ಕಿರುತೆರೆ ನಟಿ ಬಿಗ್ಬಾಸ್ ಖ್ಯಾತಿಯ ರಶ್ಮಿ ದೇಸಾಯಿ ಡಿವೋರ್ಸ್ ಬಳಿಕ ಸಾಲದ ಹೊರೆ ಹೊತ್ತು ಕಾರಿನಲ್ಲಿಯೇ ಮಲಗಿದ ಬಗ್ಗೆ ಮನದಾಳದ ಮಾತು ತೆರೆದಿಟ್ಟಿದ್ದಾರೆ.
ಹಿಂದಿ ಕಿರುತೆರೆ ವೀಕ್ಷಕರಿಗೆ ಈ ಮುದ್ದುಮೊಗದ ಸುಂದರಿ ತೀರಾ ಚಿರಪರಿಚಿತರು. ತಮ್ಮ ನಟನೆಗಾಗಿ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದ್ದಾರೆ. ಕಿರುತೆರೆಯ ಮೋಸ್ಟ್ ಗ್ಲಾಮರಸ್ ನಟಿಯರೆಂದು ಪರಿಗಣಿಸಲ್ಪಟ್ಟಿರುವ ರಶ್ಮಿಗೆ ಇಂದು ಯಾವುದೇ ಗುರುತು ಅಗತ್ಯವಿಲ್ಲ. ನಟಿ ಅನೇಕ ಹಿಟ್ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಅಷ್ಟೇ ಅಲ್ಲ ರಶ್ಮಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಜನಪ್ರಿಯತೆ ಗಳಿಸಿದ್ದು ‘ಉತ್ತರನ್' ಎಂಬ ಧಾರಾವಾಹಿಯಿಂದ. ಈ ಸೀರಿಯಲ್ನಲ್ಲಿ ಜನರು ಅವರನ್ನು ತುಂಬಾ ಇಷ್ಟಪಟ್ಟಿದ್ದರು. ಹಿಂದಿ ಬಿಗ್ ಬಾಸ್ 13 ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಇವರ ಹೆಸರು ರಶ್ಮಿ ದೇಸಾಯಿ. 'ಜರಾ ನಚ್ಕೆ ದಿಖಾ 2', 'ಖತ್ರೋನ್ ಕೆ ಖಿಲಾಡಿ 6' ಮತ್ತು 'ಬಿಗ್ ಬಾಸ್ 13' ನಂತಹ ಶೋಗಳಲ್ಲಿ ಭಾಗವಹಿಸಿದ್ದಾರೆ. 'ದಬಾಂಗ್ 2' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲದೆ ಭೋಜ್‌ಪುರಿ, ಮಣಿಪುರಿ, ಅಸ್ಸಾಮಿ ಮತ್ತು ಬೆಂಗಾಲಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿರೋ ಬಹುಭಾಷಾ ನಟಿ ಈಕೆ. ದಿವ್ಯಾ ದೇಸಾಯಿ ರಶ್ಮಿ ದೇಸಾಯಿ ಆಗಿ ಬದಲಾದರೂ ಜೀವನದಲ್ಲಿ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. 2006 ರಲ್ಲಿ 'ರಾವಣ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ನಟಿ, 'ಪಾರಿ ಹೂನ್ ಮೈ' ನಲ್ಲಿ ದ್ವಿಪಾತ್ರದಲ್ಲಿ ನಟಿಸಿದರು. 'ಉತರನ್' ಧಾರಾವಾಹಿಯ ತಪಸ್ಯಾ ಪಾತ್ರ ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದಾದ ಬಳಿಕ 'ದಿಲ್ ಸೆ ದಿಲ್ ತಕ್', 'ರಾತ್ರಿ ಕೇ ಯಾತ್ರಿ', 'ಅಧುರಿ ಕಹಾನಿ ಹಮಾರಿ', 'ನಾಗಿನ್', 'ಮಹಾ ಸಂಗಮ' ಹೀಗೆ ಮುಂತಾದ ಷೋಗಳಲ್ಲಿ ಕಾಣಿಸಿಕೊಂಡರು.
