ಯಾರೇನೇ ಮಾಡಿದ್ರೂ ಕಿರುಚಾಡಿ Video ಮಾಡ್ತಿದ್ದ 27 ವರ್ಷದ ಯುಟ್ಯೂಬರ್ Angry Rantman ಇನ್ನಿಲ್ಲ

By Vaishnavi ChandrashekarFirst Published Apr 17, 2024, 4:06 PM IST
Highlights

ಸೆನ್ಸೇಷನಲ್ ಯುಟ್ಯೂಬರ್ ಆಂಗ್ರಿ ರ್‍ಯಾಂಟ್‌ ಮ್ಯಾನ್ ಇನ್ನಿಲ್ಲ. ಮಗ ಸಾವಿನ ಬಗ್ಗೆ ಪೋಸ್ಟ್ ಮಾಡಿದ ತಂದೆ...

ಸೋಷಿಯಲ್ ಮೀಡಿಯಾದಲ್ಲಿ ದಿನವೂ ಹೊಸ ಕಂಟೆಂಟ್‌ ಕ್ರಿಯೇಟರ್‌ ಹುಟ್ಟಿಕೊಳ್ಳುತ್ತಾರೆ ಅವರುಗಳಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್‌ ಕ್ರಿಯೇಟ್ ಮಾಡಿದವರು ಅಭ್ರದೀಪ್ ಶಾ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆದರೆ ಸಾಕು ಮೊದಲು ವಿಮರ್ಶೆ ವಿಡಿಯೋ ಅಪ್ಲೋಡ್ ಮಾಡುವುದು ಇದೇ ಆಂಗ್ರಿ ರ್‍ಯಾಂಟ್‌ ಮ್ಯಾನ್. ಒಮ್ಮೊಮ್ಮೆ ಅಭ್ರದೀಪ್ ವಿಡಿಯೋ ನೋಡಲು ಅನೇಕರು ಕಾಯುತ್ತಿದ್ದರು. ಎಲ್ಲರ ನೆಚ್ಚಿನ ಆಂಗ್ರಿ ಮ್ಯಾನ್ ಇಲ್ಲ ಎಂದು ಕೇಳಿ ಶಾಕ್ ಆಗಿದ್ದಾರೆ.

27 ವರ್ಷ ಯುಟ್ಯೂಬ್ ಸ್ಟಾರ್ ಆಂಗ್ರಿ ರ್‍ಯಾಂಟ್‌ ಮ್ಯಾನ್ ಏಪ್ರಿಲ್ 16ರಂದು ಕೊನೆ ಯುಸಿರೆಳೆದಿದ್ದಾರೆ. ಕಳೆದ ಒಂದು ವರ್ಷದಿಂದ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಿತ್ತು ಎಂದು ಆಗಾಗ ವಿಡಿಯೋದಲ್ಲಿ ಹೇಳುತ್ತಿದ್ದರು ಎಂದು ಅಭಿಮಾನಿಗಳು ಕಾಮೆಂಟ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್‌ ಆಗಿರುವ ವಿಡಿಯೋ ಪ್ರಕಾರ ಆಂಗ್ರಿ ರ್‍ಯಾಂಟ್‌ ಮ್ಯಾನ್ ಇತ್ತೀಚಿಗೆ ಮೇಜರ್ ಆಪರೇಷನ್‌ಗೆ ಒಳಗಾಗಿದ್ದು. ಓಪನ್ ಹಾರ್ಟ್ ಸರ್ಚರಿ ಎಂದು ಕೆಲವರು ಬಹು ಅಂಗಾಂಗಳ ವೈಫಲ್ಯದಿಂದ ಅಗಲಿರುವುದು ಎಂದು ಆಪ್ತರು ಹೇಳುತ್ತಿದ್ದಾರಂತೆ. 

ತಂದೆ ಹುಷಾರು ತಪ್ಪಿದಾಗ ಜವಾಬ್ದಾರಿ ಬಂತು, ಮನೆಗೆ ಹಣ ಎಲ್ಲಿಂದ ಬರುತ್ತೆ ಗೊತ್ತಾಗಿತ್ತು: ಯುವ ರಾಜ್‌ಕುಮಾರ್

ಅಭ್ರದೀಪ್ ಶಾ ಐಸಿಯುನಲ್ಲಿ ಇದ್ದಾನೆ ಎಂದು ತಂದೆ 11 ದಿನಗಳ ಮುನ್ನ ಪೋಸ್ಟ್‌ ಮೂಲಕ ಅಪ್‌ಡೇಟ್‌ ನೀಡಿದ್ದರು. 'ಅಭ್ರದೀಪ್ ಶಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯಕ್ಕೆ ಸಪೋರ್ಟ್‌ (ವೆಂಟಿಲೇಟರ್‌)ಗಳ ಸಹಾಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ' ಎಂದು ಬರೆದುಕೊಂಡಿದ್ದರು. ಆದರೆ ವೈದ್ಯರು ಅಭ್ರದೀಪ್ ಶಾ ಉಳಿಸುವುದರಲ್ಲಿ ವಿಫಲರಾಗಿದ್ದಾರೆ. 

ಕ್ಯಾನ್ಸರ್ ಅಲ್ಲ, ಡಿಪ್ರೆಶನ್ ಅಲ್ಲ, ಸಾಲ ಅಲ್ವೇ ಅಲ್ಲ: ನಟ ಭರತ್ ಭಾಗವತರ್‌ ಸಾವಿನ ಸತ್ಯ ಬಿಚ್ಚಿಟ್ಟ ಪತ್ನಿ

ಅಭ್ರದೀಪ್ ಶಾ ಮೂಲತಃ ಕೊಲ್ಕತಾದವರು. ಹುಟ್ಟಿದ್ದು ಫೆಬ್ರವರಿ 19,1996ರಲ್ಲಿ. ಮೊದ ಮೊದಲು ಕ್ರೀಡಾ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಡಿಯೋ ಮಾಡುತ್ತಿದ್ದರು ಆ ನಂತರ ಸಿನಿಮಾಗಳ ಬಗ್ಗೆ ಮಾಡಲು ಮುಂದಾದರು. ಅದರಲ್ಲೂ ಕೆಜಿಎಫ್‌ ಚಾಪ್ಟರ್ 2 ಸಿನಿಮಾ ವಿಮರ್ಶೆ ಸಖತ್ ವೈರಲ್ ಆಗಿತ್ತು. ಯುಟ್ಯೂಬ್‌ನಲ್ಲಿ 481 ಸಾವಿರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ 19 ಸಾವಿರ ಫಾಲೋವರ್ಸ್‌ ಇದ್ದಾರೆ. ಅಭ್ರದೀಪ್ ಶಾ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದವರು ಈಗ ಬೇಸರ ಮಾಡಿಕೊಂಡು ಸಂತಾಪ ಸೂಚಿಸುತ್ತಿದ್ದಾರೆ. 

 

click me!