೆ. ಮತ್ತು ಇವು ತಂದೆಯಿಲ್ಲದ ಹೆಣ್ಣುಮಕ್ಕಳು. ಹೀಗೆಂದಾಗ ಇಲ್ಲಿ ಇಲ್ಲೊಂದು ಸಿಂಪಥಿ ಫ್ಯಾಕ್ಟರ್ ಇದೆ. ಈ ಲೆಕ್ಕಾಚಾರ ಎಷ್ಟು ಚಂದ ಕ್ಲಿಕ್ ಆಗಿದೆ ಅಂದರೆ ಈ ಸೀರಿಯಲ್‌ಗಳು ಫ್ಯಾಮಿಲಿ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಮದ್ವೆ ಏನೋ ಓಕೆ... ಪ್ಲೀಸ್ ಹನಿಮೂನ್, ಸೀಮಂತ ಮಾತ್ರ ತೋರಿಸ್ಬೇಡಿ ಎನ್ನೋದಾ ಸೀರಿಯಲ್ ಪ್ರೇಮಿಗಳು?
'ಸೀತಾರಾಮ' ಸೀರಿಯಲ್ ಟಾಪ್ 5 ಸೀರಿಯಲ್‌ಗಳಲ್ಲೊಂದು ಅಂತ ಗುರುತಿಸಿಕೊಂಡಿದೆ. ಇದರಲ್ಲಿ ಸೀತಾ ನಾಯಕಿ, ರಾಮ ನಾಯಕ. ಸೀತಾಗೆ ಒಬ್ಬ ಮಗಳಿದ್ದಾಳೆ. ಅವಳು ಮಗಳು ಅಷ್ಟೇ, ಅವಳ ಅಪ್ಪ ಯಾರು, ಹಿನ್ನೆಲೆ ಏನು ಅನ್ನೋದನ್ನು ರಿವೀಲ್ ಮಾಡಿಲ್ಲ. ಐದು ವರ್ಷದ ಸೀತಾ ಮಗಳ ಹೆಸರು ಸಿಹಿ. ಆದರೆ ಅವಳು ಸಿಹಿ ತಿನ್ನೋ ಹಾಗಿಲ್ಲ, ಅವಳಿಗೆ ಶುಗರ್ ಇದೆ. ಇನ್ನೊಂದು ಕಡೆ ಆಗರ್ಭ ಶ್ರೀಮಂತ ರಾಮ ಇದ್ದಾನೆ. ಸೀತಾ ಮತ್ತು ಶ್ರೀರಾಮ್ ದೇಸಾಯಿಗೆ ಈಗಾಗಲೇ ಮದುವೆ ಆಗಿದೆ. ಸಿಹಿಯನ್ನು ಎಲ್ಲರೂ ಆ ಮನೆಯ ಮಗು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲಿ ಪುಟ್ಟ ಸಿಹಿಯ ಅರಮನೆ ಸೇರುವ ಕನಸು ನನಸಾಗಿದೆ. ಆದರೆ ಭಾರ್ಗವಿ ಅನ್ನೋ ವಿಲನ್ ಅವಳನ್ನು ಅರಮನೆಯಿಂದ ಹೊರನೂಕುವ ಆ ಮೂಲಕ ಆಸ್ತಿ ಹೊಡೆಯುವ ಸ್ಕೆಚ್ ಹಾಕುತ್ತಿದ್ದಾಳೆ.
ಇನ್ನೊಂದೆಡೆ ಚುಕ್ಕಿ ಸೀರಿಯಲ್‌ನಲ್ಲಿ ಶ್ರೀಮಂತಿಕೆಯ ನಡುವೆ ಬಡ ಚುಕ್ಕಿಯ ಬದುಕು ಹೇಗೆ ಸಾಗ್ತಿದೆ ಅನ್ನೋದಿದೆ. ಇದೀಗ 'ಬ್ರಹ್ಮಗಂಟು' ಸೀರಿಯಲ್‌ಗೂ ಮಕ್ಕಳು ಎಂಟ್ರಿಕೊಟ್ಟಿದ್ದಾರೆ. ನಾಯಕಿ ಅಣ್ಣ ನರಸಿಂಹ ಮಕ್ಕಳ ಫ್ರೆಂಡು. ದುಡ್ಡಿರುವ ಕೊಬ್ಬಿನ ಹುಡುಗಿ ಸಂಜನಾ ಮಕ್ಕಳ ಮೈ ಮೇಲೆ ಕಾರಿನಲ್ಲಿ ವೇಗವಾಗಿ ಬಂದು ಕೆಸರೆರೆಚಿದ್ದಾರೆ. ಇದರಿಂದ ಮಕ್ಕಳಿಗೆ ಸಮಸ್ಯೆ ಆಗಿದೆ. ನರಸಿಂಹ ಮಕ್ಕಳ ಪರ ನಿಂತು ಸಿನಿಮಾ ಹೀರೋ ರೇಂಜಿಗೆ ಸಂಜನಾಗೆ ಪಾಠ ಕಲಿಸಲು ಹೊರಟಿದ್ದಾನೆ.
ಹೀಗೆ ಒಂದಾದ ಮೇಲೊಂದು ಸೀರಿಯಲ್‌ನಲ್ಲಿ ಮಕ್ಕಳ ಎಂಟ್ರಿ ಆಗ್ತಾನೇ ಇದೆ. ಇನ್ನೊಂದೆಡೆ ರಿಯಾಲಿಟಿ ಶೋಗಳಲ್ಲೂ ಮಕ್ಕಳ ಮ್ಯಾಜಿಕ್ ಮುಂದುವರಿಯುತ್ತಿದೆ.
ಈಗ ಬೇಬಿ ಬಂಪ್ ಸೀಸನ್, ಮಗುವಿನ ನಿರೀಕ್ಷೆಯಲ್ಲಿ ಈ ಮೋಹಕ ಸ್ಯಾಂಡಲ್ವುಡ್ ನಟಿಯರು!