ಇದೀಗ ಅವರು ತಮ್ಮ ಮದುವೆ, ಡಿವೋರ್ಸ್ ಹಾಗೂ ಆ ನಂತರದ ಬರ್ಬರ ಬದುಕಿನ ಕುರಿತು ಹೇಳಿಕೊಂಡಿದ್ದಾರೆ. ರಶ್ಮಿ ದೇಸಾಯಿ ಅವರ ವೃತ್ತಿಪರ ವೃತ್ತಿಜೀವನವು ಅದ್ಭುತವಾಗಿದ್ದರೂ ವೈಯಕ್ತಿಕ ಜೀವನ ಮಾತ್ರ ಬಹಳ ನೋವಿನಿಂದ ಕೂಡಿದೆ. ನಟಿ ಪ್ರೀತಿಯಲ್ಲಿ ಮೋಸ ಹೋಗಿದ್ದಾರೆ. ನಟಿಯ ವೈಯಕ್ತಿಕ ಜೀವನವು ಸಂಬಂಧ, ಮದುವೆ ಮತ್ತು ನಂತರ ವಿಚ್ಛೇದನದ ನಡುವೆ ಸಾಕಷ್ಟು ವಿವಾದಾತ್ಮಕವಾಗಿದೆ. ಅವರು ಇತ್ತೀಚೆಗೆ, ಪರಾಸ್ ಛಾಬ್ರಾ ಅವರ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪ್ರೀತಿಯ ವಿಷಯದ ಬಗ್ಗೆ ಇನ್ನೂ ಹೋರಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ರಶ್ಮಿ ದೇಸಾಯಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ನಂದೀಶ್ ಅವರನ್ನು 2011ರಲ್ಲಿ ಮದುವೆಯಾದರು. ವೈಯಕ್ತಿಕ ಜೀವನದಲ್ಲಿಯೂ ಇಷ್ಟೊಂದು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಮದುವೆಯಾಗಿ ಮೂರು ವರ್ಷಗಳಲ್ಲಿಯೇ ಡಿವೋರ್ಸ್ ಪಡೆದುಕೊಂಡರು. ವಿಚ್ಛೇದನದ ನಂತರ ರಶ್ಮಿ ಮತ್ತು ನಂದೀಶ್ ಇಬ್ಬರೂ ಪರಸ್ಪರರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ನಂದೀಶ್ ಅವರ ಡಿವೋರ್ಸ್ ಬಳಿಕ ರಶ್ಮಿ ಅವರ ಹೆಸರು ಲಕ್ಷ್ಯ ಲಾಲ್ವಾನಿಯೊಂದಿಗೆ ಥಳಕು ಹಾಕಿಕೊಂಡಿತು. ಆದರೆ, ಈ ಸಂಬಂಧ ರಶ್ಮಿ ತಾಯಿಗೆ ಸಮಾಧಾನವಿರಲಿಲ್ಲ. ಆಗ ಸಿದ್ಧಾರ್ಥ್ ಶುಕ್ಲಾ ಜೊತೆಗೆ ರಶ್ಮಿ ಹೆಸರು ಕೂಡ ಸೇರಿಕೊಂಡಿತ್ತು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ನಂತರ ರಶ್ಮಿ ಅರ್ಹಾನ್ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ 'ಬಿಗ್ ಬಾಸ್ 13' ನಲ್ಲಿ ಆಕೆಗೆ ಇದ್ದಕ್ಕಿದ್ದಂತೆ ಅರ್ಹಾನ್ ಅವರ ನೈಜತೆಯ ಬಗ್ಗೆ ತಿಳಿದುಬಂದಿತು ಮತ್ತು ನಂತರ ಈ ಸಂಬಂಧವೂ ಮುರಿದುಹೋಯಿತು.
