ಆಗ ಆ ಕೆಲಸದೋಳು, ಈಗ ಈ ಕೆಲಸದೋಳು... ಕಥೆ ಸಿಕ್ತಿಲ್ವಾ ಕೇಳಿದ ಭಾಗ್ಯಲಕ್ಷ್ಮಿ ಅಭಿಮಾನಿಗಳು! ​

By Suvarna News  |  First Published Apr 17, 2024, 11:31 AM IST

ತಾಂಡವ್​ ಟೈಂ ಯಾಕೋ ಸರಿಯಿದ್ದಂತೆ ಕಾಣುತ್ತಿಲ್ಲ. ಎರಡನೆಯ ಕೆಲಸದಾಕೆ ರೂಪಾಳೂ ಕೈಕೊಟ್ಟಿದ್ದಾಳೆ. ಇದಕ್ಕೆ ಅಭಿಮಾನಿಗಳು ಹೇಳ್ತಿರೋದೇನು?
 


ತಾಂಡವ್ ಟೈಂ ಯಾಕೋ ಸರಿಯಿಲ್ಲ. ಭಾಗ್ಯಲಕ್ಷ್ಮಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದ ಸಂದರ್ಭದಲ್ಲಿ ಏಳು ದಿನಗಳ ಕಾವಲಾವಕಾಶ ನೀಡಲಾಗಿತ್ತು. ಮನೆಯನ್ನು ಸರಿದೂಗಿಸಿಕೊಂಡು ಹೇಳಲಾಗಿತ್ತು. ಆಗ ಕೆಲಸಕ್ಕೆ ಬಂದಿದ್ದಾಕೆ ತಾಂಡವ್​ಗೇ ಟೋಪಿ ಹಾಕಿ ಹೋದಳು. ಇದೀಗ ಮನೆ ಎರಡು ಪಾಲಾಗಿದೆ. ತಾಂಡವ್​ ಮನೆಯವರ ಹೊಟ್ಟೆ ಉರಿಸಲು ರೂಪಾ ಎನ್ನುವ ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದಾನೆ. ಮೊದ ಮೊದಲು ರೂಪಾ ತಾಂಡವ್​ ಪರ ಇದ್ದಳು. ಭಾಗ್ಯಲಕ್ಷ್ಮಿ ಹಾಗೂ ಕುಸುಮಾ ಸೇರಿ ತನಗೆ ಹಿಂಸೆ ಕೊಡುತ್ತಿದ್ದಾರೆ, ಭಾಗ್ಯಳಿಗೆ ನನ್ನಿಂದ ದೂರವಾಗುವ ಇಚ್ಛೆ ಎಂದೆಲ್ಲಾ ತಾಂಡವ್​ ಹೇಳಿದ್ದನ್ನು ಅವಳು ನಂಬಿದ್ದಳು. ಆದರೆ ಈಗ ಸತ್ಯ ಗೊತ್ತಾಗಿದೆ. 

ತಾಂಡವ್​ ಅಸಲಿಯತ್ತು ರೂಪಾಳಿಗೆ ತಿಳಿಸಿದೆ. ಮಕ್ಕಳಿಗೂ ಅಪ್ಪ ಬೇಡ ಎನ್ನುವ ಸತ್ಯ ತಿಳಿಯುತ್ತಲೇ ರೂಪಾ ಉಲ್ಟಾ ಹೊಡೆದಿದ್ದಾಳೆ. ತಾಂಡವ್​ ವಿರುದ್ಧ ನಿಂತು ಭಾಗ್ಯಳಿಗೆ ಸಪೋರ್ಟ್​ ಮಾಡುತ್ತಿದ್ದಾಳೆ. ಹಬ್ಬದ ಅಡುಗೆ ಎಲ್ಲಾ ಗುಂಡಾ ಚೆಲ್ಲಿದ್ದರಿಂದ ವೇಸ್ಟ್​ ಆಗಿತ್ತು. ನಂತರ ಭಾಗ್ಯ ಅಡುಗೆ ಮಾಡಬಾರದು ಎಂದು ಬಿಸಿಬೇಳೆ ಬಾತ್​ಗೆ ರೂಪಾ ನೀರು ಹಾಕಿದ್ದಳು. ಅಡುಗೆ ಮಾಡಲು ಸಾಧ್ಯವೇ ಇಲ್ಲ ಎಂದು ತಾಂಡವ್​ ಬೀಗುತ್ತಿದ್ದ. ತಾನು ಘಮಘಮ ಎನ್ನುವ ಅಡುಗೆ ತಿನ್ನುವ ಆಸೆ ತೋರಿಸಿದ್ದ. ಆದರೆ ಈ ಮಧ್ಯೆಯೇ ರೂಪಾಗೆ ಅಸಲಿಯತ್ತು ಗೊತ್ತಾಗಿ ಕೆಟ್ಟದಾಗಿ ಅಡುಗೆ ಮಾಡಿದ್ದಾಳೆ. ನಂತರ ನನಗೆ ಬರುವುದು ಇಷ್ಟೇ ಎಂದಿದ್ದಾಳೆ. ತಾನು ಭಾಗ್ಯಳ ಮನೆಗೆ ಊಟಕ್ಕೆ ಹೋಗುವುದಾಗಿ ಹೇಳಿದ್ದಾಳೆ. ಈಗಲೂ ಈ ಕೆಲಸದೋಳು ಕೈಕೊಟ್ಟಿದ್ದಾಳೆ.