15 ದಿನದಿಂದ ಮಕ್ಕಳನ್ನೂ ಮಾತನಾಡಿಸ್ಲಿಲ್ಲ! 'ತಾಲೀಬಾನ್'ನಲ್ಲಿ ಕಾಣಿಸಿಕೊಂಡ ಆರ್ಯವರ್ಧನ್ ಗುರೂಜಿ ಪತ್ನಿ ಕಣ್ಣೀರು
ಇವೆಲ್ಲವುಗಳ ನಡುವೆಯೇ, ಇವರು ಡಿವೋರ್ಸ್ ಪಡೆದ ಬಳಿಕ ಎದುರಿಸಿದ್ದ ನೋವುಗಳ ಕುರಿತು ಮಾತನಾಡಿದ್ದಾರೆ. ಡಿವೋರ್ಸ್ ಸಂದರ್ಭದಲ್ಲಿ ರಶ್ಮಿ ಮೂರೂವರೆ ಕೋಟಿ ರೂಪಾಯಿಯ ಮನೆ ಖರೀದಿಸಿದ್ದರು. ಸಾಲ ಇನ್ನೂ ತೀರಿರಲಿಲ್ಲ. ಕೈಯಲ್ಲಿ ಹೇಳಿಕೊಳ್ಳುವಂಥ ಕೆಲಸ ಇರಲಿಲ್ಲ. ಬ್ಯಾಗ್ನಲ್ಲಿ ಬರೀ 20 ರೂಪಾಯಿ ಇತ್ತು. ಅದರಿಂದಲೇ ಆಹಾರ ತಿನ್ನುವ ಸ್ಥಿತಿಯನ್ನು ರಶ್ಮಿ ಎದುರಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಪತಿಗೆ ಇದ್ದ ಹಲವಾರು ಸಂಬಂಧಗಳಿಂದಾಗಿ ಬೇಸತ್ತು ರಶ್ಮಿ ಡಿವೋರ್ಸ್ ಪಡೆದುಕೊಂಡಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಕೋಟ್ಯಂತರ ರೂಪಾಯಿ ಸಾಲ ಮತ್ತು ಜೊತೆಯಲ್ಲಿ ಒಂದು ಕಾರು ಇತ್ತು. ಕಾರಿನಲ್ಲಿಯೇ ಮಲಗಿಕೊಂಡಿದ್ದ ನಟಿ ಅಲ್ಲಲ್ಲಿ ರಸ್ತೆ ಬದಿ ಆಹಾರ ಸೇವನೆ ಮಾಡುತ್ತಿದ್ದರಂತೆ!
ರಿಕ್ಷಾ ಚಾಲಕರಿಗೆ ಕಡಿಮೆ ರೇಟ್ಗೆ ಊಟ ಸಿಗುತ್ತಿತ್ತು. ಅದಕ್ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಬೇಳೆ, ಅನ್ನ ಬೆರೆಸಿ ಅದರ ಜೊತೆಗೆ ಎರಡು ರೊಟ್ಟಿಯನ್ನೂ ಕೊಟ್ಟರು. ಅದರಲ್ಲಿ ಕೆಲವು ಕಲ್ಲುಗಳು ಇರುತ್ತಿದ್ದವು. ನಾನು ಅದನ್ನು ಹೇಗಾದರೂ ತಿಂದು ನಾಲ್ಕು ದಿನ ದೂಡಿದೆ ಎಂದಿದ್ದಾರೆ ರಶ್ಮಿ. ಇದೇ ಸಂದರ್ಭದಲ್ಲಿ ಅವರಿಗೆ ‘ದಿಲ್ ಸೆ ದಿಲ್ ತಕ್’ ಕಾರ್ಯಕ್ರಮದ ಆಫರ್ ಬಂತು. ಅಲ್ಲಿಂದ ನನ್ನ ಬದುಕು ಬದಲಾಯಿತು. ಒಳ್ಳೊಳ್ಳೆ ಆಫರ್ಗಳು ಸಿಗಲು ಶುರುವಾದವು. ಆದರೆ ಆ ನಾಲ್ಕು ದಿನ ಮಾತ್ರ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ರಶ್ಮಿ ಹೇಳಿಕೊಂಡಿದ್ದಾರೆ. ಇದಾದ ಬಳಿಕವೂ ಪ್ರೀತಿಯಲ್ಲಿ ಸಾಕಷ್ಟು ನೋವು ಅನುಭವಿಸಿದರು ಇವರು.
ಹುಟ್ಟುತ್ತ ಎಲ್ಲರೂ ಶೂದ್ರರೇ, ಬ್ರಾಹ್ಮಣರೂ ಮಾಂಸಾಹಾರ ತಿಂತಿದ್ರು... ಆದ್ರೆ... ವಿದ್ವಾನ್ ರಾಜೇಂದ್ರ ಭಟ್