Tap to resize

Latest Videos

ಒಮ್ಮೊಮ್ಮೆ ಹೀಗೂ ಆಗುವುದು... ಸೀತಾ ರಾಮರ ಮದುವೆಗೆ ಒಪ್ಪಿಕೊಂಡು ಬಿಟ್ಲಲ್ಲಾ ವಿಲನ್​ ಭಾರ್ಗವಿ! ಆದರೆ...?

ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳಿಗೆ ಇದು ಒಂಥರಾ ಖುಷಿ ಕೊಟ್ಟಿದ್ದರೂ, ಧಾರಾವಾಹಿಯನ್ನು ಅನಗತ್ಯವಾಗಿ ಎಳೆಯುವ ಸಲುವಾಗಿ ಇಂಥ ಘಟನೆಗಳನ್ನು ತುರುಕುವುದು ಚೆನ್ನಾಗಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಆಗ ಆ ಕೆಲಸದವಳು, ಈಗ ಈ ಕೆಲಸದವಳು ಒಟ್ಟಿನಲ್ಲಿ ಸೀರಿಯಲ್​ ಎಳೆಯಲು ಹೀಗೆಲ್ಲಾ ಮಾಡುತ್ತಿರುವುದರಿಂದ ಭಾಗ್ಯಲಕ್ಷ್ಮಿ ಸೀರಿಯಲ್​ ಘನತೆಯನ್ನು ಕಳೆದುಕೊಳ್ಳುತ್ತಿದೆ, ಹೀಗೆಯೇ ಮುಂದುವರೆದರೆ ನೋಡಲು ಬೋರ್​ ಆಗುತ್ತದೆ ಎನ್ನುತ್ತಿದ್ದಾರೆ. 

ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ಕುರಿತು ಹೇಳುವುದಾದರೆ,  ಕುಸುಮಾ ಮನೆಯನ್ನು ಎರಡು ಪಾಲು ಮಾಡಿದ್ದಾಳೆ. ಅಷ್ಟಕ್ಕೂ ಪಾಲು ಎಂದರೆ ಒಂದು ಗೆರೆ ಎಳೆದಿದ್ದಾಳೆ. ಮಗ ತಾಂಡವ್​ ಬಳಿಯಲ್ಲಿ ನಿಂತಿದ್ದ ಭಾಗ್ಯ ಮತ್ತು ಮಕ್ಕಳನ್ನು ಗೆರೆ ದಾಟಿಸಿ ತನ್ನ ಬಳಿ ಕರೆದುಕೊಂಡು ಬಂದಿದ್ದಾಳೆ. ಪದೇ ಪದೇ ತಾಂಡವ್​, ನನ್ನ ಮನೆಯಲ್ಲಿ ನೀನು ಇರಲು ಸಾಧ್ಯವಿಲ್ಲ ಎಂದು ಪತ್ನಿಗೆ ಹೇಳುತ್ತಿದ್ದ. ಇದೇ ಮಾತನ್ನು ಈಗ ಕುಸುಮಾ ಹೇಳಿದ್ದಾಳೆ.  ನಿನ್ನ ಮನೆ ಗೆರೆಯ ಆ ಭಾಗ, ನಮ್ಮ ಮನೆ ಗೆರೆಯ ಭಾಗ, ನೀನು ಹೇಳಿದ ಹಾಗೆ ನಿನ್ನ ಮನೆಯಿಂದ ಕುಸುಮಾಳನ್ನು ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳ ಜೊತೆ ಮಕ್ಕಳನ್ನೂ ಕರೆದುಕೊಂಡು ಬಂದಿದ್ದೇನೆ. ನಿನ್ನ ಮನೆ ನಿನಗೆ, ನಮ್ಮ ಮನೆ ನಮಗೆ. ಏನು ಬೇಕಾದರೂ ಮಾಡಿಕೋ ಎಂದಿದ್ದಾಳೆ.  ಗೆರೆಯ ಅತ್ತ ಕಡೆ ಎಲ್ಲರನ್ನೂ ನೀನು ಸೇರಿಸಿಕೊಂಡು ನನ್ನನ್ನು ಒಂಟಿ ಮಾಡಿರುವೆ ಎಂದು ಕೂಗಾಡಿರುವ ತಾಂಡವ್​, ನೋಡ್ತಾ ಇರು, ಗೆರೆಯಿಂದ ಆ ಕಡೆ ಇರುವವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಇತ್ತ ಕಡೆ ಮಾಡಿಕೊಳ್ಳುವೆ ಎಂದು ಭಾಗ್ಯಳಿಗೆ ಸವಾಲು ಹಾಕಿದ್ದಾನೆ. ಇದಕ್ಕೆ ಪ್ರತಿಯಾಗಿ ಪ್ರತಿಜ್ಞೆ ಮಾಡಿರುವ ಭಾಗ್ಯ, ಎಲ್ಲರೂ ಒಂದೇ ಮನೆಯಲ್ಲಿ ಚೆನ್ನಾಗಿ ಇರುವಂತೆ ನಾನು ಮಾಡುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಹೇಳಿದ್ದಾಳೆ.  

ಮಲೈಕಾ ಅರೋರಾ ಹೊಟೆಲ್‌ನಲ್ಲಿ ಡ್ರೆಸ್‌ ಸರಿಪಡಿಸಿಕೊಳ್ತಿರೋ ಖಾಸಗಿ ವಿಡಿಯೋ ಲೀಕ್‌: ಫ್ಯಾನ್ಸ್‌ ಗರಂ

click me!